ರಾಶಿ ಭವಿಷ್ಯ: ಈ 6 ರಾಶಿಯವರು ತುಂಬಾ ಸಂಕೋಚ ಸ್ವಭಾವದವರು

Posted By: Deepu
Subscribe to Boldsky

ಕೆಲವರು ಬಾಯಿ ಬಿಟ್ಟರೆ ಸಾಕು ತಮ್ಮ ಬಗ್ಗೆ ಹೊಗಳಿಕೆ, ಸಾಧನೆ ಹಾಗೂ ಭಾವನೆಗಳ ಬಗ್ಗೆ ಒಂದಿಷ್ಟು ಮಾತನಾಡುತ್ತಲೇ ಇರುತ್ತಾರೆ. ಇತರರಿಗೆ ಅದು ಅಗತ್ಯವಿದೆಯೇ? ಇಲ್ಲವೇ? ಎನ್ನುವುದರ ಕುರಿತು ಚೂರೂ ಚಿಂತಿಸುವುದಿಲ್ಲ. ಅದೇ ಇನ್ನೂ ಕೆಲವರು ತಮ್ಮ ಭಾವನೆಯನ್ನು ಅಷ್ಟು ಸುಲಭವಾಗಿ ವ್ಯಕ್ತಪಡಿಸುವುದಿಲ್ಲ. ಅಗತ್ಯವಿದೆ ಎಂದಾಗ ಮಾತ್ರ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ.

ಕೆಲವು ರಾಶಿಚಕ್ರದವರ ನೈಸರ್ಗಿಕವಾದ ಸ್ವಭಾವವೇ ಹಾಗಿರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಇವರು ತಮ್ಮ ಗ್ರಹಗತಿಗಳು ಹಾಗೂ ಕುಂಡಲಿಗಳಿಗೆ ಅನುಗುಣವಾಗಿ ತಮ್ಮ ಸ್ವಭಾವವನ್ನು ಹೊಂದಿರುತ್ತಾರೆ. ಆಯ್ದ ರಾಶಿಚಕ್ರದವರು ಅತ್ಯಂತ ಸಂಕೋಚ ಸ್ವಭಾವದವರಾಗಿರುತ್ತಾರೆ. ಇವರ ಭಾವನೆಗಳನ್ನು ಅಥವಾ ಮನಸ್ಸಿನ ಆಳದ ಮಾತುಗಳನ್ನು ಹಂಚಿಕೊಳ್ಳುವಲ್ಲಿ ಸ್ವಲ್ಪ ಸಂಕೋಚವನ್ನು ವ್ಯಕ್ತಪಡಿಸುತ್ತಾರೆ ಎಂದು ಹೇಳಲಾಗುವುದು. ನೀವೂ ನಿಮ್ಮ ರಾಶಿಚಕ್ರದ ಅನುಸಾರ ಸಂಕೋಚ ಸ್ವಭಾವವನ್ನು ಹೊಂದಿದ್ದೀರಾ? ಇಲ್ಲವಾ? ಎನ್ನುವುದನ್ನು ತಿಳಿದುಕೊಳ್ಳಲು ಮುಂದಿರುವ ವಿವರಣೆಯನ್ನು ನೋಡಿ ತಿಳಿಯಿರಿ....

ಕನ್ಯಾ: ಆಗಸ್ಟ್ 24-ಸಪ್ಟೆಂಬರ್ 23

ಕನ್ಯಾ: ಆಗಸ್ಟ್ 24-ಸಪ್ಟೆಂಬರ್ 23

ಈ ರಾಶಿಚಕ್ರದವರು ಅತ್ಯುತ್ತಮ ಕೇಳುಗರು ಎಂದು ಹೇಳಲಾಗುತ್ತದೆ. ಇವರು ಗುಂಪಿನಲ್ಲಿ ಇರುವಾಗ ತಮ್ಮ ಭಾವನೆಯನ್ನು ಅಷ್ಟು ಸುಲಭವಾಗಿ ಎಲ್ಲವನ್ನೂ ವ್ಯಕ್ತಪಡಿಸುವುದಿಲ್ಲ. ಇವರು ಯಾವುದೇ ನಿರ್ಧಾರಗಳನ್ನು ಕೈಗೊಳ್ಳುವ ಮೊದಲು ಒಳ್ಳೆಯದ್ದು ಹಾಗೂ ಕೆಟ್ಟದ್ದು ಎನ್ನುವ ಎರಡು ರೀತಿಯಲ್ಲೂ ಯೋಚಿಸಿಯೇ ನಿರ್ಧಾರವನ್ನು ಕೈಗೊಳ್ಳುತ್ತಾರೆ.

ವೃಷಭ

ವೃಷಭ

ಇವರು ಸಂಕೋಚ ಸ್ವಭಾವದ ವ್ಯಕ್ತಿಗಳಿಗೆ ಒಂದು ಉತ್ತಮ ಉದಾಹರಣೆ ಎನ್ನಬಹುದು. ಸಾಮಾಜಿಕವಾಗಿರಲು ಬಯಸುತ್ತಾರೆ. ಆದರೆ ತಮ್ಮ ಆಂತರ್ಯದ ವಿಚಾರವನ್ನು ಅಷ್ಟು ಸುಲಭವಾಗಿ ವ್ಯಕ್ತಪಡಿಸುವುದಿಲ್ಲ. ಇವರು ವಿವಿಧ ಬಗೆಯ ವ್ಯಕ್ತಿಗಳೊಂದಿಗೆ ಬೆರೆಯುತ್ತಾರೆ ಆದರೆ ತಮ್ಮ ವಿಚಾರಗಳನ್ನು ಅಷ್ಟು ಸುಲಭವಾಗಿ ಹಂಚಿಕೊಳ್ಳುವುದಿಲ್ಲ.

ಮಕರ

ಮಕರ

ಈ ರಾಶಿಯವರು ಅತ್ಯಂತ ಜಾಗರೂಕರಾಗಿ ಇರುತ್ತಾರೆ. ತಾವು ಯಾವುದೇ ಕಾರ್ಯವನ್ನು ಕೈಗೊಳ್ಳುವ ಮೊದಲು ಎರಡು ಬಾರಿ ಯೋಚಿಸುತ್ತಾರೆ. ಆದಷ್ಟು ಎಚ್ಚರಿಕೆಯಿಂದ ನಡೆದುಕೊಳ್ಳುತ್ತಾರೆ. ಅತ್ಯಂತ ಸಾಮಾಜಿಕ ಪ್ರವೃತ್ತಿಯನ್ನು ಹೊಂದಿದ್ದರೂ ಸಹ ಅಷ್ಟು ಸುಲಭವಾಗಿ ಇತರರೊಂದಿಗೆ ಬೆರೆಯುವುದಿಲ್ಲ. ಮೂರ್ಖರು ಎನಿಸಿಕೊಳ್ಳಲು ಇಷ್ಟ ಪಡದ ಇವರು ಕೆಲವು ವಿಷಯಗಳನ್ನು ಮಾತ್ರ ಹಂಚಿಕೊಳ್ಳುತ್ತಾರೆ.

ಮೀನ (19 ಫೆಬ್ರವರಿ–20 ಮಾರ್ಚ್)

ಮೀನ (19 ಫೆಬ್ರವರಿ–20 ಮಾರ್ಚ್)

ಇವರು ತಮ್ಮದೇ ಆದ ಸ್ವಯಂ ಗುಣಗಳನ್ನು ಹೊಂದಿರುತ್ತಾರೆ. ಬಹಳ ಸೂಕ್ಷ್ಮ ಸ್ವಭಾವದವರಾದ ಇವರು ಇತರರ ಮನ ನೋಯಿಸಲು ಇಷ್ಟಪಡುವುದಿಲ್ಲ. ಇವರು ಉತ್ತಮ ಸಂಭಾಷಣಾ ಕಾರರು ಎನ್ನಬಹುದು. ಹಗಲು ಗನಸು ಕಾಣುವ ಪ್ರವೃತ್ತಿಯವರಾದ ಇವರು ಕನಸು ಕಾಣುವಂತಹ ಜನರನ್ನು ಹೆಚ್ಚು ಸಂತೋಷ ಪಡಿಸಲು ಇಷ್ಟಪಡುತ್ತಾರೆ. ಇವರು ತಾವು ಹೇಳುವುದಕ್ಕಿಂತ ಇತರರು ಏನು ಹೇಳುತ್ತಾರೆ ಎನ್ನುವುದನ್ನು ಕೇಳಲು ಹೆಚ್ಚು ಉತ್ಸುಕರಾಗಿರುತ್ತಾರೆ.

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ಈ ರಾಶಿಯವರು ಅತ್ಯಂತ ರಹಸ್ಯವಾದ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಹಾಗಾಗಿ ಇವರು ತಮ್ಮ ಮಾನಸಿಕ ಭಾವನೆಗಳನ್ನು ಅತ್ಯಂತ ಹಿಡಿತದಲ್ಲಿ ಇಟ್ಟುಕೊಂಡಿರುತ್ತಾರೆ. ಇವರು ಇತರರೊಂದಿಗೆ ತಮ್ಮನ್ನು ತಾವು ವ್ಯಕ್ತ ಪಡಿಸಿಕೊಳ್ಳಲು ಅಧಿಕ ಸಮಯವನ್ನು ತೆಗೆದುಕೊಳ್ಳುವರು. ಇತರರು ತಿಳಿದಿಲ್ಲದ ವಿಚಾರವನ್ನು ಇವರು ತಿಳಿದಿರುತ್ತಾರೆ.

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ಈ ವ್ಯಕ್ತಿಗಳು ತಮ್ಮ ಅನಾನುಕೂಲವನ್ನು ಕಾಯ್ದಿರಿಸಿಕೊಳ್ಳುತ್ತಾರೆ. ಎಲ್ಲರನ್ನೂ ಸಮಾನವಾಗಿ ಕಾಣುವ ಇವರು ತಮ್ಮ ಭಾವನೆಗಳನ್ನು ಅಷ್ಟು ಸುಲಭವಾಗಿ ಹಂಚಿಕೊಳ್ಳರು. ಇವರು ಕೆಲವು ವಿಚಾರಗಳಿಂದ ದೂರ ಇರುತ್ತಾರೆ. ಇನ್ನೊಂದೆಡೆ ಇವರು ಅಭದ್ರತೆಯ ಭಾವನೆಯನ್ನು ಹೊಂದಿರುತ್ತಾರೆ. ಆ ಕಾರಣಕ್ಕಾಗಿ ತಮ್ಮ ಭಾವನೆಗಳನ್ನು ಅಷ್ಟು ಸುಲಭವಾಗಿ ವ್ಯಕ್ತಪಡಿಸುವುದಿಲ್ಲ ಎಂದು ಹೇಳಲಾಗುತ್ತದೆ.

English summary

most-conserved-and-reserved-zodiac-sign

Wondering why some people do not express their emotions? Or wonder why people tend to not be vocal about their thoughts? Then this might be due to their nature which is influenced by the zodiac signs. Here in this article, we are revealing the details of the zodiac signs which are believed to be the most reserved and conserved signs. Check out and find out if your zodiac sign is mentioned here...