ಈ 5 ರಾಶಿಯವರು ತುಂಬಾನೇ ಸ್ಟ್ರಿಕ್ಟ್! ತಪ್ಪು ಮಾಡಿದವರನ್ನು ಎಂದಿಗೂ ಕ್ಷಮಿಸುವುದಿಲ್ಲ

Posted By: Deepu
Subscribe to Boldsky

ಕೆಲವರಿಗೆ ತಪ್ಪು ಮಾಡುವುದು ಹಾಗೂ ಅದಕ್ಕೆ ಕ್ಷಮೆ ನೀಡುವುದು ಎಂದರೆ ಆಗದು. ತಪ್ಪು ಮಾಡಿ ಕ್ಷಮೆ ಯಾಚಿಸುವುದರ ಬಗ್ಗೆ ಅವರು ವಿರೋಧವನ್ನು ವ್ಯಕ್ತಪಡಿಸುತ್ತಾರೆ. ಇದರರ್ಥ ಅವರು ತಪ್ಪೇ ಮಾಡುವುದಿಲ್ಲ ಎಂದರ್ಥವಲ್ಲ. ಬದಲಿಗೆ ತಮ್ಮ ಮನಸ್ಸಿಗೆ ನೋವುಂಟುಮಾಡಿದ ವ್ಯಕ್ತಿಗಳಿಗೆ ಕ್ಷಮೆ ನೀಡಬಾರದು ಎನ್ನುವ ಉದ್ದೇಶವಾಗಿರುತ್ತದೆ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರದವರು ಕೆಲವು ಗುಣಲಕ್ಷಣಗಳನ್ನು ವಿಶೇಷವಾಗಿ ಹೊಂದಿರುತ್ತಾರೆ. ಅದರಲ್ಲಿ ತಪ್ಪು ಮಾಡಿದವರಿಗೆ ಕ್ಷಮೆ ನೀಡದೆ ಇರುವ ಗುಣವೂ ಒಂದು. ಇವರಿಗೆ ಮನಸ್ಸಿಗೆ ಒಮ್ಮೆ ಒಬ್ಬವ್ಯಕ್ತಿಯಿಂದ ನೋವು ಉಂಟಾಯಿತು ಎಂದರೆ ಅದನ್ನು ಅವರು ಬಹಳ ಸುಲಭವಾಗಿ ಮರೆಯುವುದಿಲ್ಲ. ಬದಲಿಗೆ ಅದನ್ನು ಅವರು ಮನಸ್ಸಿನಲ್ಲಿ ದೀರ್ಘಕಾಲದವರೆಗೆ ಇಟ್ಟುಕೊಳ್ಳುತ್ತಾರೆ. ನಿಮ್ಮಲ್ಲೂ ಈ ಗುಣ ಇದೆ ಅಥವಾ ನಿಮ್ಮವರು ಯಾರಾದರೂ ಈ ರೀತಿ ವರ್ತಿಸುತ್ತಾರೆ ಎಂದಾದರೆ ಅವರು ಈ ಮುಂದೆ ವಿವರಿಸಿರುವ ರಾಶಿಚಕ್ರದವರಲ್ಲಿ ಒಬ್ಬರಾಗಿರಬಹುದು... 

ವೃಷಭ

ವೃಷಭ

ಮೊಂಡುತನದ ಸ್ವಭಾವದವರಾದ ಈ ವ್ಯಕ್ತಿಗಳಲ್ಲಿ ಕ್ಷಮೆ ಯಾಚಿಸಿದರೆ ಇವರು ಮೊಂಡುತನದ ಸ್ವಭಾವದಿಂದಲೇ ಬಹು ಬೇಗ ಕ್ಷಮೆಯನ್ನು ನೀಡುವುದಿಲ್ಲ. ಬದಲಿಗೆ ಅಂತಹ ಸಮಯದಲ್ಲಿ ಸುಳ್ಳು ಹೇಳುವ ಸಾಧ್ಯತೆಗಳಿರುತ್ತವೆ. ಹಾಗಂತ ಇವರು ತಕ್ಷಣವೇ ಸೇಡು ತೀರಿಸಿಕೊಳ್ಳುವ ಪ್ರವೃತ್ತಿಯವರೂ ಅಲ್ಲ. ಇತರರಿಗೆ ಹಾನಿ ಉಂಟುಮಾಡುವುದನ್ನು ಇವರು ಇಷ್ಟಪಡುವುದಿಲ್ಲ.

ಸಿಂಹ

ಸಿಂಹ

ಈ ವ್ಯಕ್ತಿಗಳು ಇತರರನ್ನು ಅಷ್ಟು ಸುಲಭವಾಗಿ ಕ್ಷಮಿಸುವುದಿಲ್ಲ. ಇವರು ತಮ್ಮನ್ನು ತಾವು ಪರಿಪೂರ್ಣರು ಎಂದು ಪರಿಗಣಿಸುತ್ತಾರೆ. ಇವರು ಕೆಲವು ಸಂದರ್ಭದಲ್ಲಿ ಹೆಚ್ಚು ದುಃಖಕ್ಕೆ ಒಳಗಾಗುತ್ತಾರೆ. ಸಮಸ್ಯೆಯನ್ನು ದ್ವಿಗುಣ ಗೊಳಿಸಲು ಬಯಸುವರು. ಇವರು ಕ್ಷಮಿಸುವ ಪದವನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳದ ವ್ಯಕ್ತಿಗಳು.

 ಕನ್ಯಾ

ಕನ್ಯಾ

ಈ ರಾಶಿಯವರು ತಾವು ಇಷ್ಟಪಡುವ ವ್ಯಕ್ತಿಗಳ ಬಗ್ಗೆ ಮಿತಿಮೀರಿ ಯೋಚಿಸುತ್ತಾರೆ. ಅನಿವಾರ್ಯ ಗೊಂದಲಕ್ಕೆ ಒಳಗಾದಾಗ ಅಥವಾ ಯಾವುದೋ ತಪ್ಪುಗಳಿಂದಾಗಿ ಇವರಲ್ಲಿ ಕ್ಷಮೆ ಯಾಚಿಸಿದರೆ ಇವರು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಇವರು ಅದನ್ನೊಂದು ಶಿಕ್ಷೆ ಎನ್ನುವ ರೀತಿಯಲ್ಲಿ ಪರಿಗಣಿಸುವರು. ಕ್ಷಮೆ ನೀಡದೆ ಇದ್ದರೆ ಅವರಿಗೆ ಸೂಕ್ತ ರೀತಿಯ ಶಿಕ್ಷೆ ಆಗುವುದು ಎಂದು ತಿಳಿದುಕೊಳ್ಳುವರು.

ವೃಶ್ಚಿಕ

ವೃಶ್ಚಿಕ

ಈ ವ್ಯಕ್ತಿಗಳು ಕ್ಷಮಾಪಣೆಯನ್ನು ನಿರೀಕ್ಷಿಸುವುದಿಲ್ಲ. ಇವರು ವಿಷಯವನ್ನು ಅಗತ್ಯವಿರುವುದಕ್ಕಿಂತಲೂ ಹೆಚ್ಚಾಗಿ ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಾರೆ. ತಮ್ಮ ಯೋಜನೆಗಳು ರದ್ದುಗೊಳಿಸಿದರೆ ಅಥವಾ ಪ್ರಮುಖ ಘಟನೆಗಳನ್ನು ನವೀಕರಿಸಲು ವಿಫಲರಾದಾಗ ನೋವಿಗೆ ಒಳಗಾಗುತ್ತಾರೆ. ಜೊತೆಗೆ ಈ ನೋವಿಗೆ ಕಾರಣರಾದವರನ್ನು ಅಷ್ಟು ಸುಲಭವಾಗಿ ಕ್ಷಮೆಯನ್ನು ನೀಡುವುದಿಲ್ಲ. ಇವರ ಮನಸ್ಸು ಸ್ವಯಂಚಾಲಿತವಾಗಿ ಸನ್ನಿವೇಶಕ್ಕೆ ಅನುಗುಣವಾಗಿ ತಿರುಗುತ್ತದೆ. ಸಂಬಂಧ ಅಥವಾ ಸ್ನೇಹಕ್ಕಾಗಿ ಸುಳ್ಳು ಹೇಳಿದವರನ್ನು ಇವರು ಎಂದಿಗೂ ಕ್ಷಮಿಸುವುದಿಲ್ಲ.

ಮಕರ

ಮಕರ

ಈ ರಾಶಿಚಕ್ರದವರು ಕ್ಷಮೆ ನೀಡಲು ಹೆಚ್ಚು ನಟನೆ ಮಾಡುತ್ತಾರೆ. ನಿಜವಾಗಿಯೂ ಇವರು ಕ್ಷಮೆಯನ್ನು ನೀಡುವುದಿಲ್ಲ. ತಪ್ಪು ಮಾಡಿದ ವ್ಯಕ್ತಿಯ ತಪ್ಪು ಏನು ಎನ್ನುವುದು ಇವರಿಗೆ ಅರಿವಿರುತ್ತದೆ. ಅಂತಹ ಸಂದರ್ಭದಲ್ಲಿ ತಪ್ಪು ಮಾಡಿದವರಿಗೆ ಅವರ ತಪ್ಪು ಏನು ಎನ್ನುವುದು ಎಷ್ಟು ಅರಿವು ಮೂಡಿಸಲು ಸಾಧ್ಯವಾಗುವುದೋ ಅಷ್ಟು ಅರಿವು ಮೂಡಿಸಲು ಪ್ರಯತ್ನಿಸುತ್ತಾರೆ. ಹಾಗಾಗಿ ವ್ಯಕ್ತಿಯನ್ನು ಅಷ್ಟು ಸುಲಭವಾಗಿ ಕ್ಷಮಿಸುವುದಿಲ್ಲ.

English summary

5 Zodiac Signs Who Will Never Ever Forgive You

Zodiac Signs Who Will Never Ever Forgive You Can you imagine that there are those individuals who do not forget what has happened to them in the past, or are not willing to forgive and forget the things that have hurt them the most? Well, according to astrology, there are those individuals who are best known for not forgiving and forgetting of what has happened to them. In this article, we have listed those zodiac signs which are known as the zodiac signs that will never forgive. Check out if your favourite zodiac sign is also listed below.