Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನೋಡಿ ಈ ನಾಲ್ಕು ರಾಶಿಯವರು ಮದುವೆಯ ವಿಚಾರದಲ್ಲಿ ಹಿಂಜರಿಯುತ್ತಾರೆ!

ನೀವು ಯಾರನ್ನಾದರೂ ತುಂಬಾ ಸಮಯದಿಂದ ಪ್ರೀತಿಸುತ್ತಾ ಇರುತ್ತೀರಿ. ಆದರೆ ಮದುವೆ ವಿಷಯ ಪ್ರಸ್ತಾವ ಮಾಡಿದಾಗ ಸಂಗಾತಿಯು ಹಿಂಜಯುತ್ತಾನೆ. ಇದಕ್ಕೆ ಆತನ ಮನೋಭಾವ ಕಾರಣವಲ್ಲ. ಆತನ ರಾಶಿಚಕ್ರವೇ ಕಾರಣ.
ಯಾಕೆಂದರೆ ಕೆಲವೊಂದು ರಾಶಿಯವರಿಗೆ ಮದುವೆಯಾಗಿ ಒಂದು ಸಂಬಂಧದಲ್ಲಿ ಬಂಧಿಯಾಗಲು ಇಷ್ಟವಿರುವುದಿಲ್ಲ. ಈ ಲೇಖನದಲ್ಲಿ ಸಂಬಂಧದಲ್ಲಿ ಬದ್ಧತೆ ಪ್ರದರ್ಶಿಸಲು ಬಯಸದ ಕೆಲವು ರಾಶಿಗಳ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ತಿಳಿದುಕೊಂಡು ನೀವು ಮುಂದೆ ಪ್ರೀತಿಸುವಾಗ ಮದುವೆಯ ಪ್ರಸ್ತಾವ ಮಾಡಿ.

ಮೇಷ: ಮಾರ್ಚ್ 21-ಎಪ್ರಿಲ್ 19
ಈ ವ್ಯಕ್ತಿಗಳು ತಮಗಾಗಿ ನಿಯಮಗಳು ಹಾಗೂ ಗುಣಮಟ್ಟದ ಜೀವನ ನಿರ್ಧರಿಸಿಕೊಳ್ಳುವರು. ಇವರು ತಮ್ಮದೇ ಆದ ಹಾದಿಯಲ್ಲಿ ಮುಂದುವರಿಯಲು ಮತ್ತು ಇತರರ ನಿಯಮ ಮುರಿದು ಮುಂದೆ ಸಾಗಲು ಬಯಸುವರು. ಇಂತಹ ವ್ಯಕ್ತಿಗಳಿಗೆ ಕೆಲವೊಂದು ಮೌಲ್ಯಗಳು ಹಾಗೂ ನೀತಿಗಳಿರುವುದು.

ಮೇಷ: ಮಾರ್ಚ್ 21-ಎಪ್ರಿಲ್ 19
ಇವರು ತಮ್ಮ ಮುಖ್ಯ ನಂಬಿಕೆಗಳಿಗೆ ಘಾಸಿಯಾದಾಗ ಸಹಿಷ್ಣುವಾಗಿರಲ್ಲ. ಸಂಬಂಧದಲ್ಲಿ ಸೌಹಾರ್ದತೆ ಕಾಪಾಡಿಕೊಳ್ಳಲು ಅವರು ತಮ್ಮ ಮೌಲ್ಯಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ತುಂಬಾ ಕಡಿಮೆ. ಇದರಿಂದಾಗಿ ಇವರ ಸಂಗಾತಿಯು ಬಿಟ್ಟು ಹೋಗುವರು. ಇವರು ತಮ್ಮ ಸ್ವನಿಯಮಗಳಿಗೆ ಹೆಚ್ಚಿನ ಮೌಲ್ಯ ನೀಡುವ ಕಾರಣದಿಂದಾಗಿ ಇವರನ್ನು ಸ್ವಾರ್ಥಿಗಳೆಂದು ಕರೆಯುತ್ತಾರೆ.

ಮಿಥುನ: ಮೇ21-ಜೂನ್ 20
ಈ ರಾಶಿಯವರು ಒಳ್ಳೆಯ ಸಂವಹನಗಾರ ಮತ್ತು ಸಂಭಾಷಣಾಕಾರರು. ಇವರು ಯಾವುದೇ ರೀತಿಯ ಚರ್ಚೆಯನ್ನು ತುಂಬಾ ಅರ್ಥಗರ್ಭಿತ ಹಾಗೂ ಮನೋರಂಜನೆಯಾಗಿ ಕೊಂಡೊಯ್ಯಬಲ್ಲ ಆತ್ಮವಿಶ್ವಾಸ ಹೊಂದಿರುವರು.

ಮಿಥುನ: ಮೇ21-ಜೂನ್ 20
ದೀರ್ಘಕಾಲದ ಸಂಬಂಧ ಮತ್ತು ಬದ್ಧತೆ ಬಗ್ಗೆ ಚರ್ಚಿಸಲು ಆರಂಭಿಸಿದಾಗ ಈ ವ್ಯಕ್ತಿಗಳಲ್ಲಿ ಯಾವುದೇ ಶಬ್ಧಗಳು ಇರಲ್ಲ. ಇವರು ಸಮಯ ಕಳೆಯಲು ಡೇಟಿಂಗ್ ನಡೆಸುವರು. ಇವರು ಸಾಮಾಜಿಕ ಚರ್ಚೆಗಳಲ್ಲಿ ತುಂಬಾ ಆನಂದ ಪಡೆಯುವರು. ಇವರಿಗೆ ದೀರ್ಘಕಾಲದ ಸಂಬಂಧದಲ್ಲಿ ಯಾವುದೇ ರೀತಿಯ ಸಂತೋಷ ಕಂಡುಬರಲ್ಲ.

ಧನು: ನ.23-ಡಿ.22
ಗಾಳಿ ಬಂದಂತೆ ತೇಲುವ ವ್ಯಕ್ತಿಗಳಿಗೆ ಈ ರಾಶಿಯವರು ಒಳ್ಳೆಯ ಉದಾಹರಣೆ. ಇವರು ಜೀವನವನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳದೆ ಇರುವಂತಹ ವ್ಯಕ್ತಿಗಳಾಗಿರುವರು. ಇವರು ಏಕಾಂಗಿಯಾಗಿರುವುದನ್ನು ಗೌರವಿಸುವರು. ಇದೇ ವೇಳೆ ಸ್ನೇಹಿತರೊಂದಿಗೆ ಹೊರಗೆ ಹೋಗಿ ಖುಷಿ ಪಡುವರು.

ಧನು: ನ.23-ಡಿ.22
ಇವರು ಸಾಮಾನ್ಯ ಡೇಟಿಂಗ್ ಇಷ್ಟಪಡುವರು ಮತ್ತು ಸಂಬಂಧವು ಗಂಭೀರವಾದಾಗ ಇವರು ಶಾಂತವಾಗುವರು. ಇವರು ಬೇರೆ ಎಲ್ಲದಕ್ಕಿಂತಲೂ ಹೆಚ್ಚಾಗಿ ಸ್ವತಂತ್ರಕ್ಕೆ ಮೌಲ್ಯ ನೀಡುವರು. ಇದರಿಂದಾಗಿ ಇವರಿಂದ ದೀರ್ಘಕಾಲದ ಸಂಬಂಧ ನಿರೀಕ್ಷಿಸಬೇಡಿ.

ಕುಂಭ: ಜ.21-ಫೆ.18
ಇವರು ತುಂಬಾ ಕುತೂಹಲಿಗರಾಗಿರುವರು. ಇವರು ಪ್ರೀತಿಪಾತ್ರರ ಜತೆಗೆ ನಿಕಟ ಸಂಬಂಧವಿರಿಸಿಕೊಂಡಾಗ ತುಂಬಾ ಆರಾಮದಾಯಕವಾಗಿರುವರು. ಇವರು ಪ್ರೀತಿಯನ್ನು ದೀರ್ಘ ಸಂಬಂಧದಲ್ಲಿ ಬದಲಾಯಿಸಿಕೊಳ್ಳುವುದಕ್ಕೆ ದ್ವೇಷಿಸುವರು.

ಕುಂಭ: ಜ.21-ಫೆ.18
ಇವರದ್ದು ತುಂಬಾ ಕ್ವಚಿತ್ತಾದ ವ್ಯಕ್ತಿತ್ವವಾಗಿರುವುದು. ಇವರು ಒಂದು ನಿಮಿಷದಿಂದ ಮರು ನಿಮಿಷದಲ್ಲಿ ಹೇಗಿರುತ್ತಾರೆ ಎಂದು ತಿಳಿದುಕೊಳ್ಳುವುದೇ ತುಂಬಾ ಕಠಿಣವಾಗಿರುವುದು. ಇವರೊಂದಿಗೆ ಬದ್ಧತೆಯ ಸಂಬಂಧ ಬಯಸುವುದು ಅವರ ಪದಕೋಶದಲ್ಲಿ ಇಲ್ಲದನ್ನು ನಿರೀಕ್ಷಿಸಿದಂತೆ!



Click it and Unblock the Notifications
