ಹಾಸಿಗೆ ಅಡಿಯಲ್ಲಿ ಈ ವಸ್ತುಗಳನ್ನು ಇಟ್ಟರೆ ನಿಮ್ಮ ಅದೃಷ್ಟವೇ ಬದಲಾಗಬಹುದು

Posted By: Deepu
Subscribe to Boldsky
ಈ 6 ವಸ್ತುಗಳನ್ನ ನಿಮ್ಮ ಹಾಸಿಗೆ ಅಡಿಯಲ್ಲಿ ಇಡಿ | ಅದೃಷ್ಟ ನಿಮ್ಮದಾಗುತ್ತೆ | Oneindia Kannada

ಅದೃಷ್ಟ ಯಾರಿಗೆ ಬೇಡ? ಪ್ರತಿಯೊಬ್ಬರು ಜೀವನದ ಏಳಿಗೆ ಅಥವಾ ಸುಧಾರಣೆಗಾಗಿ ಹಂಬಲಿಸುತ್ತಲೇ ಇರುತ್ತಾರೆ. ಒಂದು ಚಿಕ್ಕ ಬದಲಾವಣೆ ಹಾಗೂ ಸುಧಾರಣೆಗಳು ನಮಗೆ ಮಹತ್ತರವಾದ ಸಂತೋಷ ನೀಡುವುದರಲ್ಲಿ ಸಂದೇಹವಿಲ್ಲ. ಕೆಲವರು ಜೀವನದಲ್ಲಿ ಸದಾ ಅದೃಷ್ಟವನ್ನು ಪಡೆದುಕೊಳ್ಳುತ್ತಲೇ ಇರುತ್ತಾರೆ. ಇನ್ನೂ ಕೆಲವರು ಅದೃಷ್ಟದ ಹಂಬಲದಲ್ಲಿ ಇರುತ್ತಾರೆ.

ನೀವೂ ಸಹ ಅದೃಷ್ಟದ ಹಂಬಲದಲ್ಲಿ ಇದ್ದೀರಿ ಅಥವಾ ಜೀವನದಲ್ಲಿ ಬದಲಾವಣೆಯನ್ನು ಬಯಸುತ್ತಿದ್ದೀರಿ ಎಂದರೆ ಮೊದಲು ಹಾಸಿಗೆಯ ಅಡಿಯಲ್ಲಿ ಕೆಲವು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವ ವಸ್ತುಗಳನ್ನು ಇಡಲು ಮರೆಯದಿರಿ. ಹಾಗಾದರೆ ಆ ವಸ್ತುಗಳು ಯಾವವು? ಅದರಿಂದ ಯಾವ ಬಗೆಯ ಲಾಭ ಉಂಟಾಗುವುದು ಎನ್ನುವುದನ್ನು ಬೋಲ್ಡ್ ಸ್ಕೈ ಈ ಮುಂದೆ ಸಂಕ್ಷಿಪ್ತವಾಗಿ ವಿವರಿಸಿದೆ ನೋಡಿ...

ನಿಮ್ಮ ಕೋಪದ ನಿಯಂತ್ರಣಕ್ಕೆ

ನಿಮ್ಮ ಕೋಪದ ನಿಯಂತ್ರಣಕ್ಕೆ

ಕೋಪ ಮನುಷ್ಯನ ಹಾನಿಕಾರಕ ವಿಚಾರ. ಬಹಳಷ್ಟು ಸಾರಿ ನಾವು ಕೋಪದ ಕೈಗೆ ಬುದ್ಧಿಯನ್ನು ಕೊಡುತ್ತೇವೆ. ಇದರಿಂದ ಅನಾಹುತಗಳನ್ನು ಸಹ ಅನುಭವಿಸುತ್ತವೆ. ಇಂತಹ ಕೋಪವನ್ನು ನಮ್ಮ ಹಿಡಿತದಲ್ಲಿ ಇಡಬೇಕು ಎಂದರೆ ಹಾಸಿಗೆಯ ಅಡಿಯಲ್ಲಿ ಅಥವಾ ಪಕ್ಕದಲ್ಲಿ ನೀರು ತುಂಬಿದ ತಾಮ್ರದ ಪಾತ್ರೆಯನ್ನು ಇಡಿ. ಕೆಂಪು ಶ್ರೀಗಂಧದ ಕೊರಡು (ತುಂಡು) ಅನ್ನು ದಿಂಬಿನ ಕೆಳಗೆ ಇರಿಸಿ.

ಆತ್ಮ ವಿಶ್ವಾಸದ ಹೆಚ್ಚಳಕ್ಕೆ

ಆತ್ಮ ವಿಶ್ವಾಸದ ಹೆಚ್ಚಳಕ್ಕೆ

ಆತ್ಮ ವಿಶ್ವಾಸ ಇಲ್ಲವೆಂದರೆ ನಾವು ಯಾವ ಕೆಲಸವನ್ನೂ ಮಾಡಲು ಸಾಧ್ಯವಿಲ್ಲ. ನಮ್ಮ ಗುರಿ ಅಥವಾ ಧ್ಯೇಯಗಳ ಸಾಧನೆಗೆ ನಮ್ಮಲ್ಲಿ ಉತ್ತಮ ಮಟ್ಟದ ಆತ್ಮವಿಶ್ವಾಸ ಇರಬೇಕು. ಸಾಧಿಸುತ್ತೇನೆ ಎನ್ನುವ ಛಲ ಇರಬೇಕು. ಈ ಶಕ್ತಿಯ ಹೆಚ್ಚಳಕ್ಕೆ ಬೆಳ್ಳಿ ಪಾತ್ರೆಯಲ್ಲಿ ಅಥವಾ ಬೆಳ್ಳಿ ಲೋಟದಲ್ಲಿ ನೀರನ್ನು ತುಂಬಿ ಹಾಸಿಗೆ ಅಡಿಯಲ್ಲಿ ಇರಿಸಿ. ಕೆಲವು ಬೆಳ್ಳಿ ಆಭರಣಗಳನ್ನು ಧರಿಸುವುದರಿಂದ ಅದ್ಭುತವನ್ನು ಸಾಧಿಸಬಹುದು.

ಧೈರ್ಯಶಾಲಿಯಾಗಲು

ಧೈರ್ಯಶಾಲಿಯಾಗಲು

ನಾವು ಮಲಗುವ ಹಾಸಿಗೆಯ ಅಡಿಯಲ್ಲಿ ಚಿನ್ನ ಅಥವಾ ಬೆಳ್ಳಿಯ ಆಭರಣವನ್ನು ಇರಿಸಿಕೊಂಡು ಮಲಗಬೇಕು. ಇದರಿಂದ ನಮ್ಮ ಕುಂಡಲಿಯಲ್ಲಿರುವ ಕೆಲವು ದೋಷಗಳು ಹಾಗೂ ಕೆಟ್ಟ ಅದೃಷ್ಟವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಉತ್ತಮ ಅದೃಷ್ಟಕ್ಕಾಗಿ ಕಂಚಿನ ಪಾತ್ರೆಯಲ್ಲಿ ನೀರನ್ನು ತುಂಬಿ ಹಾಸಿಗೆಯ ಅಡಿಯಲ್ಲಿ ಇಡಬಹುದು.

ಉತ್ತಮ ಅದೃಷ್ಟ ಪಡೆಯಲು

ಉತ್ತಮ ಅದೃಷ್ಟ ಪಡೆಯಲು

ಜೀವನದಲ್ಲಿ ಸದಾ ಅದೃಷ್ಟವನ್ನು ಹೊಂದಲು ಹಾಸಿಗೆ ಅಡಿಯಲ್ಲಿ ಬೆಳ್ಳಿಯಿಂದ ತಯಾರಿಸಿರುವ ಮೀನನ್ನು ಇಟ್ಟು ಮಲಗಬೇಕು. ಇಲ್ಲವೇ ಬೆಳ್ಳಿ ಪಾತ್ರೆಯಲ್ಲಿ ನೀರನ್ನು ತುಂಬಿಸಿ, ಅದರಲ್ಲಿ ಬೆಳ್ಳಿಯ ಮೀನನ್ನು ಇರಿಸಿ ಮಲಗಬೇಕು.

ಕೆಟ್ಟ ಅದೃಷ್ಟವನ್ನು ತಡೆಯಲು

ಕೆಟ್ಟ ಅದೃಷ್ಟವನ್ನು ತಡೆಯಲು

ಅದೃಷ್ಟ ಸುಧಾರಣೆಯಾಗಬೇಕು ಎಂದರೆ ಮೊದಲು ಕೆಟ್ಟ ಕಣ್ಣಿನಿಂದ ನಾವು ದೂರ ಇರಬೇಕು. ನಮ್ಮ ಕೆಟ್ಟ ಅದೃಷ್ಟವನ್ನು ತಡೆಯಲು ಹಾಸಿಗೆಯ ಅಡಿಯಲ್ಲಿ ನೀಲ ಮಣಿಯನ್ನು ಇರಿಸಬೇಕು. 21 ದಿನಗಳ ಕಾಲ, ಕಬ್ಬಿಣದ ಪಾತ್ರೆಯಲ್ಲಿ ನೀರನ್ನು ತುಂಬಿಸಿ ಹಾಸಿಗೆಯ ಅಡಿಯಲ್ಲಿಟ್ಟು ಮಲಗಬೇಕು. ಆಗ ಕೆಟ್ಟ ಶಕ್ತಿ ಹಾಗೂ ಅದೃಷ್ಟಗಳು ನಮ್ಮಿಂದ ದೂರ ಸರಿಯುವವು.

English summary

Keeping These 6 Things Under Your Bed For 21 Days Can Bring In Luck!

To bring in luck, we tend to take the extra step all the time. But how many things do you actually know about that can bring in luck? Well, there are a few simple things that can bring in luck with their simple moves. There are a few vastu tips that you can follow to get good luck your way. Check them out. Keep a few things under the bed for 21 days and see how things will improve for you.