ತಾಂತ್ರಿಕ ಸೆಕ್ಸ್ ಬಗ್ಗೆ ಕೇಳಿದ್ದೀರಾ? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್

Posted By: Arshad
Subscribe to Boldsky

ನಮ್ಮ ದೇಶದಲ್ಲಿ ಮಾಟವಿದ್ಯೆಯೋ ಅಗೋಚರ ರೂಪದಲ್ಲಿ ಪ್ರಚಲಿತದಲ್ಲಿದ್ದು ಇದನ್ನು ಒಳ್ಳೆಯ ಉದ್ದೇಶಗಳಿಗೂ ಬಳಸಲಾಗುತ್ತದೆ. ಸಾಮಾನ್ಯವಾಗಿ ದುರುದ್ದೇಶದ ಕಾರ್ಯಗಳೇ ಬೆಳಕಿಗೆ ಬರುವ ಕಾರಣ ಒಳ್ಳೆಯ ಉದ್ದೇಶದ ವಿದ್ಯೆಗಳೇ ಇಲ್ಲ ಎಂಬ ಅಭಿಪ್ರಾಯವನ್ನು ಹೆಚ್ಚಿನವರು ಹೊಂದಿದ್ದಾರೆ. ಅಲ್ಲದೇ ಇಂದಿನ ಜನಾಂಗ ಮಾಟವಿದ್ಯೆಯನ್ನು ನಂಬುವುದೂ ಇಲ್ಲ. ಆದರೆ ಸದುದ್ದೇಶದ ಕೆಲವು ತಂತ್ರವಿದ್ಯೆಗಳು ಇಂದಿಗೂ ಪ್ರಚಲಿತದಲ್ಲಿವೆ ಹಾಗೂ ದಂಪತಿಗಳ ನಡುವಣ ಅನ್ಯೋನ್ಯತೆಯನ್ನು ಹೆಚ್ಚಿಸುವ ಉದ್ದೇಶವನ್ನು ಈಡೇರಿಸಲು ಈ ತಂತ್ರವನ್ನು ಬಳಸಲಾಗುತ್ತದೆ.

ಅಂದ ಹಾಗೆ ಇದೇ ಉದ್ದೇಶದಿಂದ ತಂತ್ರವಿದ್ಯೆ ಅನುಸರಿಸುವುದು ಕೇವಲ ಭಾರತದಲ್ಲಿ ಮಾತ್ರವಲ್ಲ, ವಿಶ್ವದಾದ್ಯಂತ ಈ ವಿದ್ಯೆಯನ್ನು ನೂರಾರು ವರ್ಷಗಳಿಂದ ಅನುಸರಿಕೊಂಡು ಬರಲಾಗುತ್ತಿದೆ ಹಾಗೂ ಲಕ್ಷಾಂತರ ಕುಟುಂಬಗಳನ್ನು ಒಡೆಯುವುದರಿಂದ ತಪ್ಪಿಸಿದೆ. ಈ ವಿದ್ಯೆಯ ಮೂಲಕ ದಂಪತಿಗಳ ನಡುವಣ ಬಾಂಧವ್ಯ ಇನ್ನಷ್ಟು ಗಟ್ಟಿಗೊಳ್ಳುತ್ತದೆ, ಪರಸ್ಪರರ ಬಗ್ಗೆ ಗೌರವ ಹೆಚ್ಚುತ್ತದೆ ಹಾಗೂ ತಮ್ಮ ಬಗ್ಗೆ ತೆರೆದ ಮನಸ್ಸಿನಿಂದ ಮಾತನಾಡಲು ಸಾಧ್ಯವಾಗುತ್ತದೆ.

ಈ ಮೂಲಕ ಸಂಗಾತಿಯ ಪ್ರೀತಿಯನ್ನು ಹೆಚ್ಚಾಗಿ ಪಡೆಯಲು ಸಾಧ್ಯವಾಗುತ್ತದೆ. ವಿಶೇಷವಾಗಿ ಪ್ರತಿ ಯುವತಿಯೂ ಈ ವಿದ್ಯೆಯನ್ನು ಕಲಿತುಕೊಳ್ಳುವ ಮೂಲಕ ತನ್ನ ಇನಿಯನ ಗಮನ ಬೇರೆತ್ತಲೂ ಹರಿದುಹೋಗದಂತೆ ತಡೆದು ಸಂಸಾರವನ್ನು ಉಳಿಸಿಕೊಳ್ಳಲು ಹಾಗೂ ಸಂತೋಷಕರವಾಗಿಸಲು ಸಾಧ್ಯವಾಗುತ್ತದೆ....

ತಾಂತ್ರಿಕ ಸೆಕ್ಸ್ ಎಂದರೇನು?

ತಾಂತ್ರಿಕ ಸೆಕ್ಸ್ ಎಂದರೇನು?

ಇದೊಂದು ಪುರಾತನ ಹಿಂದೂ ಧಾರ್ಮಿಕ ವಿಧಿಯಾಗಿದ್ದು ನೂರಾರು ವರ್ಷಗಳಿಂದ ಭಾರತದ ಎಲ್ಲೆಡೆ ಅನುಸರಿಸಿಕೊಂಡು ಬರಲಾಗುತ್ತಿದೆ. ಇದನ್ನು ಅರಿಯಲು ಇದೇನೂ ರಾಕೆಟ್ ವಿಜ್ಞಾದಷ್ಟು ಕ್ಲಿಷ್ಟವಾಗಿಲ್ಲ. ಇದೊಂದು ಸುಲಭ ರೂಪದ ಕಾಮಕ್ರಿಯೆಯಾಗಿದ್ದು ಈ ಮೂಲಕ ದಂಪತಿಗಳಲ್ಲಿ ಅನ್ಯೋನ್ಯತೆ ಹೆಚ್ಚಿಸುವುದು ಮಾತ್ರವಲ್ಲ, ಇದುವರೆಗೆ ವಂಚಿತರಾಗಿದ್ದ ಕಾಮೋತ್ಕಟೆಯನ್ನು ಪಡೆಯಲೂ ನೆರವಾಗುತ್ತದೆ.

ಈ ಬಗೆಯ ಕಾಮಕ್ರಿಯೆಯನ್ನು ಏಕಾಗಿ ಅನುಸರಿಸಬೇಕು?

ಈ ಬಗೆಯ ಕಾಮಕ್ರಿಯೆಯನ್ನು ಏಕಾಗಿ ಅನುಸರಿಸಬೇಕು?

ದಂಪತಿಗಳು ಲೈಂಗಿಕ ಕ್ರಿಯೆಯಲ್ಲಿ ಪರಸ್ಪರರಿಗೆ ನೀಡುವ ಸಮಯವನ್ನು ಹೆಚ್ಚಿಸುವುದು ಈ ಕ್ರಿಯೆಯ ಮುಖ್ಯ ವಿಧಾನವಾಗಿದೆ. ಈ ಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಪರಸ್ಪರರು ತಮ್ಮ ಸಂಗಾತಿಯೊಂದೊಗೆ 'ಕರಗಿ ಹೋಗುವ' ಕ್ರಿಯೆಯನ್ನು ಈ ಮೂಲಕ ಸಾಧಿಸಲಾಗುತ್ತದೆ. ಸುಲಭ ಪದಗಳಲ್ಲಿ ಹೇಳಬೇಕೆಂದರೆ ಈ ಮೂಲಕ ತಮ್ಮ ಸಂಗಾತಿಯೊಂದಿಗೆ ಅತ್ಯಂತ ಅಮೋಘವಾದ ಪ್ರಣಯವನ್ನು ಸಾಧಿಸಲು ಸಾಧ್ಯವಾಗುತ್ತದೆ.

ಈ ವಿಧಾನವನ್ನು ಪ್ರಯತ್ನಿಸುವುದು ಹೇಗೆ?

ಈ ವಿಧಾನವನ್ನು ಪ್ರಯತ್ನಿಸುವುದು ಹೇಗೆ?

ಇದೇನೋ ರಾಕೆಟ್ ತಂತ್ರಜ್ಞಾನವಲ್ಲ ಎಂದು ಮೊದಲೇ ವಿವರಿಸಿದ್ದೇವೆ. ಇದನ್ನು ಸಾಧಿಸಲು ಮೊದಲು ದಂಪತಿಗಳು ಪವಡಿಸುವ ಕೋಣೆಯನ್ನು ಶುಚಿ ಗೊಳಿಸಬೇಕಾಗುತ್ತದೆ ಹಾಗೂ ಕೋಣೆಯ ಮೂಲೆಯಲ್ಲಿ ಕೆಲವು ಅವಶ್ಯಕ ತೈಲಗಳನ್ನು ಚಿಮುಕಿಸಿ ವಾತಾವರಣವನ್ನು ಸುವಾಸಿತಗೊಳಿಸಬೇಕಾಗುತ್ತದೆ. ಈಗ ಪರಸ್ಪರ ಎದುರುಬದುರಾಗಿ ಕುಳಿತು ದೀರ್ಘವಾಗಿ ಉಸಿರಾಡಿ ಹಾಗೂ ನಿಧಾನವಾಗಿ ಮುನ್ನಲಿವಿನ ಕ್ರಮಗಳನ್ನು ಕೈಗೊಳ್ಳಿ. ಪರಸ್ಪರರಿಗೆ ಇಷ್ಟವಾಗುವ ಯಾವುದೇ ಮುನ್ನಲಿವಿನ ಕ್ರಿಯೆಗಳನ್ನು ಮುಂದುವರೆಸಿ ಹಾಗೂ ಎಷ್ಟು ಹೊತ್ತು ಸಾಧ್ಯವೋ ಅಷ್ಟೂ ಹೊತ್ತು ಮುಂದುವರೆಸಿ, ಆದಷ್ಟೂ ನಿಧಾನವಾಗಿ, ಪ್ರತಿ ಸ್ಪರ್ಷವೂ ಅತ್ಯಂತ ಹಿತವಾಗಿರುವಂತೆ, ಯಾವುದೇ ಮುಜುಗರ ನೋವು ಉಂಟಾಗದಂತೆ ಮುಂದುವರೆಸಿ.

ಈ ಸ್ಪರ್ಶಗಳು ಎಷ್ಟು ನಿಧಾನವಾಗಿರಬೇಕು?

ಈ ಸ್ಪರ್ಶಗಳು ಎಷ್ಟು ನಿಧಾನವಾಗಿರಬೇಕು?

ಈ ಮೂಲಕ ನಿಮ್ಮ ದೇಹದ ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಮುಂದುವರೆಯುವಂತೆ ಮಾಡಬಹುದು ಹಾಗೂ ಇದಕ್ಕೆ ಈ ಕ್ರಿಯೆಗಳು ನಿಧಾನವಾಗಿರುವುದು ಅಗತ್ಯ. ಮೊತ್ತ ಮೊದಲನೆಯದಾಗಿ ಪರಸ್ಪರರ ಕಣ್ಣುಗಳು ಸಂಧಿಸಬೇಕು ಹಾಗೂ ಬಳಿಕ ದೇಹದ ತುದಿಭಾಗಗಳಿಂದ ಪ್ರಾರಂಭಿಸಿ ಅತ್ಯಂತ ನಿಧಾನವಾಗಿ ದೇಹದ ಕೇಂದ್ರಭಾಗಗಳತ್ತ ಸ್ಪರ್ಶ ಮುಂದುವರೆಸಬೇಕು. ನಿಮ್ಮ ಪ್ರತಿ ಸ್ಪರ್ಷವೂ ಸಂಗಾತಿಯ ಗಮನ ಪಡೆಯಲು ಹಾಗೂ ಸಮನಾದ ಸ್ಪರ್ಶವನ್ನು ಪಡೆಯುವಂತಾಗಬೇಕು. ದೇಹದ ಅತಿ ಹೆಚ್ಚು ಸಂವೇದನಾಶೀಲ ಅಂಗಗಳ ಸ್ಪರ್ಷ ಕಟ್ಟ ಕಡೆಯದಾಗಿರಬೇಕು.

ಹೀಗೇ ಮುಂದುವರೆಯುವುದೇಕೆ ಅಗತ್ಯ?

ಹೀಗೇ ಮುಂದುವರೆಯುವುದೇಕೆ ಅಗತ್ಯ?

ಈ ಪ್ರಶ್ನೆಗೆ ಸರಳ ಉತ್ತರವೆಂದರೆ ಈ ಮೂಲಕ ದಂಪತಿಗಳು ಹಲವು ಬಾರಿ ಕಾಮೋತ್ಕಟತೆಯನ್ನು ಪಡೆಯಬಹುದು. ಈ ಕ್ರಿಯೆಯಲ್ಲಿ ನಿಧಾನವಾಗಿ ಮುಂದುವರೆಯುವ ಮೂಲಕ ಕಾಮೋತ್ಕಟತೆಯ ಉತ್ತುಂಗವನ್ನು ಪಡೆಯಬಹುದು ಹಾಗೂ ಕಾಮಸುಖವನ್ನು ಹೆಚ್ಚು ಕಾಲ ಅನುಭವಿಸಬಹುದು. ಇದು ಹೌದೆಂದಾದರೆ ಈ ವಿಧಾನವನ್ನು ಅನುಸರಿಸಲು ಯತ್ನಿಸದ ದಂಪತಿಗಳು ಇದ್ದಾರೆಯೇ?

ಈ ವಿಧಾನ ನಿಮ್ಮ ಸಂಗಾತಿಗೆ ಹೇಗೆ ಪ್ರಯೋಜನಕಾರಿಯಾಗಿದೆ?

ಈ ವಿಧಾನ ನಿಮ್ಮ ಸಂಗಾತಿಗೆ ಹೇಗೆ ಪ್ರಯೋಜನಕಾರಿಯಾಗಿದೆ?

ಇಂದಿನ ದಿನಗಳಲ್ಲಿ ನಾವೆಲ್ಲರೂ ನಮ್ಮ ವೃತ್ತಿ ಪ್ರವೃತ್ತಿ, ಮನರಂಜನೆಗಳಲ್ಲಿ ಇಷ್ಟು ಮಗ್ನರಾಗಿಬಿಟ್ಟಿದ್ದೇವೆಂದರೆ ಜೀವನದ ನಿಜವಾದ ಸಾರಗಳಲ್ಲಿ ಗಮನ ಮತ್ತು ಸಮಯ ನೀಡುವುದಕ್ಕೇ ಸಾಧ್ಯವಾಗುತ್ತಿಲ್ಲ. ಈ ಬಗೆಯ ವಿದ್ಯೆಯನ್ನು ಅನುಸರಿಸುವ ಮೂಲಕವಾದರೂ ದಂಪತಿಗಳು ಪರಸ್ಪರರಿಗೆ ತಮ್ಮ ಅಮೂಲ್ಯ ಸಮಯವನ್ನು ನೀಡುವ ಮೂಲಕ ಅನ್ಯೋನ್ಯತೆಯನ್ನು ಪ್ರಕಟಿಸಬಹುದು ಹಾಗೂ ದಾಂಪತ್ಯವನ್ನು ಗಟ್ಟಿಗೊಳಿಸಬಹುದು.

ಈಗಾಗಲೇ ಸುಖದಾಂಪತ್ಯ ನಡೆಸುತ್ತಿರುವವರಿಗೂ ಇದು ಅನ್ವಯವಾಗುತ್ತದೆಯೇ?

ಈಗಾಗಲೇ ಸುಖದಾಂಪತ್ಯ ನಡೆಸುತ್ತಿರುವವರಿಗೂ ಇದು ಅನ್ವಯವಾಗುತ್ತದೆಯೇ?

ಈ ವಿದ್ಯೆ ದಂಪತಿಗಳ ನಡುವಣ ಅನ್ಯೋನ್ಯತೆಯನ್ನು ಹೆಚ್ಚಿಸುವ ವಿಧಾನವಾಗಿದೆ ಹಾಗೂ ಸಾಮಾನ್ಯವಾಗಿ ದಂಪತಿಗಳು ತಮ್ಮ ಲೈಂಗಿಕ ಕಾಮನೆಗಳನ್ನು ಪೂರೈಸಿಕೊಳ್ಳಲು ಅನುಸರಿಸುವ ವಿಧಾನಕ್ಕೂ ಭಿನ್ನವಾಗಿದೆ. ಹಾಗಾಗಿ ಈಗಾಗಲೇ ಸುಖದಾಂಪತ್ಯ ನಡೆಸುತ್ತಿರುವ ದಂಪತಿಗಳೂ ಭಿನ್ನ ಅನುಭವ ಪಡೆಯಲು ಈ ವಿಧಾನವನ್ನು ಖಂಡಿತಾ ಅನುಸರಿಸಬಹುದು ಹಾಗೂ ಹೆಚ್ಚಿನ ಸುಖವನ್ನೂ ಪಡೆಯಬಹುದು.

ಈ ವಿಧಾನವನ್ನು ಇಂದಿಗೂ ಅನುಸರಿಸಲಾಗುತ್ತಿದೆಯೇ?

ಈ ವಿಧಾನವನ್ನು ಇಂದಿಗೂ ಅನುಸರಿಸಲಾಗುತ್ತಿದೆಯೇ?

ಇದೊಂದು ಪುರಾತನ ವಿಧಾನವಾಗಿದ್ದು ಇಂದು ಅನುಸರಿಸುತ್ತಿರುವ ವಿಧಾನದಲ್ಲಿ ಚಿಕ್ಕ ಪುಟ್ಟ ಬದಲಾವಣೆಗಳಿರಬಹುದು. ಹಲವು ದಂಪತಿಗಳು ವಿಭಿನ್ನ ಹಾಗೂ ಹೊಸ ವಿಧಾನಗಳನ್ನು ಅನುಸರಿಸುತ್ತಾ ಬರುವ ಮೂಲಕ ವರ್ಷಾಂತರಗಳಲ್ಲಿ ಈ ವಿದ್ಯೆಯ ವಿಧಾನದಲ್ಲಿ ಕೊಂಚ ಬದಲಾವಣೆಯಾಗಿರಬಹುದು. ಆದರೆ ಇದರ ಮೂಲ ಉದ್ದೇಶ ಮಾತ್ರ ಒಂದೇ ಆಗಿದೆ.

English summary

Heard About Tantric Sex? Here Is What You Need To Know!

"Tantra" is a set of technique that is used all over the world to deepen intimacy, increase passion, and also to communicate with your partner in a more open and authentic way. This is a unique way to get up and closer with your partner. Here are a few things that every girl needs to learn about tantric sex to enjoy it with her partner! Check on how you can try on tantric sex tricks that most of us are unaware of!