Latest Updates
-
ಎವೆಲಿನ್ ಶರ್ಮಾ ವಿಚ್ಛೇದನ: ಮಕ್ಕಳ ಭವಿಷ್ಯಕ್ಕಾಗಿ ಈ ಜೋಡಿ ಆರಿಸಿದ ಹೊಸ ದಾರಿ ಯಾವುದು? -
ಬಿಸಿಲ ಧಗೆಗೆ ತಂಪಾದ ಗುಡ್ ನ್ಯೂಸ್: ಮೇ 8 ರಿಂದ ಶುರುವಾಗಲಿದೆ ಗ್ರೇಟ್ ಸಮ್ಮರ್ ಸೇಲ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಪದ್ಧತಿಯಿಂದ ಇಡೀ ದಿನ ಇರಿ ಫ್ರೆಶ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಕೂಲ್ ಆಗಿರಿ! -
ಬಿಸಿಗಾಳಿಯ ಅಬ್ಬರ: ನಿಮ್ಮ ಫಿಟ್ನೆಸ್ ದಿನಚರಿಯನ್ನು ಬದಲಾಯಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ! -
ಹೊಸ ಜೀವನ ಆರಂಭಿಸುವ ಮುನ್ನ ಎಚ್ಚರ: ವಿಚ್ಛೇದನ ಮತ್ತು ಕಾನೂನು ಹಕ್ಕುಗಳ ಬಗ್ಗೆ ಹೈಕೋರ್ಟ್ ಹೇಳಿದ್ದೇನು? -
ಬಿರುಗಾಳಿ ಮತ್ತು ಬಿಸಿಲ ಬೇಗೆ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ನಿಮ್ಮ ಜೀವ ಉಳಿಸುವ ಸರಳ ಮನೆಮದ್ದುಗಳಿವು! -
ಬಿಸಿಲಿನ ಬೇಗೆಗೆ ತತ್ತರಿಸಿದ್ದೀರಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಕೂಲಿಂಗ್ ಹ್ಯಾಕ್ಸ್ ಮಿಸ್ ಮಾಡ್ಬೇಡಿ! -
ಬದಲಾಗುತ್ತಿರುವ ಹವಾಮಾನ: ನಿಮ್ಮ ಫಿಟ್ನೆಸ್ ದಿನಚರಿಯನ್ನು ಬದಲಾಯಿಸದಿದ್ದರೆ ಕಾದಿದೆ ಅಪಾಯ!
ಈ ರಾಶಿಯವರನ್ನು ಮರೆತೆನೆಂದರೆ ಹೇಗೆ ಮರೆಯಲಿ?
ಜೀವನದ ಪಯಣದಲ್ಲಿ ನಾವು ಹಲವಾರು ಮಂದಿಯನ್ನು ಭೇಟಿಯಾಗುತ್ತೇವೆ. ಕೆಲವರು ನಮಗೆ ದೀರ್ಘ ಕಾಲ ತನಕ ನೆನೆಪಿನಲ್ಲಿ ಉಳಿದರೆ, ಇನ್ನು ಕೆಲವರು ಬೇಗನೆ ಮರೆತು ಹೋಗುವರು. ಆದರೆ ಅವರು ಮರೆತು ಹೋಗಲು ಅವರ ರಾಶಿಚಕ್ರಗಳು ಕೂಡ ಕಾರಣವಂತೆ! ಹೌದು, ಕೆಲವು ರಾಶಿಚಕ್ರದವರನ್ನು ನೀವು ಮರೆತರೂ ಮರೆಯಲಾಗದು.
ಅಂತಹ ರಾಶಿಚಕ್ರಗಳ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಕೆಲವೊಂದು ಗುಣಲಕ್ಷಣಗಳಿಂದಾಗಿ ನೀವು ಈ ರಾಶಿಯವರನ್ನು ಮರೆಯಲು ಸಾಧ್ಯವೇ ಇಲ್ಲ. ಇಂತಹ ರಾಶಿಗಳು ಯಾವುದು ಮತ್ತು ಅವುಗಳ ಗುಣಲಕ್ಷಣಗಳು ಏನು ಎನ್ನುವುದನ್ನು ನೀವು ಮುಂದಕ್ಕೆ ಓದುತ್ತಾ ತಿಳಿಯಿರಿ....

ಕನ್ಯಾ: ಆ.24-ಸೆ.23
ಈ ರಾಶಿಯವರನ್ನು ಮರೆಯಲು ಸಾಧ್ಯವೇ ಇಲ್ಲ. ಯಾಕೆಂದರೆ ಇವರು ಪ್ರತಿಯೊಂದು ವಿಷಯಗಳನ್ನು ತುಂಬಾ ಅಚ್ಚುಕಟ್ಟಾಗಿ ಮಾಡುವರು. ಕೆಲವೊಂದು ಸಮಯದಲ್ಲಿ ಇವರು ತುಂಬಾ ಗಂಭೀರವಾಗಿರುವರು. ಆದರೆ ಯಾವುದೇ ಸಮಯದಲ್ಲೂ ಇವರು ನಿಮ್ಮ ನೆರವಿಗೆ ಬರುವರು. ಇನ್ನೊಂದು ಬದಿಯಲ್ಲಿ ಇವರು ತುಂಬಾ ಚತುರರು, ಇದರಿಂದಾಗಿ ಇವರಲ್ಲಿ ಮಾತಿಗೆ ಕೊರತೆ ಇರುವುದಿಲ್ಲ. ಕಲಾತ್ಮಕ ಮನಸ್ಸು ಹೊಂದಿರುವ ಸೂಕ್ಷ್ಮ ವ್ಯಕ್ತಿಗಳು. ನೀವು ಯಾವುದೇ ವಿಚಾರಕ್ಕೂ ಕನ್ಯಾ ರಾಶಿಯವರನ್ನು ನಂಬಬಹುದು ಮತ್ತು ಅವರು ನಿಮಗೆ ನೆರವಾಗುವರು. ಅವರು ನಿಮ್ಮ ಜೀವನದಿಂದ ದೂರ ಹೋದಾಗ ಮಾತ್ರ ಅವರ ಮೌಲ್ಯ ತಿಳಿಯುವುದು.

ವೃಷಭ: ಎಪ್ರಿಲ್ 20-ಮೇ 20
ಇವರು ತುಂಬಾ ಸರಳ ಸ್ವಭಾವದರು ಮತ್ತು ಯಾವುದೇ ಪರಿಸ್ಥಿತಿಯಲ್ಲೂ ಇವರನ್ನು ನಂಬಬಹುದು. ಇವರು ತುಂಬಾ ತಾಳ್ಮೆಯುಳ್ಳವರು. ಇದರಿಂದ ಅವರನ್ನು ದೂರ ಮಾಡಲು ಕಷ್ಟ. ಇನ್ನೊಂದು ಬದಿಯಲ್ಲಿ ಇವರು ಸೌಂದರ್ಯ ಹಾಗೂ ಕಲೆಯನ್ನು ಇಷ್ಟಪಡುವರು. ಇವರು ತಮ್ಮ ಸಂಗಾತಿಯನ್ನು ಹೂಗಳು, ರುಚಿಕರ ಊಟ ಮತ್ತು ಕಲೆಯಿಂದ ಖುಷಿಪಡಿಸುವರು. ಇವರು ಯಾವಾಗಲೂ ನಿಮಗಾಗಿ ಇರುವರು. ಇವರು ಪ್ರೀತಿಸಲು ಆರಂಭಿಸಿದಾಗ ಕೇವಲ ತನ್ನ ಪ್ರೀತಿಯನ್ನು ಮಾತ್ರ ನೋಡುವರು.

ಮೀನ: ಫೆ.19-ಮಾರ್ಚ್ 20
ಇವರನ್ನು ಮರೆಯುವುದು ತುಂಬಾ ಕಠಿಣ. ಇವರು ಸಾಹಿತಿಗಳಾಗಿದ್ದರೆ ಅವರು ಕವನ ಕವಿತೆಗಳನ್ನು ಬರೆಯುವರು, ಕಲಾವಿದರಾಗಿದ್ದರೆ ಚಿತ್ರ ಬರೆಯುವರು ಮತ್ತು ನಿಮಗಾಗಿ ಹಾಡು ಹಾಡುವರು. ಶಿಲ್ಪ, ಛಾಯಾಗ್ರಹಣ ಅಥವಾ ಚಿತ್ರಕಲೆಯಲ್ಲಿ ನೀವು ಅಮರ ಎಂದು ಅವರು ಖಚಿತಪಡಿಸಿಕೊಳ್ಳುವರು. ನಿಮ್ಮ ಮೇಲಿನ ಪ್ರೀತಿಯು ಅವರ ಪ್ರತಿಯೊಂದು ಕಲೆಯಲ್ಲೂ ನೋಡಬಹುದಾಗಿದೆ. ಅವರ ಸೂಕ್ಷ್ಮ, ನಿಸ್ವಾರ್ಥ ಮನೋಭಾವವದಿಂದ ನೀವು ಅವರನ್ನು ಕರುಣೆಯಿಂದ ನೋಡುವಿರಿ. ಅವರೊಂದಿಗಿನ ಸಂಬಂಧ ಕಡಿದುಕೊಂಡರೆ ಅದಕ್ಕಿಂತ ದೊಡ್ಡ ದುರಂತವಿಲ್ಲ.

ತುಲಾ: ಸೆ.24-ಅ.23
ನಿಮ್ಮ ಖುಷಿಪಡಿಸುವ ಸಲುವಾಗಿ ಹಾಗೂ ನಿಮ್ಮ ಸಂತೋಷವೇ ತುಂಬಾ ಮುಖ್ಯವೆಂದು ಅವರು ಪರಿಗಣಿಸಿರುವ ಕಾರಣದಿಂದಾಗಿ ತುಲಾ ರಾಶಿಯವರನ್ನು ಮರೆಯುವುದು ತುಂಬಾ ಕಠಿಣ. ಇವರೊಂದಿಗೆ ಹೊಂದಿಕೊಳ್ಳುವುದು ತುಂಬಾ ಸುಲಭ ಮತ್ತು ಇವರು ನಿಮ್ಮ ಕಷ್ಟದ ಸಮಯದಲ್ಲಿ ಒಂದು ಕ್ಷಣವೂ ಮರುಯೋಚಿಸದೆ ನೆರವಿಗೆ ಧಾವಿಸುವರು. ಇವರು ಏಕ ವ್ಯಕ್ತಿಯಾಗಿಯೇ ನೆರವು ಮಾಡುವರು. ಇವರ ರೋಮ್ಯಾಂಟಿಕ್ ಮತ್ತು ಕಾಳಜಿಯ ನಡವಳಿಕೆ ನಿಮಗೆ ತುಂಬಾ ವಿಶೇಷವೆನಿಸುವಂತೆ ಮಾಡುವುದು.

ಮೇಷ: ಮಾ.21-ಎಪ್ರಿಲ್ 19
ಇವರು ತುಂಬಾ ತಮಾಷೆ ಹಾಗೂ ಲವಲವಿಕೆಯಿಂದ ಇರುವ ಕಾರಣ ಇವರನ್ನು ಮರೆಯುವುದು ತುಂಬಾ ಕಷ್ಟ. ಈ ರಾಶಿಯವರು ನಿಮ್ಮೊಂದಿಗೆ ಇದ್ದರೆ ನಿಮಗೆ ಬೇಸರವಾಗದು. ಇವರು ನಿಮ್ಮನ್ನು ಅತಿಯಾಗಿ ಪ್ರೀತಿಸುವರು. ಇದರಿಂದಾಗಿ ನೀವು ಅವರನ್ನು ಮರೆಯಲು ಸಾಧ್ಯವಾಗದು. ಅವರು ತಡರಾತ್ರಿ ಎಷ್ಟೇ ವ್ಯಸ್ತರಾಗಿದ್ದರೂ ಸಹಿತ ನಿಮ್ಮೊಂದಿನ ಸಂಬಂಧವನ್ನು ಉಳಿಸಲು ಪ್ರಯತ್ನಿಸುವರು.

ವೃಶ್ಚಿಕ: ಅ.24-ನ.22
ವೃಶ್ಚಿಕ ರಾಶಿಯವರ ಮನಸ್ಸಿನಲ್ಲಿ ಏನಾಗುತ್ತಿದೆ ಎಂದು ತಿಳಿಯಲು ನಿಮಗೆ ಸಾಧ್ಯವಾಗದು. ಅವರು ನಿಮ್ಮನ್ನು ಸಂಪೂರ್ಣವಾಗಿ ಪ್ರೀತಿಸಿದ್ದಾರೆ ಎಂದು ನಿಮಗೆ ತಿಳಿದಿರುವುದು. ಅವರ ಅತಿಯಾದ ಪ್ರೀತಿ ಮತ್ತು ಕಾಳಜಿಯ ನಡವಳಿಕೆ ನಿಮ್ಮನ್ನು ಯಾವಾಗಲೂ ಕಾಡುತ್ತಲಿರುವುದು. ನಿಮಗೆ ಏನು ಬೇಕು ಎನ್ನುವುದನ್ನು ಮೊದಲೇ ಅರ್ಥ ಮಾಡಿಕೊಂಡು ನಿಮ್ಮ ಮುಂದೆ ಇಡುವಂತಹ ವ್ಯಕ್ತಿತ್ವ ಇವರದ್ದು. ಅವರ ಸೂಕ್ಷ್ಮತೆ, ಬದ್ಧತೆ ಮತ್ತು ಪ್ರಾಮಾಣಿಕತೆಯು ನೀವು ಅವರನ್ನು ಪ್ರೀತಿಸುವಂತೆ ಮಾಡುವುದು. ವೃಶ್ಚಿಕ ರಾಶಿಯವರು ನಿಮ್ಮನ್ನು ಪ್ರೀತಿಸಿದ್ದರೆ ಆಗ ಅವರು ನಿಮ್ಮನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ.



Click it and Unblock the Notifications