ರಾಶಿ ಭವಿಷ್ಯ: ಮಾರ್ಚ್ ತಿಂಗಳಲ್ಲಿ ಜನಿಸಿದವರಿಗೆ ಅದೃಷ್ಟದ ಹರಳು

Posted By: Deepu
Subscribe to Boldsky

ಅದೃಷ್ಟ ಎನ್ನುವುದು ಎಲ್ಲರಿಗೂ ಅಗತ್ಯವಾದದ್ದು. ಈ ಅದೃಷ್ಟ ಎನ್ನುವುದು ಇಲ್ಲವೆಂದಾಗ ವ್ಯಕ್ತಿ ಅದೆಷ್ಟೇ ಪ್ರಯತ್ನ ಅಥವಾ ಸಾಹಸ ಮಾಡಿದರೂ ಯಶಸ್ಸನ್ನು ಸಾಧಿಸಲು ಕಷ್ಟವಾಗುವುದು. ಹಾಗೊಮ್ಮೆ ಅದೃಷ್ಟ ನಮ್ಮ ಜೊತೆಯೇ ಇದೆ ಎಂದಾದರೆ ನಾವು ಎಂತಹ ಕೆಲಸಕ್ಕೆ ಕೈಹಾಕಿದರೂ ಹೂವು ಎತ್ತಿದಷ್ಟೆ ಸುಲಭವಾಗಿ ನಡೆಯುತ್ತದೆ. ಅದಕ್ಕಾಗಿ ಅಧಿಕ ಶ್ರಮವನ್ನು ವ್ಯಯಿಸುವ ಅಗತ್ಯವಿರುವುದಿಲ್ಲ. ನಾವು ಬಯಸಿದ ಹಾಗೆಯೇ ಉದ್ಯೋಗ ದೊರೆಯುವುದು. ಆರ್ಥಿಕ ಸ್ಥಿತಿ ಸುಧಾರಣೆ ಕಾಣುವುದು. ಮನೆಯಲ್ಲೂ ನೆಮ್ಮದಿ ನೆಲೆಸುವುದು.

ಅದೃಷ್ಟವನ್ನು ನಾವು ಪಡೆದುಕೊಳ್ಳಲು ಹೇಗೆ ಶ್ರಮವನ್ನು ವಹಿಸುತ್ತೇವೆಯೋ ಹಾಗೆಯೇ ಆಧ್ಯಾತ್ಮದ ರೂಪದಲ್ಲಿಯೂ ಸಕಾರಾತ್ಮಕ ಶಕ್ತಿ ನಮ್ಮೆಡೆಗೆ ಇರುವಂತೆ ನೋಡಿಕೊಳ್ಳಬೇಕು. ನಮ್ಮ ಸುತ್ತಲೂ ಸಕಾರಾತ್ಮಕ ಶಕ್ತಿ ನೆಲೆಸುವಂತೆ ಮಾಡಬೇಕೆಂದರೆ ನಮ್ಮ ಬಳಿ ಆ ಶಕ್ತಿಯನ್ನು ಆಕರ್ಷಿಸುವ ವಸ್ತು ಇರಬೇಕು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆಯಾ ರಾಶಿಚಕ್ರದವರು ತಾವು ಹುಟ್ಟಿದ ತಿಂಗಳು ಹಾಗೂ ರಾಶಿಚಕ್ರದ ಆಧಾರದ ಮೇಲೆ ಹರಳನ್ನು ಅಥವಾ ಕಲ್ಲನ್ನು ಧರಿಸಬೇಕು. ಆಗ ಸಕಾರಾತ್ಮಕ ಶಕ್ತಿ ನಮ್ಮೆಡೆಗೆ ತಿರುಗುವುದು. ಅದೃಷ್ಟವು ಸದಾ ನಮ್ಮ ಕೈಹಿಡಿದು ನಡೆಸುವುದು.

ಜಾತಕದಲ್ಲಿ ಗ್ರಹದ ಪ್ರಭಾವಿದ್ದರೆ ಯಾವ ಹರಳು ಒಳ್ಳೆಯದು?

ಈ ವಿಷಯದ ಪ್ರಯುಕ್ತವೇ ಬೋಲ್ಡ್ ಸ್ಕೈ ಮಾರ್ಚ್ ತಿಂಗಳಲ್ಲಿ ಜನಿಸಿದವರು ಧರಿಸಬಹುದಾದ ಹರಳುಗಳ ವಿವರಗಳನ್ನು ಈ ಮುಂದೆ ನೀಡಿದೆ. ಮಾರ್ಚ್ ತಿಂಗಳ ಕೆಲವು ದಿನಾಂಕದ ಮೇರೆಯಲ್ಲಿ ಮೀನ ಮತ್ತು ಮೇಷ ರಾಶಿಯವರು ಬರುತ್ತಾರೆ. ಇವರಿಗೆ ಅದೃಷ್ಟವನ್ನು ತಂದುಕೊಡುವ ಹರಳುಗಳ ವಿಷಯಗಳನ್ನು ತಿಳಿಯೋಣ ಬನ್ನಿ....  

 ಅಕ್ವಾಮರೀನ್

ಅಕ್ವಾಮರೀನ್

ವಿವಿಧ ಬಗೆಯ ಸೋಂಕುಗಳನ್ನು ಹಾಗೂ ಅಲರ್ಜಿಗಳ ವಿರುದ್ಧ ವ್ಯಾಪಕವಾಗಿ ಹೋರಾಡುವ ಪ್ರತಿಭಾವಂತ ಚಿಕಿತ್ಸಕ ಸ್ಫಟಿಕ ಅಕ್ವಾಮರೀನ್. ಈ ಕಲ್ಲು ಒಂದು "ಗಂಟಲು ಚಕ್ರದ ಕಲ್ಲು". ಇದರಿಂದ ಸಂವಹನ ಕೌಶಲ್ಯವು ಹೆಚ್ಚುತ್ತದೆ. ಈ ಹರಳನ್ನು ಧರಿಸುವುದರಿಂದ ದೇಹದಲ್ಲಿ ಶಕ್ತಿಯು ಹೆಚ್ಚುವುದು ಮತ್ತು ಸಕಾರಾತ್ಮಕ ಶಕ್ತಿಗಳನ್ನು ಆಕರ್ಷಿಸಿ, ಯಶಸ್ಸು ದೊರೆಯುವಂತೆ ಮಾಡುವುದು.

 ಫ್ಲೋರೈಟ್

ಫ್ಲೋರೈಟ್

ಮೂರನೇ ಕಣ್ಣಿನ ಶಕ್ತಿಯನ್ನು ಜಾಗೃತಗೊಳಿಸುವ ಕಾರಣಕ್ಕೆ ಫ್ಲೋರೈಟ್ ಸಹಕಾರಿಯಾಗಿದೆ. ಇದನ್ನು ಪ್ರಬಲ ಸ್ಫಟಿಕ ಎಂದು ಪರಿಗಣಿಸಲಾಗುವುದು. ಈ ಕಲ್ಲು ಎಲ್ಲವನ್ನೂ ಸ್ಪಷ್ಟಪಡಿಸುವಲ್ಲಿ ಸಹಾಯ ಮಾಡುತ್ತದೆ ಮತ್ತು ಅದು ನಿಮಗೆ ಪ್ರಯೋಜನಕಾರಿಯಾಗುವ ಆಲೋಚನೆಗಳನ್ನು ಶೋಧಿಸುತ್ತದೆ.

ರೂಬಿ

ರೂಬಿ

ಈ ಕಲ್ಲನ್ನು ರಾಶಿಚಕ್ರದವರಿಗೆ ಒಂದು ಅದ್ಭುತವನ್ನು ತಂದುಕೊಡುವ ಕಲ್ಲು ಎಂದು ಪರಿಗಣಿಸಲಾಗುವುದು. ಈ ಹರಳು ಜ್ಞಾನೋದಯ ಮತ್ತು ಬುದ್ಧಿವಂತಿಕೆಯನ್ನು ಸೂಚಿಸುತ್ತದೆ. ಮಾರ್ಚ್ ತಿಂಗಳಲ್ಲಿ ಜನಿಸಿದವರಿಗೆ ಸಾಮಾನ್ಯವಾಗಿ ಶಾಂತಿಯ ಕೊರತೆ ಇರುತ್ತದೆ ಎಂದು ಹೇಳಲಾಗುವುದು. ಈ ಹರಳನ್ನು ಧರಿಸುವುದರಿಂದ ವೈರತ್ವ ದೂರವಾಗುವುದು. ಅಲ್ಲದೆ ಸಾಮರಸ್ಯಕರವಾದ ಜೀವನ ನಡೆಸಲು ಸಹಾಯ ಮಾಡುವುದು. ನಿತ್ಯವೂ ಈ ಹರಳು ನಿಮ್ಮ ದೇಹದಲ್ಲಿ ಇರುವಂತೆ ಧರಿಸಿದರೆ ವೈಯಕ್ತಿಕವಾಗಿ ಹಾಗೂ ವೃತ್ತಿಪರವಾಗಿ ಯಶಸ್ಸನ್ನು ಕಾಣುವಿರಿ.

ರೋಡೋನೈಟ್

ರೋಡೋನೈಟ್

ಈ ಹರಳನ್ನು ಸ್ವಯಂ ಪ್ರೀತಿ ಮತ್ತು ಕರುಣೆಯನ್ನು ಸೃಷ್ಟಿಸುವ ಕಲ್ಲು ಎಂದು ಪರಿಗಣಿಸಲಾಗುತ್ತದೆ. ಈ ಕಲ್ಲನ್ನು ಧರಿಸಿದವರ ಶಕ್ತಿಯು ಪ್ರತಿಬಿಂಬಿಸುತ್ತಿರುತ್ತದೆ. ಶಕ್ತಿಶಾಲಿಯಾದ ಈ ಹರಳು ಸ್ವಯಂ ಗೌರವವನ್ನು ಹುಟ್ಟುಹಾಕಲು ಮತ್ತು ಮರುಕಳಿಸುವಂತೆ ಮಾಡುವುದು. ರಕ್ತ ಪರಿಚಲನೆಯನ್ನು ಸುಧಾರಿಸುವುದು ಮತ್ತು ಒಟ್ಟಾರೆ ಶಕ್ತಿಯನ್ನು ಹೆಚ್ಚಿಸುವಲ್ಲಿ ಈ ಹರಳು ಸಹಾಯ ಮಾಡುವುದು.

ವೈಡೂರ್ಯ

ವೈಡೂರ್ಯ

ಈ ಹರಳನ್ನು ಸೆಳವು ಹಾಗೂ ಶುದ್ಧೀಕರಣದ ಕಲ್ಲು ಎಂದು ಪರಿಗಣಿಸುತ್ತಾರೆ. ಇದನ್ನು ಆಧ್ಯಾತ್ಮದಲ್ಲಿ ಪ್ರಥಮ ಚಿಕಿತ್ಸೆಯ ಕಲ್ಲನ್ನಾಗಿ ಬಳಸುತ್ತಾರೆ. ಈ ಹರಳು ನಮ್ಮ ಆಂತರ್ಯದ ಮೂರನೇ ಕಣ್ಣು, ಹೃದಯ ಮತ್ತು ಗಂಟಲಿಗೆ ಸಂಬಂಧಿಸಿದ ಚಕ್ರವನ್ನು ಸಕ್ರಿಯಗೊಳಿಸುತ್ತದೆ. ಈ ಕಲ್ಲನ್ನು ಬಳಸಿ ಭೌತಿಕ ಮತ್ತು ಭಾವನಾತ್ಮಕ ಅಸ್ವಸ್ಥತೆಯನ್ನು ಸರಿಪಡಿಸಬಹುದು.

ಅಮೆಥಿಸ್ಟ್

ಅಮೆಥಿಸ್ಟ್

ಈ ಹರಳನ್ನು ಅತ್ಯುತ್ತಮ ಶಾಂತಿ ಮತ್ತು ಸಂತೃಪ್ತಿಯನ್ನು ಸೃಷ್ಟಿಸಲು ಸಹಾಯ ಮಾಡುವ ಕಲ್ಲು ಎಂದು ಪರಿಗಣಿಸಲಾಗುವುದು. ಈ ಹರಳು "ಜಾಗೃತಿಕ ಕಲ್ಲು" ಎಂದು ಹೇಳಲಾಗುತ್ತದೆ. ನಮ್ಮ ಹತ್ತಿರವಿರುವ ನಕಾರಾತ್ಮಕ ಭಾವನೆಗಳನ್ನು ದೂರವಿರಿಸಿ, ಬದುಕುವ ಪ್ರಚೋದನೆಯನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡುತ್ತದೆ. ಈ ಹರಳನ್ನು ಧರಿಸುವುದರಿಂದ ವ್ಯಕ್ತಿ ಕಳೆದುಕೊಂಡ ಆಸಕ್ತಿಯನ್ನು ಪುನಃ ಪಡೆದುಕೊಳ್ಳಲು ಸಹಾಯ ಮಾಡುವುದು.

ನಿಮ್ಮ ರಾಶಿಗೆ ಯಾವ ಹರಳು ಅದೃಷ್ಟ?

English summary

Lucky Birthstones For People Born In March

Here, we bring to you the list of birthstones that people who are born in March can wear. These are the best birthstones for the Pisces zodiac sign as well. If you are an individual born in this month, then opt for a stone that is mentioned below.