Latest Updates
-
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್
ಯಾವ ರಾಶಿಯವರ ಗುಣ ಸ್ವಭಾವ ಹೇಗಿರುತ್ತದೆ ನೋಡಿ..
ಎಲ್ಲಾ ರಾಶಿಗಳು ಒಂದೇ ರೀತಿಯ ಗುಣಸ್ವಭಾವ ಹೊಂದಿರಲ್ಲ. ಆದರೆ ಕೆಲವೊಂದು ರಾಶಿಗಳಲ್ಲಿ ಸಾಮ್ಯತೆ ಇರುವುದು. 12 ರಾಶಿಗಳಲ್ಲಿ ಕೆಲವು ರಾಶಿಗಳು ತುಂಬಾ ಸಮಾನವಾಗಿರುವ ರಾಶಿಗಳು ಇವೆ. ಜ್ಯೋತಿಷ್ಯ ಶಾಸ್ತ್ರದಿಂದ ಒಬ್ಬ ವ್ಯಕ್ತಿಯ ಗುಣಸ್ವಭಾವವನ್ನು ಆತನ ರಾಶಿಯಿಂದ ತಿಳಿದುಕೊಳ್ಳಬಹುದಾಗಿದೆ.
ಹೀಗೆ ತಿಳಿದುಕೊಂಡರೆ ಅವರೊಂದಿಗೆ ವ್ಯವಹರಿಸುವಾಗ ನಾವು ಎಚ್ಚರಿಕೆಯಿಂದ ಇರಬಹುದು. ಇನ್ನು ಕೆಲವು ರಾಶಿಯವರು ತುಂಬಾ ಕೋಪಿಷ್ಠರು ಆಗಿರುವರು. ಇಂತಹ ಜನರೊಂದಿಗೆ ಮಾತನಾಡುವಾಗ ತುಂಬಾ ತಾಳ್ಮೆ ವಹಿಸಬೇಕು. ಆದರೆ 12 ರಾಶಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವಂತಹ ಗುಣನಡವಳಿಕೆಗಳ ಬಗ್ಗೆ ನಾವು ಈ ಲೇಖನದಲ್ಲಿ ತಿಳಿದುಕೊಳ್ಳುವ....

ಮೇಷ: ಮಾರ್ಚ್ 21ರಿಂದ ಎಪ್ರಿಲ್ 19
ಉಳಿದ ರಾಶಿಗಳಿಗೆ ಹೋಲಿಸಿದರೆ ಈ ರಾಶಿಯಲ್ಲಿ ಜನಿಸುವವರು ತುಂಬಾ ಕಡಿಮೆ ಎನ್ನಬಹುದಾಗಿದೆ. ಈ ರಾಶಿಯವರು ಸ್ವಯಂ ಭ್ರಾಂತಿಯವರಾಗಿರುವರು. ಇವರು ತುಂಬಾ ಆಕ್ರಮಣಶೀಲರು, ಜೀವನ ಹಾಗೂ ಸಂಬಂಧದ ಬಗ್ಗೆ ತುಂಬಾ ಪ್ರವರ್ತಕ ವಿಧಾನ ಹೊಂದಿರುವರು. ಇವರಲ್ಲಿ ಯಾವತ್ತು ಕುಂದದ ಶಕ್ತಿಯಿರುವುದು ಮತ್ತು ಯಾವುದೇ ಸವಾಲುಗಳಿಗೆ ಇವರು ತಯಾರಾಗಿರುವರು.

ಮೇಷ ರಾಶಿಯವರು ಅಪರೂಪವೇಕೇ?
ಈ ರಾಶಿಯ ಜನರಿಗೆ ಜೀವನದ ಬಗ್ಗೆ ಅನಿರೀಕ್ಷಿತವಾಗಿರುವ ಮನೋಭಾವವಿರುವುದು. ಸಾಮಾನ್ಯವಾಗಿರುವುದನ್ನು ಮಾಡಲು ಅವರು ದ್ವೇಷಿಸುವರು ಮತ್ತು ಜನರು ನಿರೀಕ್ಷೆಗಳಿಗೆ ತದ್ವಿರುದ್ಧವಾಗಿರುವ ಕೆಲಸ ಮಾಡುವರು. ಇದರಿಂದಾಗಿ ಅವರು ತಮ್ಮ ರಹಸ್ಯಗಳನ್ನು ಹೊರಗಿನವರಿಗೆ ಹೇಳಲ್ಲ.

ಧನು: ನವಂಬರ್ 23ರಿಂದ ಡಿಸೆಂಬರ್ 22
ಬೇರೆ ರಾಶಿಯವರಿಗೆ ಹೋಲಿಸಿದರೆ ಈ ರಾಶಿಯಲ್ಲಿ ಜನಿಸುವವರು ತುಂಬಾ ಕಡಿಮೆ ಎಂದು ಜ್ಯೋತಿಷಿಗಳು ಹಾಗೂ ಇದರ ತಜ್ಞರು ಹೇಳುತ್ತಾರೆ. ಈ ರಾಶಿಯವರ ಮೆದುಳಿನ ಶಕ್ತಿಯು ತುಂಬಾ ವಿಶೇಷವಾಗಿರುವುದು. ಇದರಿಂದಾಗಿಯೇ ಇವರು ಬೇರೆ ರಾಶಿಯವರಿಗಿಂತ ತುಂಬಾ ಬಲಿಷ್ಠ ಹಾಗೂ ಭಿನ್ನವಾಗಿರುವರು.

ಧನು ರಾಶಿ ಅಪರೂಪವೇಕೇ?
ಈ ರಾಶಿಯವರಿಗೆ ಎರಡು ಮ್ಯಾಜಿಕ್ ಶಕ್ತಿಗಳಾದ ಪುರುಷ ಹಾಗೂ ಹಣದ ಅಶೀರ್ವಾದವಿರುವುದು. ಇವರು ಬೇರೆಯವರನ್ನು ಅರ್ಥ ಮಾಡಿಕೊಳ್ಳುವಲ್ಲಿ ತುಂಬಾ ಜಾಣರು. ಈ ರಾಶಿಯವರು ಕೈಗೆತ್ತಿಕೊಳ್ಳುವ ಕೆಲಸದಲ್ಲಿ ಒಂದಾ ಹಣ ಅಥವಾ ಪುರುಷರ ಶಕ್ತಿ ಇರುವುದು. ಇದರಲ್ಲಿ ಇವರು ಯಾವಾಗಲೂ ತಪ್ಪು ಮಾಡಲ್ಲ.

ಕುಂಭ: ಜನವರಿ 20-ಫೆಬ್ರವರಿ 18
ಮಧ್ಯ ಜನವರಿಯಿಂದ ಫೆಬ್ರವರಿ ತನಕ ಹುಟ್ಟುವವರ ಸಂಖ್ಯೆಯು ತುಂಬಾ ಕಡಿಮೆ ಇರುವುದು ಎಂದು ಅಂಕಿಅಂಶದಿಂದ ತಿಳಿದುಬರುವುದು. ಫೆಬ್ರವರಿಯಲ್ಲಿ ದಿನಗಳು ಕೂಡ ಕಡಿಮೆ ಇರುವುದು. ಈ ರಾಶಿಯಲ್ಲಿ ಹುಟ್ಟುವ ಮಕ್ಕಳ ಸಂಖ್ಯೆ ತುಂಬಾ ಕಡಿಮೆ ಇರುವುದು.

ಕುಂಭ ರಾಶಿ ಅಪರೂಪವೇಕೇ?
ಈ ರಾಶಿಯವರು ಯಾವುದೇ ಸಂಬಂಧ ಅಥವಾ ಭಾಂದವ್ಯದಲ್ಲಿ ತುಂಬಾ ನಂಬಿಕಸ್ಥರಾಗಿರುವರು. ಅವರು ಯಾವುದೇ ಕೆಲಸ ಕೈಗೆತ್ತಿಕೊಂಡರೂ ಅದರಲ್ಲೂ ಅವರು ತುಂಬಾ ನಂಬಿಕಸ್ಥರಂತೆ ಕೆಲಸ ಮಾಡುವರು. ನಿಸ್ವಾರ್ಥವಾಗಿರುವುದು ಅವರನ್ನು ಇತರರಿಗಿಂತ ತುಂಬಾ ಭಿನ್ನವಾಗಿಡುತ್ತದೆ.



Click it and Unblock the Notifications