ಪ್ರತಿ ರಾಶಿಚಕ್ರದವರಿಗೆ ಬೇಕಾದ ಪ್ರೇರಣೆಗಳು ಇಲ್ಲಿವೆ...

Posted By: Deepu
Subscribe to Boldsky

ಪ್ರತಿಯೊಬ್ಬ ವ್ಯಕ್ತಿಗೂ ತಮ್ಮದೇ ಆದ ವೈಯಕ್ತಿಕ ಜೀವನ ಇರುತ್ತದೆ. ಎಲ್ಲರಲ್ಲೂ ವಿಶೇಷವಾದ ಕೌಶಲ್ಯಗಳಿಂದಲೇ ಸನ್ನಿವೇಶಗಳನ್ನು ನಿರ್ವಹಿಸುತ್ತಾರೆ. ವ್ಯಕ್ತಿ ತನ್ನ ಸುತ್ತಲಿನ ವಾತಾವರಣ ಹಾಗೂ ಕೆಲವು ಮಾರ್ಗದರ್ಶನದ ಅನ್ವಯದಲ್ಲಿ ಅಪರೂಪದ ವ್ಯಕ್ತಿತ್ವ ವಿಕಸನವಾಗುತ್ತದೆ. ಅಂತೆಯೇ ನಾವು ನೋಡಿರುವುದು, ಕೇಳಿರುವುದು ಹಾಗೂ ಅನುಭವಿಸಿರುವ ಜೀವನದ ಪಾಠಗಳು ನಮ್ಮನ್ನು ಒಳ್ಳೆಯ ಹಾದಿಯಲ್ಲಿ ನಡೆಯುವಂತೆ ಎಚ್ಚರಿಸುವುದು. ಕೆಲವು ವಿಚಾರಗಳು ನಮ್ಮನ್ನು ಕುಗ್ಗಿಸಬಹುದು. ಇನ್ನೂ ಕೆಲವು ವಿಚಾರಗಳು ನಮ್ಮಲ್ಲಿ ಪ್ರೌಢಿಮೆಯ ಹೆಮ್ಮೆ ಬೆಳೆಯುವಂತೆ ಮಾಡಬಹುದು.

ವ್ಯಕ್ತಿ ತನ್ನದೇ ಆದ ವಿಶೇಷತೆಯಿಂದ ಸಮಾಜದಲ್ಲಿ ಆಕರ್ಷಕ ವ್ಯಕ್ತಿಯಾಗಬೇಕು ಎಂದರೆ ಕೆಲವು ಸೂಕ್ತ ಗುಣಗಳನ್ನು ಹೊಂದಿರಬೇಕು. ಜೊತೆಗೆ ವ್ಯಕ್ತಿತ್ವದಲ್ಲಿ ಬದಲಾವಣೆಯನ್ನು ಕಾಣಬೇಕಾಗುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಚಕ್ರವು ಹೇಗೆ ವಿಶೇಷತೆಯನ್ನು ಪಡೆದುಕೊಂಡಿರುತ್ತದೆಯೇ ಹಾಗೆಯೇ ಕೆಲವು ನ್ಯೂನತೆಗಳು ಇರುತ್ತವೆ. ಅದಕ್ಕೆ ಅನುಗುಣವಾಗಿ ಪ್ರತಿಯೊಂದು ರಾಶಿಚಕ್ರದವರು ಕೆಲವು ಬದಲಾವಣೆ ಅಥವಾ ಪ್ರೇರಣಾ ಶಕ್ತಿಯನ್ನು ಹೊಂದಿರಬೇಕು. ನಿಮಗೂ ನಿಮ್ಮ ಜೀವನದಲ್ಲಿ ಸಾಧನೆಯನ್ನು ಮಾಡಬೇಕು, ಅದಕ್ಕಾಗಿ ಕೆಲವು ಪ್ರೇರಣೆಯ ವಿಚಾರವನ್ನು ಅರಿತುಕೊಳ್ಳಬೇಕು ಎಂದುಕೊಂಡಿದ್ದರೆ ಈ ಮುಂದಿರುವ ವಿವರಣೆಯನ್ನು ಅರಿಯಿರಿ....

ಮೇಷ: (ಮಾರ್ಚ್ 21-ಏಪ್ರಿಲ್ 19)

ಮೇಷ: (ಮಾರ್ಚ್ 21-ಏಪ್ರಿಲ್ 19)

ಈ ರಾಶಿಯವರು ಚಿಕ್ಕ-ಪುಟ್ಟ ವಿಚಾರಗಳಿಗೂ ಸಂತೋಷ ಪಡುವುದನ್ನು ಕಲಿತುಕೊಳ್ಳಬೇಕು. ಎಲ್ಲವೂ ದೊಡ್ಡ ವಿಚಾರ ಎಂದೇ ಪರಿಗಣಿಸಬೇಕು. ಜೀವನದಲ್ಲಿ ಸಣ್ಣ ವಿಚಾರಗಳನ್ನು ಪ್ರಶಂಸಿದಾಗ ಸಂತೋಷದ ಕ್ಷಣಗಳು ದ್ವಿಗುಣಗೊಳ್ಳುವುದು. ಅದಕ್ಕಾಗಿ ಒಂದಿಷ್ಟು ಸಮಯವನ್ನು ಮೀಸಲಿಡುವುದು ಸೂಕ್ತ.

ವೃಷಭ: 21 ಏಪ್ರಿಲ್ -21 ಮೇ

ವೃಷಭ: 21 ಏಪ್ರಿಲ್ -21 ಮೇ

ನೀವು ಒಳ್ಳೆಯ ವ್ಯಕ್ತಿಗಳಾಗಿರುತ್ತೀರಿ ನಿಜ. ಆದರೆ ಅದನ್ನು ಸಾಭೀತು ಪಡಿಸುವ ಉದ್ದೇಶದಿಂದ ಸಮಯವನ್ನು ವ್ಯರ್ಥಮಾಡದಿರಿ. ಇತರರ ಅಭಿಪ್ರಾಯ ಏನಿರುತ್ತದೆ ಎಂದು ನೀವು ನಿರೀಕ್ಷಿಸದಿರಿ. ನೀವು ನಿಮ್ಮ ಪಾಡಿಗೆ ಒಳ್ಳೆಯ ವಿಚಾರದಲ್ಲಿ ಮುನ್ನಡೆಯಿರಿ. ಜನರು ತನ್ನಿಂದ ತಾನೇ ನಿಮ್ಮನ್ನು ಒಪ್ಪಿಕೊಳ್ಳುತ್ತಾರೆ.

 ಮಿಥುನ:ಮೇ 21-ಜೂನ್ 20

ಮಿಥುನ:ಮೇ 21-ಜೂನ್ 20

ನಿಮಗೆ ನಿರೀಕ್ಷೆಯ ಹಂಬಲವನ್ನು ಮರೆಯದಿರಿ. ನಿನ್ನೆ ನಿಮಗೆ ಅಷ್ಟಾಗಿ ಸಂತೋಷ ಅಥವಾ ಒಳಿತಾಗದಿದ್ದರೂ ನಾಳೆಯ ದಿನದ ಭರವಸೆಯನ್ನು ಕಳೆದುಕೊಳ್ಳದಿರಿ. ಜೊತೆಗೆ ಹೊಸತನವನ್ನು ಮತ್ತು ಸಂತೋಷದ ಕ್ಷಣವನ್ನು ಕಂಡುಕೊಳ್ಳಿ. ಆಗ ನಿಮ್ಮ ಜೀವನ ಸಂತೋಷದಿಂದ ಕೂಡಿರುವುದು. ನೀವು ಒಂದೇ ಜೀವನವನ್ನು ಹೊಂದಿದ್ದೀರಿ, ಸಾಧನೆಯನ್ನು ಈ ಜೀವನದಲ್ಲೇ ಮಾಡಬೇಕು ಎನ್ನುವುದನ್ನು ಮರೆಯದಿರಿ.

ಕರ್ಕ: ಜೂನ್ 21-ಜುಲೈ 22

ಕರ್ಕ: ಜೂನ್ 21-ಜುಲೈ 22

ಧೈರ್ಯ ಯಾವಾಗಲೂ ಘರ್ಜನೆಯಾಗದಿದ್ದರೂ ಕೆಲವೊಮ್ಮೆ ನಾಳೆ ಮತ್ತು ಉತ್ತಮ ಪ್ರಯತ್ನದಲ್ಲಿ ಶಾಂತಿಯನ್ನು ಪಡೆಯಬಹುದು ಎನ್ನುವುದನ್ನು ಈ ರಾಶಿಯವರು ತಿಳಿದುಕೊಳ್ಳಬೇಕು. ನೀವು ಎಷ್ಟು ಧೈರ್ಯವಂತರು ಎನ್ನುವುದನ್ನು ನಿಮಗೆ ಇತರರಿಗೆ ತಿಳಿಯದೆ ಇರಬಹುದು. ಆದರೆ ಅದನ್ನು ಜನರಿಗೆ ನೀವೇ ನಿಧಾನವನಾಗಿ ತೋರ್ಪಡಿಸಬೇಕು.

ಸಿಂಹ: ಜುಲೈ 23-ಆಗಸ್ಟ್ 23

ಸಿಂಹ: ಜುಲೈ 23-ಆಗಸ್ಟ್ 23

ನಿಮ್ಮ ಆಂತರ್ಯದ ಶಕ್ತಿ ಅಥವಾ ಬೆಳಕನ್ನು ಕುಂದಲು ಬಿಡದಿರಿ. ನೀವು ಆ ಶಕ್ತಿಯನ್ನು ಪ್ರಜ್ವಲಿಸುವಂತೆ ಮಾಡಬೇಕು. ಆಗಲೇ ಶ್ರೇಯಸ್ಸು ದೊರೆಯುವುದು. ನಿಮ್ಮ ಶಕ್ತಿ ಏನು? ಎನ್ನುವುದು ನಿಮಗೆ ತಿಳಿದಿರುತ್ತದೆ. ಅದರ ಆಧಾರದ ಮೇಲೆಯೇ ಸಾಧನೆಯನ್ನು ಮಾಡಿ.

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

ಯಾವುದು ನಮ್ಮನ್ನು ನಾಶಮಾಡುವುದಿಲ್ಲವೋ ಅದೇ ನಮ್ಮನ್ನು ಗಟ್ಟಿಗೊಳಿಸುತ್ತದೆ ಎನ್ನುವ ಮಾತನ್ನು ಪ್ರೇರಣೆಯಾಗಿ ತೆಗೆದುಕೊಳ್ಳಬೇಕು. ಕೆಲವೊಮ್ಮೆ ನೀವು ವಿಷಯದ ಅಂತ್ಯವನ್ನು ಒಂದು ತೀರ್ಪು ಎಂದು ಭಾವಿಸುತ್ತೀರಿ. ಇದರಿಂದ ನಿಮಗೆ ಅದು ಹಾನಿಯನ್ನುಂಟುಮಾಡಬಹುದು. ನೀವು ಮಾಡಿದ ತಪ್ಪುಗಳಿಂದ ಸರಿ ಏನು ಎನ್ನುವುದನ್ನು ನೀವು ತಿಳಿಯುವಿರಿ. ಜೊತೆಗೆ ಅದು ನಿಮ್ಮನ್ನು ಉತ್ತಮ ವ್ಯಕ್ತಿಯನ್ನಾಗಿ ಬದಲಾಯಿಸುವುದು.

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ನಿಮಗೆ ನೀವು ಸವಾಲನ್ನು ಹಾಕಿಕೊಳ್ಳಿ. ನೀವೇನು ಮಾಡಬಲ್ಲಿರೀ? ಜಯವನ್ನು ಹೇಗೆ ಪಡೆದುಕೊಳ್ಳುವಿರಿ ಎಂದು. ಈ ರಾಶಿಚಕ್ರವು ಅತ್ಯಂತ ನಿಷ್ಠಾವಂತ ಚಿಹ್ನೆ ಎನಿಸಿಕೊಂಡಿದೆ. ಅದರಂತೆಯೇ ನೀವು ನಿಮ್ಮ ಕೆಲಸದಲ್ಲಿ ಸವಾಲು ಹಾಗೂ ನಿರ್ಮಲತೆಯಿಂದ ನಿರ್ವಹಿಸಿದಾಗ ಜೀವನ ಪ್ರಜ್ವಲಿಸುವುದು.

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ನೀವು ಪ್ರೀತಿಸುವ ವ್ಯಕ್ತಿಗಳೊಂದಿಗೆ ಮಾತನಾಡುವಂತೆ, ನಿಮ್ಮೊಂದಿಗೆ ನೀವು ಮಾತನಾಡಿಕೊಳ್ಳಿ. ನೀವು ನಿಮ್ಮ ವೈಯಕ್ತಿಕ ಆಸೆ ಆಕಾಂಕ್ಷೆಗಳಿಗೆ ಬೆಲೆ ನೀಡುವಂತೆ ಇತರರಲ್ಲೂ ದಯೆ ಮತ್ತು ಪ್ರೀತಿ ತೋರುವುದುನ್ನು ರೂಢಿಸಿಕೊಳ್ಳಿ. ಆಗ ನಿಮ್ಮ ಉಜ್ವಲ ಭವಿಷ್ಯ ಬೆಳಗುವುದು.

ಧನು: 23 ನವೆಂಬರ್ -22 ಡಿಸೆಂಬರ್

ಧನು: 23 ನವೆಂಬರ್ -22 ಡಿಸೆಂಬರ್

ನೀವು ಕೆಳಮುಖವಾಗಿ ನೋಡಿದರೆ ಎಂದಿಗೂ ಕಾಮನಬಿಲ್ಲು ಕಾಣುವುದಿಲ್ಲ ಎನ್ನುವುದನ್ನು ತಿಳಿದುಕೊಳ್ಳಬೇಕು. ನಿಮಗೆ ಯಶಸ್ಸು ದೊರೆಯದೆ ಇದ್ದಾಗ ಭರವಸೆಯನ್ನು ಕಳೆದುಕೊಳ್ಳದಿರಿ. ನಿಮ್ಮ ಗುರಿಯನ್ನು ಉನ್ನತ ಮಟ್ಟದಲ್ಲಿ ಇಟ್ಟುಕೊಳ್ಳಿ. ಯಶಸ್ಸಿಗಾಗಿ ನಿರಂತರವಾದ ಪ್ರಯತ್ನವನ್ನು ಮಾಡಬೇಕು ಎನ್ನುವುದನ್ನು ಮರೆಯಬಾರದು.

 ಮಕರ: 23 ಡಿಸೆಂಬರ್ -20 ಜನವರ

ಮಕರ: 23 ಡಿಸೆಂಬರ್ -20 ಜನವರ

ಪ್ರತಿಯೊಬ್ಬರ ತಪ್ಪಿಗೆ ಕೊಡುವ ಇನ್ನೊಂದು ಹೆಸರು ಅನುಭವ ಎಂದು ನೆನಪಿಟ್ಟುಕೊಳ್ಳಿ. ನೀವು ಒಂಟಿ ಜೀವಿಯಲ್ಲ ಎನ್ನುವುದನ್ನು ಮರೆಯದಿರಿ. ಎಲ್ಲರೂ ತಪ್ಪನ್ನು ಮಾಡುತ್ತಾರೆ. ಹಾಗಾಗಿ ನಿಮ್ಮನ್ನು ನೀವು ದೂಷಿಸಿಕೊಳ್ಳುವುದನ್ನು ನಿಲ್ಲಿಸಿ.

ಕುಂಭ: ಜನವರಿ 20-ಫೆಬ್ರವರಿ 18

ಕುಂಭ: ಜನವರಿ 20-ಫೆಬ್ರವರಿ 18

ಭವಿಷ್ಯ ಎನ್ನುವುದು ಪ್ರತಿಯೊಬ್ಬರು ಕಂಡುಕೊಳ್ಳುವ ಸುಂದರ ಕನಸನ್ನು ಅವಲಂಭಿಸಿರುತ್ತದೆ. ನೀವು ಕನಸುಗಾರರಾಗಿರುತ್ತೀರಿ. ನಿಮ್ಮ ಕನಸಿನ ಗುರಿಯ ಸಾಧನೆಯನ್ನು ಮುಟ್ಟುವವರೆಗೆ ಪ್ರಯತ್ನವನ್ನು ನಿಲ್ಲಿಸದಿರಿ.

ಮೀನ: 20 ಫೆಬ್ರವರಿ -20 ಮಾರ್ಚ್

ಮೀನ: 20 ಫೆಬ್ರವರಿ -20 ಮಾರ್ಚ್

ಜನರು ಮತ್ತು ಸನ್ನಿವೇಶದ ಕುರಿತು ಅಸಮಧಾನಗೊಳ್ಳದಿರಿ. ನಿಮ್ಮ ಪ್ರತಿಕ್ರಿಯೆ ಇಲ್ಲದೆ ಈ ಎರಡು ಚಿಂತನೆಗಳು ಶಕ್ತಿ ಹೀನವಾಗಿರುತ್ತವೆ ಎನ್ನುವುದನ್ನು ನೆನಪಿಟ್ಟುಕೊಳ್ಳಿ. ನೀವು ಆದಷ್ಟು ಸಕಾರಾತ್ಮಕವಾಗಿ ಚಿಂತನೆ ನಡೆಸಿ. ನಕಾರಾತ್ಮಕ ಚಿಂತನೆಯನ್ನು ಬಿಟ್ಟುಬಿಡಿ. ಹೀಗೆ ಮಾಡುವುದರಿಂದ ನೀವು ಒಂದು ಪರಿಪೂರ್ಣ ವ್ಯಕ್ತಿಯಾಗುವಿರಿ.

English summary

most-inspirational-quotes-that-define-each-zodiac-sign

Do you know that individuals of each zodiac sign have their own way of dealing with things? They tend to react in different ways to different situations, based on the influence of the zodiac.Each of the zodiac signs needs its own motivational quote that will help the individuals go ahead in life in a better way. Different quotes define different zodiac signs.
Story first published: Tuesday, February 27, 2018, 7:01 [IST]