ರಾಶಿ ಭವಿಷ್ಯ: ಮುಂಬರುವ ತಿಂಗಳಲ್ಲಿ ಕೆಲವು ರಾಶಿಯವರಿಗೆ ಅದೃಷ್ಟ ಕೈ ಕೊಡಲಿದೆ!

Written By: Divya pandith
Subscribe to Boldsky

2018ರ ವರ್ಷ ಈಗಾಗಲೇ ಪ್ರಾರಂಭವಾಗಿ ಒಂದು ತಿಂಗಳು ಕಳೆದಿದೆ. ಈ ಹೊಸ ವರ್ಷದ ಹೊಸ ಬದಲಾವಣೆಗಳನ್ನು ಈಗಾಗಲೇ ಅನೇಕರು ಅನುಭವಿಸುತ್ತಿರಬಹುದು. ಕೆಲವರಿಗೆ ಹಿಂದಿನ ವರ್ಷದಲ್ಲಿರುವ ಪರಿಯೇ ಮುಂದುವರಿದಿರಬಹುದು. ನಮ್ಮ ಭವಿಷ್ಯವನ್ನು ನಿರ್ಧರಿಸುವ ಗ್ರಹಗತಿಗಳ ಬದಲಾವಣೆಯು ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಅಂತೆಯೇ ನಮ್ಮ ಬದುಕಿನಲ್ಲೂ ಬದಲಾವಣೆಗಳು ಗಡಿಯಾರದಂತೆ ತಿರುಗುತ್ತಲೇ ಇರುತ್ತದೆ.

ಜ್ಯೋತಿಷ್ಯ ಶಾಸ್ತ್ರ ಹೇಳುವ ಪ್ರಕಾರ 2018ರ ವರ್ಷವು ಅನೇಕ ಉತ್ತಮ ಫಲವನ್ನು ನೀಡಲಿದೆ. ಅದರ ಬೆನ್ನಲ್ಲೇ ಕೆಲವು ಅಹಿತಕರ ಸನ್ನಿವೇಶಗಳನ್ನು ಸಹ ಎದುರಿಸಬೇಕಾಗುವ ಅನಿವಾರ್ಯತೆಗಳಿವೆ ಎನ್ನುತ್ತದೆ. ಗ್ರಹಗತಿಗಳ ಅನುಸಾರ ಪ್ರತಿಯೊಂದು ರಾಶಿಚಕ್ರದವರಿಗೂ ಕೆಲವು ತಿಂಗಳು ಕೆಟ್ಟ ಪರಿಣಾಮವನ್ನು ಉಂಟುಮಾಡುವ ಸಾಧ್ಯತೆಗಳಿವೆ. ಕೆಟ್ಟ ಫಲವನ್ನು ಕೊಡುವಂತಹ ತಿಂಗಳಲ್ಲಿ ಉತ್ತಮ ಕೆಲಸ ಅಥವಾ ಶುಭ ಕಾರ್ಯಗಳಿಗೆ ಕೈ ಹಾಕಬಾರದು ಎಂದು ಹೇಳುತ್ತದೆ. ಹಾಗಾದರೆ ಆ ತಿಂಗಳು ಯಾವವು ಎನ್ನುವುದನ್ನು ಬೋಲ್ಡ್ ಸ್ಕೈ ನಿಮಗೆ ಪರಿಚಯಿಸಿಕೊಡುತ್ತಿದೆ...

ಮೇಷ: ಮಾರ್ಚ್21- ಏಪ್ರಿಲ್ 19

ಮೇಷ: ಮಾರ್ಚ್21- ಏಪ್ರಿಲ್ 19

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಯವರಿಗೆ ಜೂನ್ ಅತ್ಯಂತ ಕಠಿಣವಾದ ತಿಂಗಳಾಗುವುದು. ಆರನೇ ಮನೆಯು ಆರೋಗ್ಯ ಸ್ಥಿತಿಯನ್ನು ವ್ಯಕ್ತಪಡಿಸುತ್ತದೆ. ಈ ತಿಂಗಳಲ್ಲಿ ನಿಮ್ಮ ಆರೋಗ್ಯವು ಕೈಕೊಡುವ ಸಾಧ್ಯತೆಗಳಿವೆ. ಚೇತರಿಕೆಯ ರೀತಿಯು ಇಳಿ ಮುಖವಾಗುವುದನ್ನು ಇವರು ದ್ವೇಷಿಸುವ ಸಾಧ್ಯತೆಗಳಿವೆ. ಇವರು ತಮ್ಮನ್ನು ತಾವು ಸಾಂತ್ವನ ಮಾಡಿಕೊಳ್ಳಲು ಧ್ಯಾನದ ಮೊರೆ ಹೋಗಬೇಕಾಗುವುದು.

ವೃಷಭ: ಏಪ್ರಿಲ್ 20- ಮೇ20

ವೃಷಭ: ಏಪ್ರಿಲ್ 20- ಮೇ20

ಈ ರಾಶಿಯವರು 2018ರ ಸಪ್ಟೆಂಬರ್ ತಿಂಗಳಲ್ಲಿ ಪ್ರಬಲವಾದ ಪರಿಣಾಮವನ್ನು ಅನುಭವಿಸುತ್ತಾರೆ. ಇವರು ಬಹಳಷ್ಟು ವಿಪರೀತದ ಬದಲಾವಣೆಯನ್ನು ಕಾಣುತ್ತಾರೆ. ಇವರು ಆದಷ್ಟು ತಾಳ್ಮೆಯಿಂದ ತಮ್ಮ ಭಾವನೆಯ ಹಿಡಿತದಲ್ಲಿ ಇಟ್ಟುಕೊಂಡಿರಬೇಕು. ಸನ್ನಿವೇಶದ ಜೊತೆಗೆ ಹೊಂದಿಕೊಂಡು ಮುಂದೆ ಸಾಗುವ ಪ್ರಯತ್ನ ಮಾಡಬೇಕು.

ಮಿಥುನ: ಮೇ 21-ಆಗಸ್ಟ್ 7

ಮಿಥುನ: ಮೇ 21-ಆಗಸ್ಟ್ 7

ಈ ರಾಶಿಯವರಿಗೆ ಆಗಸ್ಟ್ 7ರ ಪ್ರೀತಿ ಮತ್ತು ಪಾಲುದಾರಿಕೆಗಳ ಬಗ್ಗೆ ರಾಜಿಮಾಡಿಕೊಳ್ಳಬೇಕಾದಂತಹ ತಿಂಗಳಾಗುವುದು. ಕೆಲವು ತಪ್ಪು ಗ್ರಹಿಕೆಗಳು ಬೇಸರ ಹಾಗೂ ಮುನಿಸನ್ನು ಸೃಷ್ಟಿಮಾಡುವ ಸಾಧ್ಯತೆಗಳಿವೆ. ತಿಂಗಳ ಅಂತ್ಯದ ಸಮಯದಲ್ಲಿ ಎಲ್ಲವೂ ಶಾಂತವಾಗಿ ಸಮಾಧಾನವಾಗುವುದು.

ಕರ್ಕ: ಜೂನ್ 21-ಜುಲೈ22

ಕರ್ಕ: ಜೂನ್ 21-ಜುಲೈ22

ಮಾರ್ಚ್ ತಿಂಗಳು ಈ ರಾಶಿಯವರಿಗೆ ಅತ್ಯಂತ ಕಠಿಣವಾದ ತಿಂಗಳು ಎಂದು ಹೇಳಬಹುದು. ಇವರು ಮಾತುಗಾರಿಕೆಯಿಂದ ತೊಂದರೆಗಳನ್ನು ಮೈಮೇಲೆ ಎಳೆದುಕೊಳ್ಳುವುದನ್ನು ದ್ವೇಷಿಸುತ್ತಾರೆ. ಈ ತಿಂಗಳಲ್ಲಿ ಇವರು ಕೈಗೊಳ್ಳುವ ನಿರ್ಧಾರಗಳು ಅಥವಾ ಮಾತಿನ ಪರಿಯಿಂದ ಇತರರಿಗೆ ಅದು ಗೊಂದಲ ಅಥವಾ ತಪ್ಪುಗ್ರಹಿಕೆಗೆ ಕಾರಣವಾಗುವುದು. ಹಾಗಾಗಿ ತಾವು ಏನು ಮಾತನಾಡುತ್ತಿದ್ದೇವೆ ಎನ್ನುವುದನ್ನು ಅರಿತು ಮಾತನಾಡುವುದು ಸೂಕ್ತ.

ಸಿಂಹ: ಜುಲೈ23-ಆಗಸ್ಟ್23

ಸಿಂಹ: ಜುಲೈ23-ಆಗಸ್ಟ್23

ಈ ರಾಶಿಯವರಿಗೆ ಆಗಸ್ಟ್ ಹುಟ್ಟು ಹಬ್ಬದ ತಿಂಗಳು. ಆದರೆ ಈ ತಿಂಗಳಲ್ಲಿಯೇ ಅತ್ಯಂತ ಕಠಿಣ ಸ್ಥಿತಿಯನ್ನು ಎದುರಿಸಬೇಕಾಗುವುದು. ಇದು ಬುಧ ಗ್ರಹವು ಹಿಮ್ಮುಖ ಚಲನೆಯನ್ನು ಹೊಂದುವುದು. ಇದರ ಪರಿಣಾಮವಾಗಿ ನಿಮ್ಮ ಪ್ರೀತಿ ಪಾತ್ರರೊಂದಿಗೆ ಅಥವಾ ಸಂಗಾತಿಯೊಂದಿಗೆ ಅಪಾರ್ಥ ಅಥವಾ ಮನಿಸು ಉಂಟಾಗುವ ಸಾಧ್ಯತೆಗಳಿವೆ.

ಕನ್ಯಾ: ಆಗಸ್ಟ್ 24-ಸಪ್ಟೆಂಬರ್23

ಕನ್ಯಾ: ಆಗಸ್ಟ್ 24-ಸಪ್ಟೆಂಬರ್23

ಈ ರಾಶಿಯವರಿಗೆ ಡಿಸೆಂಬರ್ ಕಷ್ಟದ ತಿಂಗಳಾಗಲಿದೆ. ಈ ತಿಂಗಳಲ್ಲಿ ಇವರು ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಸಂಘರ್ಷವನ್ನು ಅನುಭವಿಸಬೇಕಾಗುವುದು. ಇವರ 8ನೇ ಮನೆಯಲ್ಲಿ ಕೆಲವು ಬದಲಾವಣೆ ಉಂಟಾಗುವುದರ ಪರಿಣಾಮವಾಗಿ ಈ ಎಲ್ಲಾ ಬಗೆಯ ಸಮಸ್ಯೆಗಳು ತಲೆದೂರುವುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಇವರು ಆಳವಾದ ಉಸಿರಾಟವನ್ನು ತೆಗೆದುಕೊಳ್ಳಬೇಕು. ಸಾಧ್ಯವಾದಷ್ಟು ಮಟ್ಟಿಗೆ ಸರಳವಾದ ಜೀವನ ನಡೆಸುವ ಯೋಜನೆಯನ್ನು ಕೈಗೊಳ್ಳುವುದು ಒಳಿತು.

ತುಲಾ: ಸಪ್ಟೆಂಬರ್24-ಅಕ್ಟೋಬರ್23

ತುಲಾ: ಸಪ್ಟೆಂಬರ್24-ಅಕ್ಟೋಬರ್23

ಈ ರಾಶಿಯವರಿಗೆ ಜನವರಿ ತಿಂಗಳು ಕಠಿಣವಾದ ಮಾಸವಾಗಲಿದೆ. ಈ ಹಂತದಲ್ಲಿ ವ್ಯಕ್ತಿ ಒತ್ತಡ, ಆತಂಕ ಮತ್ತು ನಿದ್ರೆಯ ಕೊರತೆಯಿಂದ ತತ್ತರಿಸುವ ಸಾಧ್ಯತೆಗಳಿವೆ. ಆರೋಗ್ಯದ ಸುಧಾರಣೆ ಕಾಣಲು ವೈದ್ಯರನ್ನು ಭೇಟಿಯಾಗಲೇ ಬೇಕಾಗುವುದು.

ವೃಶ್ಚಿಕ: ಅಕ್ಟೋಬರ್24- ನವೆಂಬರ್22

ವೃಶ್ಚಿಕ: ಅಕ್ಟೋಬರ್24- ನವೆಂಬರ್22

ಏಪ್ರಿಲ್ ಈ ರಾಶಿಯವರಿಗೆ ಕಠಿಣವಾದ ಸಮಯವಾಗಲಿದೆ. ಈ ತಿಂಗಳಲ್ಲಿ ಇವರು ಸಾಮಾನ್ಯಕ್ಕಿಂತ ಹೆಚ್ಚಾಗಿಯೇ ಕೆಲವು ಸೂಕ್ಷ್ಮತೆಯನ್ನು ಅನುಭವಿಸಬೇಕಾಗುವುದು. ಹಿಂದಿನ ಸಂಬಂಧಗಳ ವಿಚಾರದಿಂದ ಸಮಸ್ಯೆಯು ಉಲ್ಭಣವಾಗುವ ಸಾಧ್ಯತೆಗಳಿವೆ.

ಧನು: ನವೆಂಬರ್23-ಡಿಸೆಂಬರ್22

ಧನು: ನವೆಂಬರ್23-ಡಿಸೆಂಬರ್22

ಇವರಿಗೆ ನವೆಂಬರ್ ತಿಂಗಳು ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳುವ ಸಮಯವಾಗಿದೆ. ಹಿಂದಿನ ತಪ್ಪನ್ನು ತಿದ್ದಿಕೊಳ್ಳುವ ಜವಾಬ್ದಾರಿಯನ್ನು ಈ ತಿಂಗಳಲ್ಲಿ ತೆಗೆದುಕೊಳ್ಳುತ್ತಾರೆ. ಈ ಬದಲಾವಣೆಯನ್ನು ಕೈಗೊಂಡರೆ ಮುಂದಿನ ವರ್ಷದಲ್ಲಿ ಅವರು ಉತ್ತಮವಾಗಿರುತ್ತಾರೆ. ಇದು ಅವರಿಗೆ ಕಠಿಣ ಸಮಯ ಎಂದೇ ಹೇಳಬಹುದು.

ಮಕರ: ಡಿಸೆಂಬರ್23- ಜನವರಿ20

ಮಕರ: ಡಿಸೆಂಬರ್23- ಜನವರಿ20

ಏಪ್ರಿಲ್ ತಿಂಗಳು ಇವರಿಗೆ ಕಠಿಣದ ಸಮಯವಾಗಿರುತ್ತದೆ. ಇದು ಅವರಿಗೆ ಕೆಲವು ಅಸ್ತವ್ಯಸ್ಥತೆಯನ್ನು ಮೂಡಿಸುವ ತಿಂಗಳಾಗುವುದು. ಇವರು ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಅವರು ಎದುರಿಸುವ ಸಾಧ್ಯತೆಗಳಿವೆ. ಈ ಸಮಯದಲ್ಲಿ ಆದಷ್ಟು ಕಾಳಜಿ ಮತ್ತು ಆರೈಕೆ ಮಾಡಿಕೊಂಡರೆ ಸಮಸ್ಯೆಗಳು ಬಹುಬೇಗ ನಿವಾರಣೆಯಾಗುವುದು.

ಕುಂಭ: ಜನವರಿ21 -ಫೆಬ್ರುವರಿ 18

ಕುಂಭ: ಜನವರಿ21 -ಫೆಬ್ರುವರಿ 18

ಜುಲೈ ಇವರಿಗೆ ಕಷ್ಟದ ತಿಂಗಳಾಗಲಿದೆ. ಆರೋಗ್ಯ ಮತ್ತು ಪ್ರೀತಿ ಜೀವನದ ಎರಡು ಪರೀಕ್ಷೆಯನ್ನು ಜೊತೆಯಲ್ಲಿಯೇ ಎದುರಿಸಬೇಕಾದ ಅನಿವಾರ್ಯತೆ ಇದೆ. ಈ ವರ್ಷ ಪೂರ್ತಿ ಇವರಿಗೆ ಒಳ್ಳೆಯ ಫಲಿತಾಂಶವನ್ನೇ ನೀಡುತ್ತದೆಯಾದರೂ ನಿರ್ದಿಷ್ಟವಾದ ಕೆಲವು ತಿಂಗಳಲ್ಲಿ ಹಿಮ್ಮುಖ ಅನುಭವವನ್ನು ಅನುಭವಿಸಬೇಕಾಗುವುದು. ಕೆಲವು ವಿಚಾರಕ್ಕೆ ಇವರು ಹೆಚ್ಚಿನ ಗಮನ ನೀಡಬೇಕಾಗುವುದು.

ಮೀನ: ಫೆಬ್ರುವರಿ 19-ಮಾರ್ಚ್20

ಮೀನ: ಫೆಬ್ರುವರಿ 19-ಮಾರ್ಚ್20

ಈ ರಾಶಿಯವರು ಮೇ ತಿಂಗಳಲ್ಲಿ ಗುರು ಗ್ರಹವು ಈ ರಾಶಿಯ ಮೇಲೆ ಪ್ರಭಾವ ಬೀರುತ್ತದೆ. ಇದು ಕೆಲವು ಅತಿಯಾದ ಆವೇಗಕ್ಕೆ ಕಾರಣವಾಗಬಹುದು. ಇವರಿಗೆ ಈ ತಿಂಗಳು ಕೆಲವು ಕೆಟ್ಟ ಅನುಭವವನ್ನು ಪಡೆಯುವ ಸಾಧ್ಯತೆಗಳಿವೆ. ಈ ತಿಂಗಳಲ್ಲಿ ಆದಷ್ಟು ಕಾಳಜಿಯಿಂದ ವರ್ತಿಸಿದರೆ ಒಳಿತು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

English summary

How you ruin your life based on your zodiac sign

This article is all about helping you to avoid falling into the pit of negative thinking during the tough times of 2018. This year, each zodiac sign will face the worst time as nothing would seem to work in their favour. Find out about the worst phase of each zodiac sign and be prepared to know about the worst month for each of the signs. Continue reading to know more about the worst months that each zodiac sign would face.
Story first published: Saturday, February 10, 2018, 10:08 [IST]