ಮಾರ್ಚ್ 21ರ ನಂತರದ ರಾಶಿ ಭವಿಷ್ಯ: ಎಲ್ಲರ ಜೀವನದಲ್ಲೂ ಬದಲಾವಣೆ ಆಗಲಿದೆ...

Posted By: Deepu
Subscribe to Boldsky

ಬದಲಾವಣೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲೂ ನಡೆಯುತ್ತಲೇ ಇರುತ್ತದೆ. ಆ ಬದಲಾವಣೆಗಳು ಋಣಾತ್ಮಕವಾಗಿ ಇರಬಹುದು ಅಥವಾ ಧನಾತ್ಮಕವಾಗಿಯೇ ಇರಬಹುದು. ಅದು ಯಾವುದೇ ಬಗೆಯ ಬದಲಾವಣೆಯಾಗಿದ್ದರೂ ಅದನ್ನು ಸೂಕ್ತ ರೀತಿಯಲ್ಲಿ ಸ್ವೀಕರಿಸಿ, ಎದುರಿಸುವ ಸಾಮರ್ಥ್ಯ ಇರಬೇಕು. ಇಲ್ಲವಾದರೆ ಜೀವನದಲ್ಲಿ ದುಃಖ ಅಥವಾ ಇನ್ಯಾವುದೋ ರೀತಿಯ ಬದಲಾವಣೆಗಳು ಉಂಟಾಗಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಾರ್ಚ್ 21ರ ನಂತರ ಪ್ರತಿಯೊಂದು ರಾಶಿಚಕ್ರದವರ ಮೇಲೂ ಗಣನೀಯ ಪರಿಣಾಮ ಬೀರುವುದು.

ಈ ಬದಲಾವಣೆಗಳು ಪ್ರೀತಿ, ಜೀವನ ಅಥವಾ ಆರ್ಥಿಕ ಸ್ಥಿತಿಗೆ ಸಂಬಂಧಿಸಿರುವುದೇ ಆಗಿರಬಹುದು. ಬದಲಾವಣೆ ಮಾತ್ರ ದೀರ್ಘ ಸಮಯದವರೆಗೆ ಮುಂದುವರಿಯುವುದು ಎನ್ನಲಾಗುವುದು. ನಿಮಗೂ ನಿಮ್ಮ ಭವಿಷ್ಯದಲ್ಲಿ ಉಂಟಾಗಲಿರುವ ವಿಭಿನ್ನ ಬದಲಾವಣೆಯ ಬಗ್ಗೆ ಅರಿಯಬೇಕು ಎನ್ನುವ ಉತ್ಸಾಹ ಅಥವಾ ಕುತೂಹಲವಿದ್ದರೆ ಮುಂದೆ ವಿವರಿಸಿರುವ ವಿವರಣೆಯನ್ನು ಪರಿಶೀಲಿಸಿ....

ಮೇಷ

ಮೇಷ

ನೀವು ಭಾವನಾತ್ಮಕ ಹೊಂದಾಣಿಕೆಯನ್ನು ಮಾಡಿಕೊಳ್ಳಬೇಕಾಗುವುದು. ಇತರರೊಂದಿಗೆ ಹೊಂದಿಕೊಂಡು ಹೋಗುವಂತಹ ಅನಿವಾರ್ಯ ಸ್ಥಿತಿ ಎದುರಾಗುವುದು. ಈ ವ್ಯಕ್ತಿಗಳು ಮುಂದಿನ ದಿನದಲ್ಲಿ ನಿಕಟವಾದ ಪ್ರೀತಿಯನ್ನು ಪಡೆದುಕೊಳ್ಳುವರು. ಜೊತೆಗೆ ವಿವಾಹದ ಪ್ರಸ್ತಾಪದ ಸಾಧ್ಯತೆಗಳು ಹೆಚ್ಚಿವೆ. ಆರ್ಥಿಕವಾಗಿ ಯಶಸ್ಸನ್ನು ಸಹ ಕಂಡುಕೊಳ್ಳುವರು.

ವೃಷಭ

ವೃಷಭ

ಈ ರಾಶಿಯವರಿಗೆ ಮುಂದಿನ ದಿನದಲ್ಲಿ ಪ್ರಣಯದ ವಿಷಯ ದೊಡ್ಡದಾಗಿರುತ್ತದೆ. ವಿವಾಹಿತರು ಅನ್ಯೋನ್ಯದ ಜೀವನ ನಡೆಸುವರು. ಅವಿವಾಹಿತರು ಪ್ರೀತಿಗೆ ಬೀಳುವುದು ಅಥವಾ ವಿವಾಹವಾಗುವ ಸಾಧ್ಯತೆಗಳು ಅನಿರೀಕ್ಷಿತವಾಗಿ ಒದಗಿ ಬರುವುದು.

ವೃಷಭ

ವೃಷಭ

ಈ ರಾಶಿಯವರಿಗೆ ಮುಂದಿನ ದಿನದಲ್ಲಿ ಪ್ರಣಯದ ವಿಷಯ ದೊಡ್ಡದಾಗಿರುತ್ತದೆ. ವಿವಾಹಿತರು ಅನ್ಯೋನ್ಯದ ಜೀವನ ನಡೆಸುವರು. ಅವಿವಾಹಿತರು ಪ್ರೀತಿಗೆ ಬೀಳುವುದು ಅಥವಾ ವಿವಾಹವಾಗುವ ಸಾಧ್ಯತೆಗಳು ಅನಿರೀಕ್ಷಿತವಾಗಿ ಒದಗಿ ಬರುವುದು.

ಕರ್ಕ

ಕರ್ಕ

ಇವರು ಮುಂದಿನ ದಿನಗಳಲ್ಲಿ ಪ್ರಣಯದ ವಿಚಾರವಾಗಿ ಸ್ಥಿರತೆಯನ್ನು ಕಾಣಬಹುದು. ಮುಂಬರುವ ದಿನಗಳಲ್ಲಿ ನೀವು ಭೇಟಿ ನೀಡುವ ಜನರ ಮೇಲೆ ಹೆಚ್ಚಿನ ಪ್ರಭಾವ ತೋರುವ ಸಮಯವಾಗಿರುತ್ತದೆ. ಕೆಲವರು ನಿಮ್ಮೊಂದಿಗೆ ತೀವ್ರವಾದ ಬಂಧವನ್ನು ರಚಿಸಬಹುದು. ಇದರೊಟ್ಟಿಗೆ ಹೊಸ ವ್ಯಕ್ತಿಗಳ ಭೇಟಿ ಮಾಡುವ ಸಾಧ್ಯತೆಗಳಿವೆ.

ಸಿಂಹ

ಸಿಂಹ

ನಿಮ್ಮ ಸಂಗಾತಿಯು ನಿಮ್ಮ ವ್ಯವಹಾರವನ್ನು ಉತ್ತಮಗೊಳಿಸಲು ಸೂಕ್ತವಾದ ಸಹಕಾರ ನೀಡುವರು. ಸಂಗಾತಿಯೊಂದಿಗೆ ಪ್ರೀತಿಯ ಬಂಧ ಗಟ್ಟಿಯಾಗುವುದು. ಮುಂಬರುವ ದಿನಗಳಲ್ಲಿ ಕುಟುಂಬವು ಪ್ರಬಲವಾದ ಪಾತ್ರ ವಹಿಸುವುದು ಎಂದು ಹೇಳಲಾಗುವುದು. ಹೊಸ ವ್ಯಕ್ತಿಗಳ ಪರಿಚಯವಾಗುವ ಸಾಧ್ಯತೆಗಳಿವೆ.

ಕನ್ಯಾ

ಕನ್ಯಾ

ಹಳೆಯ ಸ್ನೇಹಿತರನ್ನು ಭೇಟಿಯಾಗುವ ಸಾಧ್ಯತೆಗಳಿವೆ. ಈ ಭೇಟಿಯು ನಿಮಗೆ ಅದೃಷ್ಟವನ್ನುಂಟುಮಾಡುವುದು. ಹಳೆಯ ದ್ವೇಷಗಳು ದ್ವಿಗುಣವಾಗುವ ಸಾಧ್ಯತೆಗಳಿವೆ. ಅವಕಾಶಗಳಿಗೆ ನೀವು ಎದುರು ನೋಡಬೇಕಾಗುವುದು. ಜೊತೆಗೆ ಕೆಲವು ವಿಚಾರಗಳಿಗೆ ನಿಮ್ಮ ಏಕಾಗೃತೆಯ ಅಗತ್ಯವಿದೆ.

ತುಲಾ

ತುಲಾ

ಅನ್ಯೋನ್ಯತೆಯ ಹಂಚಿಕೆಯು ಭಾವನಾತ್ಮಕ ಮೌಲ್ಯವನ್ನು ನೀಡುವುದು. ನಿಮ್ಮ ಪಾಲುದಾರರೊಂದಿಗೆ ಆಳವಾದ ಅರ್ಥವು ವಿಷಯಗಳ ಮೇಲೆ ಪ್ರಭಾವ ಬೀರುವುದು. ಕುಟುಂಬದಲ್ಲಿ ಹೊಸ ಸದಸ್ಯರನ್ನು ಹೊಂದುವ ಸಾಧ್ಯತೆಗಳಿವೆ.

ವೃಶ್ಚಿಕ

ವೃಶ್ಚಿಕ

ಸೂಕ್ತ ಪಾಲುದಾರರನ್ನು ಆಕರ್ಷಿಸಲು ಹೊಸ ವಿನ್ಯಾಸದ ಉಡುಗೆಯ ಆಯ್ಕೆ ಮಾಡಿಕೊಳ್ಳುವ ಸಮಯ ಇದಾಗಿದೆ. ಇವರು ಸುತ್ತಲಿನ ಜನರಿಂದ ಅನ್ಯೋನ್ಯತೆಯನ್ನು ಅನುಭವಿಸುತ್ತಾರೆ. ಇವರು ಎಲ್ಲಿಗೆ ಹೋಗುತ್ತಾರೆ ಎನ್ನುವುದು ವಿಷಯವಾಗಿರುವುದಿಲ್ಲ. ಪ್ರೀತಿಯು ಇವರ ಹಿಂಬಾಲಿಸುವುದು.

ಧನು

ಧನು

ಇವರು ತಮ್ಮ ಪ್ರೀತಿಯನ್ನು ಮುಚ್ಚಿಡುವುದನ್ನು ಬಿಡಬೇಕು. ಗುಪ್ತವಾದ ನಿಧಿಯ ಹುಡುಕಾಟದಂತೆ ಇವರು ತಮ್ಮ ಪ್ರೀತಿಯನ್ನು ಹುಡುಕಬೇಕಾಗುವುದು. ಇವರು ತಮ್ಮ ಪ್ರೀತಿಗಾಗಿ ಒಂದು ನೋಟವನ್ನು ಹೊಂದಬೇಕಾಗುವುದು. ಅವಕಾಶಗಳನ್ನು ತಪ್ಪಿಸಿಕೊಳ್ಳಬಾರದು ಎನ್ನಲಾಗುವುದು.

ಮಕರ

ಮಕರ

ಈ ರಾಶಿಯವರು ರಮಣೀಯವಾದ ಪ್ರಣಯವನ್ನು ಅನುಭವಿಸುತ್ತಾರೆ. ತಮ್ಮ ಒಕ್ಕೂಟವನ್ನು ಗಢವಾಗಿಸಲು ಬದ್ಧ ಪಾಲುದಾರಿಕೆಯನ್ನು ನೀಡುವರು. ಇದು ಇವರಿಗೆ ಅತ್ಯುತ್ತಮ ಸಮಯವಾಗಿರುತ್ತದೆ. ಸೂಕ್ತ ಕೆಲಸಗಳಿಗೆ ಹೆಚ್ಚಿನ ಶ್ರಮವಹಿಸುವರು.

 ಕುಂಭ

ಕುಂಭ

ಮುಂಬರುವ ದಿನದಲ್ಲಿ ಜಗತ್ತಿಗೆ ತಮ್ಮನ್ನು ತಾವು ವ್ಯಕ್ತಪಡಿಸಿಕೊಳ್ಳುವ ಪ್ರಯತ್ನವನ್ನು ಮಾಡುವರು. ಇವರು ಯಾವುದೇ ಕಾರಣಕ್ಕೂ ಕೆಳಗಿಳಿಯಲು ಬಯಸುವುದಿಲ್ಲ. ಮುಂದಿನ ದಿನದಲ್ಲಿ ಇವರು ತಮ್ಮ ಆಸೆಯನ್ನು ಪೂರೈಸಿಕೊಳ್ಳಬಹುದು.

ಮೀನ

ಮೀನ

ಮುಂದಿನ ದಿನದಲ್ಲಿ ಇವರು ತಮ್ಮ ಸುತ್ತಲಿನ ಜನರಿಂದ ಪ್ರೀತಿಯನ್ನು ಹುಡುಕುವರು. ಜೊತೆಗೆ ತಮ್ಮ ಸಂಗಾತಿಯೊಂದಿಗೆ ಪ್ರಣಯದ ದಿನಗಳನ್ನು ಕಳೆಯುವರು. ಇವರು ತಾವು ಬಯಸಿದ ವ್ಯಕ್ತಿಯನ್ನು ಪಡೆಯಲು ಆದಷ್ಟು ತಾಳ್ಮೆಯನ್ನು ಹೊಂದಬೇಕಾಗುವುದು.

English summary

how-will-aries-season-affect-love-life-of-zodiac-sign

Here, in this article, we are revealing to you about the changes that would take place for each zodiac sign, in terms of their love life. These changes are so intense that they will last for the longest and we need to know about the changes, as the changes for each zodiac sign are drastic and variant.