ಅಚ್ಚರಿ ಜಗತ್ತು: ಕಣ್ಣಗುಡ್ಡೆಗಳಿಗೂ ಟ್ಯಾಟೂ ಹಾಕಿಸಿಕೊಂಡ!

Posted By: Hemanth
Subscribe to Boldsky

ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ವೀಡಿಯೋ ಮತ್ತು ಚಿತ್ರಗಳನ್ನು ನೋಡಿದಾಗ ಇಂತಹ ಹುಚ್ಚುತನದವರು ಇದ್ದಾರೆಯಾ ಎಂದು ನಮಗೆ ಅನಿಸುವುದು ಇದೆ. ಯಾಕೆಂದರೆ ಇವರು ಹಲವಾರು ರೀತಿಯ ಸಾಹಸಕ್ಕೆ ಕೈಹಾಕಿರುತ್ತಾರೆ. ಇಂತಹ ಸಾಹಸಗಳಿಂದಾಗಿಯೇ ಅವರಿಗೆ ಜನಪ್ರಿಯತೆ ಕೂಡ ಬಂದಿರುವುದು.

ಇಂತಹ ಪ್ರಕರಣದಲ್ಲಿ ಎಲಿ ಇಂಕ್ ಎನ್ನುವಾತ ವಿಶ್ವವನ್ನೇ ನಿಬ್ಬೆರಗಾಗಿಸುವಂತೆ ಮಾಡಿದ್ದಾನೆ. ಯಾಕೆಂದರೆ ಈತ ತನ್ನ ಕಣ್ಣುಗಳು ಹಾಗೂ ಬಾಯಿಯ ಒಳಗಡೆ ಕಪ್ಪು ಬಣ್ಣ ಹಾಕಿಸಿಕೊಂಡು ಎಲ್ಲರನ್ನು ಮೂಕವಿಸ್ಮಿತನಾಗಿಸಿದ್ದಾನೆ. ಹೌದು, ಟ್ಯಾಟೂ ಹುಚ್ಚು ಹಿಡಿದಿರುವಂತಹ ಈತ ದೇಹದ ಹೆಚ್ಚಿನ ಭಾಗದಲ್ಲಿ ಟ್ಯಾಟೂ ಹಚ್ಚೆ ಹಾಕಿಸಿಕೊಂಡಿದ್ದಾನೆ. ಇದರಲ್ಲಿ ಕಣ್ಣಗುಡ್ಡೆ ಮತ್ತು ಬಾಯಿಯನ್ನು ಆತ ಬಿಟ್ಟಿಲ್ಲ! ಎಲಿ ಇಂಕ್ ಬಗ್ಗೆ ಮತ್ತಷ್ಟು ಓದಿಕೊಳ್ಳಿ...   

ಬಾಲ್ಯದಲ್ಲೇ ಆತನಿಗೆ ಈ ಹುಚ್ಚು ಹಿಡಿಯಿತು!

ಬಾಲ್ಯದಲ್ಲೇ ಆತನಿಗೆ ಈ ಹುಚ್ಚು ಹಿಡಿಯಿತು!

ಇಂಗ್ಲೆಂಡಿನ ಬ್ರಿಗ್ಟನ್ ನಿಂದ ಟ್ಯಾಟೂ ಕಲಾವಿದನಾಗಿರುವ ಎಲಿ, ಬಾಲ್ಯದಲ್ಲಿ ತನ್ನ ಚಿಕ್ಕಪ್ಪ ಸ್ಪೇನ್ ನಿಂದ ಬರುವಾಗ ದೊಡ್ಡ ಟ್ಯಾಟೂ ಹಾಕಿಕೊಂಡು ಬಂದಿರುವುದನ್ನು ನೋಡಿದ್ದ. ಇದರ ಬಳಿಕ ಆತ ತನ್ನ ದೇಹದಲ್ಲಿ ಮಾರ್ಪಾಡು ಮಾಡಲು ಬಯಸಿದ.

ಹತ್ತು ವರ್ಷಗಳ ಮೊದಲು ಮಾರ್ಪಾಡು ಆರಂಭ

ಹತ್ತು ವರ್ಷಗಳ ಮೊದಲು ಮಾರ್ಪಾಡು ಆರಂಭ

ಹತ್ತು ವರ್ಷಗಳ ಮೊದಲು ಎಲಿ ಇಂಕ್ ತನ್ನ ದೇಹ ಮಾರ್ಪಾಡು ಮಾಡಲು ಆರಂಭಿಸಿದ. ತನ್ನಷ್ಟು ದೇಹ ಮಾರ್ಪಾಡು ಮಾಡುವುದನ್ನು ಬೇರೆ ಯಾರು ಕೂಡ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲವೆಂದು ಆತ ಹೇಳಿದ್ದ.

ತನ್ನದೇ ದೇಹದೊಂದಿಗೆ....

ತನ್ನದೇ ದೇಹದೊಂದಿಗೆ....

ಕಳೆದ ಹತ್ತು ವರ್ಷಗಳಿಂದ ಆತ ತನ್ನ ದೇಹವನ್ನು ಮಾರ್ಪಾಡು ಮಾಡಿಕೊಂಡು ಒಂದು ಮೇರುಕೃತಿಯನ್ನಾಗಿಸಲು ಪ್ರಯತ್ನಿಸುತ್ತಿದ್ದಾನೆ ಎಂದು ವರದಿಗಳು ಹೇಳಿವೆ. ಸಂಪೂರ್ಣವಾಗಿ ದೇಹಕ್ಕೆ ಟ್ಯಾಟೂ ಹಾಕಿಸಿಕೊಳ್ಳುವ ಕೆಲಸ ಮುಗಿದಿದೆ. ಇದರ ಫಲಿತಾಂಶ ಕಣ್ಣ ಮುಂದಿದೆ.

ಆತನೇ ಟ್ಯಾಟೂ ಹಾಕಿಕೊಂಡ....

ಆತನೇ ಟ್ಯಾಟೂ ಹಾಕಿಕೊಂಡ....

ಆತ ತನ್ನ ದೇಹದ ಹೆಚ್ಚಿನ ಭಾಗಕ್ಕೆ ಕಪ್ಪು ಬಣ್ಣವನ್ನು ಹಾಕಿಕೊಂಡಿದ್ದಾನೆ ಮತ್ತು ಕಣ್ಣಗುಡ್ಡೆಗಳನ್ನು ಸಂಪೂರ್ಣ ಕಪ್ಪಾಗಿಸಿದ್ದಾನೆ. ಮೂಗು ಮತ್ತು ಕೆಳತುಟಿಯ ಅಗಲವನ್ನು ಹೆಚ್ಚಿಸಿದ್ದಾನೆ.

ಪಿಕಾಸೋನ ದೊಡ್ಡ ಅಭಿಮಾನಿ

ಪಿಕಾಸೋನ ದೊಡ್ಡ ಅಭಿಮಾನಿ

ತಾನು ಪಿಕಾಸೋನ ದೊಡ್ಡ ಅಭಿಮಾನಿ ಮತ್ತು ತನ್ನ ದೇಹದಲ್ಲಿ ಮಾಡಿರುವಂತಹ ಎಲ್ಲಾ ಕಲಾಕೃತಿಗಳು ಬಾಲ್ಯದಲ್ಲಿ ಪಿಕಾಸೋನ ನೋಡಿ ಬಂದ ಪ್ರೇರಣೆಯಾಗಿದೆ ಎಂದು ಆತ ಹೇಳಿದ್ದಾನೆ.

ಕಣ್ಣಿಗೆ ಟ್ಯಾಟೂ ತುಂಬಾ ಅಪಾಯಕಾರಿ

ಕಣ್ಣಿಗೆ ಟ್ಯಾಟೂ ತುಂಬಾ ಅಪಾಯಕಾರಿ

ಎಲಿ ಇಂಕ್ ತನ್ನ ಕಣ್ಣಗುಡ್ಡೆಗಳು ಮತ್ತು ಬಾಯಿಯೊಳಗಡೆ ಕಪ್ಪು ಬಣ್ಣ ಟ್ಯಾಟೂ ಹಾಕಿಸಿದ್ದಾನೆ. ಆದರೆ ತಜ್ಞರ ಪ್ರಕಾರ ಕಣ್ಣಗುಡ್ಡೆಗಳಿಗೆ ಟ್ಯಾಟೂ ಹಾಕಿಸಿಕೊಳ್ಳುವುದು ಭಾರೀ ಅಪಾಯಕಾರಿ. ಇದಕ್ಕೆ ಬಿಳಿಯ ಕಣ್ಣಪೊರೆಯ ಎರಡು ಪದರಗಳ ಮಧ್ಯೆ ಶಾಯಿಯನ್ನು ಇಂಜೆಕ್ಷನ್ ಮೂಲಕ ಹಾಕಬೇಕು. ಇದರ ಬಳಿಕ ಹರಡಲು ಬಿಡಬೇಕು. ಇದು ಅಪಾಯಕಾರಿ ಮತ್ತು ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆಯಿದೆ ಎನ್ನುತ್ತಾರೆ ತಜ್ಞರು.

English summary

tattoo-addict-named-eli-inked-his-body-eyeballs

There are many people out there on the Internet who make us wonder what happened to them or what were they even thinking of before doing something bizarre to themselves. One such is the case of Eli Ink who has stunned the world by his bizarre antics of getting his eyeballs and even his inner mouth getting tattooed!