For Quick Alerts
ALLOW NOTIFICATIONS  
For Daily Alerts

  ಏಪ್ರಿಲ್ 2018: ಈ ತಿಂಗಳಲ್ಲಿ ನಿಮ್ಮ ಭವಿಷ್ಯ ಹೇಗಿದೆ ನೋಡಿ...

  By Deepu
  |

  ಸಮಯ, ಸಂದರ್ಭಗಳು ಹೇಗೆ ಬರುತ್ತವೆ? ಅವುಗಳ ಪ್ರಭಾವ ನಮ್ಮ ಜೀವನವನ್ನು ಹೇಗೆ ಅಲ್ಲಾಡಿಸಿಬಿಡುತ್ತದೆ ಎನ್ನುವುದನ್ನು ನಾವು ತಿಳಿಯಲು ಸಾಧ್ಯವಿಲ್ಲ. ಹಾಗಾಗಿ ನಾವು ನಮ್ಮ ಕಣ್ಣಿಗೆ ಕಾಣದ ವಿಶೇಷ ಶಕ್ತಿಯಲ್ಲಿ (ದೇವರು) ಪ್ರಾರ್ಥನೆ ಮಾಡಿಕೊಳ್ಳುತ್ತೇವೆ. ನಿರ್ಮಲ ಮನಸ್ಸಿನಿಂದ ಬೇಡಿಕೊಂಡ ವಿಷಯಗಳನ್ನು ಭಗವಂತ ಆಲಿಸುತ್ತಾನೆ. ಜೊತೆಗೆ ನಮ್ಮ ಬೇಡಿಕೆಗಳನ್ನು ಈಡೇರಿಸುತ್ತಾನೆ ಎಂದು ಹೇಳಲಾಗುತ್ತದೆ.

  ನಮ್ಮ ಕಣ್ಣಿಗೆ ಕಾಣದ ಇನ್ನೊಂದು ವಿಶೇಷ ಶಕ್ತಿಯೆಂದರೆ ಭೌಗೋಳಿಕ ವಲಯದಲ್ಲಿರುವ ಗ್ರಹಗಳು ಹಾಗೂ ನಕ್ಷತ್ರಗಳು. ಇವುಗಳ ಚಲನ ವಲನಗಳು ನಮ್ಮ ರಾಶಿಚಕ್ರದ ಮೇಲೆ ಗಾಢವಾದ ಪ್ರಭಾವ ಬೀರುತ್ತವೆ. ಇವುಗಳ ಪ್ರಭಾವದಿಂದ ಏಪ್ರಿಲ್ ತಿಂಗಳಲ್ಲಿ ಯಾವ ರೀತಿಯ ಬದಲಾವಣೆ ನಮ್ಮ ಜೀವನದಲ್ಲಿ ಉಂಟಾಗುತ್ತದೆ? ಎನ್ನುವುದನ್ನು ತಿಳಿಯಲು ಮುಂದಿರುವ ರಾಶಿಚಕ್ರಗಳ ವಿವರಣೆಯನ್ನು ಪರಿಶೀಲಿಸಿ....

  ಮೇಷ

  ಮೇಷ

  ಏಪ್ರಿಲ್ 14ರ ವರೆಗೂ ಸೂರ್ಯನು ಮೀನರಾಶಿಯಲ್ಲಿ ಇರುವುದರಿಂದ ನಿಮಗೆ ಕೆಲವು ಅಸಮಧಾನ ಕಾಡುತ್ತಿರುವುದು. ನೀವು ಸ್ವಯಂ ಅನುಮಾನ ಹಾಗೂ ವಿಶ್ವಾಸದ ಕೊರತೆಯನ್ನು ಅನುಭವಿಸುವಿರಿ. ಇದು ನಿಮಗೆ ಅನಾನುಕೂಲವನ್ನುಂಟು ಮಾಡುವ ಸಮಯ ಎಂದೆನಿಸಿದರೂ ಮಾನಸಿಕವಾಗಿ ಧೈರ್ಯ ತಂದುಕೊಳ್ಳಬೇಕು. ಕಷ್ಟದ ಸಮಯ ದೀರ್ಘಸಮಯದ ವರೆಗೆ ಇರುವುದಿಲ್ಲ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಸೂರ್ಯನು ನಿಮ್ಮ ರಾಶಿಗೆ ಬಂದಾಗ ನೈಸರ್ಗಿಕ ಉತ್ಸಾಹವು ಹೊಳೆಯುವುದು. ಬುಧನು ಮೇ 9ರ ವರೆಗೂ ಕುಂಭರಾಶಿಯಲ್ಲಿ ಇರುವನು. ಇದರ ಪ್ರಭಾವದಿಂದ ಹಣದ ಲಾಭವನ್ನು ಅನುಭವಿಸುವಿರಿ. ಪ್ರಯಾಣಕ್ಕೂ ಇದು ನಿಮಗೆ ಅದ್ಭುತ ಸಮಯವಾಗಿರುತ್ತದೆ. ವಿವಾಹಿತರಿಗೆ ಹಾಗೂ ವಿವಾಹದ ತಯಾರಿಯಲ್ಲಿರುವವರಿಗೂ ಇದು ಉತ್ತಮ ಸಮಯವಾಗಲಿದೆ. ಶುಕ್ರನು ವೃಷಭದಲ್ಲಿ ಬರುವುದರಿಂದ ಸಾಗರೋತ್ತರದಿಂದ ವಿತ್ತೀಯ ಲಾಭವನ್ನು ಅನುಭವಿಸುವಿರಿ ಎಂದು ಹೇಳಲಾಗುತ್ತದೆ.

  ವೃಷಭ

  ವೃಷಭ

  ಈ ತಿಂಗಳಲ್ಲಿ ನೀವು ವಾಹನ ಅಥವಾ ಮನೆಗೆ ಸಂಬಂಧಿಸಿದಂತೆ ದೊಡ್ಡ ಹೂಡಿಕೆಯನ್ನು ಮಾಡುವಿರಿ ಎಂದು ಹೇಳಲಾಗುತ್ತದೆ. 14ರಮದು ಸೂರ್ಯ ತನ್ನ ಚಲನೆಯನ್ನು ಪ್ರಾರಂಭಿಸುತ್ತಾನೆ. ಅಂತೆಯೇ ನೀವೂ ಸಹ ಶಕ್ತಿಯ ವರ್ಧಕವನ್ನು ಅನುಭವಿಸುತ್ತೀರಿ. ಭೂಮಿ ಮತ್ತು ಬೆಂಕಿಯ ಸಂಯೋಜನೆಯು ವಿರೋಧಿಸಲಾಗದ ಶಕ್ತಿಯ ಮಿಶ್ರಣವನ್ನು ಸೃಷ್ಟಿಸುತ್ತದೆ. ಇದು ಬಲವಾದ ಫಲಿತಾಂಶವನ್ನು ನೀಡುತ್ತದೆ. ಬುಧನು ಅನ್ವೇಷಣೆಗಳಿಗೆ ಕಾರಣನಾಗುವನು. ಹಾಗೆಯೇ ಶುಕ್ರನು ನಿಮ್ಮ ರಾಶಿಗೆ ಚಲಿಸುವುದರಿಂದ ಅನುಕೂಲಕರ ಹಂತವನ್ನು ಸೂಚಿಸುತ್ತದೆ.

  ಮಿಥುನ

  ಮಿಥುನ

  ನಿಮ್ಮ ರಾಶಿಚಕ್ರದ ಅನುಸಾರ ಈ ತಿಂಗಳಲ್ಲಿ ನೀವು ಅದ್ಭುತ ಮನಸ್ಸಿನ ಬಲವನ್ನು ತೋರುವಿರಿ. ಯಶಸ್ಸು ನೀಡುವಂತಹ ಶಕ್ತಿ ಶಾಲಿ ಆಲೋಚನೆಗಳನ್ನು ಸಲೀಸಾಗಿ ಮಾಡುವಿರಿ. ಪ್ರಣಯದ ವಿಚಾರದಲ್ಲೂ ಮುಕ್ತವಾಗಿರುವಿರಿ. ಶಕ್ತಿಯುತವಾದ ಭಾವೋದ್ರೇಕಗಳನ್ನು ಸಡಿಲಿಸಲಿದೆ. 14ರಿಂದ ಸೂರ್ಯನ ಪ್ರಭಾವ ಉತ್ತಮವಾಗಿರುವುದರಿಂದ ಶಕ್ತಿಯು ನಿಮ್ಮ ಸಾಮಥ್ರ್ಯದೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಈ ತಿಂಗಳ ಅಂತ್ಯದಲ್ಲಿ ಹೆಚ್ಚಿನ ಯಶಸ್ಸು ದೊರೆಯುವುದು.

  ಕರ್ಕ

  ಕರ್ಕ

  ತಿಂಗಳು ಪ್ರಾರಂಭವಾಗುವಂತೆ ಗುರುವಿನ ಸ್ಥಾನವು ನಿಮಗೆ ದುರ್ಬಲ ಮತ್ತು ಅಸುರಕ್ಷಿತವಾಗಿರುತ್ತದೆ ಎಂದು ಸೂಚಿಸುತ್ತದೆ. ಆಶಾವಾದದ ಭಾಗವು ನಿಮ್ಮ ರೀತಿಯಲ್ಲಿ ಬರುವ ಸವಾಲುಗಳನ್ನು ಎದುರಿಸ ಬೇಕಾಗುವುದು. ಕುಟುಂಬ ಮತ್ತು ಪ್ರೀತಿಪಾತ್ರರೊಂದಿಗೆ ಸಂತೋಷವಾಗಿರುತ್ತದೆ. ತಿಂಗಳ ಕೊನೆಯಲ್ಲಿ ತಾಳ್ಮೆಯನ್ನು ಹೊಂದುವಿರಿ. ಆದಷ್ಟು ಶಾಂತಚಿತ್ತರಾಗಿರಲು ಪ್ರಯತ್ನಿಸಿ. ಉದ್ವೇಗವನ್ನು ಕಳೆದುಕೊಳ್ಳಬೇಡಿ. ವೃತ್ತಿ ಕ್ಷೇತ್ರದಲ್ಲೂ ಉತ್ತಮ ಫಲಿತಾಂಶವನ್ನೇ ಕಾಣುವಿರಿ. ಬಹುತೇಕ ಹಂತಗಳಲ್ಲಿ ಈ ತಿಂಗಳು ಸುಧಾರಣೆಯನ್ನು ಕಾಣುವಿರಿ.

  ಸಿಂಹ

  ಸಿಂಹ

  ಸೂರ್ಯನ ಪ್ರಭಾವ ಉತ್ತಮವಾಗಿರುವುದರಿಂದ ಈ ತಿಂಗಳು ನೀವು ಆಸಕ್ತಿ ಮತ್ತು ಭಾವನಾತ್ಮಕ ಶಕ್ತಿಯನ್ನು ಪಡೆದುಕೊಳ್ಳುವಿರಿ. ಕುಟುಂಬಕ್ಕೆ ಸಂಬಮಧಿಸಿದ ಕೆಲವು ಆತಂಕಗಳು ನಿಮ್ಮನ್ನು ಬಾಧಿಸುವುದು. ಭಾವನಾತ್ಮಕವಾಗಿ ವಿಶ್ರಾಂತಿ ಪಡೆಯಲು ಪ್ರಯತ್ನಿಸಿ. 14ರ ನಂತರ ಮೇಷರಾಶಿಗೆ ಸೂರ್ಯನು ಚಲಿಸುವನು. ಆ ಸಮಯವು ನಿಮಗೆ ಒಂದು ಅತ್ಯುತ್ತಮವಾದ ಸಮಯ ಎನ್ನಬಹುದು. ಆಧ್ಯಾತ್ಮಿಕ ವಿಚಾರದಲ್ಲಿ ಹೆಚ್ಚು ಆಸಕ್ತಿಯನ್ನು ಪಡೆದುಕೊಳ್ಳುವಿರಿ. ಆರೋಗ್ಯದ ಬಗ್ಗೆ ಕಾಳಜಿವಹಿಸಿಕೊಳ್ಳುವಂತೆ ಪ್ರೇರೇಪಿಸುವುದು. ಅದರ ಅಗತ್ಯತೆಗಳನ್ನು ಅರ್ಥಮಾಡಿಕೊಳ್ಳುವುದು ಅಗತ್ಯವಾಗಿರುತ್ತದೆ. 20ರಂದು ಶುಕ್ರನು ವೃಷಭ ರಾಶಿಗೆ ಪ್ರಯಾಣಿಸುವುದರ ಫಲವಾಗಿ ಸಂಬಂಧಗಳಲ್ಲಿ ಉತ್ತಮ ಫಲಿತಾಂಶ ದೊರೆಯುವುದು. ಅಲ್ಲದೆ ಕೆಲವು ವಿಚಾರದಲ್ಲಿ ಹೊಸ ದಾರಿಯನ್ನು ಕಂಡುಕೊಳ್ಳುವ ಸಾಧ್ಯತೆಗಳಿವೆ.

  ಕನ್ಯಾ

  ಕನ್ಯಾ

  ಸೂರ್ಯನು ಮೀನರಾಶಿಯಲ್ಲಿ ಉಳಿದುಕೊಳ್ಳುವುದರಿಂದ ಸಂಗಾತಿಯ ಬಗ್ಗೆ ತಪ್ಪು ಕಲ್ಪನೆಯನ್ನು ಹೊಂದುವ ಸಾಧ್ಯತೆಗಳಿವೆ. ಇತರರ ಬಗ್ಗೆ ಮಾತನಾಡಲು ಮತ್ತು ಕೇಳಲು ಸಮಯವನ್ನು ತೆಗೆದುಕೊಳ್ಳಿ. ಮತ್ತೊಂದೆಡೆ ನಿಮ್ಮ ವೃತ್ತಿ ಜೀವನದಲ್ಲೂ ಒತ್ತಡ ಹಾಗೂ ಸಂಘರ್ಷವನ್ನುಂಟುಮಾಡುವ ಸಾಧ್ಯತೆಗಳಿರುತ್ತವೆ. ಸೂರ್ಯನು ಮೇಷರಾಶಿಗೆ ಚಲಿಸಿದ ನಂತರ ನಿಮ್ಮಲ್ಲಿ ಒಂದಿಷ್ಟು ಆತ್ಮವಿಶ್ವಾಸ ಮೂಡುವುದು. ಉತ್ತಮ ಆರೋಗ್ಯವನ್ನು ಪಡೆದುಕೊಳ್ಳುವಿರಿ. ಶುಕ್ರನ ಕೆಲವು ಪ್ರಭಾವದಿಂದಾಗಿ ಉದ್ವಿಘ್ನತೆಯನ್ನು ಅನುಭವಿಸುವ ಸಾಧ್ಯತೆಗಳಿವೆ.

  ತುಲಾ

  ತುಲಾ

  ಸೂರ್ಯನ ಪ್ರಭಾವದಿಂದ ಈ ಹಿಂದೆ ಅನುಭವಿಸುತ್ತಿದ್ದ ಆರೋಗ್ಯ ಸಮಸ್ಯೆಗಳು ಕ್ರಮೇಣ ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಎಲ್ಲಾ ರೀತಿಯಲ್ಲೂ ಸುಧಾರಣೆ ತರಲು ಪ್ರಯತ್ನಿಸುತ್ತದೆ. ಕೆಲವು ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಲು ಸಲಹೆಯನ್ನು ನೀಡಲಾಗುತ್ತದೆ. ಆದಾಗ್ಯೂ ಆರೋಗ್ಯದ ಬಗ್ಗೆ ಕೊಂಚ ಕಾಳಜಿ ವಹಿಸುವುದು ಅಗತ್ಯ. ಸೂರ್ಯನು ಮೇಷರಾಶಿಗೆ ಸಂಚಾರ ಬೆಳೆಸಿದಂತೆ ಪ್ರೀತಿಯ ಜೀವನದಲ್ಲಿ ಉದ್ವಿಘ್ನತೆ ಮತ್ತು ಘರ್ಷಣೆಯನ್ನು ಪ್ರಚೋದಿಸುತ್ತದೆ. ಈ ಕಾರಣದಿಂದಾಗಿ ಪಾಲುದಾರಿಕೆ ಮತ್ತು ನಿರಂತರ ಸಂಪರ್ಕಗಳಿಗೆ ನೀವು ದೀರ್ಘಕಾಲದ ವರೆಗೆ ಒಲವು ತೋರುತ್ತೀರಿ. ನಿಮ್ಮ ಜೀವನದ ಕೆಲವು ವಿಚಾರಕ್ಕೆ ಸಂಬಂಧಿಸಿದಂತೆ ಸುಧಾರಣೆ ತರಲು ಒಲವು ತೋರಿ.

  ವೃಶ್ಚಿಕ

  ವೃಶ್ಚಿಕ

  ಸೂರ್ಯನ ಪ್ರಭಾವದಿಂದ ನಿಮ್ಮ ಗುಣಗಳು ಉತ್ತುಂಗಕ್ಕೆ ಏರುವುದು. ಇಲ್ಲವೇ ಕೆಲವು ರೀತಿಯ ಗುರುತನ್ನು ಪಡೆದುಕೊಳ್ಳುವಿರಿ. ಪ್ರೀತಿಯ ವಿಚಾರದಲ್ಲಿ ಕಾಳಜಿಯಿಂದ ಹೆಜ್ಜೆ ಇಡುವುದನ್ನು ಮರೆಯದಿರಿ. 14ರ ನಂತರದಲ್ಲಿ ಸೂರ್ಯ ಮೇಷ ರಾಶಿಯಲ್ಲಿ ಇರುವುದರಿಂದ ನೀವು ಯಾವುದೇ ಸವಾಲುಗಳನ್ನು ಸ್ವೀಕರಿಸಿದರೂ ಸಹ ವಿಜಯವನ್ನು ಸಾಧಿಸುವಿರಿ. ಬುಧನ ಪ್ರಭಾವ ಇರುವುದರಿಂದ ಗುಣಮಟ್ಟದ ಸಮಯವನ್ನು ಕಳೆಯಲು ಬಯಸುವಿರಿ. ನಿಮಗೆ ಜ್ಞಾನದ ಬಾಯಾರಿಕೆ ಆಗುವುದು. 20ರ ನಂತರದಲ್ಲಿ ನೀವು ನಿಮ್ಮ ಪ್ರೀತಿಪಾತ್ರರಿಂದ ಸೆಳೆಯಲು ಒಲವು ತೋರುವಿರಿ.

  ಧನು

  ಧನು

  ಸೂರ್ಯನು ಮೀನ ರಾಶಿಯಲ್ಲಿ ಇರುವುದರಿಂದ ಇವರು ಹೆಚ್ಚಿನ ಸಂತೋಷವನ್ನು ಅನುಭವಿಸುವರು. ಪರಿಶ್ರಮದಿಂದಾಗಿ ಆರ್ಥಿಕ ಸ್ಥಿತಿಯು ಸುಧಾರಣೆಯನ್ನು ಕಾಣುವುದು. ಹಣಕ್ಕೆ ಸಂಬಂಧಿಸಿದಂತೆ ಕೆಲವು ವಿಚಾರದಲ್ಲಿ ವಿವೇಚನಾಯುತರಾಗಿರಲು ತಂತ್ರಗಳನ್ನು ನೀವು ಅಭಿವೃದ್ಧಿ ಪಡಿಸಬಹುದು. ಈ ತಿಂಗಳಲ್ಲಿ ನಿಮಗೆ ಶಿಕ್ಷಣ ಮತ್ತು ಕುಟುಂಬ ಎನ್ನುವ ಎರಡು ಪ್ರಮುಖ ವಿಚಾರಗಳಿಗೆ ಹೆಚ್ಚಿನ ಆಧ್ಯತೆಯನ್ನು ನೀಡುವಿರಿ. ಅದೃಷ್ಟವು ಬಹುತೇಕವಾಗಿ ನಿಮ್ಮೆಡೆಗೆ ಇದೆ ಎನ್ನಬಹುದು. ಶುಕ್ರನು ಮೇಷರಾಶಿಗೆ ಸಂಚರಿಸುತ್ತಿದ್ದಂತೆ ಮಕ್ಕಳಿಂದ ಸಂತೋಷದ ಸುದ್ದಿಯನ್ನು ಕೇಳುವಿರಿ. ಹೊಸ ಸಂಗತಿಗಳ ಕಲಿಕೆಗೆ ಇದು ನಿಮಗೆ ಉತ್ತಮವಾದ ಸಮಯ.

  ಮಕರ

  ಮಕರ

  ಸೂರ್ಯನ ಪ್ರಭಾವದಿಂದ ಉದ್ವಿಘ್ನತೆ ಮತ್ತು ಆತಂಕದ ಪ್ರಮಾಣ ಹೆಚ್ಚುವುದು. ಅದರಲ್ಲೂ ಮಕ್ಕಳು, ತಂದೆ-ತಾಯಿ ಹಾಗೂ ಸಂಸಾರದ ವಿಚಾರದಲ್ಲಿ ಹೆಚ್ಚೆಂದು ಹೇಳಬಹುದು. ಕೆಲಸದ ವಿಚಾರದಲ್ಲಿ ಹೆಚ್ಚು ಉತ್ಸಾಹದಿಂದ ತೊಡಗುವಿರಿ. ಅಲ್ಲದೆ ಕೆಲಸದ ವಿಚಾರದಲ್ಲಿ ವಿಶ್ವಾಸಾರ್ಹ ವ್ಯಕ್ತಿಗಳಾಗಿ ತೋರುವಿರಿ. ವೃತ್ತಿ ಜೀವನದಲ್ಲಿ ಮಹತ್ತರವಾದ ಬದಲಾವಣೆಯು ಉಂಟಾಗುವ ಸಾಧ್ಯತೆಗಳಿವೆ. ಬುಧನು ಕುಂಭರಾಶಿಗೆ ಪ್ರವೇಶ ಪಡೆಯುತ್ತಿದ್ದಂತೆ ಶಿಕ್ಷಣ ಮತ್ತು ಬುದ್ಧಿಮತ್ತೆಯ ವಿಷಯದಲ್ಲಿ ಉತ್ತಮವಾಗಿರುತ್ತದೆ. ಮಹತ್ವಕಾಂಕ್ಷೆಯ ವಿಚಾರಕ್ಕೆ ಬಂದಾಗ ನಿಮಗೆ ಹೆಚಿನ ಪ್ರೋತ್ಸಾಹ ದೊರೆಯುವುದು. ಶುಕ್ರನು ವೃಷಭ ರಾಶಿಗೆ ಚಲಿಸುತ್ತಿದ್ದಂತೆ ಸಂತೋಷವು ಹೆಚ್ಚುವುದು.

  ಕುಂಭ

  ಕುಂಭ

  ಈ ತಿಂಗಳು ಸೂರ್ಯನ ಪ್ರಭಾವ ನಿಮ್ಮ ಮೇಲೆ ಹೆಚ್ಚು ಬೀರುವುದರಿಂದ ನಿಮಗೊಂದು ರೋಮಾಂಚಕ ಅವಧಿ ಎಂದು ಹೇಳಬಹುದು. ಸಂಭವನೀಯ ರೀತಿಯಲ್ಲಿ ನಿಮ್ಮ ಪಾಲುದಾರರೊಂದಿಗೆ ಸಂಪರ್ಕವನ್ನು ಗಾಢವಾಗಿಸುವುದು. ಉತ್ತಮ ಗ್ರಹಗತಿಗಳ ಪ್ರಭಾವದಿಂದ ಜೀವನದ ಎಲ್ಲಾ ಕ್ಷೇತ್ರದಲ್ಲಿಯೂ ಸಕ್ರಿಯವಾಗುವುದು ಮತ್ತು ಉತ್ಪಾದಕರಾಗುವುದನ್ನು ನೀವು ಕಂಡುಕೊಳ್ಳುತ್ತೀರಿ. ನಿಮ್ಮ ಮನಃಸ್ಥಿತಿ ಮತ್ತು ವರ್ತನೆ ಉತ್ಸುಕವಾಗಿರುತ್ತದೆ. ವಿಶೇಷವಾಗಿ ನಿಮ್ಮ ಸುತ್ತಲಿನ ಸ್ಥಿತಿಯಿಂದ ಅವಕಾಶಗಳನ್ನು ನೀವು ಕಂಡುಕೊಳ್ಳುವಿರಿ. ಈ ಹಿಂದೆ ಅಂದುಕೊಂಡ ವಿಚಾರಗಳನ್ನು ಕಾರ್ಯರೂಪಕ್ಕೆ ತರಲು ಇದೊಂದು ಸೂಕ್ತವಾದ ಸಮಯ ಎಂದು ಹೇಳಬಹುದಾಗಿದೆ.

  ಮೀನ

  ಮೀನ

  ಈ ತಿಂಗಳು ಸೂರ್ಯನು ನಿಮ್ಮ ಮನೆಯಲ್ಲಿಯೇ ಇದ್ದಾನೆ. ಇದರ ಪರಿಣಾಮವಾಗಿ ನಿಮ್ಮ ಶಕ್ತಿಯು ಮೃದುವಾಗಿರುತ್ತದೆ. ಆಂತರಿಕ ಜೀವನವು ಶ್ರೀಮಂತವಾಗಿರುವುದು. ಭ್ರಮೆಯ ಲೋಕದಲ್ಲಿ ನೀವು ಕಳೆದುಹೋಗದಂತೆ ಎಚ್ಚರಿಕೆಯಲ್ಲಿರಿ. ಸೂರ್ಯನು ಮೇಷರಾಶಿಗೆ ಚಲಿಸುತ್ತಿದ್ದಂತೆ ನಿಮ್ಮ ಆತ್ಮವಿಶ್ವಾಸ ಹೆಚ್ಚುವುದು. ಹೆಚ್ಚು ಪ್ರಣಯವನ್ನು ಅನುಭವಿಸುವಿರಿ. ವೃತ್ತಿ ಬದಲಾವಣೆ ಹಾಗೂ ಪ್ರಯಾಣ ಕೈಗೊಳ್ಳಲು ಇದೊಂದು ನಿಮಗೆ ಉತ್ತಮ ಸಮಯ ಎಂದು ಹೇಳಲಾಗುವುದು. ಬುಧನು ಕುಂಭರಾಶಿಗೆ ಸಂಚರಿಸುತ್ತಿದ್ದಂತೆ ಪ್ರೀತಿಯ ಜೀವನದಲ್ಲಿ ವಿಚಲಿತರಾಗುವಿರಿ. ಇದಲ್ಲದೆ ಹಣಕಾಸಿನ ವಿಚಾರದಲ್ಲಿ ಸಮಸ್ಯೆ ಕಾಣಿಸಿಕೊಳ್ಳಬಹುದು. ಶುಕ್ರನ ಸಂಚಾರದಿಂದ ಕುಟುಂಬದಲ್ಲಿ ಗುಣಮಟ್ಟದ ಸಮಯವನ್ನು ಆನಂದಿಸುವಿರಿ. ಜೊತೆಗೆ ಬಲವಾದ ಆರೋಗ್ಯ ವೃದ್ಧಿಯಾಗುವುದು.

  English summary

  Monthly Zodiac Predictions For April

  Here, we bring to you the dose of the monthly predictions that you need to know about your zodiac signs. The monthly predictions for April for all the 12 zodiac signs reveal about how much the stars favour you in matters of finance, career, business, personal life and a lot more!
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more