For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿ ಶಾಂತಿ-ನೆಮ್ಮದಿಗೆ ಫೆಂಗ್ ಶೂಯಿ ಸಲಹೆಗಳು

By Deepu
|

ಮನೆ ಎಂದಮೇಲೆ ಅಲ್ಲಿ ನಾವು ನಮ್ಮವರು ಎನ್ನುವ ಪ್ರೀತಿ, ವಾತ್ಸಲ್ಯದ ವಾತಾವರಣ ಇರಬೇಕು. ಮನೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಗಳ ನಡುವೆ ಉತ್ತಮವಾದ ಬಾಂಧವ್ಯ ಇರಬೇಕು. ಆಗ ಪ್ರೀತಿ ಎನ್ನುವ ಸೆಲೆ ಹೆಚ್ಚಾಗಿರುತ್ತದೆ. ಮನೆ ಮಂದಿ ಉತ್ತಮವಾದ ನಡತೆ ಹಾಗೂ ಸಹಕಾರದಿಂದ ವರ್ತಿಸಲು ಮನೆಯ ಹಿರಿಯರು ಸೂಕ್ತ ರೀತಿಯ ವರ್ತನೆಯನ್ನು ಹೊಂದಿರಬೇಕು. ಆಗ ದಾರಿ ತಪ್ಪುತ್ತಿರುವ ವ್ಯಕ್ತಿಯನ್ನಾದರೂ ಪುನಃ ಸರಿ ದಾರಿಗೆ ತರಬಹುದು. ರಕ್ಷಣೆ ಹಾಗೂ ಸಹಕಾರದ ಸ್ವಭಾವ ಇದ್ದಾಗ ಪ್ರೀತಿ ತನ್ನಿಂದ ತಾನೆ ಹುಟ್ಟಿಕೊಳ್ಳುವುದು.

ಫೆಂಗ್ ಶೂಯಿ ಪ್ರಕಾರ ಮನೆಯಲ್ಲಿ ಕೆಲವು ವಾಸ್ತು ಹಾಗೂ ವಸ್ತುಗಳ ಇರುವಿಕೆಯಿಂದಲೂ ಮನೆಯಲ್ಲಿ ಶಾಂತಿ ಹಾಗೂ ಪ್ರೀತಿಯ ಕೊರತೆ ಉಂಟಾಗುತ್ತದೆ. ಮನೆಯಲ್ಲಿ ಕೆಲವು ಸುಧಾರಣೆ ಅಥವಾ ಬದಲಾವಣೆ ಮಾಡುವುದರಿಂದ ಮನೆಯ ವಾತಾವರಣ ಬದಲಾವಣೆ ಕಾಣುವುದು. ವ್ಯಕ್ತಿಗಳ ನಡುವೆಯೂ ಪರಸ್ಪರ ಪ್ರೀತಿ ವಿಶ್ವಾಸ ಬೆಳೆಯುವುದು ಎಂದು ಹೇಳಾಗುತ್ತದೆ. ಪ್ರತಿಯೊಂದು ಮನೆಯಲ್ಲಿ ಪ್ರಮುಖವಾಗಿ 10 ಬದಲಾವಣೆಯನ್ನು ಮಾಡಿಕೊಂಡರೆ ಸುಧಾರಣೆ ಉಂಟಾಗುವುದು. ಹಾಗಾದರೆ ಆ ಸುಧಾರಣೆಗಳು ಯಾವವು? ಎನ್ನುವುದನ್ನು ತಿಳಿದುಕೊಳ್ಳಲು ಮುಂದಿರುವ ವಿವರಣೆಯನ್ನು ಅರಿಯಿರಿ....

ಒಂದು ಪ್ರಣಯದ ಚಿತ್ರ ಇರಿಸಿ

ಒಂದು ಪ್ರಣಯದ ಚಿತ್ರ ಇರಿಸಿ

ನೀವು ವಿವಾಹಿತರಾಗಿದ್ದರೆ ಅಥವಾ ಗೆಳತಿ/ಗೆಳೆಯರನ್ನು ಹೊಂದಿದ್ದರೆ ನಿಮ್ಮ ಖಾಸಗಿ ಕೋಣೆಯಲ್ಲಿ ಒಂದು ಪ್ರಣಯದ ಚಿತ್ರ ಹಾಗೂ ನಿಮ್ಮ ಸಂಗಾತಿಯ ಚಿತ್ರವನ್ನು ಗೋಡೆಯ ಮೇಲೆ ಅಂಟಿಸಿ. ಇದರಿಂದ ಅವುಗಳನ್ನು ನೋಡಿದಾಗ ನಿಮ್ಮ ಮನಸ್ಸು ಪ್ರೀತಿಯ ಭಾವವನ್ನು ತಳೆಯುವುದು. ಜೊತೆಗೆ ನಿಮ್ಮ ನಡುವೆ ಪ್ರೀತಿಯು ಹೆಚ್ಚಲು ಕಾರಣವಾಗುವುದು.

ಮನೆಯು ಅಸ್ತವ್ಯಸ್ತವಾಗಿರುವುದನ್ನು ನಿಲ್ಲಿಸಿ

ಮನೆಯು ಅಸ್ತವ್ಯಸ್ತವಾಗಿರುವುದನ್ನು ನಿಲ್ಲಿಸಿ

ನಿಮ್ಮ ಮಲಗುವ ಕೋಣೆಯು ವಿಶ್ರಾಂತಿಗೆ ಮೀಸಲಾಗಿರುತ್ತದೆ ಎನ್ನುವುದನ್ನು ಮರೆಯದಿರಿ. ಅದನ್ನು ಆದಷ್ಟು ನೀಟಾಗಿ ಇಡುವುದು ಹಾಗೂ ಮನಸ್ಸಿಗೆ ಖುಷಿಯನ್ನು ತರುವಂತೆ ಇಟ್ಟುಕೊಳ್ಳಿ. ವಸ್ತುಗಳು ಹೇಗೆಂದರೆ ಹಾಗೆ ಬಿದ್ದಿದ್ದರೆ ಮನಸ್ಸಿಗೆ ಒಂದು ರೀತಿಯ ಗೊಂದಲ ಹಾಗೂ ಸಿಟ್ಟು ಉಂಟಾಗುವ ಸಾಧ್ಯತೆಗಳಿರುತ್ತವೆ.

ಹಾಳಾದ ಪೀಠೋಪಕರಣಗಳನ್ನು ಬದಲಾಯಿಸಿ

ಹಾಳಾದ ಪೀಠೋಪಕರಣಗಳನ್ನು ಬದಲಾಯಿಸಿ

ಹಾಳಾದ ಪೀಠೋಪಕರಣಗಳು ಮನೆಯಲ್ಲಿದ್ದರೆ ಮೊದಲು ಅದನ್ನು ಬದಲಿಸಿ. ಹಾಳಾದ ವಸ್ತುಗಳು ಮನೆಯಲ್ಲಿ ಇದ್ದರೆ ಋಣಾತ್ಮಕ ಶಕ್ತಿಯು ಮನೆಯನ್ನು ಪ್ರವೇಶಿಸುವುದು. ಅಲ್ಲದೆ ಮನಸ್ಸಿಗೆ ಒಂದು ರೀತಿಯ ಗೊಂದಲ ಹಾಗೂ ಅಹಿತಕರವಾದ ಮನಸ್ಥಿತಿ ಉಂಟಾಗುವಂತೆ ಮಾಡುವುದು.

 ಸೂಕ್ತವಾಗಿ ಶೃಂಗಾರ ಮಾಡಿ

ಸೂಕ್ತವಾಗಿ ಶೃಂಗಾರ ಮಾಡಿ

ಬೆಡ್ ರೂಮ್ ನಿಮ್ಮ ಪ್ರೀತಿಗೆ ಸೂಕ್ತ ಸ್ಥಳವಾಗಿರುತ್ತದೆ. ಆ ಸ್ಥಳವು ಸ್ವಚ್ಛ ಹಾಗೂ ಸುಹಾಸನೆಯಿಂದ ಕೂಡಿದ್ದರೆ ಮನಸ್ಸು ಹಿತವಾದ ಭಾವವನ್ನು ಹೊಂದುವುದು. ಅಗತ್ಯ ವಿದ್ದಾಗ ವಿಶೇಷ ಸುವಾಸನೆ ಭರಿತ ಮೇಣದ ಬತ್ತಿ ಹಚ್ಚುವುದರಿಂದಲೂ ನಿಮ್ಮ ಪ್ರೀತಿ ಹೆಚ್ಚುವುದು. ಕೋಣೆಯನ್ನು ಸದಾ ಪರಿಮಳದಿಂದ ಕೂಡಿರುವಂತೆ ನೋಡಿಕೊಳ್ಳಿ.

ಜೋಡಿ ವಸ್ತುಗಳನ್ನು ಇರಿಸಿ

ಜೋಡಿ ವಸ್ತುಗಳನ್ನು ಇರಿಸಿ

ನೀವು ಮಲಗುವ ಕೋಣೆಯಲ್ಲಿ ಎಲ್ಲಾ ವಸ್ತುಗಳನ್ನು ಜೋಡಿಯಾಗಿ ಇರಿಸಿ. ಉದಾರಣೆಗೆ ಎರಡು ಮೇಣದ ಬತ್ತಿ, ಎರಡು ಹೂವಿನ ಕುಂಡ ಇರುವಂತೆ ನೋಡಿ. ಇವು ನಿಮ್ಮನ್ನು ಖುಷಿ ಪಡಿಸುವುದರ ಜೊತೆಗೆ ಸಮಾನವಾಗಿ ವರ್ತಿಸುವಂತೆ ಮಾಡುತ್ತದೆ. ಪ್ರಣಯದ ಮನೋಭಾವವನ್ನು ಉತ್ತೇಜಿಸುವುದು.

ಪ್ರಣಯ ಪೂರಕ ವಸ್ತುವನ್ನು ಇರಿಸಿ

ಪ್ರಣಯ ಪೂರಕ ವಸ್ತುವನ್ನು ಇರಿಸಿ

ಮಲಗುವ ಕೋಣೆಯಲ್ಲಿ ಪ್ರಣಯ ಪೂರಕ ಕಲಾಕೃತಿಯಿಂದ ಅಲಂಕರಿಸಿ. ಇದು ಗ್ರಾಫಿಕ್ ಚಿತ್ರಗಳಾಗಿರಬಹುದು ಅಥವಾ ಅಲಂಕಾರಿ ವಸ್ತುಗಳಾಗಿರಬಹುದು. ಕೋಣೆಯ ಸೊಬಗನ್ನು ಹೆಚ್ಚಿಸುವುದರ ಜೊತೆಗೆ ಮನಸ್ಸಿಗೆ ಕೋಮಲತೆಯನ್ನು ನೀಡುತ್ತದೆ.

ಕೋಣೆಯಲ್ಲಿ ಖುರ್ಚಿಯನ್ನು ಇರಿಸಿ

ಕೋಣೆಯಲ್ಲಿ ಖುರ್ಚಿಯನ್ನು ಇರಿಸಿ

ನೀವು ಮಲಗುವ ಕೂಣೆಯಲ್ಲಿ ಎರಡು ಖುರ್ಚಿಯನ್ನು ಇರಿಸಿ. ಮಲಗುವ ಮುನ್ನ ಕುಳಿತು ಮಾತನಾಡಲು ಅಥವಾ ಟಿವಿ ನೋಡಲು ಅದು ಅನುಕೂಲವಾಗುತ್ತದೆ. ಒಂದಷ್ಟು ಸಮಯ ಒಟ್ಟಿಗೆ ಕುಳಿತು ಸಮಯ ಕಳೆಯುವುದರಿಂದ ಇಬ್ಬರಲ್ಲೂ ಪರಸ್ಪರ ಅನ್ಯೋನ್ಯತೆ ಬೆಳೆಯುವುದು.

ಕೆಲಸಕ್ಕೆ ಸಂಬಂಧಿಸಿದ ವಸ್ತುಗಳನ್ನು ಇರಿಸದಿರಿ

ಕೆಲಸಕ್ಕೆ ಸಂಬಂಧಿಸಿದ ವಸ್ತುಗಳನ್ನು ಇರಿಸದಿರಿ

ನೀವು ನಿಮ್ಮ ವೃತ್ತಿ ಜೀವನಕ್ಕೆ ಸಂಬಂಧಿಸಿದ ವಸ್ತುವನ್ನು ಕಣ್ಣಿಗೆ ಕಾಣುವಂತೆ ಅಥವಾ ಎದುರಿಗೆ ಇರಿಸದಿರಿ. ಇದರಿಂದ ನೀವು ಅದನ್ನು ನೋಡಿದಾಗ ನಿಮ್ಮ ಮನಸ್ಸು ಒತ್ತಡಕ್ಕೆ ಒಳಗಾಗಬಹುದು. ಅಂತಹ ವಸ್ತುವನ್ನು ದೂರ ಇಡುವುದರಿಂದ ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಸೂಕ್ತವಾಗಿ ಚಿಂತಿಸಲು ಸಾಧ್ಯವಾಗುವುದು.

ಹಾಸಿಗೆಯಲ್ಲಿ ಹೆಚ್ಚುವರಿ ವಸ್ತುಗಳನ್ನು ತೆಗೆಯಿರಿ

ಹಾಸಿಗೆಯಲ್ಲಿ ಹೆಚ್ಚುವರಿ ವಸ್ತುಗಳನ್ನು ತೆಗೆಯಿರಿ

ನಿಮ್ಮ ಹಾಸಿಗೆಯು ಸ್ವಚ್ಛವಾಗಿ ಇರುವಂತೆ ನೋಡಿಕೊಳ್ಳಿ. ಹೆಚ್ಚುವರಿ ತಲೆದಿಂಬು, ಹೊದೆ ವಸ್ತ್ರಗಳು ಇರದಂತೆ ನೋಡಿಕೊಳ್ಳಿ. ಇದರಿಂದ ನಿಮಗೆ ಹಾಗೂ ನಿಮ್ಮ ಸಂಗಾತಿಗೆ ಒಂದಿಷ್ಟು ವಿಶಾಲವಾದ ಜಾಗ ದೊರೆಯುವುದು. ಸಾಕಷ್ಟು ಸ್ಥಳವು ಉತ್ತಮ ಸಮಯ ಕಳೆಯಲು ಸಹಾಯವಾಗುವುದು.

ನೈಟ್ ಟೇಬಲ್ ಇರಿಸಿ

ನೈಟ್ ಟೇಬಲ್ ಇರಿಸಿ

ಮಲಗುವ ಕೋಣೆಯಲ್ಲಿ ನೈಟ್ ಟೇಬಲ್ ಇರಿಸಿ. ಈ ಜೋಡಿ ಟೇಬಲ್ ನಿಮ್ಮ ಸಂಬಂಧದಲ್ಲಿ ಸಮಾನತೆಯನ್ನು ಪ್ರೋತ್ಸಾಹಿಸುತ್ತದೆ. ಇದು ಅಗತ್ಯ ಜಾಗವನ್ನು ಒದಗಿಸುವುದರ ಜೊತೆಗೆ ಅಚ್ಚುಕಟ್ಟಾಗಿ ವಸ್ತುಗಳನ್ನು ಇರಿಸಲು ಅನುಕೂಲವಾಗುವುದು. ಇದರಿಂದ ಗೊಂದಲ ಉಂಟಾಗುವ ವಸ್ತುಗಳನ್ನು ದೂರ ಇರಿಸಬಹುದು.

English summary

Feng Shui Tips For Happy Love Life

Do you know that there are certain Feng Shui tips that can help improve your love life? From just replacing the broken furniture in your home to even changing the colours of your bedroom, it can bring in a lot of positive changes in your love life. Also, avoiding clutter and keeping things in pairs is known to boost your love life and peace in your house.
X
Desktop Bottom Promotion