ಇದರಲ್ಲಿ ಯಾವುದಾದರೂ ಒಂದನ್ನು ಆರಿಸಿ, ನಿಮ್ಮ ಭವಿಷ್ಯವನ್ನು ಅರಿಯಿರಿ

Posted By: Divya pandit
Subscribe to Boldsky

ಮಾನವ ಪ್ರಕೃತಿಯನ್ನು ತನ್ನ ದೈವ ಎಂದು ಪರಿಗಣಿಸಿದ್ದಾನೆ. ಪ್ರಕೃತಿಯಲ್ಲಿರುವ ಪ್ರತಿಯೊಂದು ಪ್ರಾಣಿ, ಪಕ್ಷಿ, ಹುಳ-ಹಪ್ಪಡೆ, ಗಿಡ-ಮರಗಳು, ನೀರು ಗಾಳಿ, ಬೆಂಕಿ ಎಲ್ಲವೂ ದೈವ ಸಂಭೂತವೆ. ಕೆಲವು ಆಯ್ದ ಪ್ರಾಣಿ, ಪಕ್ಷಿಗಳು ಮನುಷ್ಯನ ಭವಿಷ್ಯವನ್ನು ಹೇಳುತ್ತವೆ. ಅದಕ್ಕಾಗಿ ಅವುಗಳಿಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಅತ್ಯುತ್ತಮ ಸ್ಥಾನವನ್ನು ಸಹ ನೀಡಲಾಗಿದೆ.

ಅದರಂತೆಯೇ ಜ್ಯೋತಿಷ್ಯ ಶಾಸ್ತ್ರದಲ್ಲಿ ಹಸ್ತ ಮುದ್ರಿಕೆ, ಸಂಖ್ಯಾ ಶಾಸ್ತ್ರ ಸೇರಿದಂತೆ ವಿವಿಧ ಬಗೆಯಲ್ಲಿ ಜ್ಯೋತಿಷ್ಯವನ್ನು ಹೇಳಲಾಗುತ್ತದೆ. ಅದರಲ್ಲಿ ರೂನ್ ಅಕ್ಷರಗಳ ಜ್ಯೋತಿಷ್ಯವೂ ಒಂದು. ಈ ರೂನ್ ಅಕ್ಷರಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡರೆ, ಆ ಅಕ್ಷೆರದ ಹಿಂದಿರುವ ವಿಚಾರಗಳು ನಿಮ್ಮ ಭವಿಷ್ಯವನ್ನು ಹೇಳುತ್ತದೆ. ಹಾಗಾದರೆ ಆ ಅಕ್ಷರಗಳು ಯಾವವು? ಅವುಗಳಲ್ಲಿ ನೀವು ಆರಿಸಿಕೊಂಡ ಅಕ್ಷರ ನಿಮ್ಮ ಭವಿಷ್ಯದಲ್ಲಿ ಏನಿದೆ ಎಂದು ಹೇಳುತ್ತದೆ? ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯಲ್ಲಿ ಪರಿಶೀಲಿಸಿ....

ಆಯ್ಕೆ-1

ಆಯ್ಕೆ-1

ನಿಮ್ಮ ಆಯ್ಕೆ ಒಂದಾಗಿದ್ದರೆ ಸುರಕ್ಷತೆ, ಸಮೃದ್ಧಿ ಮತ್ತು ಹೊಸ ಸಂಪತ್ತು ನಿಮ್ಮ ಮಾರ್ಗದಲ್ಲಿ ಬರುತ್ತದೆ. ನಿಮ್ಮ ಎಲ್ಲಾ ಪರಿಶ್ರಮದ ಕೆಲಸಗಳಿಗೆ ಉತ್ತಮ ಫಲ ದೊರೆಯುವುದು ಎಂದು ಹೇಳುತ್ತದೆ. ನೀವು ಕೇವಲ ಒಂದು ವಸ್ತುವಿಗಷ್ಟೇ ಅಲ್ಲ ಆಧ್ಯಾತ್ಮ ಚಿಂತನೆಗೂ ಹೆಚ್ಚಿನ ಮಹತ್ವ ನೀಡುವಿರಿ ಎಂದು ಹೇಳುತ್ತದೆ. ಜೀವನದಲ್ಲಿ ಶೀಘ್ರವೇ ನಿಮ್ಮ ಜೀವನದಲ್ಲಿ ಬಹಳ ಮಹತ್ವದ ತಿಳಿವಳಿಕೆಯನ್ನು ಪಡೆಯುತ್ತೀರಿ ಎಂದು ಹೇಳಲಾಗುವುದು. ಇದರೊಟ್ಟಿಗೆ ಜೀವನದಲ್ಲಿ ಹೊಸ ಮತ್ತು ನವೀಕೃತ ಪ್ರೀತಿಯನ್ನು ಪಡೆಯುವಿರಿ ಎಂದು ಹೇಳಲಾಗುತ್ತದೆ.

ಆಯ್ಕೆ-2

ಆಯ್ಕೆ-2

ನಿಮ್ಮ ಆಯ್ಕೆ 2 ಆಗಿದ್ದರೆ, ನಿಮ್ಮ ಜೀವನದಲ್ಲಿ ಬದಲಾವಣೆ ಹಾಗೂ ಸ್ವಾತಂತ್ರ್ಯವನ್ನು ಸೂಚಿಸುತ್ತದೆ. ಜೀವನದಲ್ಲಿ ಮಹತ್ತರವಾದ ಬದಲಾವಣೆಯನ್ನು ನೀವು ಕಾಣುವಿರಿ ಎಂದು ತಿಳಿಸುತ್ತದೆ. ಮತ್ತೊಂದೆಡೆ ನಿಮ್ಮ ಜೀವನದಲ್ಲಿ ಸರಳವಾದ ವಿಷಯಗಳ ಬಗ್ಗೆ ಹೆಚ್ಚಿನ ಚಿಂತನೆ ನಡೆಸುವ ಅಗತ್ಯವಿಲ್ಲ ಎಂದು ತೋರಿಸುವುದು. ಹೊಸ ಹಾದಿ, ಹೊಸ ಸ್ಥಳ, ಹೊಸ ಅನುಭವಗಳು ನಿಮ್ಮ ಮಾರ್ಗದಲ್ಲಿ ಬರುತ್ತವೆ ಎಂದು ಹೇಳುತ್ತದೆ.

ಆಯ್ಕೆ-3

ಆಯ್ಕೆ-3

ನಿಮ್ಮ ಆಯ್ಕೆ 3 ಆಗಿದ್ದರೆ, ಯಶಸ್ಸು, ಶಕ್ತಿ ಮತ್ತು ದೀರ್ಘ ಆರೋಗ್ಯಕರವಾದ ಜೀವನವನ್ನು ಮುಂದೆ ಕಾಣುವಿರಿ. ನೀವು 3ಅನ್ನು ಆಯ್ಕೆ ಮಾಡಿದರೆ ಹಳೆಯ ಕನಸು ಸಹ ಶೀಘ್ರದಲ್ಲಿಯೇ ನನಸಾಗುವುದನ್ನು ಕಾಣುವಿರಿ ಎಂದರ್ಥ. ಇವರು ಆಧ್ಯಾತ್ಮಿಕ ಮತ್ತು ಭಾವನಾತ್ಮಕ ಪ್ರಗತಿಯನ್ನು ಸಹ ನೋಡುತ್ತಾರೆ ಎಂದು ಹೇಳುವುದು.

ಆಯ್ಕೆ-4

ಆಯ್ಕೆ-4

ನಿಮ್ಮ ಆಯ್ಕೆ 4 ಆಗಿದ್ದರೆ, ನಿಮಗೆ ತಿಳಿದೋ ತಿಳಿದೆಯೋ ಕೆಲವು ತೊಂದರೆಗಳಿಗೆ ಒಳಗಾಗುವಿರಿ ಎಂದು ತೋರುತ್ತದೆ. ಅದೇ ಸಮಯದಲ್ಲಿ ನೀವು ಹೆಚ್ಚಿನ ಶಕ್ತಿಯೊಂದಿಗೆ ಉನ್ನತ ಸ್ಥಾನದಲ್ಲಿರುವವರಿಂದ ರಕ್ಷಣೆಯನ್ನು ಪಡೆದುಕೊಳ್ಳುವಿರಿ. ಇದರೊಟ್ಟಿಗೆ ನೀವು ನಿಮ್ಮ ಪ್ರಯಾಣವನ್ನು ಮುಂದುವರಿಸುವಿರಿ ಎಂದು ಹೇಳುತ್ತದೆ.

ಆಯ್ಕೆ -5

ಆಯ್ಕೆ -5

ನಿಮ್ಮ ಆಯ್ಕೆ 5 ಆಗಿದ್ದರೆ ನೀವು ದಾನ ಮಾಡುವವರು ಅಥವಾ ಸ್ವೀಕರಿಸುವ ಪ್ರವೃತ್ತಿಯನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತೀರಿ ಎಂದು ಹೇಳುತ್ತದೆ. ಕೊಡುವುದು ಹಾಗೂ ತೆಗೆದುಕೊಳ್ಳುವ ಪ್ರವೃತ್ತಿಯಿಂದ ಇತರ ವ್ಯಕ್ತಿಗಳಿಗೆ ನೀವು ವೈಯಕ್ತಿಕವಾಗಿ ಬಹಳ ಹತ್ತಿರವಾಗುತ್ತೀರಿ ಎಂದು ಹೇಳಲಾಗುವುದು. ಇವರು ಹೆಚ್ಚು ಜ್ಞಾನವನ್ನು ಹರಡಲು ಮತ್ತು ಇತರರ ಬಗ್ಗೆ ಕಾಳಜಿವಹಿಸುವ ಗುಣವನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು.

ಆಯ್ಕೆ-6

ಆಯ್ಕೆ-6

ನಿಮ್ಮ ಆಯ್ಕೆಯು 6 ಆಗಿದ್ದರೆ ನೀವು ಕೆಲವು ವಿಚಾರದಲ್ಲಿ ಆಸಕ್ತಿ ಹೊಂದುವಿರಿ. ಆಧ್ಯಾತ್ಮಿಕ ಮತ್ತು ಭಾವನಾತ್ಮಕ ಬೆಳವಣಿಗೆಯ ಮೂಲಕ ಪ್ರಯಾಣವನ್ನು ಮುಂದುವರಿಸುವಿರಿ. ವಿಷಯಗಳ ನವೀಕರಣ, ಬೆಳವಣಿಗೆ ಹಾಗೂ ಹೊಸ ಆರಂಭವಾಗುವುದು. ದೀರ್ಘಾವಧಿಯ ದುಃಖ ಅಥವಾ ದುಃಖದ ನಂತರ ನೀವು ಹಠಾತ್ ಪರಿಹಾರವನ್ನು ಅನುಭವಿಸುವ ಸಾಧ್ಯತೆಗಳಿವೆ. ಇದಲ್ಲದೆ ನೀವು ಜೀವನದ ಅತ್ಯುತ್ತಮ ಅನುಭವವನ್ನು ಅನುಭವಿಸುತ್ತೀರಿ ಎಂದು ಹೇಳುವುದು.

English summary

Choose A Rune And LEARN About Your Future

Do you know that there are so many unknown sides of our own selves? Understanding the facts about our own mind and body gets important. Here, in this article, we bring in a personality test which helps you understand about what the future holds for you. All that you need to do is pick any of the rune and find out on what the future holds for you! Check it out..