ಮೊಮ್ಮಗಳಿಗೆ ಆಹಾರ ನೀಡದೇ ಹಿಂಸಿಸುತ್ತಿದ್ದ ಅಜ್ಜನ ಬಣ್ಣ ಬಯಲು!

Posted By: Arshad
Subscribe to Boldsky

ಸಾಮಾಜಿಕ ಜಾಲತಾಣದ ಕೆಲವರ ಮಟ್ಟಿಗೆ ಪ್ರಾಣರಕ್ಷಕನಾಗಿಯೂ ಕಾರ್ಯನಿರ್ವಹಿಸಿದ ಘಟನೆಗಳನ್ನು ಆಗಾಗ ನೋಡುತ್ತಲೇ ಇದ್ದೇವೆ. ಕೆಲವರು ತಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಪ್ರಕಟಿಸಿ ಮಾನವತೆಯೇ ತಲೆತಗ್ಗಿಸುವಂತಹ ಪ್ರಕರಣಗಳನ್ನು ಬಯಲಿಗೆಳೆದಿದ್ದಾರೆ. ಇಂತಹ ಒಂದು ಹೃದಯವಿದ್ರಾವಕ ಘಟನೆ ಸಾಮಾಜಿಕ ಜಾಲತಾಣದ ಮೂಲಕ ಪ್ರಕಟಗೊಂಡಿದೆ. ಅಷ್ಟಕ್ಕೂ ಈ ಬಾಲಕಿಯ ಮೇಲೆ ದೌರ್ಜನ್ಯ ನಡೆಸಿದ್ದು ಬೇರಾರೂ ಅಲ್ಲ, ಆಕೆಯ ಸ್ವಂತ ಅಜ್ಜ!

ಈಕೆ ಆಹಾರ ಸೇವಿಸುವುದೇ ದೊಡ್ಡ ಅಪರಾಧ ಎಂಬಂತೆ ವರ್ತಿಸುವ ಈ ಅಜ್ಜನಿಂದ ಈಕೆಯ ದೇಹ ಸ್ನಾಯುಗಳೇ ಇಲ್ಲದೇ ಕೇವಲ ಮೂಳೆ ಚಕ್ಕಳದ ಹಂದರವಾಗಿದೆ. ಪರಿಣಾಮವಾಗಿ ಈಕೆ ಕೇವಲ 16.8 ಕೇಜಿ ತೂಗುತ್ತಾಳೆ! ಯಾವಾಗ ಈಕೆ ತನ್ನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಳೋ ಆಗಲೇ ಈ ದೌರ್ಜನ್ಯ ಬೆಳಕಿಗೆ ಬಂದಿದೆ, ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೋಡೋಣ...

ಈಕೆ ತನ್ನ ವಿವರಗಳನ್ನು ಟ್ವಿಟ್ಟರ್ ನಲ್ಲಿ ತಿಳಿಸಿದಳು

ಈಕೆ ತನ್ನ ವಿವರಗಳನ್ನು ಟ್ವಿಟ್ಟರ್ ನಲ್ಲಿ ತಿಳಿಸಿದಳು

ಜಪಾನ್‌ನ ಒಂದು ಪಟ್ಟಣದಲ್ಲಿ ಈಕೆ ತನ್ನ ಬಗ್ಗೆ ತಿಳಿಸಿ ತನ್ನ ಕೆಲವು ಚಿತ್ರಗಳನ್ನೂ ಪ್ರಕಟಿಸಿದಳು. ಕೆಲವು ಚಿತ್ರಗಳು ಹತ್ತು ವರ್ಷ ಹಿಂದೆ ತೆಗೆದಿರುವಂತಹವು. ಟ್ವಿಟ್ಟರ್‌ನಲ್ಲಿ ಈ ಚಿತ್ರಗಳನ್ನು ಗಮನಿಸಿದ ಹಲವರು ಈ ಬಗ್ಗೆ ಕಾಳಜಿ ವ್ಯಕ್ತಪಡಿಸಿದರು.

ಬಳಿಕ ತನ್ನ ಮೇಲಾದ ದೌರ್ಜನ್ಯಗಳನ್ನು ವಿವರಿಸಿದಳು

ಬಳಿಕ ತನ್ನ ಮೇಲಾದ ದೌರ್ಜನ್ಯಗಳನ್ನು ವಿವರಿಸಿದಳು

ಊಟಕ್ಕಿಲ್ಲದೇ ಹಾಹಾಕಾರ ಮಾಡುತ್ತಿದ್ದ ಆಕೆ ಈ ಸ್ಥಿತಿಯಲ್ಲಿದ್ದ ತನ್ನ ಚಿತ್ರಗಳನ್ನು ಟ್ವಿಟ್ಟರ್ ನಲ್ಲಿ ಪ್ರಕಟಿಸಿದ್ದಾಳೆ. ತನ್ನ ಅಜ್ಜನೇ ತನಗೆ ಊಟಕ್ಕೆ ಕೊಡದೇ ಈ ಸ್ಥಿತಿಗೆ ಕಾರಣನಾಗಿದ್ದಾನೆ ಎಂದೂ ವಿವರಿಸಿದ್ದಾಳೆ. ಹಸಿವು ತಾಳಲಾರದೇ ಏನಾದರೂ ತಿನ್ನಲು ಯತ್ನಿಸಿದರೆ ಈ ಅಜ್ಜ ಆಕೆಯ ಹೊಟ್ಟೆಗೆ ಗುದ್ದಿ ನೋವು ನೀಡುತ್ತಿದ್ದುದ್ದಾಗಿ ತಿಳಿಸಿದ್ದಾಳೆ.

ತಿಂದುದನ್ನು ವಾಂತಿ ಮಾಡಿಸುತ್ತಿದ್ದ ಅಜ್ಜ

ತಿಂದುದನ್ನು ವಾಂತಿ ಮಾಡಿಸುತ್ತಿದ್ದ ಅಜ್ಜ

ಕದ್ದು ಮುಚ್ಚಿ ಏನು ತಿಂದರೂ ಇದನ್ನು ಸಹಿಸದ ಅಜ್ಜ ಆಕೆಯ ಹೊಟ್ಟೆಯ ಮೇಲೆ ಒದ್ದು ಆಕೆ ಬಲವಂತವಾಗಿ ವಾಂತಿ ಮಾಡುವಂತೆ ಮಾಡುತ್ತಿದ್ದ ಈ ದುರುಳ ಅಜ್ಜ!

ಮೊದಲು ಜನರು ಇದನ್ನು ನಂಬಲಿಲ್ಲ!

ಮೊದಲು ಜನರು ಇದನ್ನು ನಂಬಲಿಲ್ಲ!

ಸಾಮಾನ್ಯವಾಗಿ ನಾವು ನಂಬಲು ಸಾಧ್ಯವಿಲ್ಲದ ಯಾವುದೇ ವಿಷಯವನ್ನು ಪ್ರಥಮ ಬಾರಿ ಕೇಳಿದರೆ ತಕ್ಷಣಕ್ಕೆ ನಂಬುವುದಿಲ್ಲ. ಆದರೆ ಕುತೂಹಲವನ್ನು ಪ್ರಕಟಿಸುತ್ತೇವೆ. ಈ ಬಾಲಕಿಯ ವಿಷಯದಲ್ಲಿಯೂ ಹಾಗೇ ಆಯಿತು. ಸಮಾಜಿಕ ಜಾಲತಾಣದಲ್ಲಿ ಈಕೆಯ ಚಿತ್ರಗಳನ್ನು ಗಮನಿಸಿದವರು ಇದೊಂದು ಸುಳ್ಳು ಸುದ್ದಿ ಇರಬಹುದೆಂದೇ ಭಾವಿಸಿದರು. ಹಾಗಾಗಿ ಹೆಚ್ಚಿನವರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ತೋರದೇ ಇದ್ದರೂ ಈ ಬಾಲಕಿ ತನ್ನ ಬಗ್ಗೆ ವಿವರಗಳನ್ನು ಹೆಚ್ಚು ಹೆಚ್ಚಾಗಿ ಪ್ರಕಟಿಸುವುದನ್ನು ಮಾತ್ರ ತಡೆಯಲಾಗಲಿಲ್ಲ.

ಈಕೆಯ ತೂಕ ಕೇವಲ 16.8 ಕೇಜಿ!

ಈಕೆಯ ತೂಕ ಕೇವಲ 16.8 ಕೇಜಿ!

ಯಾವಾಗ ಈಕೆ ತನ್ನ ತೂಕ 16.8ಕೇಜಿ ಎಂದು ತಿಳಿಸಿದಳೋ, ಆಗ ಕೆಲವರಿಗೆ ದಿಗ್ಭ್ರಮೆಯುಂಟಾಯ್ತು. ಈ ಬಗ್ಗೆ ಕುತೂಹಲ ಪ್ರಕಟಿಸಿದ ಅವರು ಈ ಬಾಲಕಿ ಎಲ್ಲಿದ್ದಾಳೆ? ಯಾವ ವಿಳಾಸ ಎಂದು ವಿಚಾರಿಸತೊಡಗಿದರು. ಅಂತೆಯೇ ಆಕೆಯ ವಿಳಾಸಕ್ಕೆ ತಲುಪಿದೆ ಕೆಲವು ಸಹೃದಯಿಗಳು ಈಕೆಯನ್ನು ನಿಜರೂಪದಲ್ಲಿ ನೋಡಿದಾಕ್ಷಣ ಹೌಹಾರಿದರು. ಈ ಬಾಲಕಿ ಹೇಳಿದ್ದುದು ಅಕ್ಷರಶಃ ಸತ್ಯವಾಗಿದ್ದು ಭಯಾನಕವಾಗಿ ಕಾಣುತ್ತಿದ್ದಳು. ತಕ್ಷಣವೇ ಈಕೆಯನ್ನು ಬಂಧನದಿಂದ ಬಿಡುಗಡೆಗೊಳಿಸಿ ಆಸ್ಪತ್ರೆಗೆ ಸೇರಿಸಲಾಯ್ತು.

ಈಕೆಯನ್ನು ಸರಿಯಾದ ಸಮಯದಲ್ಲಿಯೇ ರಕ್ಷಿಸಲಾಗಿತ್ತು

ಈಕೆಯನ್ನು ಸರಿಯಾದ ಸಮಯದಲ್ಲಿಯೇ ರಕ್ಷಿಸಲಾಗಿತ್ತು

ವರದಿಗಳ ಪ್ರಕಾರ, ಈಕೆಯನ್ನು ರಕ್ಷಿಸಿದ ಸಮಯ ಆಕೆ ಅದೇ ಸ್ಥಿತಿಯಲ್ಲಿದ್ದರೆ ಆಕೆ ಸಾಯಬಹುದಾಗಿದ್ದ ಕಟ್ಟ ಕಡೆಯ ಘಳಿಗೆಯಾಗಿತ್ತು. ಈಕೆಯ ಆರೋಗ್ಯವನ್ನು ಗಮನಿಸಿದ ತಜ್ಞರು ಈಕೆ ಹೀಗೇ ಇನ್ನೂ ಹತ್ತು ನಿಮಿಷ ಕಳೆದಿದ್ದರೆ ಪ್ರಾಣ ಕಳೆದುಕೊಳ್ಳುತ್ತಿದ್ದಳು ಎಂದು ಉದ್ಗರಿಸಿದ್ದಾರೆ! ಈಗ ಆಸ್ಪತ್ರೆಯಲ್ಲಿ ಈಕೆ ಚಿಕಿತ್ಸೆ ಪಡೆಯುತ್ತಿದ್ದು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾಳೆ.

ಈಕೆ ತನ್ನ ಕಥೆಯನ್ನು ಹಂಚಿಕೊಳ್ಳಲು ಕಾರಣ?

ಈಕೆ ತನ್ನ ಕಥೆಯನ್ನು ಹಂಚಿಕೊಳ್ಳಲು ಕಾರಣ?

ತನ್ನ ಮೇಲಾದ ದೌರ್ಜನ್ಯದಂತೆಯೇ ಇನ್ನೂ ಹಲವಾರು ಜನರು ದೌರ್ಜನ್ಯಕ್ಕೆ ಒಳಗಾಗಿರಬಹುದು, ಎದೆಗುಂದದೇ ಇದರಿಂದ ಹೊರಬರಲು ಯತ್ನಿಸಬೇಕು ಹಾಗೂ ಆಹಾರ ಸೇವನೆಯ ಅಸ್ವಸ್ಥತೆಯ ಬಗ್ಗೆ ಗಮನ ಹರಿಸಬೇಕು ಎಂಬ ಉದ್ದೇಶದಿಂದ ತನ್ನ ಕಥೆಯನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡೆ ಎಂದು ಆಕೆ ಹೇಳಿಕೊಂಡಿದ್ದಾಳೆ.

ದೌರ್ಜನ್ಯ ಎಸಗಿದ ಕುಟುಂಬ ಸದಸ್ಯರ ಬಗ್ಗೆ

ದೌರ್ಜನ್ಯ ಎಸಗಿದ ಕುಟುಂಬ ಸದಸ್ಯರ ಬಗ್ಗೆ

ಅಚ್ಚರಿ ಎಂಬಂತೆ, ಈಕೆ ಮೇಲಾದ ದೌರ್ಜನ್ಯದ ಬಗ್ಗೆ ಆಕೆ ಹೇಳಿಕೊಂಡರೂ ಈ ದೌರ್ಜನ್ಯಕ್ಕೆ ಕಾರಣರಾದ ಅಜ್ಜ ಅಥವಾ ಇತರ ಸದಸ್ಯರ ಬಗ್ಗೆ ಯಾವ ಕ್ರಮ ಕೈಗೊಳ್ಳಲಾಯಿತು ಎಂಬ ಬಗ್ಗೆ ಆಕೆ ಏನೂ ಹೇಳುತ್ತಿಲ್ಲ. ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ.

All Images Source: Asiawire

English summary

images-of-girl-who-was-abused-by-her-grandfather

Here, in this article, we are sharing the story of the girl who shared her story of being abused for eating food! She was abused by her own grandfather and her weight dropped to just 37 lbs, which is just 16.8 kg! Her story is going viral since the time she has shared her horrific images, which make her look like a zombie. Find out more on this below.