Latest Updates
-
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು
ಈ ವ್ಯಕ್ತಿ ದಿನಕ್ಕೆ ಮೂರು ಕಿ.ಲೋ.ಮಣ್ಣು, ಕಲ್ಲು ಮತ್ತು ಒಂದು ಇಟ್ಟಿಗೆ ತಿನ್ನುತ್ತಾನಂತೆ!
ಕೆಲವು ಜನರು ತುಂಬಾ ವಿಚಿತ್ರವಾಗಿರುತ್ತಾರೆ. ಸಿಕ್ಕಿದೆಲ್ಲವನ್ನು ತಿಂದು, ಕುಡಿಯುತ್ತಾರೆ. ಇದು ಸಾಮಾನ್ಯ ಜನರು ತಿನ್ನುವಂತಹ ಆಹಾರವಲ್ಲ. ಬದಲಿಗೆ ಕಲ್ಲು, ಮಣ್ಣು, ಗಾಜು ಇತ್ಯಾದಿಗಳನ್ನು ತಿಂದು ವಿಚಿತ್ರವಾಗಿರುವರು. ಇದರ ಬಗ್ಗೆ ಹಲವಾರು ಸುದ್ದಿಗಳನ್ನು ಕೇಳಿದ್ದೇವೆ. ಇಂತಹ ಒಂದು ವಿಚಿತ್ರ ವ್ಯಕ್ತಿಯ ಬಗ್ಗೆ ನಿಮಗೆ ಈ ಲೇಖನದಲ್ಲಿ ಪರಿಚಯ ಮಾಡಿಕೊಡಲಿದ್ದೇವೆ. ಈ ವ್ಯಕ್ತಿ ದಿನಕ್ಕೆ ಮೂರು ಕಿ.ಲೋ.ಮಣ್ಣು, ಕಲ್ಲು ಮತ್ತು ಒಂದು ಇಟ್ಟಿಗೆ ತಿನ್ನುತ್ತಾನಂತೆ! ಈತನನ್ನು ಅತಿಯಾಗಿ ಕಾಡುವಂತಹ ಹಸಿವು ನೀಗಿಸಲು ಹೀಗೆ ಮಾಡುತ್ತಾನಂತೆ. ಇದರ ಬಗ್ಗೆ ನಾವು ಇನ್ನಷ್ಟು ತಿಳಿಯುತ್ತಾ ಸಾಗುವ...

10 ವರ್ಷದವನಿದ್ದಾಗಲೇ ಆತನಿಗೆ ಈ ಅಭ್ಯಾಸವಾಯಿತು!
ಪಕೀರಪ್ಪ ಹುನಗುಂಡಿ ಎಂಬಾತನಿಗೆ ಹತ್ತು ವರ್ಷದವನಿರುವಾಗಲೇ ಈ ಚಟ ಹತ್ತಿಕೊಂಡಿದೆ. ಆತ ಮಣ್ಣನ್ನು ತುಂಬಾ ಇಷ್ಟಪಡುತ್ತಿದ್ದ. ಆರಂಭದಲ್ಲಿ ಆತ ಗೋಡೆಯಿಂದ ಕೆರೆದು ಮತ್ತು ಬೀದಿಗಳಲ್ಲಿ ಮಣ್ಣು ತೆಗೆದು ತಿನ್ನಲಾರಂಭಿಸಿದ. ಆದರೆ ಇದರಿಂದ ಆತನಿಗೆ ಯಾವುದೇ ರೀತಿಯ ಅಡ್ಡಪರಿಣಾಮ ಉಂಟಾಗಲಿಲ್ಲ.

ಆತನಿಗೆ ತುಂಬಾ ವಿಚಿತ್ರ ಸಮಸ್ಯೆಯಿದೆ
ಈ ರೀತಿ ಮಣ್ಣು ತಿನ್ನುವಂತಹ ಸಮಸ್ಯೆಯನ್ನು ತುಂಬಾ ಅಪರೂಪದ ಪಿಕಾ ಎಂದು ಕರೆಯಲಾಗುತ್ತದೆ. ಈ ಸಮಸ್ಯೆಯು ಇರುವಂತಹ ವ್ಯಕ್ತಿಗಳು ಯಾವುದೇ ಪೋಷಕಾಂಶಗಳು ಇಲ್ಲದೆ ಇರುವಂತಹ ವಸ್ತುಗಳನ್ನು ತಿನ್ನಲು ಬಯಸುವರು.

ದಶಕಗಳಿಂದ ಆತ ಇದನ್ನು ತಿನ್ನುತ್ತಿದ್ದಾನೆ
ಪಕೀರಪ್ಪ ತನಗೆ ಇದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಉಂಟಾಗಿಲ್ಲವೆಂದು ಹೇಳುತ್ತಿದ್ದಾರೆ. ತನ್ನ ಹಲ್ಲುಗಳು ತುಂಬಾ ಸುಂದರವಾಗಿದೆ ಮತ್ತು ಕಷ್ಟವಿಲ್ಲದೆ ಕೂಡ ತುಂಡು ಮಾಡಬಲ್ಲೆ ಎನ್ನುತ್ತಾರೆ.

ಕೋಳಿಮಾಂಸದ ಬದಲಿಗೆ ಇಟ್ಟಿಗೆ!
ಪಕೀರಪ್ಪ ಇಟ್ಟಿಗೆ, ಮಣ್ಣು ಮತ್ತು ಕಲ್ಲನ್ನು ತುಂಬಾ ಇಷ್ಟಪಡುವರು. ಭೂರೀ ಭೋಜನ ನೀಡಿದರೂ ಅವರು ಅದನ್ನು ಸ್ವೀಕರಿಸುವುದಿಲ್ಲ. ಕರಿದ ಕೋಳಿ ಮುಂದೆ ತಂದು ಇಟ್ಟರೂ ಅವರು ಇಷ್ಟಪಡುವುದು ಇಟ್ಟಿಗೆ ಎಂದು ಹೇಳುವರು.

ಅವರಿಗೆ ಬಿಸಿ ಇದ್ದಿಲು ಕೂಡ ಇಷ್ಟ
ಪ್ರತೀ ದಿನ ಪಕೀರಪ್ಪ ಅವರು ಇಟ್ಟಿಗೆ, ಮಣ್ಣು ಮತ್ತು ಕಲ್ಲುಗಳನ್ನು ತಿನ್ನಲು ಇಷ್ಟಪಡುವರು ಎಂದು ಸ್ನೇಹಿತರು ಮತ್ತು ಕುಟುಂಬದವರು ಹೇಳುವರು. ಇದನ್ನು ತಪ್ಪಿಸಲು ಪ್ರಯತ್ನಿಸಿದರೂ ಅದು ಪ್ರಯೋಜನವಾಗಿಲ್ಲವೆನ್ನುವರು. ಬಿಸಿ ಇದ್ದಿಲು ಕೂಡ ತಿನ್ನುತ್ತಾರಂತೆ!

ಅವರೀಗ ತಿರುಗುತ್ತಲಿರುವರು
ಈ ಅಭ್ಯಾಸವು ತುಂಬಾ ಅಸಾಮಾನ್ಯ ಮತ್ತು ಅಚ್ಚರಿಯನ್ನು ಮೂಡಿಸಿರುವುದು. ಪಕೀರಪ್ಪ ಅವರು ಈಗ ವಿವಿಧ ಹಳ್ಳಿಗಳಿಗೆ ಹೋಗಿ ತನ್ನ ಈ ವಿಚಿತ್ರ ಪ್ರತಿಭೆ ತೋರಿಸಿ, ಜೀವನ ನಿರ್ವಹಣೆ ಮಾಡುವರು. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನೆಂದು ತಿಳಿಸಿ. ಅನಿಸಿಕೆಗಳನ್ನು ಕಮೆಂಟ್ ಬಾಕ್ಸ್ ಗೆ ಹಾಕಿ.



Click it and Unblock the Notifications