For Quick Alerts
ALLOW NOTIFICATIONS  
For Daily Alerts

  ನೋಡಿ, ಈ ಐದು ರಾಶಿಯವರು ಅತಿಯಾಗಿ ವಾದ ಮಾಡುತ್ತಾರಂತೆ!

  By Deepu
  |

  ನಿಮ್ಮ ಮನೆಯಲ್ಲಿ ಅಥವಾ ಗೆಳೆಯರಲ್ಲಿ ಯಾರಾದರೂ ತುಂಬಾ ವಾದ ಮಾಡುವುದು ನಿಮಗೆ ಕಂಡುಬರುತ್ತಿದೆಯೇ? ಅವರು ತಮ್ಮ ಅಭಿಪ್ರಾಯವನ್ನು ಮಂಡಿಸಲು ಎಷ್ಟು ಬೇಕಾದರೂ ವಾದಿಸಬಹುದು. ಆದರೆ ಇದಕ್ಕೆ ಪ್ರಮುಖ ಕಾರಣವೆಂದರೆ ಅವರ ರಾಶಿಚಕ್ರ. ಹೌದು, ಕೆಲವರಿಗೆ ಜನ್ಮರಾಶಿಯಿಂದಾಗಿಯೇ ವಾದಿಸುವಂತಹ ಗುಣಗಳು ಬಂದಿರುವುದು. ಇದನ್ನು ಅವರು ಬಿಟ್ಟರೂ ಬಿಟ್ಟುಹೋಗದು. ಇವರು ತಾಳ್ಮೆ ಕಳೆದುಕೊಳ್ಳುವುದು ಕೂಡ ಬೇಗ. ಇಂತಹ ಐದು ರಾಶಿಗಳ ಬಗ್ಗೆ ನೀವು ಈ ಲೇಖನದಲ್ಲಿ ತಿಳಿದುಕೊಳ್ಳಿ....

  ವೃಶ್ಚಿಕ:ಅ. 23-ನ.21

  ವೃಶ್ಚಿಕ:ಅ. 23-ನ.21

  ಇವರು ದೊಡ್ಡ ಹೋರಾಟಗಾರರಲ್ಲ. ಆದರೆ ಅವರಿಗೆ ನಿವೇನಾದರೂ ತಪ್ಪು ಮಾಡಿದ್ದೀರಿ ಅಥವಾ ರಕ್ಷಣಾ ವಲಯದ ಮೇಲೆ ದಾಳಿ ಮಾಡಿದ್ದೀರಿ ಎಂದು ಅನಿಸಿದರೆ ಆಗ ನೀವು ಏನು ತಪ್ಪು ಮಾಡುತ್ತಿದ್ದೀರಿ ಎಂದು ನಿಮಗೆ ಮನವರಿಕೆ ಮಾಡಿಕೊಡುವರು. ನೀವು ತಪ್ಪು ಮಾಡಿದ್ದೀರಿ ಎಂದು ಮನವರಿಕೆ ಮಾಡಿಕೊಳ್ಳುವ ಮೊದಲೇ ಅವರ ವಾದವು ಶೂನ್ಯದಿಂದ 60ರ ತನಕ ತಲುಪುವುದು. ನೀವು ವಾದ ಕೊನೆಗೊಳಿಸುವಂತೆ ಅವರು ಮಾಡಬಹುದು. ಇದರಿಂದ ನಿಮಗೆ ತುಂಬಾ ನೋವಾಗಲೂ ಬಹುದು. ನೀವೇನಾದರೂ ತಪ್ಪು ಮಾಡಿದ್ದರೆ ಆಗ ಶಾಂತವಾಗಿರುವುದೇ ಒಳ್ಳೆಯದು. ಇನ್ನು ವೃಶ್ಚಿಕ ರಾಶಿಯವರು ತುಂಬಾ ಬದ್ಧತೆ ಇರುವವರು ಮತ್ತು ಅವರಿಗೆ ತಮ್ಮ ಕೆಲಸದ ಬಗ್ಗೆ ಉತ್ಸಾಹ ಇರುವುದು. ಅವರು ಮಾಡುವಂತಹ ಯಾವುದೇ ಕೆಲಸದಲ್ಲಾದರೂ ಅವರು ಭಾವನಾತ್ಮಕವಾಗಿ ತೊಡಗಿಕೊಳ್ಳುವರು. ಇದರಿಂದಾಗಿ ಅವರು ಮಾಡುವಂತಹ ಪ್ರತಿಯೊಂದು ಕೆಲಸವು ಅದ್ಭುತವಾಗಿರುವುದು. ಅವರಲ್ಲಿ ಯಾವತ್ತೂ ಹೋರಾಡುವಂತಹ ಛಾತಿ ಇರುವುದು. ಸೋಲೊಪ್ಪಿಕೊಳ್ಳುವುದು ಅವರ ಜಾಯಮಾನದಲ್ಲೇ ಇಲ್ಲ. ತಮ್ಮ ಗುರಿ ಮುಟ್ಟಲು ಅವರಿಗೆ ವಿಳಂಬ ಅಥವಾ ಅಡೆತಡೆಯುಂಟಾದರೆ ಅವರು ಚಿಂತಿಸಲ್ಲ. ಅವರು ಯಾವಾಗಲೂ ತಮ್ಮ ಗುರಿ ತಲುಪಲು ಪ್ರಯತ್ನಿಸುತ್ತಲೇ ಇರುವರು. ಈ ರಾಶಿಯವರನ್ನು ಒಂದೇ ಪದದಲ್ಲಿ ಹೇಳುವುದಾದರೆ ಇವರು ತುಂಬಾ ಸ್ವಾವಲಂಬಿಗಳು. ಈ ರಾಶಿಯವರು ತಮ್ಮ ಕೆಲಸಕ್ಕಾಗಿ ಬೇರೆ ಯಾರನ್ನೂ ನಂಬಿ ಕೂರಲ್ಲ. ಅವರು ತಾವಾಗಿಯೇ ಕೆಲಸ ಮಾಡುವರು ಮತ್ತು ತಮಗೆ ಸಾಧ್ಯವಿರುವುದನ್ನು ಸಾಧಿಸಿಯೇ ತೀರುವರು.

  ವೃಷಭ: ಎಪ್ರಿಲ್ 20-ಮೇ 20

  ವೃಷಭ: ಎಪ್ರಿಲ್ 20-ಮೇ 20

  ವೃಷಭ ರಾಶಿಯವರು ಜನ್ಮತಃ ಹೋರಾಟಗಾರರಲ್ಲ. ಯಾರಾದರೂ ಅವರನ್ನು ಪೀಡಿಸಿದರೆ ಮಾತ್ರ ಜಗಳ ಮಾಡುವರು. ತಾವಾಗಿಯೇ ಜಗಳಕ್ಕೆ ಹೋಗುವವರಲ್ಲ. ನಿಮಗೆ ಅವರೊಂದಿಗೆ ಯಾವುದೇ ರೀತಿಯ ಮನಸ್ತಾಪವಿದ್ದರೆ ಆಗ ನೀವು ಶಾಂತವಾಗಿರಿ. ತಾವು ತಪ್ಪು ಮಾಡಿದ್ದೇವೆಂದು ಅವರು ಯಾವಾಗ ಒಪ್ಪಿಕೊಳ್ಳುತ್ತಾರೆಂದು ಹೇಳುವುದು ಕಷ್ಟ. ಯಾಕೆಂದರೆ ತಾವು ತಪ್ಪು ಮಾಡುವುದೇ ಅಪರೂಪವೆಂದು ಅವರು ಭಾವಿಸಿರುವರು. ಇನ್ನೊಂದು ಬದಿಯಲ್ಲಿ ಅವರು ತಮ್ಮ ವಾದದಲ್ಲಿ ತುಂಬಾ ಆತ್ಮವಿಶ್ವಾಸದಿಂದ ಇರುವರು ಮತ್ತು ತಾವು ಮಾಡಿದ್ದು ಸರಿ ಎನ್ನಬಹುದು. ಇಂತಹ ರಾಶಿಯವರ ಜತೆಗೆ ವಾದ ಮಾಡುವಾಗ ಎಚ್ಚರ ವಹಿಸಿ. ಇನ್ನು ಈ ರಾಶಿಯವರು ವೃಷಭ ಚಿಹ್ನೆಯು ಮೊಂಡುತನ ಮತ್ತು ಅಸೂಯೆಗೆ ಹೆಸರುವಾಸಿಯಾಗಿದೆ. ಈ ರಾಶಿಚಕ್ರದ ಜನರು ಯಾವುದೇ ಬೆಲೆಗೆ ತಮ್ಮ ಸ್ಥಿತಿಯ ಭಾಗವನ್ನು ನಿರ್ವಹಿಸುತ್ತಾರೆ. ಇವರು ಆಳವಾಗಿ ನಿಷ್ಠರಾಗಿರುವ ಜನರೊಂದಿಗೆ ಅಗಾಧವಾಗಿ ವರ್ತಿಸುತ್ತಾರೆ.

  ಸಿಂಹ: ಜುಲೈ 23-ಆ.22

  ಸಿಂಹ: ಜುಲೈ 23-ಆ.22

  ಇವರು ತುಂಬಾ ಸಿಡಿದುಬೀಳುವವರು. ಇವರು ನಿಮ್ಮ ಗೆಳೆಯರಾಗಿದ್ದರೂ ಸಹಿತ ಒಂದು ವಿಧದಲ್ಲಿ ಇವರು ನಿಮ್ಮ ಶತ್ರುಗಳಾಗಿರುವರು. ನಿಮಗೆ ಅವರೊಂದಿಗೆ ಯಾವುದೇ ರೀತಿಯ ಮನಸ್ತಾಪವಿದ್ದರೆ, ಅದನ್ನು ಸುಲಭವಾಗಿ ಪರಿಹರಿಸಬಹುದಾಗಿದ್ದರೂ ಈ ರಾಶಿಯವರು ಮಾತ್ರ ಅದನ್ನು ಬಹುದೊಡ್ಡ ವಿಷಯವೆಂದು ವಾದಿಸುವರು. ಇವರೊಂದಿಗೆ ಮಾತನಾಡುವಾಗ ನೀವು ಬೈಗುಳ ಎದುರಿಸಬಹುದು ಅಥವಾ ಮುಖದ ಮೇಲೆ ಹೊಡೆದಂತೆ ಮಾತನಾಡಬಹುದು. ನಿಮ್ಮನ್ನು ರಕ್ಷಿಸಿಕೊಳ್ಳಲು ಹೆಚ್ಚು ಪ್ರಯತ್ನಿಸಿದಷ್ಟು ಈ ವಾದವು ಮತ್ತಷ್ಟು ಕ್ಲಿಷ್ಟವಾಗುತ್ತಾ ಹೋಗುವುದು. ಅವರೊಂದಿಗೆ ಮಾತನಾಡುವಾಗ ನಿಮ್ಮ ಭಾವನೆಗಳನ್ನು ಕಟ್ಟಿಹಾಕಿಕೊಳ್ಳಬೇಕು ಮತ್ತು ಮುಂದಿನ ಸಲ ಇಂತಹ ವಾಗ್ವಾದ ಎದುರಾಗದಂತೆ ನೋಡಿಕೊಳ್ಳಬೇಕು. ಇನ್ನು ಚತುರತೆಯ ರಾಜ ಸಿಂಹ ಅತ್ಯಂತ ಬುದ್ಧಿವಂತ ರಾಶಿ ಚಿಹ್ನೆ. ಅವರು ತಮ್ಮ ಅಂತರ್ದೃಷ್ಟಿಯಿಂದ ಮತ್ತು ಅವರ ಮಹಾನ್ ಕುತಂತ್ರದಿಂದ ನಿಯಂತ್ರಿಸುತ್ತಾರೆ. ಪ್ರತೀ ವಿಷಯದಲ್ಲಿ ತಮ್ಮ ಗುರಿಗಳನ್ನು ತಲುಪುವಲ್ಲಿ ಅವರಿಗೆ ಹೆಚ್ಚಿನ ಸಮಯವನ್ನು ನೀಡುತ್ತಾರೆ. ಸಿಂಹ ರಾಶಿಯವರು ಯಾವುದೇ ಅಡಚಣೆಗೆ ಶರಣಾಗುವುದಿಲ್ಲ. ಇವರು ಸದಾ ಹೋರಾಟದ ಬುದ್ಧಿಯನ್ನು ಹೊಂದಿರುತ್ತಾರೆ. ಸಿಂಹ ರಾಶಿಯವರು ಟೀಕೆಗಳನ್ನು ಒಪ್ಪಿಕೊಳ್ಳುವುದಿಲ್ಲ. ತಮ್ಮ ಸ್ವಂತ ಆಲೋಚನೆಗಳನ್ನು ರಕ್ಷಿಸಲು ಅವರು ಧೈರ್ಯವನ್ನು ಹೊಂದಿರುತ್ತಾರೆ. ಅದಕ್ಕಾಗಿಯೇ ಅವರು ಇತರರಿಗೆ ಮನವೊಲಿಸುವಲ್ಲಿ ಮಹತ್ತರರಾಗಿರುತ್ತಾರೆ. ಅವರು ಉತ್ತಮ ಭಾಷಣಕಾರರು ಮತ್ತು ರಾಜಕಾರಣಿಗಳು ಆಗಿರುತ್ತಾರೆ.

  ಕರ್ಕಾಟಕ: ಜೂನ್ 21- ಜುಲೈ22

  ಕರ್ಕಾಟಕ: ಜೂನ್ 21- ಜುಲೈ22

  ಇವರು ತುಂಬಾ ಮೌನಿ ಅಥವಾ ಭಾವನಾತ್ಮಕವಾಗಿ ತುಂಬಾ ಜಾಣರಾಗಿರುವರು. ಇವರ ಭಾವನೆಗಳು ತುಂಬಾ ಆಳಮನಸ್ಸಿನಿಂದ ಬರುವಂತದ್ದಾಗಿದೆ. ಯಾವುದೇ ಸೂಕ್ಷ್ಮ ವಿಚಾರಗಳ ಬಗ್ಗೆ ಇವರೊಂದಿಗೆ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು. ಯಾಕೆಂದರೆ ಒಮ್ಮೆ ನೀವು ಇವರ ಭಾವನೆಗಳಿಗೆ ಘಾಸಿ ಉಂಟು ಮಾಡಿದರೆ ಅವರು ನಿಮ್ಮ ವಿರುದ್ಧ ಹೋರಾಡುವರು. ತಿಂಗಳು, ವರ್ಷಗಳು ಉರುಳಿದರೂ, ಆ ಜಗಳವು ಇತ್ಯರ್ಥವಾಗಿದ್ದರೂ ಅವರು ಮಾತ್ರ ನೀವು ನೋವು ಮಾಡಿದಂತಹ ಕ್ಷಣದ ಬಗ್ಗೆ ನೆನಪಿಸುತ್ತಾ ಇರುವರು. ಅವರು ಎಷ್ಟು ಶಾಂತರಾಗಿ ಕಂಡರೂ ಅವರೊಂದಿಗೆ ಮಾತನಾಡುವಾಗ ತುಂಬಾ ಎಚ್ಚರದಿಂದ ಇರುವುದು ಒಳ್ಳೆಯದು.

  ಮಿಥುನ: ಮೇ 21-ಜೂನ್ 20

  ಮಿಥುನ: ಮೇ 21-ಜೂನ್ 20

  ಇವರು ಹೋರಾಟಗಾರರಲ್ಲ. ಆದರೆ ತಮ್ಮ ಪ್ರತಿಕ್ರಿಯೆ ನಿರೀಕ್ಷಿಸಲು ಬಂದಾಗ ಅವರ ವ್ಯಕ್ತಿತ್ವ ಭಿನ್ನವಾಗುವುದು. ಅವರ ಪ್ರತಿಕ್ರಿಯೆ ಮತ್ತು ವಾದವು ಸಂಪೂರ್ಣವಾಗಿ ಅವರ ಮನಸ್ಥಿತಿ ಮೇಲೆ ಅವಲಂಬಿತವಾಗಿರುವುದು. ಒಂದೇ ವಿಚಾರದ ಬಗ್ಗೆ ಅವರು ಎರಡು ರೀತಿ ವಾದಿಸಬಹುದು. ಇಂತಹ ರಾಶಿಯವರ ಜತೆಗೆ ನೀವು ಯಾವುದೇ ವಾದ ಮಂಡಿಸಲು ಮುಂದಾದಾಗ ಎರಡು ರೀತಿಯ ಫಲಿತಾಂಶ ಬರುವುದು ಎಂಬುವುದಕ್ಕೆ ತಯಾರಾಗಿರಬೇಕು. ಇದರಿಂದ ನೀವು ವಾದ ಮಾಡುವ ಮೊದಲು ಸರಿಯಾಗಿ ತಯಾರಾಗಿರಿ.ಇನ್ನು ಈ ರಾಶಿಯಲ್ಲಿ ಜನಸಿದ ವ್ಯಕ್ತಿಗಳಿಗೆ ಬುಧಗ್ರಹ ಅಧಿಪತಿಯಾಗಿದ್ದಾನೆ. ಬುಧ ಸಂವಹನದ ಗ್ರಹವಾಗಿದ್ದು ಅವಳಿಗಳ ಒಡೆಯನೂ ಆಗಿರುವ ಕಾರಣ ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಉತ್ತಮ ವಾಗ್ಮಿಗಳೂ, ಸುಲಭವಾಗಿ ನಗೆಚಟಾಕಿ ಹಾರಿಸುವವರೂ ಹಾಗೂ ಜಾಣರೂ ಆಗಿರುತ್ತಾರೆ. ಇವರು ಗಣಿತದಲ್ಲಿ ಉತ್ತಮರಾಗಿದ್ದು ವಾಣಿಜ್ಯ ವಹಿವಾಟುದಾರದು, ಲೆಕ್ಕಪರಿಶೀಲಿಕರು, ಭೌತವಿಜ್ಞಾನಿ ಹಾಗೂ ಬ್ಯಾಂಕ್ ಮ್ಯಾನೇಜರ್ ಹುದ್ದೆಗಳನ್ನು ಸಫಲವಾಗಿ ನಿರ್ವಹಿಸುವವರಾಗಿರುತ್ತಾರೆ. ಈ ರಾಶಿಯಲ್ಲಿ ಜನಿಸಿದ ಖ್ಯಾತ ವ್ಯಕ್ತಿಗಳು: ಡೇನಿಯಲ್ ಫ್ಯಾರೆನ್ ಹೀಟ್ (ಡಿಗ್ರಿ ಎಫ್ ತಾಪಮಾನದ ಸೂಚಿ ನೀಡಿದವರು) ಫ್ರಾನ್ಸಿಸ್ ಕ್ರಿಕ್ (ಡಿ ಎನ್ ಎ ರಚನೆಯನ್ನು ಕಂಡುಹಿಡಿದವರು), ಮೇರಿ ಆನಿಂಗ್ (ಖ್ಯಾತ ಪ್ರಾಕ್ತನಶಾಸ್ತ್ರಜ್ಞೆ), ಜೇಮ್ಸ್ ಕ್ಲರ್ಕ್ ಮ್ಯಾಕ್ಸ್ವೆಲ್ (ಆಧುನಿಕ ಭೌತ ವಿಜ್ಞಾನದ ಪಿತಾಮಹ, ವಿದ್ಯುದಾಯಸ್ಕಾಂತ ಶಕ್ತಿಯನ್ನು ಕಂಡುಹಿಡಿದವರು)

  English summary

  5 Zodiac Signs That Argue The Most

  Ever wondered why your friend or loved one is always hot-headed? This could be something due to their zodiac signs! Losing cool or being impatient can be something that we can relate to with our stars or our zodiac signs; and with the experts' advice, we bring in the details of the zodiac signs which are known to argue the most!
  Story first published: Saturday, May 26, 2018, 13:20 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more