ನಿಮ್ಮವರ ಮೋಸದ ಗುಣ, ಅರಿಯಬೇಕೇ? ಹಾಗಾದರೆ ಈ ರಾಶಿಚಕ್ರ ಓದಿ...

By: manu
Subscribe to Boldsky

ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಳ್ಳೆಯ ಮತ್ತು ಕೆಟ್ಟ ಗುಣಗಳೆರಡು ಇರುತ್ತವೆ. ತಮ್ಮ ಕೆಟ್ಟ ಗುಣಗಳನ್ನು ಮುಚ್ಚಿಟ್ಟುಕೊಂಡು, ಒಳ್ಳೆತನವನ್ನು ಹೆಚ್ಚು ಪ್ರದರ್ಶಿಸುವುದು ಮಾನವನ ಸಹಜ ಗುಣ. ಕೆಲವರು ಬೇರೆಯವರ ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಂಡು, ತಾವು ಒಳ್ಳೆಯವರಂತೆ ವರ್ತಿಸುತ್ತಾರೆ. 

ರಾಶಿ ಭವಿಷ್ಯ: ನಿಮ್ಮ ವ್ಯಕ್ತಿತ್ವವನ್ನು ಬಿಚ್ಚಿಡುವ 'ಸಂಖ್ಯೆಗಳು'

ನೋಡುಗರ ಕಣ್ಣಿಗೆ ವ್ಯಕ್ತಿ ಒಳ್ಳೆಯವರಂತೆ ಗೋಚರಿಸುತ್ತಿದ್ದರು ಆತನ ಅಂತರಾಳದಲ್ಲಿ ದುಷ್ಟಗುಣ ಮೆರೆದಾಡುತ್ತಿರುತ್ತದೆ. ಇಂತಹ ಗುಣಗಳು ವ್ಯಕ್ತಿಯ ಸುತ್ತಲಿರುವ ಮಂದಿಗೆ ಅಪಾಯಕಾರಿಯೂ ಹೌದು. ವ್ಯಕ್ತಿಯ ಕೆಟ್ಟಗುಣ ಹಾಗೂ ಮೋಸದ ಸ್ವಭಾವಗಳು ರಾಶಿಚಕ್ರಕ್ಕೆ ಅನುಗುಣವಾಗಿರುತ್ತದೆ. ರಾಶಿಚಕ್ರಕ್ಕೆ ಅನುಗುಣವಾಗಿ ಯಾವೆಲ್ಲಾ ಮೋಸದ ಗುಣ ಹಾಗೂ ದುಷ್ಟ ಗುಣಗಳು ಅಡಗಿರುತ್ತವೆ ಎನ್ನುವುದನ್ನು ಈ ಕೆಳಗೆ ವಿವರಿಸಲಾಗಿದೆ. ನಿಮ್ಮ ರಾಶಿಗೆ ಯಾವೆಲ್ಲಾ ಗುಣಗಳು ಅಡಗಿವೆ ಎಂದು ಗುರುತಿಸಲು ಇದೊಂದು ಅವಕಾಶ ನಿಮಗಿದೆ....

ಮೇಷ

ಮೇಷ

ಇವರು ಬಹುತೇಕ ಎಲ್ಲಾ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡಿರುತ್ತಾರೆ. ಅದು ಇತರರ ಗಮನಕ್ಕೆ ತಿಳಿದು ಬರುವುದಿಲ್ಲ. ಇವರಿಗೆ ಸಿಟ್ಟು ಬಂದರೆ, ಸಿಟ್ಟಿಗೆ ಕಾರಣರಾದವರನ್ನು ಟೀಕಿಸಲು ಯಾವುದೇ ಮುಜುಗರ ಅಥವಾ ಕರುಣಾ ಭಾವಕ್ಕೆ ಒಳಗಾಗುವುದಿಲ್ಲ.

ವೃಷಭ

ವೃಷಭ

ಇವರು ಗಾಸಿಪ್ ಪ್ರಿಯರು. ಬೇರೆಯವರ ಸಮಸ್ಯೆಯ ಬಗ್ಗೆ ಸ್ವಲ್ಪ ಹೆಚ್ಚಾಗಿಯೇ ಮಾತನಾಡುತ್ತಾರೆ. ಇವರು ಯಾವುದೇ ವಿಚಾರವನ್ನು ಹೇಳುವುದಿಲ್ಲ ಎಂದು ಭರವಸೆ ನೀಡಿದರೂ ಸಹ ಕೆಲವು ಸಂದರ್ಭದಲ್ಲಿ ಬಾಯಿ ಬಿಟ್ಟುಬಿಡುತ್ತಾರೆ.

ಧೈರ್ಯ ಶಾಲಿಗಳ 'ಧೈರ್ಯ' ಸೂಚಿಸುವ ರಾಶಿ ಭವಿಷ್ಯ

ಮಿಥುನ

ಮಿಥುನ

ಇವರು ಆಸಕ್ತಿ/ಇಷ್ಟ ಇಲ್ಲದ ವಿಚಾರದ ಬಗ್ಗೆ ಇಲ್ಲ ಎಂದು ಹೇಳುವ ಬದಲು ಅದನ್ನು ಮರೆ ಮಾಚಲು ಅಥವಾ ದೂರವಾಗಲು ಪ್ರಯತ್ನಿಸುತ್ತಾರೆ.ತಮ್ಮ ತಪ್ಪುಗಳನ್ನು ಅರ್ಥಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಬದಲಿಗೆ ಇತರರನ್ನು ದ್ವೇಷಿಸುತ್ತಾರೆ.

ಕರ್ಕ

ಕರ್ಕ

ಇವರು ಸದಾ ಸಾಮಾಜಿಕ ತಾಣಗಳಲ್ಲಿ ಇರಲು ಇಷ್ಟಪಡುತ್ತಾರೆ. ಸದಾ ಇತರರ ಬಗ್ಗೆ, ನಡವಳಿಕೆಯ ಬಗ್ಗೆ ಮಾತನಾಡಲು ಇಷ್ಟಪಡುತ್ತಾರೆ. ಬೇರೆಯವರ ಕೊಳಕನ್ನು ಹುಡುಕುವುದು ಹಾಗೂ ಅದರ ಬಗ್ಗೆ ಪ್ರಚಾರ ಪಡಿಸುವುದರಲ್ಲಿ ಹೆಚ್ಚು ಸಮಯ ಕಳೆಯುವ ಸ್ವಭಾವ ಇವರದ್ದು.

ಸಿಂಹ

ಸಿಂಹ

ಇವರು ಎಲ್ಲಾ ವಿಚಾರದ ಬಗ್ಗೆ ಚಿಂತಿಸಲು ಇಷ್ಟಪಡುತ್ತಾರೆ. ತಮ್ಮ ಜೀವನದಲ್ಲಿ ಅದೇನೋ ಭೀಕರ ವಿಚಾರ ನಡೆದಿದೆ ಎನ್ನುವ ರೀತಿಯಲ್ಲಿ ವರ್ತಿಸುತ್ತಾರೆ. ಇವರು ಎಂದಿಗೂ ನಮ್ರತೆಯ ಪರವಾಗಿ ಸಹಾಯ ಮಾಡರು.

ಕನ್ಯಾ

ಕನ್ಯಾ

ಇವರು ನೋಡಲು ಬಹಳ ಮುಗ್ಧರಾಗಿ ಕಾಣುತ್ತಾರೆ. ಆದರೆ ರಹಸ್ಯವನ್ನು ಗುಟ್ಟಾಗಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ. ಇವರು ಮಾಡುವ ಮೋಸ ಇತರರಿಗೆ ಕಾಣದು. ಇವರು ಮರೆಯಲ್ಲಿ ಮಾಡುವ ಮೋಸವನ್ನು ಗುರುತಿಸಲಾಗದು.

ತುಲಾ

ತುಲಾ

ಇವರು ದೊಡ್ಡ ಸಾಮಾಜಿಕ ವಲಯವನ್ನು ಹೊಂದಿದವರಾಗಿರುತ್ತಾರೆ. ಸ್ನೇಹಿತರೊಡನೆ ಕೆಲವು ಸುಳ್ಳು ಯೋಜನೆಯನ್ನು ಮಾಡುವ ಸಾಧ್ಯತೆ ಇರುತ್ತದೆ. ಇವರು ಹೇಳುವ ವಿಚಾರವೆಲ್ಲಾ ದೊಡ್ಡ ಯೋಜನೆಯದ್ದು ಎಂದು ನಂಬುವ ಹಾಗಿರುವುದಿಲ್ಲ.

ವೃಶ್ಚಿಕ

ವೃಶ್ಚಿಕ

ಇವರು ಸದಾ ತಮ್ಮ ದ್ವೇಷವನ್ನು ಮನದಲ್ಲಿಟ್ಟುಕೊಂಡಿರುತ್ತಾರೆ. ಇವರು ವರ್ಷಾನುಗಟ್ಟಲೆ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡಿರುತ್ತಾರೆ. ಇವರು ಇಷ್ಟ ಪಡದ ವ್ಯಕ್ತಿಗೆ ಒಂದು ನಗುವನ್ನು ಸಹ ಬೀರುವುದಿಲ್ಲ.

ಧನು

ಧನು

ಇವರು ಒಂದು ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಜನರೊಟ್ಟಿಗೆ ಮಾತನಾಡುವ ಸಾಮರ್ಥ್ಯ ಹೊಂದಿರುತ್ತಾರೆ. ಒಬ್ಬ ವ್ಯಕ್ತಿಯಿಂದ ಮೋಸವಾಗಿದೆ ಎಂಬುದು ತಿಳಿದರೆ ಆ ವ್ಯಕ್ತಿಯ ವಿರುದ್ಧ ಇವರು ಸಹ ಮೋಸ ಮಾಡಲು ಇಳಿಯುತ್ತಾರೆ. ಕ್ಷಮೆಯಾಚಿಸಿದಲ್ಲಿ ಇವರು ಸಹ ಪ್ರಾಮಾಣಿಕವಾಗಿ ವರ್ತಿಸುತ್ತಾರೆ.

ಮಕರ

ಮಕರ

ಇವರು ಬಹಳ ಸರಳ ಸ್ವಭಾವದವರು. ಇವರ ನಡತೆಯಲ್ಲಿ ಇವರಿಗೆ ನಿಯಂತ್ರಣವಿರುತ್ತದೆ. ಹಾಗಾಗಿ ಇವರು ಮಾಡುವ ತಪ್ಪು ಯಾರಿಗೂ ತಿಳಿಯದಂತೆ ಇಡುತ್ತಾರೆ. ಅದನ್ನು ತಿದ್ದಿಕೊಳ್ಳುವ ಸಾಮರ್ಥ್ಯ ಇವರಿಗೆ ಇದೆ.

ಕುಂಬ

ಕುಂಬ

ಇವರು ತಾವು ಹೇಳುವ ವಿಚಾರಕ್ಕೆ ತಾವೇ ಅಂಟಿಕೊಳ್ಳುವುದಿಲ್ಲ. ಚಂಚಲ ಸ್ವಭಾವದವರಾದ ಇವರು ತಮ್ಮ ಮನಸ್ಸನ್ನು ಬದಲಾಯಿಸುತ್ತಿರುತ್ತಾರೆ. ಇವರ ವರ್ತನೆ ಸುಳ್ಳು ಎನ್ನುವುದನ್ನು ತೋರ್ಪಡಿಸುವುದಿಲ್ಲ.

ನಿಮ್ಮ ರಾಶಿಯ ಮೇಲೆ ಶನಿಯ ಪ್ರಭಾವ ಹೀಗಿದೆ ನೋಡಿ....

ಮೀನ

ಮೀನ

ಇವರು ತಾವು ಮುಗ್ಧ ಬಲಿಪಶು ಎನ್ನುವ ರೀತಿಯಲ್ಲಿ ವರ್ತಿಸುತ್ತಾ, ತಮ್ಮ ಸುತ್ತಲಿನ ಜನರನ್ನು ದೂಷಿಸುತ್ತಾರೆ. ತಾವು ಅದೆಷ್ಟೇ ತಪ್ಪು ಮಾಡಿದರೂ ಬಹಳ ಕರುಣಾ ಶೀಲರು ಎನ್ನುವ ವರ್ತನೆ ತೋರಿಸುತ್ತಾರೆ.

English summary

Shady Things Each Zodiac Sign Has Definitely Done

Sometimes people do things that are "SHADY." Be it either sneaking out of a party early or lying to your friends about having a day alone for WHO KNOWS WHAT, everyone has a thing that makes his friends wonder about his shady sides. Check out how shady characteristics can be defined based on zodiac signs...
Subscribe Newsletter