ಈ 5 ರಾಶಿಯವರ ಚಿನ್ನದಂತಹ ಗುಣ, ಎಲ್ಲಾ ವಿಷಯದಲ್ಲೂ ಪರ್ಫೆಕ್ಟ್!

Posted By: Deepu
Subscribe to Boldsky

ವ್ಯಕ್ತಿಯ ಜೀವನದಲ್ಲಿ ಸಂಬಂಧ ಹಾಗೂ ನಡವಳಿಕೆ ಎನ್ನುವುದು ಅತ್ಯಂತ ಪ್ರಮುಖವಾದುದ್ದು. ತಮ್ಮ ನಡವಳಿಕೆಯಲ್ಲಿ ಸೂಕ್ತ ರೀತಿಯ ಬದ್ಧತೆ ಇಲ್ಲವೆಂದಾದರೆ ಅವರು ಸಂಬಂಧಗಳನ್ನು ನಿಭಾಯಿಸಿಕೊಂಡು ಹೋಗಲು ಕಷ್ಟಪಡುವರು. ಉತ್ತಮ ಸಂಬಂಧ ಹಾಗೂ ಪ್ರೀತಿ ವಿಶ್ವಾಸ ಇಲ್ಲವೆಂದಾದರೆ ಜೀವನವು ನಶ್ವರ ಎನಿಸಿಕೊಳ್ಳುವುದು. ಜೊತೆಗೆ ಸಮಾಜದಲ್ಲೂ ಸೂಕ್ತ ರೀತಿಯ ಮನ್ನಣೆ ದೊರೆಯದು ಎಂದೇ ಹೇಳಬಹುದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರದವರು ಅತ್ಯುತ್ತಮವಾದ ಬದ್ಧತೆಯನ್ನು ಹೊಂದಿರುತ್ತಾರೆ. ತಮ್ಮ ಕೆಲಸ ಕಾರ್ಯಗಳ ಮೂಲಕ ಮುಂದೆ ಸಾಗುತ್ತಾರೆ. ಏನು ಮಾಡಬೇಕು ಅಂದುಕೊಂಡಿರುತ್ತಾರೋ ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಹುಟ್ಟಿನಿಂದಲೇ ತಮ್ಮ ಸ್ವಭಾವದಲ್ಲಿ ರೂಢಿಸಿಕೊಳ್ಳುವ ಈ ಗುಣಗಳು ರಾಶಿಚಕ್ರದ ಪ್ರಭಾವದಿಂದ ಪಡೆದುಕೊಂಡಿರುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಬದ್ಧತೆಯನ್ನು ಹೊಂದಿರುವ ರಾಶಿಕ್ರಗಳು ಯಾವವು? ಆ ರಾಶಿಚಕ್ರದವರ ಸ್ವಭಾವ ಹೇಗಿರುತ್ತದೆ ಎನ್ನುವುದನ್ನು ತಿಳಿಯಲು ಮುಂದಿರುವ ಮಾಹಿತಿಯನ್ನು ಅರಿಯಿರಿ.... 

ಮಿಥುನ

ಮಿಥುನ

ಈ ವ್ಯಕ್ತಿಗಳು ಸಿಕ್ಕ ಅವಕಾಶಗಳಿಗೆ ಅಥವಾ ಕೆಲವು ಸೂಕ್ತ ವಿಚಾರಗಳಿಗೆ ಅನುಗುಣವಾಗಿ ಉತ್ಸಾಹವನ್ನು ವ್ಯಕ್ತಪಡಿಸುತ್ತಾರೆ. ಇವರು ಅತ್ಯುತ್ತಮ ತೀರ್ಮಾನಗಳನ್ನು ಕೈಗೊಳ್ಳುವ ವ್ಯಕ್ತಿಗಳು ಎಂದು ಹೇಳಬಹುದು. ಇವರು ಅತ್ಯುತ್ತಮ ಆಲೋಚನೆಗಳನ್ನು ಮಾಡುವುದರ ಮೂಲಕ ತೀರ್ಮಾನ ಕೈಗೊಳ್ಳುತ್ತಾರೆ. ಇವರು ಸ್ವಲ್ಪ ಭಾವಾತಿರೇಕದ ಅನುಭವಗಳನ್ನು ಪಡೆದಾಗ ಅದು ದೊಡ್ಡ ಕನಸನ್ನು ಕಾಣುವ ಸಾಧ್ಯತೆಗಳಿರುತ್ತವೆ.

ಕರ್ಕ

ಕರ್ಕ

ಈ ರಾಶಿಯ ವ್ಯಕ್ತಿಗಳು ಸಂಬಂಧದಲ್ಲಿ ನಿಕಟತೆಯನ್ನು ಹೊಂದಿರುತ್ತಾರೆ. ಜೊತೆಗೆ ವಿಸ್ಮಯಕಾರಿ ಮತ್ತು ಚಾಲಿತ ವ್ಯಕ್ತಿಗಳಾಗಿರುತ್ತಾರೆ. ಯಾರೊಂದಿಗಾದರೂ ಇವರು ಆಳವಾದ ಮತ್ತು ಗಮನಾರ್ಹ ಭಾವೋದ್ರಿಕ್ತ ಸಂಬಂಧವನ್ನು ಬೆಳೆಸಿದರೆ ಅದಕ್ಕೆ ಉತ್ತಮ ಗೌರವ ಹಾಗೂ ಬೆಲೆಯನ್ನು ನೀಡುವರು. ಪ್ರೀತಿಯನ್ನು ಸ್ಪಷ್ಟವಾಗಿ ಮತ್ತು ನಿಸ್ಸಂದಿಗ್ಧವಾಗಿ ವ್ಯಕ್ತಪಡಿಸುವರು. ಕೆಲವೊಮ್ಮೆ ಇವರು ಸ್ವಾರ್ಥಗುಣವನ್ನು ಸಹ ತೋರುವರು.

ಕನ್ಯಾ

ಕನ್ಯಾ

ಈ ವ್ಯಕ್ತಿಗಳು ಸಾಮಾನ್ಯವಾಗಿ ತಪ್ಪು ಗ್ರಹಿಕೆಗೆ ಒಳಗಾಗುತ್ತಾರೆ. ಆದರೆ ಉತ್ತಮ ಹೊಂದಾಣಿಕೆಯನ್ನು ಮಾಡಿಕೊಳ್ಳುತ್ತಾರೆ. ಶ್ರಮ ಜೀವಿಯಾದ ಇವರು ಕೆಲಸದ ಬಗ್ಗೆ ಒಂದು ಅಂದಾಜು ಹೊಂದಿರುತ್ತಾರೆ. ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವರು. ಅನುಚಿತ ವಿಚಾರಗಳನ್ನು ದೂರ ಕಿತ್ತೊಗೆಯುತ್ತಾರೆ.

ಕುಂಭ

ಕುಂಭ

ಈ ರಾಶಿಯವರು ಸಾಮಾನ್ಯವಾಗಿ ನಾಟಕೀಯ ಪ್ರವೃತ್ತಿಯನ್ನು ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ. ಇವರು ತಮ್ಮ ಬಗ್ಗೆ ಹೆಚ್ಚಿನ ಜಾಗರೂಕತೆಯನ್ನು ವ್ಯಕ್ತಪಡಿಸುತ್ತಾರೆ. ಸಾಮಾನ್ಯವಾಗಿ ತಮ್ಮನ್ನು ನಿರ್ಲಕ್ಷಿಸಲ್ಪಟ್ಟವರ ಭಾವನೆಗಳನ್ನು ದ್ವೇಷಿಸುತ್ತಾರೆ. ತಮ್ಮದೇ ಆದ ಸೂಕ್ತ ಬದ್ಧತೆ ಹಾಗೂ ಗುರುತನ್ನು ಹೊಂದಿರುತ್ತಾರೆ.

 ಮೀನ

ಮೀನ

ಇತರರೊಂದಿಗೆ ಸಂಪರ್ಕ ಸಾಧಿಸುವಾಗ ಈ ರಾಶಿಯವರು ಅಪಾಯಗಳ ಕುರಿತು ಸಂಪೂರ್ಣ ಅರಿವನ್ನು ಹೊಂದಿರುತ್ತಾರೆ. ಈ ವ್ಯಕ್ತಿಗಳಿಗೆ ಸಂಪರ್ಕವನ್ನು ಪಡೆಯುವ ಮಿತಿಯ ಬಗ್ಗೆ ಅರಿವಿರುತ್ತದೆ. ಒಮ್ಮೆ ಇವರು ಯಾರನ್ನಾದರೂ ಇಷ್ಟಪಟ್ಟರೆ ಅಥವಾ ಆರಾಮದಾಯಕ ಅನುಭವವನ್ನು ಹೊಂದಿದ್ದರೆ ಅವರು ನಿಮ್ಮೊಂದಿಗೆ ಅಂಟಿಕೊಂಡಿರಲು ಇಷ್ಟಪಡುವರು.

English summary

five-zodiac-signs-that-tend-to-be-very-clingy

Do you know that there are so many unknown sides of our own selves? Understanding the facts about our own mind and body gets important. Here, in this article, we bring in a personality test which helps you understand about what the future holds for you. All that you need to do is pick any of the rune and find out on what the future holds for you! Check it out..
Story first published: Wednesday, April 4, 2018, 10:15 [IST]