Latest Updates
-
ಬಿಸಿಲ ಧಗೆಗೆ ತಂಪಾದ ಗುಡ್ ನ್ಯೂಸ್: ಮೇ 8 ರಿಂದ ಶುರುವಾಗಲಿದೆ ಗ್ರೇಟ್ ಸಮ್ಮರ್ ಸೇಲ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಪದ್ಧತಿಯಿಂದ ಇಡೀ ದಿನ ಇರಿ ಫ್ರೆಶ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಕೂಲ್ ಆಗಿರಿ! -
ಬಿಸಿಗಾಳಿಯ ಅಬ್ಬರ: ನಿಮ್ಮ ಫಿಟ್ನೆಸ್ ದಿನಚರಿಯನ್ನು ಬದಲಾಯಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ! -
ಹೊಸ ಜೀವನ ಆರಂಭಿಸುವ ಮುನ್ನ ಎಚ್ಚರ: ವಿಚ್ಛೇದನ ಮತ್ತು ಕಾನೂನು ಹಕ್ಕುಗಳ ಬಗ್ಗೆ ಹೈಕೋರ್ಟ್ ಹೇಳಿದ್ದೇನು? -
ಬಿರುಗಾಳಿ ಮತ್ತು ಬಿಸಿಲ ಬೇಗೆ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ನಿಮ್ಮ ಜೀವ ಉಳಿಸುವ ಸರಳ ಮನೆಮದ್ದುಗಳಿವು! -
ಬಿಸಿಲಿನ ಬೇಗೆಗೆ ತತ್ತರಿಸಿದ್ದೀರಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಕೂಲಿಂಗ್ ಹ್ಯಾಕ್ಸ್ ಮಿಸ್ ಮಾಡ್ಬೇಡಿ! -
ಬದಲಾಗುತ್ತಿರುವ ಹವಾಮಾನ: ನಿಮ್ಮ ಫಿಟ್ನೆಸ್ ದಿನಚರಿಯನ್ನು ಬದಲಾಯಿಸದಿದ್ದರೆ ಕಾದಿದೆ ಅಪಾಯ! -
ವಾಟ್ಸಾಪ್ನಲ್ಲಿ ಪ್ರೀತಿಯ ಬಲೆ: ನಿಮ್ಮ ಖಾತೆ ಖಾಲಿಯಾಗುವ ಮುನ್ನ ಈ ಎಚ್ಚರಿಕೆ ವಹಿಸಿ!
ತಾನು ಕೊಡುವುದಕ್ಕಿಂತ ಇತರರಿಂದ ಹೆಚ್ಚು ಕಸಿಯುವ ರಾಶಿಯವರು!
ಪ್ರತಿಯೊಬ್ಬರಿಗೂ ಆಸೆ ಎನ್ನುವುದು ಇದ್ದೇ ಇರುತ್ತದೆ. ಆಸೆ ಇಲ್ಲದೆ ಮನುಷ್ಯ ಈ ಜಗತ್ತಿನಲ್ಲಿ ಇರಲಿಕ್ಕಿಲ್ಲ. ಆಸೆ ಸಹಜ, ದುರಾಸೆ ಮಾತ್ರ ಇರಬಾರದು. ಕೆಲವರು ನಿಮ್ಮಿಂದ ಎಷ್ಟು ಬೇಕಿದ್ದರೂ ನೆರವು ಅಥವಾ ಇನ್ನಿತರ ವಸ್ತುಗಳನ್ನು ಪಡೆದಿರುತ್ತಾರೆ. ಆದರೆ ಅವರ ಸರದಿ ಬಂದಾಗ ಮಾತ್ರ ಮುಖ ತಿರುಗಿಸಿಕೊಂಡು ಹೋಗುತ್ತಾರೆ.
ನೀವು ಇವನೆಂತಾ ಮನುಷ್ಯನಪ್ಪಾ ಎಂದು ಹೇಳಬಹುದು. ಆದರೆ ಇದು ಅವರ ರಾಶಿಚಕ್ರದಿಂದಲೂ ಆಗಿದೆ ಎನ್ನುವುದು ಮಾತ್ರ ನಿಮಗೆ ತಿಳಿದಿರುವುದಿಲ್ಲ. ಹೌದು, ಕೆಲವೊಂದು ರಾಶಿಚಕ್ರಗಳು ನಿಮಗೆ ಕೊಡುವುದಕ್ಕಿಂತ ಹೆಚ್ಚಾಗಿ ನಿಮ್ಮಿಂದ ಪಡೆದುಕೊಳ್ಳುವುದೇ ಜಾಸ್ತಿ. ಅದೇ ಕೆಲವೇ ಸಮಯಕ್ಕಾಗಿ ನಿಮ್ಮಿಂದ ಪಡೆದಿರುವಂತಹ ಯಾವುದೇ ವಸ್ತುವನ್ನು ಹಿಂತಿರುಗಿಸಲು ಅವರು ಹಿಂದೇಟು ಹಾಕುವರು. ಇಂತಹ ರಾಶಿಗಳ ಬಗ್ಗೆ ತಿಳಿಯಿರಿ ಮತ್ತು ಎಚ್ಚರಿಕೆಯಿಂದ ಇರಿ....

ಮೇಷ: ಮಾ.21- ಎ.19
ಇವರು ತಮ್ಮದೇ ಸಮಯದಲ್ಲಿ ಏನಾದರೂ ವಸ್ತುಗಳನ್ನು ಪಡೆಯುತ್ತಾ ಇರುವರು. ಇವರು ತುಂಬಾ ಪರಿಶ್ರಮಿಗಳು. ಆದರೆ ಇವರು ತಮಗೆ ಇಷ್ಟವಾಗಿರುವುದನ್ನು ಮಾತ್ರ ಮಾಡುವರು. ಇವರು ತಮಗೆ ಲಾಭಕರವಾಗಿರುವಂತಹ ಯಾವುದೇ ವಿಷಯವಾದರೂ ಅದನ್ನು ಹೇಗಾದರೂ ಮಾಡಿ ತಿರುವರು. ಇದರಿಂದಾಗಿ ಬೇರೆಯವರಿಗೆ ನೋವಾಗುತ್ತದೆ ಎನ್ನುವುದು ಅವರು ಗಮನಿಸಲ್ಲ. ಇಂತಹ ರಾಶಿಯವರಿಂದ ನೀವು ಹೆಚ್ಚಿಗೆ ನಿರೀಕ್ಷೆ ಇಟ್ಟುಕೊಳ್ಳಬೇಡಿ.

ಸಿಂಹ: ಜುಲೈ 23-ಆ.23
ಈ ರಾಶಿಯವರು ಸ್ವಹಿತಾಸಕ್ತಿ ಉಳ್ಳವರು. ಇವರು ತಮ್ಮ ಸುತ್ತಲು ಇರುವ ಜನರಿಂದ ಯಾವ ರೀತಿಯ ಪ್ರಯೋಜನ ಪಡೆದುಕೊಳ್ಳಬಹುದು ಎನ್ನುವ ಬಗ್ಗೆ ಯೋಚಿಸುತ್ತಾ ಇರುವರು. ಇವರು ತುಂಬಾ ಸ್ವಾರ್ಥಿಗಳು. ಇವರ ಇನ್ನೊಂದು ಮುಖವೆಂದರೆ ಇವರು ಯಾವಾಗಲೂ ಎಲ್ಲರೂ ತಮ್ಮನ್ನು ಗಮನಿಸಬೇಕೆಂದು ಬಯಸುವರು. ನೀವು ಅವರನ್ನು ಕಡೆಗಣಿಸಿದರೆ ಆಗ ನಿಮಗೆ ನರಕ ಕಟ್ಟಿಟ್ಟ ಬುತ್ತಿ.

ಕನ್ಯಾ: ಆ.24-ಸೆ.23
ಕನ್ಯಾ ರಾಶಿಯವರು ಬೇರೆಯವರ ಬಗ್ಗೆ ಎಷ್ಟು ಬೇಕಿದ್ದರೂ ಟೀಕೆ ಮಾಡುವರು. ಆದರೆ ತಮ್ಮ ಸರದಿ ಬಂದಾಗ ಅದನ್ನು ಸ್ವೀಕರಿಸಲು ತಯಾರಾಗಿರುವುದಿಲ್ಲ. ಇವರು ಯಾವುದೇ ಕಾರಣವಿಲ್ಲದೆ ಜನರ ತಮಾಷೆ ಮಾಡುವರು. ನೀವು ಅವರ ವಿರುದ್ಧ ಒಂದು ಶಬ್ದ ಹೇಳಿದರೂ ಅದನ್ನು ಕೇಳಲು ಅವರು ತಯಾರಾಗಿರುವುದಿಲ್ಲ. ಇವರು ಸ್ವಲ್ಪ ಮಟ್ಟದಲ್ಲಿ ನಿಮಗೆ ಬೆಂಬಲವಾಗಿ ನಿಲ್ಲುವರು. ಆದರೆ ಅವರೊಂದಿಗೆ ಜಗಳವಾಡಿದರೆ ಆಗ ನಿಮ್ಮನ್ನು ಇನ್ನಿಲ್ಲದಂತೆ ಕಡೆಗಣಿಸಲು ಆರಂಭಿಸುವರು.

ಧನು: ನ.23-ಡಿ.22
ಇವರು ಪರಿಸ್ಥಿತಿಗೆ ಹೊಂದಿಕೊಂಡು ಇರುವಂತಹ ತುಂಬಾ ಕೆಟ್ಟ ಸ್ವಭಾವದ ವ್ಯಕ್ತಿಗಳು. ಇವರು ನಿಮಗೆ ಬಾನಿನಿಂದ ಚಂದ್ರನ ತಂದು ಕೊಡುತ್ತಾರೆಂದು ಭರವಸೆ ನೀಡುವರು. ಆದರೆ ಎಲ್ಲವೂ ಠುಸ್. ಇವರು ತುಂಬಾ ಕೋಪಿಷ್ಠರು ಮತ್ತು ಬೇರೆಯವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲಾರರು. ಇವರು ತಮಗೆ ಬೇಕಾಗಿರುವುದನ್ನು ಪಡೆಯಲು ಏನು ಬೇಕಾದರು ಮಾಡುವರು.

ಮಕರ: ಡಿ.23-ಜ.20
ತಮ್ಮ ಸುತ್ತಲು ಇರುವವರಿಗೆ ಯಾವಾಗಲೂ ಕೆಟ್ಟದಾಗಬೇಕೆಂದು ಬಯಸುತ್ತಾ, ಕ್ಷಮೆ ಎಂದರೆ ಏನೆಂದು ತಿಳಿಯದವರು ಇವರು. ಈ ಪಟ್ಟಿಯಲ್ಲಿರುವ ಇತರ ರಾಶಿಗಳಿಗಿಂತ ಈ ರಾಶಿಯವರು ತುಂಬಾ ಜವಾಬ್ದಾರಿ ವಹಿಸುವರು. ಆದರೆ ಈ ಪಟ್ಟಿಯಲ್ಲಿ ಇವರು ಕಡಿಮೆ ಸ್ವಾರ್ಥಿಗಳೇನಲ್ಲ. ನಿಮ್ಮನ್ನು ಸಂಪೂರ್ಣವಾಗಿ ಬರಿದು ಮಾಡುವ ತನಕ ಅವರು ನಿಮ್ಮಿಂದ ಪಡೆಯುತ್ತಲೇ ಇರುವರು. ನೀವು ಅಂತ್ಯವಾಗುವ ತನಕ ಅವರು ಕಾಯುತ್ತಲಿರುವರು.



Click it and Unblock the Notifications