ಹುಟ್ಟಿದ ತಿಂಗಳ ಆಧಾರದ ಮೇಲೆ ಪ್ರೀತಿಯ ಜೀವನ ಹೇಗಿರುತ್ತದೆ ನೋಡಿ....

Posted By: Divya pandith
Subscribe to Boldsky

ನಾವು ಹುಟ್ಟಿದ ಪ್ರದೇಶ, ಸಮಯ ಹಾಗೂ ತಿಂಗಳು ನಮ್ಮ ಭವಿಷ್ಯದ ಮೇಲೆ ಪ್ರಭಲವಾದ ಪ್ರಭಾವ ಬೀರುತ್ತದೆ. ಅವುಗಳ ಆಧಾರದಲ್ಲಿಯೇ ನಮ್ಮ ಜೀವನದ ಅದೃಷ್ಟ ಹಾಗೂ ನತದೃಷ್ಟಗಳು ಅವಲಂಬಿತವಾಗಿರುತ್ತದೆ. ಪ್ರೀತಿಯ ಜೀವನ ಎನ್ನುವುದು ವ್ಯಕ್ತಿಯ ಬದುಕಿನಲ್ಲಿ ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ದುಃಖದಲ್ಲಿರುವಾಗ ಸಾಂತ್ವನ, ಸಂತೋಷದಲ್ಲಿರುವಾಗ ಪ್ರೋತ್ಸಾಹ ನೀಡಲು ನಮ್ಮವರು ಎನ್ನುವ ಸಂಗಾತಿ ಇರಬೇಕು. ಆಗಲೇ ಜೀವನ ಧನ್ಯ ಎನಿಸಿಕೊಳ್ಳುವುದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಾವು ಹುಟ್ಟಿದ ತಿಂಗಳ ಆಧಾರದ ಮೇಲೆ ನಮ್ಮ ಪ್ರೀತಿಯ ಜೀವನ ಹೇಗಿರುತ್ತದೆ ಎನ್ನುವುದನ್ನು ನಿರ್ಧರಿತವಾಗುತ್ತದೆ. ಹುಟ್ಟಿದ ತಿಂಗಳ ಆಧಾರದ ಮೇಲೆ ನಾವು ಹೇಗೆ ಪ್ರೀತಿಯಲ್ಲಿ ಇಳಿಯುತ್ತೇವೆ ಎನ್ನುವುದನ್ನು ಸಹ ಹೇಳಲಾಗುತ್ತದೆ. ನಿಮ್ಮನ್ನು ಯಾವ ಕಾರಣಕ್ಕೆ ಜನರು ಪ್ರೀತಿಸುತ್ತಾರೆ ಎನ್ನುವುದನ್ನು ತಿಳಿದುಕೊಲ್ಳುವ ಕುತೂಹಲ ಇದ್ದರೆ ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

ಜನವರಿ

ಜನವರಿ

ಜನವರಿಯಲ್ಲಿ ಹುಟ್ಟಿದವರು ನೀವಾಗಿದ್ದರೆ ನೀವು ಆರೈಕೆ ಹಾಗೂ ಪೋಷಣೆಯ ಪ್ರವೃತ್ತಿಯನ್ನು ಹೊಂದಿರುತ್ತೀರಿ. ಇವರು ಸದಾ ಇತರರ ಅಗತ್ಯಗಳಿಗೆ ಹೆಚ್ಚು ಕಾಳಜಿವಹಿಸುತ್ತಾರೆ. ಇವರೊಂದಿಗೆ ಸಮಯ ಕಳೆಯುವ ಜನರು ನೀವೆಷ್ಟು ಚಿಂತನಾಶೀಲರಾಗಿದ್ದೀರಿ ಎನ್ನುವುದನ್ನು ತಿಳಿದುಕೊಳ್ಳುವರು. ಇವರ ವ್ಯಕ್ತಿತ್ವದ ಒಂದು ಉತ್ತಮವಾದ ವಿಚಾರವೆಂದರೆ ಎಲ್ಲರನ್ನೂ ಸಂತೋಷದಿಂದ ಇಡಲು ಪ್ರಯತ್ನಿಸುತ್ತಾರೆ.

ಫೆಬ್ರುವರಿ

ಫೆಬ್ರುವರಿ

ಇವರು ನೈಸರ್ಗಿಕವಾಗಿಯೇ ಸುಂದರವಾದ ವ್ಯಕ್ತಿಗಳಾಗಿರುತ್ತಾರೆ. ನಿಮ್ಮ ಭೌತಿಕ ಸೌಂದರ್ಯವು ಬ್ರಹ್ಮಾಂಡದಿಂದ ಆಶೀರ್ವದಿಸಲ್ಪಟ್ಟಿದೆ ಎಂದು ಹೇಳಬಹುದು. ಇಷ್ಟೇ ಅಲ್ಲದೆ ಇವರಲ್ಲಿರುವ ಆಂತರಿಕ ಸೌಂದರ್ಯದಿಂದಲೂ ಅಂತರ್ಗತ ಆಕರ್ಷಣೆಯನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು.

ಮಾರ್ಚ್

ಮಾರ್ಚ್

ಇವರು ಸದಾ ನೈಜವಾದ ರೀತಿಯಲ್ಲಿ ಇರಲು ಬಯಸುತ್ತಾರೆ. ಇವರು ಪ್ರಾಮಾಣಿಕ ವಿಚಾರದಲ್ಲಿ ಹೆಸರುವಾಸಿಯಾಗಿರುತ್ತಾರೆ. ಇವರು ಸಮಸ್ಯೆಗಳಿಗೆ ಹೆಚ್ಚು ಉತ್ತೇಜನ ನೀಡುವುದಿಲ್ಲ. ಯಾವುದೇ ವಿಚಾರಕ್ಕೂ ಅನಗತ್ಯವಾದ ವಾದ ಹಾಗೂ ತರ್ಕಗಳನ್ನು ಮಾಡುವುದಿಲ್ಲ. ನೀವು ಸದಾ ಸತ್ಯವಂತರಾಗಿರುವುದರಿಂದ ಜನರು ನಿಮ್ಮನ್ನು ಬಹಳ ಇಷ್ಟಪಡುತ್ತಾರೆ.

ಏಪ್ರಿಲ್

ಏಪ್ರಿಲ್

ಈ ತಿಂಗಳಲ್ಲಿ ಜನಿಸಿದವರು ಅತ್ಯಂತ ಸೃಜನಾತ್ಮಕ ಹಾಗೂ ಕಲಾತ್ಮಕ ಗುಣವನ್ನು ಹೊಂದಿರುತ್ತಾರೆ. ಇವರ ಕೌಶಲ್ಯವೇ ದೊಡ್ಡ ಪ್ರಲೋಭನೆಗೆ ಕಾರಣವಾಗುವುದು. ಕಲೆ ಮತ್ತು ಸೃಜನಾತ್ಮಕ ವಿಚಾರದಲ್ಲಿ ಆಸಕ್ತಿ ಹೊಂದಿರುವ ವ್ಯಕ್ತಿಗಳು ಇವರನ್ನು ಬಹಳ ಇಷ್ಟಪಡುತ್ತಾರೆ. ಇವರ ಸುಂದರವಾದ ಭಾವನೆಗಳು ಹಾಗೂ ಕಲಾಕೃತಿಗಳಿಂದ ಹೆಚ್ಚಿನ ಪ್ರಚಾರ ಪಡೆದುಕೊಳ್ಳುತ್ತಾರೆ.

ಮೇ

ಮೇ

ವಿವರಣೆಯನ್ನು ನೀಡುವಲ್ಲಿ ಹೆಚ್ಚಿನ ಗಮನ ವಹಿಸುವ ವ್ಯಕ್ತಿಗಳಾಗಿರುತ್ತಾರೆ. ಇವರ ಓದು ಹಾಗೂ ಅನುಭವಗಳಿಗೆ ಜನರು ಹೆಚ್ಚು ಆಕರ್ಷಿತರಾಗುತ್ತಾರೆ. ಜನರು ಇವರ ಚಿಂತನೆ ಹಾಗೂ ಭಾವನೆಯ ಪರಿಯನ್ನು ಪ್ರೀತಿಸುತ್ತಾರೆ. ಅಲ್ಲದೆ ಇವರು ಜನರ ಭಾವನೆಯನ್ನು ಹೇಗೆ ಅರಿಯಬೇಕು ಎನ್ನುವುದನ್ನು ತಿಳಿದಿರುತ್ತಾರೆ.

ಜೂನ್

ಜೂನ್

ಇವರ ಸಂಪೂರ್ಣವಾದ ವರ್ತನೆ ಹಾಗೂ ಆಕರ್ಷಣೆಯು ಇವರನ್ನು ಆಕರ್ಷಕ ವ್ಯಕ್ತಿಯನ್ನಾಗಿ ಮಾಡುತ್ತದೆ. ಎಲ್ಲಾ ಪರಿಸ್ಥಿತಿಗಳಿಗೂ ಸೂಕ್ತ ರೀತಿಯಲ್ಲಿ ಹೊಂದಾಣಿಕೆಯನ್ನು ತೋರುವ ವ್ಯಕ್ತಿಗಳು. ಸಮಾರಂಭಗಳಲ್ಲಿ ಹೇಗೆ ಮಾತನಾಡಬೇಕು ವರ್ತಿಸಬೇಕು ಎನ್ನುವುದನ್ನು ಅರಿತಿರುತ್ತಾರೆ. ಇವರ ಈ ಸ್ವಭಾವವು ಜನರಿಗೆ ಹೆಚ್ಚು ಇಷ್ಟವಾಗುವುದು.

ಜುಲೈ

ಜುಲೈ

ಈ ತಿಂಗಳಲ್ಲಿ ಜನಿಸಿದವರು ತಮ್ಮ ಹಾಸ್ಯದ ಪ್ರವೃತ್ತಿಯು ದೊಡ್ಡ ಆಸ್ತಿ ಎಂದು ತಿಳಿದಿರುತ್ತಾರೆ. ಇವರು ತಮಾಷೆಯ ವ್ಯಕ್ತಿಗಳಾಗಿರುತ್ತಾರೆ. ಇವರು ವಿಷಯಗಳ ಮೇಲೆ ಹೇಗೆ ಬೆಳಕು ಚೆಲ್ಲುವುದು ಹಾಗೂ ನಿರ್ವಹಿಸುವುದು ಎನ್ನುವುದನ್ನು ಅರಿತಿರುತ್ತಾರೆ. ಸುತ್ತಲಿನ ಜನರನ್ನು ಸದಾ ಸಂತೋಷಗೊಳಿಸುತ್ತಿರುವುದರಿಂದ ಜನರು ಸಹ ಇವರನ್ನು ಹೆಚ್ಚು ಪ್ರೀತಿಸುತ್ತಾರೆ.

ಆಗಸ್ಟ್

ಆಗಸ್ಟ್

ಈ ತಿಂಗಳಲ್ಲಿ ಜನಿಸಿದವರಿಗೆ ನಿಸ್ವಾರ್ಥ ಗುಣಗಳಿರುತ್ತವೆ. ಇವರ ಈ ಗುಣವೇ ಜನರಿಗೆ ಹೆಚ್ಚು ಇಷ್ಟವಾಗುವುದು. ಉದಾರವಾದ ಗುಣದಿಂದ ಜನರಿಗೆ ಸಹಾಯ ಮಾಡಲು ಸದಾ ಮುಂದಾಗುತ್ತಾರೆ. ಇತರರಿಗೆ ಸಹಾಯ ಮಾಡಲು ಇವರು ಯಾವುದೇ ರೀತಿಯಲ್ಲೂ ಭಯವನ್ನು ವ್ಯಕ್ತಪಡಿಸುವುದಿಲ್ಲ. ಇವರ ಈ ಗುಣಗಳಿಂದ ಜನರು ಇವರನ್ನು ಹೆಚ್ಚು ಪ್ರೀತಿಸುತ್ತಾರೆ.

ಸಪ್ಟೆಂಬರ್

ಸಪ್ಟೆಂಬರ್

ಈ ತಿಂಗಳಲ್ಲಿ ಜನಿಸಿದವರು ಅತ್ಯಂತ ಮುಕ್ತ ಮತ್ತು ಬುದ್ಧಿವಂತ ವ್ಯಕ್ತಿಗಳಾಗಿರುತ್ತಾರೆ. ಇವರು ತೆರೆದ ಮನಸ್ಸಿನಿಂದ ವಿವಿಧ ಸಮಸ್ಯೆಗಳ ಮೇಲೆ ತೀಕ್ಷ್ಣವಾದ ಚಿಂತನೆ ಹಾಗೂ ಪ್ರಕ್ರಿಯೆಯನ್ನು ಹೊಂದಿರುತ್ತಾರೆ. ಜನರು ನಿಮ್ಮೊಂದಿಗೆ ಮಾತನಾಡಲು ಉತ್ಕøಷ್ಟತೆಯನ್ನು ಹೊಂದಿರುತ್ತಾರೆ. ಇವರ ಹೊಸ ದೃಷ್ಟಿಕೋನಗಳ ಪ್ರಭಾವದಿಂದ ಜನರ ಮೆಚ್ಚುಗೆಗೆ ಒಳಗಾಗುತ್ತಾರೆ.

ಅಕ್ಟೋಬರ್

ಅಕ್ಟೋಬರ್

ಈ ತಿಂಗಳಲ್ಲಿ ಜನಿಸಿದವರು ಸದಾ ಜನರಿಗೆ ಗೌರವ ಮತ್ತು ಆರೈಕೆಯ ಚಿಕಿತ್ಸೆ ನೀಡಲು ಮುಂದಾಗಿರುತ್ತಾರೆ. ಇವರು ಇತರರ ಬಗ್ಗೆ ಯಾವುದೇ ನಿರ್ಧಾರ ಹಾಗೂ ತೀರ್ಪನ್ನು ನೀಡುವುದಿಲ್ಲ. ಜನರಿಗೆ ಉತ್ತಮ ಸ್ನೇಹಿತರಾಗಿ ಉಳಿಯಲು ಬಯಸುತ್ತಾರೆ. ಈ ಗುಣಗಳನ್ನು ಜನರು ಬಹಳ ಇಷ್ಟಪಡುತ್ತಾರೆ.

ನವೆಂಬರ್

ನವೆಂಬರ್

ಈ ತಿಂಗಳಲ್ಲಿ ಜನಿಸಿದವರು ಸಂಬಂಧಗಳಿಗೆ ಹೆಚ್ಚು ಬೆಲೆಯನ್ನು ನೀಡುತ್ತಾರೆ. ತಮ್ಮವರು ಎನಿಸಿಕೊಂಡವರಿಗೆ ಎಂತಹ ಸ್ಥಿತಿಯಲ್ಲಿದ್ದರೂ ಸಹಾಯ ಹಾಗೂ ಸಹಕಾರ ನೀಡಲು ಸಿದ್ಧರಾಗಿರುತ್ತಾರೆ. ಇವರ ಈ ಗುಣವು ಇತರರಿಗೆ ಹೆಚ್ಚು ಇಷ್ಟವಾಗುವುದು.

ಡಿಸೆಂಬರ್

ಡಿಸೆಂಬರ್

ಈ ತಿಂಗಳಲ್ಲಿ ಜನಿಸಿದವರು ಶಾಂತವಾದ ಉಪಸ್ಥಿತಿ ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ಇವರು ಉದ್ವಿಗ್ನತೆಯನ್ನು ಹೇಗೆ ನಿವಾರಿಸುವುದು ಎನ್ನುವುದನ್ನು ತಿಳಿದಿರುತ್ತಾರೆ. ಸುತ್ತಲಿರುವ ಜನರಿಗೆ ಸಮಾಧಾನ ಹಾಗೂ ಸಂತೋಷ ನೀಡಲು ಸಿದ್ಧರಿರುತ್ತಾರೆ. ಇವರ ಈ ಗುಣವು ಜನರ ಮೆಚ್ಚುಗೆಗೆ ಕಾರಣವಾಗುತ್ತದೆ.

English summary

Birth Month Reveals The Reason On Why People Love You

Every month has its own share of traits and personality definition. For e.g., individuals who are born in September are very smart and open-minded. With their open-mindedness, they tend to have a very intense thought process on various issues. On the other hand, people tend to enjoy talking to them, as they gain a new perspective on things every time.