ಕುಡುಕ ಅಪ್ಪನೇ ಸೊಸೆಯಾಗುವವಳನ್ನು ಚುಂಬಿಸಿದಾಗ!! ವಿಡಿಯೋ ವೈರಲ್

Posted By: Deepu
Subscribe to Boldsky

ಕುಡಿದ ಬಳಿಕ ಜನರ ಮನಸ್ಸಿನಲ್ಲಿ ಯಾವ ಉನ್ಮಾದಗಳು ಹುಟ್ಟಿಕೊಳ್ಳುತ್ತವೋ ಗೊತ್ತಿಲ್ಲ. ಆದರೆ ಕೆಲವರಂತೂ ತಮ್ಮ ಮನಸ್ಸಿಗೆ ಬಂದಂತೆ ಮಾಡಿ ಮಾನವನ್ನೇ ಹರಾಜು ಹಾಕಿಕೊಳ್ಳುತ್ತಾರೆ. ಬಳಿಕ ಅಡಿಕೆಗೆ ಹೋದ ಮಾನವನ್ನು ಹಿಂದೆ ಪಡೆಯಲು 'ಕುಡಿದ ಅಮಲಿನಲ್ಲಿ ಮಾಡಿದೆ' ಎಂಬ ಆನೆ ಕೊಟ್ಟು ಹಿಂದೆ ಪಡೆಯಲು ಯತ್ನಿಸುತ್ತಾರೆ.

ಚೀನಾದಲ್ಲಿ ಒಂದು ಘಟನೆ ಹೀಗೇ ಆಗಿದೆ. ಕುಡಿತದ ಅಮಲಿನಲ್ಲಿ ಸೊಸೆಯಾಗುವವಳನ್ನೇ ಬಲವಂತವಾಗಿ ಚುಂಬಿಸಿದ ಅಪ್ಪನ ವೀಡಿಯೋ ಚಿತ್ರ, ಆ ಬಳಿಕ ಆ ಅಪ್ಪನನ್ನು ಚಚ್ಚಿದ ಮಗನ ವಿಡಿಯೋಗಳು ಈಗ ಅಂತರ್ಜಾಲದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ...

ಇದು ನಡೆದದ್ದು ಚೀನಾದಲ್ಲಿ

ಇದು ನಡೆದದ್ದು ಚೀನಾದಲ್ಲಿ

ಮೂಲಗಳ ಪ್ರಕಾರ, ಚೀನಾದ ಒಂದು ವಿವಾಹ ಸಮಾರಂಭದಲ್ಲಿ ಎಲ್ಲರ ಎದುರಿಗೆ, ತನ್ನ ಸೊಸೆಯಾಗುವವಳನ್ನು ಮಗ ಹಾಗೂ ಇತರ ಅತಿಥಿಗಳ ಎದುರಿಗೇ ಬಲವಂತವಾಗಿ ಚುಂಬಿಸಿದ ಕುಡುಕ ಅಪ್ಪ ಈ ಸುದ್ದಿಗೆ ಕಾರಣವಾಗಿದ್ದಾನೆ.

ಇದೊಂದು ತೀರಾ ಅನಿರೀಕ್ಷಿತವಾದ ಘಟನೆ

ಇದೊಂದು ತೀರಾ ಅನಿರೀಕ್ಷಿತವಾದ ಘಟನೆ

ಈ ವೀಡಿಯೋ ನೋಡಿದವರಿಗೆ ಅಪ್ಪನ ಇರಾದೆ ಕೊನೆಯ ಕ್ಷಣದವರೆಗೂ ಏನಿತ್ತೆಂದು ಊಹಿಸಲು ಸಾಧ್ಯವಾಗಲಿಕ್ಕಿಲ್ಲ. ವೇದಿಕೆಯಲ್ಲಿ ಮದುಮಗಳಾಗಿ ಕುಳಿತಿದ್ದ ಸೊಸೆಯಾಗುವವಳನ್ನು ಥಟ್ಟನೇ ಬಲವಂತವಾಗಿ ಸೆಳೆದು ಮುತ್ತಿಕ್ಕಿದ ಅಪ್ಪನ ಈ ಕ್ರಿಯೆ ಯಾರಿಗಾದರೂ ದಿಗ್ಭ್ರಮೆ ಮೂಡಿಸುತ್ತದೆ. ಕುಡಿತದ ಅಮಲಿನಲ್ಲಿಯಾದರೂ ಸರಿ ಈ ನಡೆದ ಖಚಿತವಾಗಿಯೂ ಖಂಡನಾರ್ಹವಾಗಿದೆ.

ತಂದೆಯನ್ನೇ ಚಚ್ಚಿದ ಮಗ!

ತಂದೆಯನ್ನೇ ಚಚ್ಚಿದ ಮಗ!

ಈ ಘಟನೆಯನ್ನು ಕಣ್ಣಾರೆ ಕಂಡ ಬಳಿಕ ಯಾರಿಗಾದರೂ ಮೈಯೆಲ್ಲಾ ಮುಳ್ಳುಗಳೇಳುವುದು ಸಹಜ. ಆ ಮಗನ ಸ್ಥಿತಿ ಏನಾಗಿರಬಾರದು? ಆತನ ಜೀವನದ ಅತ್ಯಂತ ಪ್ರಮುಖ ಮತ್ತು ಸಂತೋಷದ ಕ್ಷಣದಲ್ಲಿ ತನ್ನ ಅಪ್ಪನೇ ಹೀಗೆ ವರ್ತಿಸಿದರೆ? ಸುಮ್ಮನೇ ಸಿಟ್ಟು ತಲೆಗೇರಿದ ಮಗ ಮರುಕ್ಷಣವೇ ತಂದೆಯನ್ನು ಚೆನ್ನಾಗಿ ತದುಕಿರುವುದೂ ವೀಡಿಯೋದಲ್ಲಿ ದಾಖಲಾಗಿದೆ. ಈ ಘಟನೆ ನಡೆದೇ ಇಲ್ಲ ಎಂದು ಸಾಬೀತುಪಡಿಸಲು ಪ್ರಯತ್ನಗಳು ನಡೆದವಾದರೂ ಅಪ್ಪನೇ ಈ ಕೃತಿಗಾಗಿ ಕ್ಷಮೆಯಾಚಿಸಿದ್ದರಿಂದ ಈ ಪ್ರಯತ್ನ ನೀರಿನಲ್ಲಿ ಹೋಮವಾಗಿದೆ.

ಅಂತರ್ಜಾಲದಲ್ಲಿ ವೈರಲ್ ಆದ ವೀಡಿಯೋ

ಯಾವಾಗ ಈ ವೀಡಿಯೋ ಅಂತರ್ಜಾಲದಲ್ಲಿ ಬಿಡುಗಡೆಯಾಯ್ತೋ, ಜಗತ್ತಿನಾದ್ಯಂತ ಕ್ಷಣಮಾತ್ರದಲ್ಲಿ ಪಸರಿಸಿದೆ. ತಕ್ಷಣವೇ ಊಹಾಪೋಹಗಳ ಕಂತೆಗಳೇ ಮಾರ್ದನಿಸಿವೆ. ಅವಮಾನ ತಡೆಯಲಾರದೇ ತಂದೆ ಆತ್ಮಹತ್ಯೆ ಮಾಡಿಕೊಂಡನೆಂದೂ, ಎರಡೂ ಕುಟುಂಬದ ನಡುವೆ ಭಾರೀ ಜಗಳವಾಯ್ತೆಂದೂ ಜನರು ತಮ್ಮ ಮನಸ್ಸಿಗೆ ಬಂದಿದ್ದನ್ನು ಉಪ್ಪೂ ಕಾರ ಹಾಕಿ ಮುಂದಿನವರಿಗೆ ದಾಟಿಸುತ್ತಿದ್ದಾರೆ. ಆದರೆ ಇವೆಲ್ಲಾ ಸುಳ್ಳು ಎಂದೂ ತಂದೆ ಮಾತ್ರ ಮಗ ಪೆಟ್ಟಿನಿಂದ ಕೆನ್ನೆ ಕೆಂಪಾಗಿಸಿಕೊಂಡು ಹೋಗುತ್ತಿರುವುದು ಮಾತ್ರ ಸ್ಪಷ್ಟವಾಗಿದೆ.

ಮುಂದೇನಾಗಬಹುದು?

ಮುಂದೇನಾಗಬಹುದು?

ಮುಂದೇನಾಗಬಹುದು? ಒಂದು ಕುಟುಂಬದ ವೈಯಕ್ತಿಕ ಘಟನೆಯನ್ನು ಹೀಗೆ ಸಾರ್ವಜನಿಕವಾಗಿಸಿ ಆ ಕುಟುಂಬದ ಮರ್ಯಾದೆ ಕಳೆಯುವುದು ಸೂಕ್ತವೇ? ಕೇವಲ ಗಾಸಿಪ್ ಗಾಗಿ ಈ ವಿಷಯವನ್ನು ಹಿಗ್ಗಾ ಮುಗ್ಗಾ ಎಳೆಯುವುದು ಸಲ್ಲುವುದೇ? ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬುದನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ನಮಗೆ ತಿಳಿಸಿ.

English summary

case of drunken dad who kissed his sons fiancee

When a person is drunk what is the most embarrassing thing that you have witnessed? We bet this case takes away the cake! As the father of the groom ended up kissing the fiancée on her lips! Check onto know the bizarre incident that happened in China and the groom who was left embarrassed for his father's act. We bring in more details about the incident to you...