Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಯಾವ್ಯಾವ ರಾಶಿಯವರಿಗೆ ಯಾವೆಲ್ಲಾ ಹವ್ಯಾಸವಿರುತ್ತದೆ ನೋಡಿ...
ಪ್ರತಿಯೊಬ್ಬ ವ್ಯಕ್ತಿಗೂ ಕೆಲವೊಂದು ಕೆಟ್ಟ ಹವ್ಯಾಸಗಳು ಹಾಗೂ ಕೆಲವು ಉತ್ತಮ ಹವ್ಯಾಸಗಳಿರುತ್ತವೆ. ಅವು ತಿನ್ನುವ ವಿಚಾರದಲ್ಲಿ ಇರಬಹುದು ಅಥವಾ ಓದುವ ವಿಚಾರವಾಗಿರಬಹುದು. ಇದೇ ಹವ್ಯಾಸ ಎಂದು ಹೇಳಲಾಗುವುದಿಲ್ಲ. ಯಾವುದೇ ಕೆಲಸ ಕಾರ್ಯಗಳು ಒಂದು ನಿಯಮದ ಹಂತದಲ್ಲಿ ಇದ್ದರೆ ಎಲ್ಲವೂ ಸೂಕ್ತವಾಗಿ ಇರುತ್ತದೆ. ಅದೇ ಹವ್ಯಾಸಗಳು ಅತಿರೇಖವಾಗಿದ್ದರೆ ಚಟ ಎನಿಸಿಕೊಳ್ಳುತ್ತದೆ.
ಪ್ರತಿಯೊಬ್ಬ ವ್ಯಕ್ತಿಯಲ್ಲೂ ಕೆಲವು ಹವ್ಯಾಸಗಳಿರುತ್ತವೆ. ಅದರಲ್ಲಿ ಕೆಲವು ಚಟವಾಗಿ ತಿರುಗಬಹುದು. ಇನ್ನೂ ಕೆಲವು ವ್ಯಕ್ತಿತ್ವದ ವಿಕಸನವನ್ನು ಉಂಟುಮಾಡಬಹುದು. ಅವೆಲ್ಲವೂ ನಮ್ಮ ಕುಂಡಲಿ ಹಾಗೂ ಗ್ರಹಗತಿಗಳ ಸಂಚಾರದಿಂದ ಕೂಡಿರುತ್ತದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ನಿಮಗೂ ನಿಮ್ಮ ರಾಶಿಚಕ್ರಕ್ಕೆ ಅನುಗುಣವಾಗಿ ಯಾವೆಲ್ಲಾ ಹವ್ಯಾಸಗಳು ನಿಮ್ಮಲ್ಲಿ ಅಡಗಿದೆ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ಮುಂದೆ ನೀಡಿರುವ ವಿವರಣೆಯನ್ನು ನೋಡಿ...

ಮೇಷ: ಅತಿಯಾದ ವೇಗ
ಈ ರಾಶಿಯವರು ಎಲ್ಲಾ ಕೆಲಸದಲ್ಲೂ ಅತಿಯಾದ ವೇಗವನ್ನು ಹೊಂದಿರುತ್ತಾರೆ. ಪ್ರತಿಯೊಂದು ಹೊಸ ಕೆಲಸ ಅಥವಾ ಸನ್ನಿವೇಶಗಳು ಏನೇ ಎದುರಾದರೂ ಬಹುಬೇಗ ಅದು ನಿವಾರಣೆಯನ್ನು ಹೊಂದಬೇಕೆನ್ನುವ ಆತುರದಲ್ಲಿ ಇರುತ್ತಾರೆ. ಇವರಿಗೆ ಇಷ್ಟವಾದ ವಿಚಾರ ಅಥವಾ ಬೇಕೆನಿಸಿದ ವಸ್ತು ಆ ಕ್ಷಣಕ್ಕೆ ಲಭಿಸಬೇಕೆನ್ನುವ ರೀತಿಯಲ್ಲಿ ವರ್ತಿಸುತ್ತಾರೆ. ಇದು ಕೆಲವೊಮ್ಮೆ ಇವರಿಗೆ ಒಳ್ಳೆಯ ಫಲಿತಾಂಶವನ್ನು ನೀಡಬಹುದು. ಆದರೆ ಕೆಲವೊಮ್ಮೆ ಆತುರದಿಂದ ಅವಾಂತರ ಸೃಷ್ಟಿಸುವ ಸಾಧ್ಯತೆಗಳಿರುತ್ತದೆ ಎನ್ನುವುದನ್ನು ಅರಿಯಬೇಕು.

ವೃಷಭ: ಅನಿಯಂತ್ರಿತ ಸೇವನೆ
ಈ ರಾಶಿಯವರು ಊಟ, ತಿಂಡಿ ಅಥವಾ ಆಹಾರವನ್ನು ಸೇವಿಸುವ ಪರಿಯಲ್ಲಿ ನಿಯಂತ್ರಣವನ್ನು ಹೊಂದಿರುವುದಿಲ್ಲ. ಇವರಿಗೆ ತಿನ್ನುವುದು ಒಂದು ಗೀಳಾಗಿರುತ್ತದೆ. ಸದಾ ಕಾಲ ಹುರಿದ ತಿನಿಸನ್ನು ತಿನ್ನುತ್ತಿರುತ್ತಾರೆ. ಇವರು ವಿಶೇಷ ತಿಂಡಿಯನ್ನು ಸೇವಿಸುವುದರಲ್ಲಿ ಖುಷಿಯನ್ನು ಹೊಂದಿರುತ್ತಾರೆ.

ಮಿಥುನ: ಜ್ಞಾನದ ವಿಸ್ತರಣೆ
ಈ ರಾಶಿಯವರಿಗೆ ಜ್ಞಾನದ ದಾಹ ಹೆಚ್ಚಾಗಿರುತ್ತದೆ ಎನ್ನಬಹುದು. ಇವರು ಪ್ರಪಂಚದಲ್ಲಿರುವ ವಿಚಾರವನ್ನು ತಿಳಿದುಕೊಳ್ಳುವುದು ಹಾಗೂ ಅದರಲ್ಲಿ ಹೊಸ ಪ್ರಪಂಚವನ್ನೇ ಕಾಣುವುದರ ಮೂಲಕ ಸಂತೋಷ ವ್ಯಕ್ತಪಡಿಸುತ್ತಾರೆ. ಇವರು ದಿನದಿಂದ ದಿನಕ್ಕೆ ಹೊಸ ವಿಚಾರವನ್ನು ತಿಳಿದುಕೊಳ್ಳುವುದು ಹಾಗೂ ಅದನ್ನು ಆನಂದಿಸುವುದರಲ್ಲಿಯೇ ಹೆಚ್ಚಿನ ಖುಷಿಯನ್ನು ಪಡುತ್ತಾರೆ.

ಕರ್ಕ: ಅತಿಯಾದ ಚಿಂತನೆ
ಇವರು ಎಲ್ಲಾ ವಿಚಾರಕ್ಕೂ ಅತಿಯಾದ ಚಿಂತನೆ ನಡೆಸುತ್ತಾರೆ. ಕೆಲವೊಮ್ಮೆ ಚಿಕ್ಕ ಪುಟ್ಟ ವಿಚಾರಕ್ಕೂ ಅತಿಯಾಗಿ ಚಿಂತಿಸಿದರೆ ಅದು ಅವರ ಅನಾರೋಗ್ಯಕ್ಕೂ ಕಾರಣವಾಗಬಹುದು. ಕೆಲವು ಕ್ಲಿಷ್ಟಕರವಾದ ಸಮಯದಲ್ಲಿ ಸನ್ನಿವೇಶಕ್ಕೆ ತಕ್ಕಂತೆ ನಡೆಸುವ ಅತಿಯಾದ ಚಿಂತನೆ ಸಕಾರಾತ್ಮಕ ಪರಿಹಾರವನ್ನು ನೀಡಬಹುದು. ಆದರೆ ಇಲ್ಲ ಸಲ್ಲದ ವಿಷಚಾರಗಳಿಗೆ ಅತಿಯಾದ ಚಿಂತನೆಯ ಅಗತ್ಯವಿರುವುದಿಲ್ಲ ಎನ್ನುವುದನ್ನು ಅರಿಯಬೇಕು.

ಸಿಂಹ: ಸ್ವಾಭಿಮಾನ
ಈ ರಾಶಿಯವರು ಅತಿಯಾದ ಸ್ವಾಭಿಮಾನವನ್ನು ಹೊಂದಿರುತ್ತಾರೆ. ತಾನೇ ಶ್ರೇಷ್ಠ ಹಾಗೂ ತನ್ನಿಂದಲೇ ಪ್ರಪಂಚ ನಡೆಯುತ್ತದೆ ಎನ್ನುವಂತಹ ಅತಿರೇಕವಾದ ಸ್ವಾಭಿಮಾನವನ್ನೂ ಸಹ ಹೊಂದಿರುವ ಸಾಧ್ಯತೆಗಳಿವೆ. ಕೆಲವೊಮ್ಮೆ ಇವರ ಈ ಗುಣವೇ ಇವರಿಗೆ ನಕಾರಾತ್ಮಕ ವರ್ತನೆಯನ್ನುಂಟುಮಾಡುವ ಸಾಧ್ಯತೆಗಳಿವೆ.

ಕನ್ಯಾ: ಸ್ವಚ್ಛತೆ
ಈ ರಾಶಿಯವರು ಅತ್ಯಂತ ಶುಚಿತ್ವದಲ್ಲಿ ಇರುವಂತೆ ಬಯಸುತ್ತಾರೆ. ಪ್ರತಿಯೊಂದು ವಿಷಯದಲ್ಲೂ ಅಚ್ಚುಕಟ್ಟನ್ನು ಬಯಸುತ್ತಾರೆ. ಇವರು ತಾವು ಇರುವ ಪ್ರದೇಶವನ್ನು ಸ್ವಚ್ಛವಾಗಿರುವಂತೆ ನೋಡಿಕೊಳ್ಳುವರು. ಇವರ ಈ ಸ್ವಚ್ಛತೆಯ ಗುಣವು ಕೆಲವೊಮ್ಮೆ ಗೀಳಾಗಿ ಪರಿವರ್ತನೆಗೊಳ್ಳುವ ಸಾಧ್ಯತೆಗಳಿವೆ.

ತುಲಾ: ಖರೀದಿ
ಇವರು ವಸ್ತುಗಳನ್ನು ಖರೀದಿಸುವುದು ಹಾಗೂ ಹೆಚ್ಚಿನ ಸಮಯವನ್ನು ಶಾಪಿಂಗ್ ಮಾಡುವುದಕ್ಕಾಗಿಯೇ ಮೀಸಲಿಡುತ್ತಾರೆ. ಹಾಗಾಗಿ ಇವರನ್ನು ಖರೀದಿ ಮಡುವುದರಲ್ಲಿ ನಿಸ್ಸೀಮರು ಎಂದು ಪ್ರಸಿದ್ಧಿ ಪಡೆದಿರುತ್ತಾರೆ. ಕೆಲವೊಮ್ಮೆ ಇವರಿಗೆ ಇಷ್ಟವಾದ ವಸ್ತುಗಳನ್ನು ಖರೀದಿಸುವ ಹುರುಪಲ್ಲಿ ಕೈಯಲ್ಲಿ ಇರುವ ಹಣ ಖರ್ಚಾಗಿರುವ ಪರಿವೂ ಇರುವುದಿಲ್ಲ ಎಂದು ಹೇಳಬಹುದು.

ವೃಶ್ಚಿಕ: ಭಾವೋದ್ರಿಕ್ತತೆ
ಇವರು ಭಾವೋದ್ರಿಕ್ತ ವ್ಯಕ್ತಿಗಳು ಎನ್ನಬಹುದು. ಇವರು ಭೌತಿಕ ಸಂಪರ್ಕವನ್ನು ಹೊಂದಲು ಇಚ್ಛಿಸುತ್ತಾರೆ. ಇವರು ಲೈಂಗಿಕ ವಿಚಾರದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ. ರಸಿಕ ಮನೋಭಾವದವರಾದ ಇವರು ಡೇಟಿಂಗ್ ಹೋಗುವುದು ಹಾಗೂ ವಿರುದ್ಧ ಲಿಂಗದವರೊಡನೆ ಸಮಯ ಕಳೆಯಲು ಬಯಸುತ್ತಾರೆ.

ಧನು: ಜೂಜು ಮತ್ತು ಅಪಾಯ
ಈ ರಾಶಿಯವರು ಧೈರ್ಯಶಾಲಿಯವರಾಗಿರುತ್ತಾರೆ. ಇದರಿಂದಾಗಿಯೇ ಜೀವನದಲ್ಲಿ ಕೆಲವೊಮ್ಮೆ ಒಳ್ಳೆಯ ತಿರುವನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ಆದರೆ ಇವರಲ್ಲಿ ಜೂಜಾಟ ಆಡುವಂತಹ ಕೆಟ್ಟ ಹವ್ಯಾಸಗಳಿರುತ್ತದೆ. ಇವರಲ್ಲಿ ಈ ಗುಣ ಮಿತಿಯಲ್ಲಿದ್ದರೆ ಅಂತಹ ಅಪಾಯವನ್ನು ಸೃಷ್ಟಿಸದೆ ಇರಬಹುದು. ಆದರೆ ಮಿತಿ ಮೀರಿದ ಜೂಜಾಟ ಹೆಚ್ಚಿನ ಅಪಾಯವನ್ನು ಸೃಷ್ಟಿಸುತ್ತದೆ ಎನ್ನುವುದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು.

ಮಕರ: ಉತ್ಪಾದಕರು
ಮಕರ ರಾಶಿಯವರು ಉತ್ಪಾದಕ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಇವರು ತಮ್ಮ ಪಾಲಿಗೆ ಬಂದ ಕೆಲಸವನ್ನು ಮುಗಿಸಲು ಎಲ್ಲವನ್ನೂ ಬಿಟ್ಟು ಸಹ ಕೆಲಸ ಮಾಡುತ್ತಾರೆ. ಈ ಬಗೆಯ ಪ್ರವೃತ್ತಿ ಕೆಲವೊಮ್ಮೆ ಉಜ್ವಲ ಭವಿಷ್ಯವನ್ನು ಸೃಷ್ಟಿಸಬಹುದು. ಆದರೆ ಕೆಲವೊಮ್ಮೆ ಅದೇ ಅವರ ವಿಪತ್ತಿಗೆ ಕಾರಣವಾಗಬಹುದು.

ಕುಂಬ: ಕುಡಿತ
ಇವರು ಆಯಾಸ ಗೊಂಡಾಗ, ಬೇಸರವುಂಟಾದಾಗ ಅಥವಾ ಸ್ನೇಹಿತರೊಂದಿಗೆ ಸೇರಿರುವಾಗ ಕುಡಿಯುವುದನ್ನು ಬಯಸುತ್ತಾರೆ. ಕೆಂಪು ವೈನ್‍ಗಳಂತಹ ಪಾನಿಯವನ್ನು ಹೆಚ್ಚು ಮೆಚ್ಚಿಕೊಳ್ಳುತ್ತಾರೆ. ಇದು ಅವರ ಮಿತಿ ಮೀರಿದಾಗ ಸುಧಾರಣೆ ಕಾಣದಂತಹ ಚಟವಾಗಿ ತಿರುಗುವ ಸಾಧ್ಯತೆಗಳಿವೆ.



Click it and Unblock the Notifications











