For Quick Alerts
ALLOW NOTIFICATIONS  
For Daily Alerts

24ರ ಹರೆಯದ ಈ ಕಲಾವಿದೆಯ ಸಾಧನೆಗೆ ಭೇಷ್ ಎನ್ನಲೇಬೇಕು!

By Deepu
|

ರಾಂಡ ಜರಾಲ್ಲಾಹ್ ಎಂಬಾಕೆ ಒಬ್ಬಳು ಕಾರ್ಯಕರ್ತೆಯಾಗಿದ್ದು, ತನ್ನ ಕಲೆಯಿಂದಲೇ ಎಲ್ಲವನ್ನು ವ್ಯಕ್ತಪಡಿಸುವವಳು. ಪ್ಯಾಲೆಸ್ತೇನ್ ನಲ್ಲಿ ಹುಟ್ಟಿರುವ 24ರ ಹರೆಯದ ಈಕೆ ಪ್ರತಿನಿತ್ಯವು ಗಲಭೆಗಳನ್ನು ನೋಡಿದಾಕೆ. ಇದನ್ನೇ ಆಕೆ ತನ್ನ ಕಲೆಯಲ್ಲಿ ಹೇಳಿಕೊಂಡವಳು. ರಾಂಡ್ ತನ್ನ ಸಣ್ಣ ವಯಸ್ಸಿನಲ್ಲೇ ಕಲಾವಿದೆಯಾಗುವ ಕನಸು ಕಂಡುಕೊಂಡಾಕೆ.

ಇದರಲ್ಲೇ ಆಕೆ ಜೀವನ ನಿರ್ವಹಣೆ ಕೂಡ ಮಾಡಿದಳು. ಆಕೆಯ ಸುಂದರ ಕಲೆಗಳ ಬಗ್ಗೆ ನೀವೇ ನೋಡಿ. ಅದರಲ್ಲಿ ನಿಂದನೆ ಮತ್ತು ವಿಶ್ವದೆಲ್ಲೆಡೆಯಲ್ಲಿ ಮಹಿಳೆಯರು ಅನುಭವಿಸುತ್ತಿರುವ ಸಂಕಷ್ಟವನ್ನು ವಿವರಿಸಲಾಗಿದೆ...

ಆಕೆಯ ಧ್ಯೇಯ

ಆಕೆಯ ಧ್ಯೇಯ

ಗಲಭೆ, ನೈಸರ್ಗಿಕ ವಿಕೋಪ ಮತ್ತು ಅಂತಾರಾಷ್ಟ್ರೀಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮಹಿಳೆಯರು ಹಾಗೂ ಹುಡುಗಿಯರಿಗೆ ಏನು ಅಗತ್ಯತೆ ಇದೆ ಎನ್ನುವ ಬಗ್ಗೆ ಜಾಗ್ರತಿ ಮೂಡಿಸುವುದೇ ಆಕೆಯ ಧ್ಯೇಯ.

 ಆಕೆಯ ಪ್ರೇರಣೆ

ಆಕೆಯ ಪ್ರೇರಣೆ

ಆಕೆಯ #ಮೀಟೂ ಅಭಿಯಾನವು ತುಂಬಾ ವೈರಲ್ ಆಗ ಬಳಿಕ ಆಕೆಗೆ ತುಂಬಾ ಪ್ರೇರಣೆ ಸಿಕ್ಕಿದೆ ಎಂದು ಆಕೆ ಸಂದರ್ಶನವೊಂದರಲ್ಲಿ ಹೇಳಿದ್ದಾಳೆ. ಲೈಂಗಿಕ ದೌರ್ಜನ್ಯದ, ಕಿರುಕುಳದ ಹೆಸರಿನಲ್ಲಿ ಮಹಿಳೆಯ ಮೌನ, ಹಲವಾರು ರೀತಿಯ ಆರೋಗ್ಯ ಮತ್ತು ಮಾನಸಿಕ ಸಮಸ್ಯೆಗಳನ್ನು ಆಕೆ ತನ್ನ ಕಲೆಯಲ್ಲಿ ಅಭಿವ್ಯಕ್ತಗೊಳಿಸಿದ್ದಾಳೆ.

ಆ್ಯಸಿಡ್ ದಾಳಿಯ ಸಂತ್ರಸ್ತರನ್ನು ಚಿತ್ರಿಸಿದಳು

ಆ್ಯಸಿಡ್ ದಾಳಿಯ ಸಂತ್ರಸ್ತರನ್ನು ಚಿತ್ರಿಸಿದಳು

ವಿಶ್ವದೆಲ್ಲೆಡೆಯಲ್ಲಿ ಮಹಿಳೆಯ ಮೇಲೆ ಮಾಡಲ್ಪಡುವಂತಹ ತುಂಬಾ ಹೀನಾಯ ದಾಳಿಯೆಂದರೆ ಅದು ಆ್ಯಸಿಡ್ ದಾಳಿ. ಆಕೆಯ ಕಲೆಯಲ್ಲಿ ಆ್ಯಸಿಡ್ ಮಹಿಳೆಯ ಚರ್ಮವನ್ನು ಹೇಗೆ ಕರಗಿಸುವುದು ಮತ್ತು ಅದು ಸಂತ್ರಸ್ತೆಯ ಮೂಳೆಗೆ ಹೇಗೆ ಸಾಗಿ ಶಾಶ್ವತ ಅಂಗವೈಕಲ್ಯ ಮತ್ತು ದೈಹಿಕ ಹಾಗೂ ಮಾನಸಿಕ ದಾಳಿ ಹೇಗೆ ಮಾಡುತ್ತದೆ ಎಂದು ಇದರಲ್ಲಿ ವಿವರಿಸಲಾಗಿದೆ.

ಮಕ್ಕಳ ನಿಂದನೆ

ಮಕ್ಕಳ ನಿಂದನೆ

ಮಕ್ಕಳಿಂದ ಅವರ ಮುಗ್ದತೆಯನ್ನು ದರೋಡೆ ಮಾಡುವುದು ನಿಂದನೆ. ಮಕ್ಕಳಿಗೆ ಕೇವಲ ದೈಹಿಕ ನಿಂದನೆ ಮಾತ್ರವಲ್ಲ, ಇದು ಬೇರೆ ರೀತಿಯ ನಿಂದನೆ ಕೂಡ ಆಗಿರಬಹುದು. ಇದರಿಂದಾಗಿ ಮಕ್ಕಳ ಮನಸ್ಸಿನ ಮೇಲೆ ಜೀವನಪೂರ್ತಿ ಗಾಯವಾಗುವುದು.

ಮಹಿಳೆಯ ಜನನಾಂಗ ಊನಗೊಳಿಸುವುದು

ಮಹಿಳೆಯ ಜನನಾಂಗ ಊನಗೊಳಿಸುವುದು

ಇದು ದೊಡ್ಡ ಮಟ್ಟದ ಕ್ರೌರ್ಯ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿದೆ. ಆದರೆ ಆಫ್ರಿಕಾ ಮತ್ತು ಬೇರೆ ಕೆಲವೊಂದು ದೇಶಗಳಲ್ಲಿ ಈ ಸಂಪ್ರದಾಯ ಈಗಲೂ ಇದೆ. 2030ರ ವೇಳೆಗೆ ಈ ಸಂಪ್ರದಾಯವನ್ನು ಪೂರ್ತಿಯಾಗಿ ಕೊನೆಗೊಳಿಸುವುದಾಗಿ ಆಕೆ ಹೇಳುತ್ತಾಳೆ.

ಋತುಚಕ್ರದ ವಿಚಾರ

ಋತುಚಕ್ರದ ವಿಚಾರ

ವಿಶ್ವದೆಲ್ಲೆಡೆಯಲ್ಲಿ ಋತುಚಕ್ರದ ವಿಚಾರವನ್ನು ನಿಷಿದ್ಧವಾಗಿ ನೋಡಲಾಗುತ್ತದೆ. ಈ ಕಲೆಯಿಂದ ಮಹಿಳೆಯು ಪ್ರತೀ ತಿಂಗಳು ಯಾವ ರೀತಿಯ ಸಂಕಷ್ಟಕ್ಕೆ ಒಳಗಾಗುತ್ತಾಳೆ ಎನ್ನುವುದನ್ನು ಆಕೆ ವಿಶ್ವಕ್ಕೆ ತೋರಿಸಿಕೊಟ್ಟಿದ್ದಾಳೆ. ಆಕೆಯ ಇನ್ನೂ ಹೆಚ್ಚಿನ ಕಲೆಗಳನ್ನು ನೋಡಲು ಇನ್ ಸ್ಟಾಗ್ರಾಂ ಪೇಜ್ ನೋಡಿ.

English summary

An Artist Shows The Different Ways Women Undergo Violence

A makeup artist named Rand Jarallah is an activist who uses makeup as her preferred medium of expression. She is just 24 years old, born and raised in Palestine. Apparently, her life struggle of growing up with witnessing conflicts as a daily experience are depicted in her art. Ms Rand, from an early age found her outlet and relief from living under occupation in art. Check out the beautiful makeup art depicted by her, as each picture depicts a story about the abuse and struggle of women around the world.
Story first published: Saturday, March 31, 2018, 17:25 [IST]
X
Desktop Bottom Promotion