ಈ 4 ರಾಶಿಯವರು, ಸ್ನೇಹಿತರಿಗಾಗಿ ಎಂತಹ ತ್ಯಾಗ ಮಾಡಲೂ ಸಹ ಸಿದ್ಧರಾಗಿರುತ್ತಾರೆ

Posted By: Deepu
Subscribe to Boldsky

ಸ್ನೇಹಿತರಿಲ್ಲದ ಜಗತ್ತನ್ನು ನಾವು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಪ್ರತಿಯೊಂದು ಹಂತದಲ್ಲೂ ಸ್ನೇಹಿತರು ಎನ್ನುವವರು ಇರಲೇಬೇಕು. ಜೀವನದಲ್ಲಿ ಅದೆಷ್ಟೋ ಬಾರಿ ಸಂಬಂಧಿಕರು ಅಥವಾ ರಕ್ತ ಸಂಬಂಧಿಗಳು ಎನಿಸಿಕೊಂಡವರು ಸಹಾಯ ಮಾಡದಿದ್ದರೂ ಸ್ನೇಹಿತರಾದವರು ಸಹಾಯ ಮಾಡುತ್ತಾರೆ. ಜೀವನದಲ್ಲಿ ಏಳಿಗೆ ಕಂಡಾಗ ಪ್ರೋತ್ಸಾಹ ಹಾಗೂ ದುಃಖದಲ್ಲಿರುವಾಗ ಸಾಂತ್ವಾನವನ್ನು ಯಾವುದೇ ಸ್ವಾರ್ಥವಿಲ್ಲದೆ ಮಾಡುತ್ತಾರೆ. ಹಾಗಾಗಿ ಜೀವನದಲ್ಲಿ ಏನೂ ಇಲ್ಲದಿದ್ದರೂ ಸರಿ ಒಬ್ಬ ಆತ್ಮೀಯ ಸ್ನೇಹಿತರನ್ನು ಹೊಂದಿರಬೇಕು ಎನ್ನುತ್ತಾರೆ.

ವಂಚನೆಯಿಂದ ಕೂಡಿರುವ ಈ ಜಗತ್ತಿನಲ್ಲಿ ಸ್ನೇಹಿತರು ಎಂದು ಹೇಳಿಕೊಂಡು ಮೋಸ ಮಾಡುವವರನ್ನು ಸಹ ನಾವು ನೋಡಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರದವರು ಅತ್ಯುತ್ತಮ ರೀತಿಯಲ್ಲಿ ತಮ್ಮ ಸ್ನೇಹವನ್ನು ನಿಭಾಯಿಸುತ್ತಾರೆ. ಸ್ನೇಹಿತರಿಗಾಗಿ ಎಂತಹ ತ್ಯಾಗ ಮಾಡಲೂ ಸಹ ಸಿದ್ಧರಿರುತ್ತಾರೆ ಎಂದು ಹೇಳಲಾಗುವುದು. ಹಾಗಾದರೆ ಆ ರಾಶಿಚಕ್ರಗಳು ಯಾವವು? ಎನ್ನುವುದುನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ...

ಸಿಂಹ

ಸಿಂಹ

ಈ ರಾಶಿಚಕ್ರದವರು ಬಹಳ ಉದಾರಗುಣವನ್ನು ಹೊಂದಿರುತ್ತಾರೆ. ಇವರು ತಮ್ಮ ಅವಿವೇಕದ ನಗುವನ್ನು ನೀಡುವುದಿಲ್ಲ. ಈ ವ್ಯಕ್ತಿಗಳು ವಿಶ್ರಾಂತಿ ಪ್ರಿಯರು ನಿಮಗೂ ಈ ಪರಿಯ ಗುಣವನ್ನು ಹೊಂದಿದವರಾಗಿದ್ದರೆ ನಿಮಗೆ ಅತ್ಯುತ್ತಮ ಸ್ನೇಹಿತರಾಗಬಲ್ಲರು. ಸ್ನೇಹಿತರಾಗಿ ಯಾವೆಲ್ಲಾ ಬಗೆಯಲ್ಲಿ ಭಾವನಾತ್ಮಕವಾಗಿ ಸಹಕಾರ ನೀಡಬಹುದೋ ಹಾಗೆಯೇ ತಮ್ಮ ಸ್ನೇಹಿತರಿಗೆ ಸಹಕಾರ ನೀಡುವರು.

ಕುಂಭ

ಕುಂಭ

ಉತ್ತಮ ರೀತಿಯ ಮಾತುಕತೆಯನ್ನು ಹೊಂದಲು ಈ ರಾಶಿಚಕ್ರದವರು ಬಯಸುತ್ತಾರೆ. ಆಳವಾಗಿ ಭಾವನೆಯನ್ನು ಅರ್ಥಮಾಡಿಕೊಳ್ಳುವ ಸ್ನೇಹಿತರನ್ನು ನೀವು ಹುಡುಕುತಿದ್ದರೆ ಈ ರಾಶಿಯವರು ಅತ್ಯುತ್ತಮ ಸ್ನೇಹಿತರಾಗಬಲ್ಲರು. ಇವರು ವೈಯಕ್ತಿಕವಾಗಿ ಹೆಚ್ಚಿನ ಗಮನ ನೀಡಲು ಹಾಗೂ ಸಹಾಯ ಮಾಡಲು ಸದಾ ಸಿದ್ಧರಿರುತ್ತಾರೆ. ವಿಶಾಲ ಮನಸ್ಸಿನವರಾದ ಇವರು ಉತ್ತಮ ಹಾಸ್ಯಗಾರರೂ ಹೌದು. ಇವರು ಸದಾ ನಿಮಗಾಗಿ ಸಿದ್ಧರಿರುತ್ತಾರೆ.

ಮಕರ

ಮಕರ

ಇವರು ಕುಟುಂಬ ಆಧಾರಿತ ವ್ಯಕ್ತಿಗಳು ಎನಿಸಿಕೊಂಡರೂ ತಮ್ಮದೇ ಆದ ಭರವಸೆಯನ್ನು ನೀಡುತ್ತಾರೆ. ನೀವು ನಿಮ್ಮ ತಲೆಯನ್ನು ಭುಜದ ಮೇಲೆ ಇರಿಸಿ ಅಳಲು ಉತ್ತಮ ಸ್ನೇಹಿತರ ಹುಡುಕಾಟದಲ್ಲಿದ್ದರೆ ಈ ರಾಶಿಯ ವ್ಯಕ್ತಿಗಳು ಅತ್ಯುತ್ತಮ ಸ್ನೇಹಿತರಾಗಬಲ್ಲರು. ಇವರು ಸದಾ ನಿಮ್ಮ ಅಗತ್ಯತೆಗಳಿಗೆ ಅನುಗುಣವಾಗಿ ಸಹಕರಿಸುತ್ತಾರೆ. ನಿರಾಸೆಯ ಮನಸ್ಸಿಗೆ ಸಾಂತ್ವನ ನೀಡುವ ಅತ್ಯುತ್ತಮ ಸ್ನೇಹಿತರು ಇವರಾಗುವರು.

ಧನು

ಧನು

ಈ ರಾಶಿಯವರು ಅತ್ಯಂತ ಕುತೂಹಲ ಹಾಗೂ ಹೊರಾಂಗಣದಲ್ಲಿ ಆನಂದಿಸುವ ಪ್ರವೃತ್ತಿಯವರು. ಇವರು ಒಳ್ಳೆಯ ಗುಣ ಹಾಗೂ ಹಾಸ್ಯದ ದೊಡ್ಡ ಗುಣವನ್ನು ಆಶೀರ್ವದಿಸಲ್ಪಟ್ಟಿದ್ದಾರೆ. ಅತ್ಯುತ್ತಮ ರೀತಿಯಲ್ಲಿ ಸಾಂತ್ವನ ಹಾಗೂ ಪ್ರೀತಿಯನ್ನು ನೀಡುವ ವ್ಯಕ್ತಿಗಳು ಇವರಾಗಿರುತ್ತಾರೆ. ಅಲ್ಲದೆ ತಮ್ಮ ಸ್ನೇಹಿತರಿಗೆ ಅತ್ಯುತ್ತಮ ಆಧಾರ ಸ್ತಂಭದಂತೆ ಆಸರೆಯಾಗಿ ನಿಲ್ಲುತ್ತಾರೆ.

English summary

4 Zodiac Signs That Could Give You Serious Friendship Goals

Here in this article, we bring to you the details of the zodiac signs that are listed as being the best friends one could ask for, in other words, they are really true to their friends. These zodiac signs can blindly go to any extent when it comes to proving their friendship!