ಈ ಮೂರು ರಾಶಿಯವರು ಸಾಧು ಸ್ವಭಾವದವರು, ಎಂದೂ ದೂರ ಮಾಡಬೇಡಿ..

Posted By: Deepu
Subscribe to Boldsky

ಕೆಲವೊಮ್ಮೆ ನಮಗೆ ತುಂಬಾ ಹತ್ತಿರವಾಗಿರುವವರನ್ನು ಚಿಕ್ಕಪುಟ್ಟ ಕಾರಣಗಳಿಗಾಗಿ ದೂರ ಇಡಲು ಬಯಸುತ್ತೇವೆ. ಇನ್ನೂ ಕೆಲವರು ನಮಗೆ ಅಷ್ಟಾಗಿ ಆಪ್ತರಾಗಿರುವುದಿಲ್ಲ. ಅವರಿಂದ ನಮಗೇನೂ ಸಹಾಯವೂ ಆಗಿರುವುದಿಲ್ಲ. ಆದರೂ ಅವರನ್ನು ನಾವು ಅಷ್ಟು ಸುಲಭವಾಗಿ ಅವರನ್ನು ಮೂಲೆಗೆ ತಳ್ಳುವುದಿಲ್ಲ. ಬದಲಿಗೆ ವಿಶೇಷ ವ್ಯಕ್ತಿಗಳಾಗಿ ಕಾಣುವರು. ಇಲ್ಲವೇ ಅವರಿಗೆ ನೋವುಂಟುಮಾಡಬಾರದು ಎನ್ನುವ ಭಾವ ಉಂಟಾಗುವುದು. ಇದಕ್ಕೆ ಕಾರಣವೇನು? ಎನ್ನುವ ಪ್ರಶ್ನೆ ನಿಮಗೂ ಕೆಲವೊಮ್ಮೆ ಕಾಡಿರಬಹುದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಮ್ಮೊಂದಿಗೆ ನಡೆಯುವ ಪ್ರತಿಯೊಂದು ಘಟನೆಗಳಿಗೂ ಗ್ರಹಗತಿಗಳ ನಂಟಿರುತ್ತವೆ. ಕೆಲವು ರಾಶಿಚಕ್ರದರ ಗ್ರಹಗತಿಗಳ ಪರಿಣಾಮದಿಂದ ಯಾರಿದಂಲೂ ತುಳಿತಕ್ಕೆ ಅಥವಾ ನಿರ್ಲಕ್ಷಕ್ಕೆ ಒಳಗಾಗುವುದಿಲ್ಲ ಎಂದು ಹೇಳಲಾಗುತ್ತದೆ. ಅಂತಹ ರಾಶಿಚಕ್ರಗಳು ಯಾವವು? ಅವುಗಳ ಯಾವ ಸ್ವಭಾವ ಅವರನ್ನು ಕಾಪಾಡುತ್ತವೆ ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ.....

ಮೀನ

ಮೀನ

ಈ ರಾಶಿಚಕ್ರದವರು ಅತ್ಯಂತ ಪ್ರಣಯ ಪೂರಕ ಮತ್ತು ಹಾಸ್ಯಾಸ್ಪದ ಪ್ರವೃತ್ತಿಯಿಂದ ಕೂಡಿರುತ್ತಾರೆ. ಹಾಗಾಗಿ ಇವರೊಂದಿಗೆ ಎಲ್ಲರೂ ಸಾಮಾನ್ಯವಾಗಿಯೇ ತಕ್ಷಣ ಮಾತುಕತೆಯನ್ನು ಪ್ರಾರಂಭಿಸುತ್ತಾರೆ. ಕೆಲವು ವಿಷಯದಲ್ಲಿ ಇವರು ಕಾಲ್ಪನಿಕ ದೃಷ್ಟಿಕೋನವನ್ನು ಹೊಂದಿರುತ್ತಾರೆ. ಇವರ ವಿನೋದ ಸ್ವಭಾವ ಹಾಗೂ ತಮಾಷೆಯ ಗುಣಕ್ಕೆ ಜನರು ಬಹುಬೇಗ ಆಕರ್ಷಿತರಾಗುತ್ತಾರೆ.

ಮೀನ: (ಮುಂದುವರಿದ ಭಾಗ)

ಮೀನ: (ಮುಂದುವರಿದ ಭಾಗ)

ಇವರು ವೈಯಕ್ತಿಕವಾಗಿ ಅತ್ಯಂತ ನಯವಾದ ಗುಣದವರು. ಇವರು ತಮ್ಮ ತಮ್ಮ ಸ್ನೇಹಿತರು ಅತ್ಯಂತ ಕಠಿಣ ಸಮಯವನ್ನು ಹೊಂದಿರುವಾಗ ಅಥವಾ ಕಷ್ಟದಲ್ಲಿರುವಾಗ ಬಹಳ ಸಹಾಯ ಮಾಡುತ್ತಾರೆ. ಅಲ್ಲದೆ ಭರವಸೆ ಮತ್ತು ಧೈರ್ಯ ತುಂಬುವುದರ ಮೂಲಕ ತಮ್ಮ ಭುಜವನ್ನು ನೀಡುತ್ತಾರೆ.ಹಾಗಾಗಿ ಇವರಿಂದ ದೂರ ಇರಲು ಅಥವಾ ಅವರನ್ನು ಮೂಲೆಗೆ ತಳ್ಳಲು ಎಲ್ಲರಿಗೂ ಕಷ್ಟವಾಗುವುದು.

ಮಿಥುನ

ಮಿಥುನ

ಇವರೊಬ್ಬ ವಿಶೇಷ ವ್ಯಕ್ತಿತ್ವ ಹೊಂದಿದ ವ್ಯಕ್ತಿಗಳು ಎನ್ನಬಹುದು. ಇವರು ತಮ್ಮ ಅತೀಂದ್ರೀಯ ಬುದ್ಧಿವಂತಿಕೆಯಿಂದ ಅಥವಾ ವ್ಯಾಪಕವಾದ ಬುದ್ಧಿಶಕ್ತಿಯಿಂದ ಜನರನ್ನು ಆಕರ್ಷಿಸುತ್ತಾರೆ. ಉತ್ತಮ ಜ್ಞಾನ ಹಾಗೂ ಸಹಾಯದ ಗುಣದಿಂದ ಜನರನ್ನು ವಿಸ್ಮಯಗೊಳಿಸುತ್ತಾರೆ.

ಮಿಥುನ

ಮಿಥುನ

ಒಂದು ಗುಂಪಿನಲ್ಲಿ ಇರುವಾಗಲೂ ಸಹ ಆ ಗುಂಪಿನ ಜನರನ್ನು ಸಂತೋಷಗೊಳಿಸುವುದರ ಮೂಲಕ ಎಲ್ಲರನ್ನೂ ವಿಸ್ಮಯಗೊಳಿಸುತ್ತಾರೆ. ಹಾಗಾಗಿ ಜನರು ಇವರನ್ನು ದೂರ ಇಡುವುದು ಅಥವಾ ಮೂಲೆಗಿಡುವ ಪ್ರಯತ್ನವನ್ನು ಮಾಡರು.

 ಸಿಂಹ

ಸಿಂಹ

ಈ ರಾಶಿಯವರು ಅತ್ಯಂತ ಪ್ರಸಿದ್ಧ ವ್ಯಕ್ತಿಗಳೊಂದಿಗೆ ಸಂಪರ್ಕವನ್ನು ಹೊಂದಿರುತ್ತಾರೆ. ಹಾಗಾಗಿ ಜನರು ಇವರ ಕೆಲವು ಉತ್ತಮ ಪ್ರವೃತ್ತಿಯಿಂದ ಪ್ರಭಾವಿತರಾಗಿರುತ್ತಾರೆ. ಇವರು ಸಾಮಾನ್ಯವಾಗಿ ಎಲ್ಲರಿಗೂ ಬೇಕಾದ ವ್ಯಕ್ತಿಗಳಾಗಿ ಇರುತ್ತಾರೆ.

ಸಿಂಹ (23 ಜುಲೈ–22 ಆಗಸ್ಟ್)

ಸಿಂಹ (23 ಜುಲೈ–22 ಆಗಸ್ಟ್)

ಎಲ್ಲರೂ ಇವರಿಂದ ಆಕರ್ಷಿಸಲ್ಪಟ್ಟಿರುತ್ತಾರೆ ಎಂದು ಹೇಳಲಾಗುವುದು. ಇವರೊಂದಿಗೆ ಯಾವಕಾರಣಕ್ಕೂ ಮಾತು ಮುರಿದುಕೊಳ್ಳುವುದಿಲ್ಲ. ಸದಾ ಸಂಪರ್ಕದಲ್ಲಿ ಇರಲು ಬಯಸುವರು. ಇವರ ಅನೇಕ ಉತ್ತಮ ಗುಣಗಳಿಂದಾಗಿ ಜನರು ಇವರನ್ನು ಮೂಲೆಗೆ ತಳ್ಳಲು ಅಥವಾ ದೂರವಾಗಿರಲು ಬಯಸುವುದಿಲ್ಲ.

English summary

These three Zodiacs Whom You Can Never Dump

There are those zodiac signs the individuals of which cannot be dumped easily. These individuals are the nicest and other sign individuals will find it really hard to dump them. These zodiac signs are: Pisces, Gemini and Leo. They not only are lovable, but tend to influence your friends too, which makes it difficult for you to dump them.
Story first published: Monday, April 2, 2018, 23:31 [IST]