ರಾಶಿ ಚಕ್ರದ ಅನುಸಾರ ಹೊಂದಿಕೊಳ್ಳಬಹುದಾದ ವ್ಯಕ್ತಿಗಳು

Posted By: Divya pandit Pandit
Subscribe to Boldsky

ಪ್ರೀತಿಯೆ ಹಾಗೆ... ಅದೊಂದು ಮಾಯೆ. ಯಾವಾಗ ಯಾರ ಹೃದಯವನ್ನು ಬಯಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಒಂಟಿಯಾದ ಜೀವಕ್ಕೆ ಜಂಟಿಯಾದ ಸಂಬಂಧವನ್ನು ಬೆಸೆದು, ಜೀವನವನ್ನು ಸಾಕ್ಷಾತ್ಕಾರ ಗೊಳಿಸುವ ಶಕ್ತಿ ಇದ್ದದ್ದು ಪ್ರೀತಿಯಲ್ಲಿ. ಅದೆಷ್ಟೇ ಶ್ರೀಮಂತನಾಗಿದ್ದರೂ ಭಾವನೆಯನ್ನು ಹಂಚಿಕೊಳ್ಳಲು ಒಂದು ಪ್ರೀತಿಯ ಹೃದಯ ಇಲ್ಲವೆಂದಾದರೆ ಆ ವುಕ್ತಿಯ ಬದುಕು ನಶ್ವರ ಎನಿಸಿಕೊಳ್ಳುತ್ತದೆ. ಇಂದಿನ ದಿನದಲ್ಲಿ ಹೆಣ್ಣು ಹಾಗೂ ಗಂಡಿನ ನಡುವೆ ಸಮಾನತೆ ಸೃಷ್ಟಿಯಾಗಿದೆ.

ಬದಲಾದ ಸಮಾಜ ಹಾಗೂ ಆಧುನಿಕತೆಯ ಪ್ರಭಾವದಿಂದ ಇಂದಿನ ಯುವಕರು ಬಹಳ ಪ್ರಬುದ್ಧತೆಯನ್ನು ಹೊಂದಿದ್ದಾರೆ. ಅಲ್ಲದೆ ತಮ್ಮ ಜೀವನದ ಸಂಗಾತಿಯಾಗುವವರು ಹೀಗೆ ಇರಬೇಕು ಎನ್ನುವ ಕಲ್ಪನೆ ಹಾಗೂ ಆಯ್ಕೆಯನ್ನು ಮಾಡುತ್ತಾರೆ. ಜೀವನದಲ್ಲಿ ಆದಷ್ಟು ಖುಷಿ ಹಾಗೂ ಪ್ರೀತಿಯ ಸೆಲೆ ಹೆಚ್ಚಾಗಿರಬೇಕೆಂದು ಬಯಸುತ್ತಾರೆ. ಪ್ರೀತಿಯ ವಿಚಾರ ಬಂದಾಗ ವ್ಯಕ್ತಿಯ ದೇಹದಳತೆ, ದಪ್ಪ, ತೆಳು ಎನ್ನುವ ಪರಿಯಿರುವುದಿಲ್ಲ. ಒಮ್ಮೆ ಪ್ರೀತಿಯಲ್ಲಿ ಬಿದ್ದರೆ ಅವೆಲ್ಲವೂ ನಗಣ್ಯವಾಗಿರುತ್ತದೆ.

ಪ್ರೀತಿಯಿಂದ ವಿವಾಹ ಅಥವಾ ವಿವಾಹದಿಂದ ಪ್ರೀತಿಯ ಜೀವನ ನಡೆಸಲು ಪ್ರಾರಂಭಿಸಿದಾಗ ಹೊಂದಾಣಿಕೆ ಎನ್ನುವುದು ಬಹಳ ಮುಖ್ಯ. ಇಲ್ಲವಾದರೆ ಬದುಕು ಬರಡು ಎನಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಬ್ಬರೂ ವಿಶೇಷ ರಾಶಿ ಚಕ್ರವನ್ನು ಹೊಂದಿರುತ್ತಾರೆ. ಆಯಾ ರಾಶಿ ಚಕ್ರಕ್ಕೆ ಹೊಂದಾಣಿಕೆಯಾಗುವ ರಾಶಿ ಚಕ್ರದವರನ್ನೇ ವಿವಾಹವಾಗಬೇಕು. ಇಲ್ಲವಾದರೆ ಹೊಂದಾಣಿಕೆಯ ಜೀವನ ನಡೆಸಲು ಕಷ್ಟವಾಗುವುದು. ಇದರೊಟ್ಟಿಗೆ ಅನೇಕ ವಿಚಾರದಲ್ಲಿ ನಾವು ನಿರಾಸೆಯನ್ನು ಅನುಭವಿಸಬೇಕಾಗುವುದು. ಹಾಗಾದರೆ ಯಾವ ಯಾವ ರಾಶಿ ಚಕ್ರದವರು ಅತ್ಯುತ್ತಮ ಹೊಂದಾಣಿಕೆಯನ್ನು ಹೊಂದಿರುತ್ತಾರೆ ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ.....

ಮೇಷ:

ಮೇಷ:

ಈ ರಾಶಿಯವರಿಗೆ ಅತ್ಯುತ್ತಮ ಹೊಂದಾಣಿಕೆಯಾಗುವ ರಾಶಿಚಕ್ರವೆಂದರೆ ತುಲಾ. ತುಲಾ ಮತ್ತು ಮೇಷ ಎರಡು ರಾಶಿಯು ಬೆಂಕಿಯ ಚಿಹ್ನೆಯನ್ನು ಹೊಂದಿದೆ. ಇವರಿಬ್ಬರ ನಡುವಿನ ಸಂಬಂಧದಲ್ಲಿ ಸಂವಹನ ಸಮಸ್ಯೆ ಉಂಟಾಗದು. ಪರಸ್ಪರ ರಾಜಿಯ ಗುಣವನ್ನು ಹೊಂದಿರುತ್ತಾರೆ. ಇಬ್ಬರೂ ಸಂಬಂಧದಲ್ಲಿ ವೈಯಕ್ತಿಕತೆ ಅಥವಾ ಗುಪ್ತತೆಯನ್ನು ಕಾಪಾಡಿಕೊಳ್ಳುವುದಿಲ್ಲ. ಪರಸ್ಪರ ಸಹಕಾರ ಹಾಗೂ ಪ್ರೀತಿ ವಿಶ್ವಾಸದಿಂದ ಇರುತ್ತಾರೆ.

ವೃಷಭ:

ವೃಷಭ:

ಈ ರಾಶಿಯವರಿಗೆ ಉತ್ತಮ ಹೊಂದಾಣಿಕೆಯಾಗುವ ರಾಶಿಚಕ್ರ ವೃಶ್ಚಿಕ. ಇಬ್ಬರು ಭಾವನಾತ್ಮ ಗುಣವನ್ನು ಹೊಂದಿರುವುದರಿಂದ ಪಾಲುದಾರರ ಭಾವನೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳುತ್ತಾರೆ. ತಮ್ಮ ಬಗ್ಗೆ ಹೇಳಿಕೊಳ್ಳಲು ಯಾವುದೇ ಹಿಂಜರಿಕೆಯನ್ನು ತೋರುವುದಿಲ್ಲ. ಈ ಎರಡು ರಾಶಿಚಕ್ರದವರು ಅತ್ಯುತ್ತಮ ಸಂಬಂಧವನ್ನು ಹೊಂದಲು ಯಶಸ್ವಿಯಾಗುತ್ತಾರೆ.

ಮಿಥುನ:

ಮಿಥುನ:

ಈ ರಾಶಿಯವರಿಗೆ ಉತ್ತಮ ಹೊಂದಾಣಿಕೆಯಾಗುವ ರಾಶಿಚಕ್ರ ಕರ್ಕ. ಕರ್ಕ ರಾಶಿಯವರು ಹೊಸ ವಿಷಯಗಳನ್ನು ಅನ್ವೇಷಿಸಲು ಒತ್ತಾಯಿಸುತ್ತಾರೆ. ಇದಕ್ಕೆ ಮಿಥುನ ರಾಶಿಯವರು ಅತ್ಯುತ್ತಮ ಸಹಕಾರ ನೀಡುವರು. ಪರಸ್ಪರ ಅತ್ಯುತ್ತಮ ಸಹಕಾರ ನೀಡುವರು. ಪ್ರೀತಿಯ ವಿಚಾರದಲ್ಲೂ ಪರಸ್ಪರ ಬದ್ಧತೆಯನ್ನು ಹೊಂದಿರುತ್ತಾರೆ.

ಸಿಂಹ:

ಸಿಂಹ:

ಈ ರಾಶಿಯವರಿಗೆ ಉತ್ತಮ ಹೊಂದಾಣಿಕೆಯಾಗುವ ರಾಶಿಚಕ್ರ ಮಕರ. ಇವರಿಬ್ಬರಲ್ಲೂ ಶ್ರಮ ಶೀಲತೆ ಸ್ವಭಾವ ಹಾಗೂ ವಿನೋದ ಗುಣಗಳು ಏಕತೆಯನ್ನು ಸೃಷ್ಟಿಸುತ್ತದೆ. ಇವರಿಬ್ಬರೂ ಒಂದೇ ರೀತಿಯ ಮಹತ್ವಾಕಾಂಕ್ಷೆ ಹೊಂದಿರುವುದನ್ನು ಕಾಣಬಹುದು. ಇವರು ಆದರ್ಶ ದಂಪತಿಗಳಾಗಬಹುದು. ಇವರಿಬ್ಬರಲ್ಲೂ ಪರಸ್ಪರ ಕಲಿಕೆಯ ಗುಣ ಇರುವುದನ್ನು ಕಾಣಬಹುದು. ಸಮಾಜದಲ್ಲಿ ಉತ್ತಮ ದಂಪತಿಗಳಾಗಿ ಬಾಳುವರು.

ಕನ್ಯಾ:

ಕನ್ಯಾ:

ಈ ರಾಶಿಯವರಿಗೆ ಉತ್ತಮ ಹೊಂದಾಣಿಕೆಯಾಗುವ ರಾಶಿಚಕ್ರ ಮೀನ. ಇವರಿಬ್ಬರು ಸಂತೋಷಕರವಾದ ಮತ್ತು ನಿಷ್ಠಾವಂತ ಸಂಬಂಧವನ್ನು ಹೊಂದುತ್ತಾರೆ. ಅಲ್ಲದೆ ಸಂಪೂರ್ಣವಾದ ಸಮತೋಲನವನ್ನು ನಾವು ಕಾಣಬಹುದು. ಎರಡು ರಾಶಿಯವರು ಉತ್ತಮ ಮಾರ್ಗದರ್ಶಕರಾಗಿರುವುದರಿಂದ ಪರಸ್ಪರ ಹೊಂದಾಣಿಕೆಯನ್ನು ಕಾಣಬಹುದು. ಜೀವನದ ಸಂತೋಷವನ್ನು ಸಮಾನವಾಗಿ ಹಂಚಿಕೊಳ್ಳುತ್ತಾರೆ.

ತುಲಾ:

ತುಲಾ:

ಈ ರಾಶಿಯವರಿಗೆ ಉತ್ತಮ ಹೊಂದಾಣಿಕೆಯಾಗುವ ರಾಶಿಚಕ್ರ ಕುಂಭ. ಈ ಎರಡು ರಾಶಿಯವರು ಜೀವನದಲ್ಲಿ ಎಲ್ಲವನ್ನು ಸುಲಭವಾಗಿ ತೆಗೆದುಕೊಳ್ಳುತ್ತಾರೆ. ಇವರು ಬೌದ್ಧಿಕ ಸಂಭಾಷಣೆ ಹೊಂದಲು ಇಷ್ಟಪಡುತ್ತಾರೆ. ಸ್ವತಂತ್ರವಾಗಿರಲು ಬಯಸುವ ಇವರು ಸಾಮಾಜಿಕವಾಗಿ ಮತ್ತು ವೈಯಕ್ತಿಕ ಜೀವನದಲ್ಲಿ ಉತ್ತಮ ರೀತಿಯಲ್ಲಿ ಬಾಳುತ್ತಾರೆ. ಪರಸ್ಪರ ಅತ್ಯುತ್ತಮ ಪ್ರೀತಿ ವಿಶ್ವಾಸವನ್ನು ಹೊಂದಿರುತ್ತಾರೆ.

English summary

Find Out About Your Compatibility Based On Your Zodiac

Love is a very important asset in our lives. It is almost necessary to have a partner who will stand by our sides through thick and thin. But the dynamics of relationships are changing every day. In today's generation, both the man and woman have equal roles to play. Gone are the days where women were defined by the kind of men they chose to live with. Women have become more liberal and selective when it comes to choosing the right life partner. But what is the definition of a perfect life partner?
Story first published: Friday, February 16, 2018, 7:01 [IST]