For Quick Alerts
ALLOW NOTIFICATIONS  
For Daily Alerts

  ವಾರದ ಭವಿಷ್ಯ : 18 ಮಾರ್ಚ್ 2018- 20 ಮಾರ್ಚ್ 2018

  By Deepu
  |

  ವ್ಯಕ್ತಿಗೆ ಸಮಯ ಎನ್ನುವುದು ಬಹಳ ಮುಖ್ಯವಾದದ್ದು. ಯಾವ ಸಮಯದಲ್ಲಿ ವ್ಯಕ್ತಿಯ ಸ್ಥಿತಿ ಹೇಗಿರುತ್ತದೆ ಎನ್ನುವುದನ್ನು ಹೇಳಲು ಸಾಧ್ಯವಿಲ್ಲ. ಕೆಲವು ಸಮಯ ಒಳ್ಳೆಯದಿದ್ದರೆ ಇನ್ನೂ ಕೆಲವೊಮ್ಮೆ ಕೆಟ್ಟ ಘಳಿಗೆಯಾಗಿರುತ್ತದೆ. ಕೆಟ್ಟದ್ದು ಮತ್ತು ಒಳ್ಳೆಯದ್ದು ಎನ್ನುವುದು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಒಂದಾದ ನಂತರ ಒಂದು ಬಂದೇ ಬರುತ್ತದೆ. ಅವೆರಡನ್ನು ಸಮಾನ ರೀತಿಯಲ್ಲಿ ಸ್ವೀಕರಿಸುವ ಮನೋಭಾವ ನಮ್ಮಲ್ಲಿರಬೇಕು.

  ಈ ವಾರದ ಗ್ರಹಗತಿಗಳ ಪ್ರಕಾರ ನಿಮ್ಮ ರಾಶಿ ಚಕ್ರದ ಮೇಲೆ ಯಾವ ಪರಿಣಾಮ ಉಂಟಾಗುವುದು. ಅದಕ್ಕೆ ನಿಮ್ಮ ಸಿದ್ಧತೆ ಹೇಗಿರಬೇಕು ಎನ್ನುವುದನ್ನು ತಿಳಿದುಕೊಳ್ಳಲು ಮುಂದಿರುವ ವಿವರಣೆಯನ್ನು ಅರಿಯಿರಿ...

  ಮೇಷ

  ಮೇಷ

  ನಿಮ್ಮ ಉದ್ವೇಗ ಮಟ್ಟವನ್ನು ನಿಭಾಯಿಸಲು ಮತ್ತು ಅದನ್ನು ನಿರ್ವಹಿಸಲು ಸಮರ್ಥರಾಗಿರಬೇಕು. ಈ ವಾರ ನಿಮಗೆ ಒಂದು ಹೊಸ ಭಾವನೆಯು ಪ್ರಾರಂಭವಾಗುತ್ತದೆ. ಒಂದು ವಿಷಯವನ್ನು ಒಮ್ಮೆ ತೆಗೆದುಕೊಂಡರೆ ಅದನ್ನು ಪೂರ್ಣಗೊಳಿಸಿದ ನಂತರವೇ ಇನ್ನೊಂದು ವಿಷಯವನ್ನು ಕೈಗೆತ್ತಿಕೊಳ್ಳಬೇಕು. ಕೆಲವು ವಿಷಯದಲ್ಲಿ ಸಂಪೂರ್ಣವಾಗಿ ತಿಳಿದುಕೊಂಡ ನಂತರ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ. ಅದಕ್ಕೂ ಮುಂಚೆ ನಿಮ್ಮ ಅಭಿಪ್ರಾಯವನ್ನು ಹೇಳದಿರಿ. ಒಟ್ಟಾರೆಯಾಗಿ ಒಂದು ದೊಡ್ಡ ಉತ್ತಮ ಸಮಯದಿಂದ ಕೂಡಿರುವ ವಾರ ನಿಮಗಾಗಲಿದೆ.

  ವೃಷಭ

  ವೃಷಭ

  ನೀವು ಮನೆಯಿಂದ ಆಚೆ ಹೋಗುವುದು ಹಾಗೂ ದೇಹವು ಹೆಚ್ಚಿನ ಚಲನೆಯನ್ನು ಪಡೆದುಕೊಳ್ಳುವುದು. ಈ ಪ್ರಕ್ರಿಯೆಯು ನಿಮ್ಮ ಮನಸ್ಸನ್ನು ಹಗುರಗೊಳಿಸಿ, ತಾಜಾತನದಿಂದ ಕೂಡಿರುವಂತೆ ಮಾಡುವುದು. ಅಲ್ಪಾವಧಿಯ ಪ್ರಯಾಣದಲ್ಲಿ ಲಾಭವನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ಆಧ್ಯಾತ್ಮಿಕ ಪ್ರಯಾಣದಿಂದ ನಿಮ್ಮ ಜಾಗೃತಿಯನ್ನು ಹೆಚ್ಚಿಸುವುದು. ನಿಮ್ಮ ಸ್ವಂತ ಅಗತ್ಯತೆಯ ಬಗ್ಗೆ ಹೆಚ್ಚು ಗಮನ ನೀಡುವುದರ ಕಡೆಗೆ ಕಾಳಜಿವಹಿಸಿ. ನಿಮ್ಮ ನಿಜವಾದ ಸಾಮಥ್ರ್ಯವನ್ನು ತಪ್ಪಾಗಿ ಗ್ರಹಿಸಬೇಡಿ. ವಾರದ ಮಧ್ಯದಲ್ಲಿ ವಿಷಯವು ನಿಧಾನವಾಗಿ ಸರಾಗಗೊಳ್ಳುವುದು.

  ಮಿಥುನ

  ಮಿಥುನ

  ನೀವು ನಿಮ್ಮ ಪ್ರಾಯೋಗಿಕ ಬೆಳವಣಿಗೆಯಲ್ಲಿ ನಿಮ್ಮ ಪ್ರಗತಿಯನ್ನು ನಿರೀಕ್ಷಿಸುವಿರಿ. ನೀವು ಆದಷ್ಟು ಮುಖ್ಯ ಸಂಗತಿಗಳ ಬಗ್ಗೆ ಹೆಚು ಕಾಳಜಿ ವಹಿಸಬೇಕು. ಏಕೆಂದರೆ ನೀವು ನಿಭಾಯಿಸ ಬಹುದಾದ ಹಣಕ್ಕಿಂತಲೂ ಹೆಚ್ಚು ಹಣವನ್ನು ನೀವು ಖರ್ಚುಮಾಡಬಹುದು. ಉಜ್ವಲ ವಿಚಾರದ ಹೊರತಾಗಿ ತಪ್ಪಾದ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆಗಳು ಹೆಚ್ಚಿವೆ. ಸಮಸ್ಯೆಗಳು ನಿಮಗೆ ತೀರಾ ಹತ್ತಿರದಲ್ಲಿರುವುದರಿಂದ ನೀವು ಪರಿಸ್ಥಿತಿಯನ್ನು ಸರಿಯಾಗಿ ನಿರ್ಣಯಿಸಲು ಕಷ್ಟವಾಗುವುದು. ಪ್ರಣಯಕ್ಕೆ ಸಂಬಂಧಿಸಿದಂತೆ ಇತರ ಒತ್ತಡಗಳಿಂದ ನೀವು ಸ್ವಲ್ಪ ಮಟ್ಟಿಗೆ ನಿಧಾನಗೊಳಿಸಬಹುದು.

   ಕರ್ಕ

  ಕರ್ಕ

  ಈ ವಾರವು ನಿಮಗೆ ಗೊಂದಲಮಯವಾದ ವಾರವಾಗಲಿದೆ. ನಿಮ್ಮ ಆಪ್ತ ಸ್ನೇಹಿತರು ಗೊಂದಲಕ್ಕೆ ಒಳಗಾಗಬಹುದು. ನಿಮ್ಮ ಸಲಹೆಗಳನ್ನು ಕೇಳಲು ಸಿದ್ಧರಾಗದೆ ಇರಬಹುದು. ನೀವು ಜಯಗಳಿಸುವ ಸಾಧ್ಯತೆಗಳಿದ್ದರೂ ಕೆಲವು ಸಮಸ್ಯೆಗಳು ನಿಮ್ಮ ಕೈಹಿಡಿದಿಡುವುದು. ನಿಮ್ಮ ಸಂಪನ್ಮೂಲಗಳು ಹೊರಹಾಕುವ ಸಾಧ್ಯತೆಗಳಿವೆ. ನಿಮ್ಮ ಪ್ರೀತಿಪಾತ್ರರ ಜೊತೆ ಉತ್ತಮ ಸಮಯವನ್ನು ಕಳೆಯಲು ಪ್ರಯತ್ನಿಸಿ.

  ಸಿಂಹ

  ಸಿಂಹ

  ಈ ವಾರವು ನಿಮಗೆ ಅತ್ಯಂತ ಕಠಿಣದ ವಾರವಾಗಲಿದೆ. ಹೆಚ್ಚಿನ ಗ್ರಹಗಳು ನಿಮ್ಮ 8ನೇ ಮನೆಯಲ್ಲಿ ಸಂಚರಿಸುವುದರಿಂದ ಸಮಸ್ಯೆಗಳು ಉದ್ಭವವಾಗುವುದು ಅಥವಾ ಕಷ್ಟವಾಗುವುದು. ನೀವು ಮಾತನಾಡುವ ಮುಂಚೆ ಯೋಚಿಸಿ ಮಾತನಾಡಿ. ನಿಮ್ಮ ಮಾತುಗಳು ತೀರಾ ವಿಮರ್ಶಾತ್ಮಕವಾಗಿರುವುದರಿಂದ ಇನ್ನೊಬ್ಬರ ಮನಸ್ಸನ್ನು ನೋಯಿಸುವ ಸಾಧ್ಯತೆಗಳಿರುತ್ತವೆ. ಆ ಸಂದರ್ಭದಲ್ಲಿ ಕ್ಷಮೆಯಾಚಿಸಿ. ವಾರಾಂತ್ಯದಲ್ಲಿ ಸ್ಥಿತಿಯು ತಿಳಿಯಾಗುವುದು.

  ಕನ್ಯಾ

  ಕನ್ಯಾ

  ಈ ವಾರ ನೀವು ಅನೇಕ ಗೊಂದಲಮಯವಾದ ಸ್ಥಿತಿಯನ್ನು ಎದುರಿಸಬೇಕಾಗುವುದು. ಹಾಗಾಗಿ ಆದಷ್ಟು ಎಚ್ಚರಿಕೆಯಿಂದ ಇರಬೇಕು. ವ್ಯಾಪಾರ ಅಥವಾ ವೃತ್ತಿ ಜೀವನದಲ್ಲಿ ನಿಮ್ಮ ಸ್ಥಾನವು ಬಲಪಡಿಸುವ ಸಮಯವಾಗುವುದು. ಜನರು ನಿಮಗೆ ಏನು ಹೇಳುತ್ತಿದ್ದಾರೆ ಎನ್ನುವುದನ್ನು ನೀವು ಹೆಚ್ಚಾಗಿ ಪ್ರಭಾವಿಸಬಹುದು. ಸೃಜನಾತ್ಮಕ ವಿಷಯಗಳ ಮೇಲೆ ನೀವು ಗಮನ ಹರಿಸಬೇಕು. ಅದರಲ್ಲಿ ನೀವು ಉತ್ಕøಷ್ಟಗೊಳಿಸುವುದು. ನಿಮಗೆ ನೀವು ಒಂದಿಷ್ಟು ವಿಶ್ರಾಂತಿಯನ್ನು ನೀಡಿದರೆ ಮುಂದಿನ ದಿನದಲ್ಲಿ ಹೆಚ್ಚಿನ ಸಾಧನೆ ಮಾಡಬಹುದು.

  ತುಲಾ

  ತುಲಾ

  ನಿಮ್ಮ ಪ್ರೀತಿ ಪಾತ್ರರನ್ನು ನಿಭಾಯಿಸುವುದು ಈ ವಾರ ನಿಮಗೆ ಕಷ್ಟವಾಗುವುದು. ಅತ್ಯಂತ ಸರಳವಾದ ಸಂಭಾಷಣೆಗಳು ಕೂಡ ಅತಿ ಹೆಚ್ಚು ವಿವಾದವನ್ನು ಸೃಷ್ಟಿಸಬಹುದು. ಒಟ್ಟಿನಲ್ಲಿ ಸಾಕಷ್ಟು ಒತ್ತಡ ಮತ್ತು ಅಸಮಧಾನವನ್ನು ಎದುರಿಸಬೇಕಾಗುವುದು. ನಿಮ್ಮ ಕೆಲವು ನಿರ್ಧಾರಗಳನ್ನು ಮುಂದೂಡಿ, ಇತರರಿಗೆ ಮುಂದೆ ಸಾಗಲು ಅವಕಾಶ ನೀಡಿ. ನಿಮ್ಮ ನಿರ್ಧಾರಗಳನ್ನು ನಿಧಾನಗೊಳಿಸಲು ಉತ್ತಮವಾದ ಸಮಯ. ಇದು ನಿಮ್ಮ ಶಕ್ತಿಯನ್ನು ಮರಳಿ ಪಡೆಯಲು ಸಹಾಯ ಮಾಡುವುದು.

  ವೃಶ್ಚಿಕ

  ವೃಶ್ಚಿಕ

  ನಿಮ್ಮ ಆಳವಾದ ಭಾವನೆ ಅಥವಾ ಗುಪ್ತ ಭಾವನೆಗಳನ್ನು ಹೊರಹಾಕಲು ಇದು ನಿಮಗೆ ಸೂಕ್ತವಾದ ಸಮಯ. ನಿಮ್ಮ ಹೃದಯದ ಮಾತನ್ನು ವ್ಯಕ್ತಪಡಿಸುವುದರಿಂದ ಮನಸ್ಸು ಹಗುರವಾಗುವುದು. ಭವಿಷ್ಯದ ಹೊಸ ಸಾಧ್ಯತೆಗಳನ್ನು ನೀವು ಕಾಣುವಿರಿ. ನವೀನ ಯೋಜನೆಗಳು ನಿಮ್ಮ ಮಾರ್ಗದಲ್ಲಿ ಬರುವುದು. ಅವು ಹಾನಿಯನ್ನುಂಟುಮಾಡುವ ಸಾಧ್ಯತೆಗಳಿವೆ. ಭವಿಷ್ಯದಲ್ಲಿ ನಿರ್ದಿಷ್ಟ ಮಹತ್ವಾಕಾಂಕ್ಷೆಗಳ ಬಗ್ಗೆ ಹೆಚ್ಚು ಗಮನವಿಡಿ.

  ಧನು

  ಧನು

  ನಿಮ್ಮ ಮೇಲಾಧಿಕಾರಿಗಳಿಂದ ನಿಮ್ಮ ಕಾರ್ಯಕ್ಷಮತೆಯನ್ನು ಸುಧಾರಣೆಗೆ ತರಲು ನಿರೀಕ್ಷಿಸಬಹುದು. ನಿಮ್ಮ ಪ್ರಮುಖ ಕೆಲಸ ಕಾರ್ಯಗಳನ್ನು ಮುಂದೂಡದೆ ಸ್ವತಃ ಆಯೋಜಿಸುವುದನ್ನು ನೋಡಿ. ನೀವು ಎಲ್ಲವನ್ನೂ ಸಾಧಿಸಲು ಸಾಧ್ಯವಾಗದೆ ಇರುವುದರಿಂದ ಇನ್ನಷ್ಟು ಯೋಜನೆಗಳನ್ನು ನೀವು ಕೈಗೊಳ್ಳಬಹುದು.

  ಮಕರ

  ಮಕರ

  ಒಂದು ಆಧ್ಮಾತ್ಮಿಕ ಚಟುವಟಿಕೆಯು ಕೆಲವು ಬಂಧವನ್ನು ರಚಿಸುತ್ತದೆ. ನಿಮ್ಮಲ್ಲಿ ಸುರಕ್ಷಿತ ಸಂಬಂಧದ ಭಾವನೆಯನ್ನು ಬಲಪಡಿಸುತ್ತದೆ. ಭವಿಷ್ಯಕ್ಕಾಗಿ ಆರ್ಥಿಕ ಭದ್ರತೆಯನ್ನು ಸೃಷ್ಟಿಸುವ ಅವಕಾಶಗಳಿವೆ. ಒಂದೇ ಹೊಡೆತದಲ್ಲಿ ಹಲವು ಕಾರ್ಯಗಳನ್ನು ನಿರ್ವಹಿಸಲು ಅದು ಬಂದಾಗ ನಿಮಮನ್ನು ಪ್ರೇರೇಪಿಸುವುದು. ಅರ್ಥಪೂರ್ಣವಾದದ್ದು ಎನ್ನುವುದರ ಬಗ್ಗೆ ಹೆಚ್ಚು ಗಮನ ನೀಡಿ. ತಪ್ಪನ್ನು ಮಾಡದಿರುವಂತೆ ಕಾಳಜಿ ವಹಿಸಿ.

  ಕುಂಭ

  ಕುಂಭ

  ನೀವು ಏನು ಮಾಡುತ್ತಿದ್ದೀರಿ ಎನ್ನುವುದರ ಬಗ್ಗೆ ಹೆಚ್ಚು ವಿವೇಚನೆಯಿಂದ ಇರಿ. ಏಕೆಂದರೆ ನಿಮ್ಮ ಮೇಲೆ ಅನೇಕ ಕುತೂಹಲಕಾರಿ ಕಣ್ಣುಗಳ ದೃಷ್ಟಿಯಿದೆ ಎನ್ನುವುದನ್ನು ಮರೆಯದಿರಿ. ಈ ವಾರ ಕೆಲವು ಆತಂಕಗಳನ್ನು ಹೊರತು ಪಡಿಸಿದರೆ ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ ಎಂದು ಹೇಳಲಾಗುತ್ತದೆ. ನಿಮ್ಮ ಯೋಜನೆಯ ಕುರಿತು ನಿಮ್ಮ ಮೇಲಾಧಿಕಾರಿಯೊಂದಿಗೆ ಮಾತನಾಡಲು ಉತ್ತಮ ಸಮಯ ಇದು. ಆದಷ್ಟು ಕಾಳಜಿಯಿಂದ ಇರುವುದು ಸೂಕ್ತ.

  ಮೀನ

  ಮೀನ

  ಯಾವುದೇ ಸಮಸ್ಯೆ ಬಂದರೂ ಅದನ್ನು ಎದುರಿಸಲು ನೀವು ಸಿದ್ಧರಾಗಿರಬೇಕು. ನಿಮ್ಮನ್ನು ನೀವು ಕಾಪಾಡಿಕೊಳ್ಳಲು ಗಮನವನ್ನು ಕೇಂದ್ರೀಕರಿಸಬೇಕು. ವಿಭಿನ್ನವಾದ ಹೊಸ ವಿಚಾರಗಳಲ್ಲಿ ಮುಂದಾಗಬಹುದು. ಕೆಲಸದಲ್ಲಿ ನೀವು ಬಳಸುವ ಪದಗಳಿಂದ ಘರ್ಷಣೆಗಳು ಉಂಟಾಗುವ ಸಾಧ್ಯತೆಗಳಿವೆ. ವಿರುದ್ಧ ಲಿಂಗದವರೊಂದಿಗೆ ವ್ಯವಹರಿಸುವದು ಅಥವಾ ಸಂಭಾಷಣೆ ಕೈಗೊಳ್ಳುವುದರ ಬಗ್ಗೆ ಒಂದಿಷ್ಟು ಕೌಶಲ್ಯವನ್ನು ಕಲಿಯಬೇಕಾಗುವುದು.

  English summary

  predictions-for-each-zodiac-sign-for-18-24th-march-2018

  With the week's start, getting to know of how your week is going to be like, with the help of astrology, can get very interesting.We bring to you the weekly dose of zodiac predictions for the week of March 18-24th, 2018.So, check out on what your zodiac sign has in store for you!
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more