ಸೋಮವಾರದ ದಿನ ಭವಿಷ್ಯ

Posted By: Divya Pandith
Subscribe to Boldsky
ದಿನ ಭವಿಷ್ಯ - Kannada Astrology 27-11-2017 - Your Day Today - Oneindia Kannada

ಜೀವನ ಸುಗಮವಾಗಿ ನಡೆಯ ಬೇಕೆಂದರೆ ಜೀವನಾಧಾರವಾಗಿ ಉದ್ಯೋಗವಿರಬೇಕು. ಕಷ್ಟ ಪಟ್ಟು ದುಡಿಯುವುದರಿಂದ ಹಣದ ಬೆಲೆ ಏನು? ಎನ್ನುವುದು ಅರ್ಥವಾಗುತ್ತದೆ. ಇಲ್ಲವಾದರೆ ನಮ್ಮ ಪ್ರವೃತ್ತಿಯು ಮೋಜು ಮಸ್ತಿ ಹಾಗೂ ಚಟದಲ್ಲಿಯೇ ಮುಳುಗಿ ಹೋಗುತ್ತದೆ. ವಿರಾಮವನ್ನು ಮುಗಿಸಿ ಕೆಲಸಕ್ಕೆ ಹೊರಡುವ ಶುಭ ದಿನ ಸೋಮವಾರ. ಸತ್ಯಕ್ಕೆ ಸಾಕ್ಷಿಯಾಗುವ ಶಿವನು ನಮ್ಮ ಬದುಕಿಗೆ ಬೆಳಕನ್ನು ನೀಡುವನು.

ಜೀವನದ ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಭವಿಷ್ಯ ಉಜ್ವಲಗೊಳಿಸಲಿ ಎಂದು ಬಯಸೋಣ. ವೃತ್ತಿ ಜೀವನಕ್ಕೆ ಎಂದಿನಂತೆ ಹಿಂತಿರುಗುವ ಈ ಸೋಮವಾರ ನಿಮ್ಮ ಬದುಕಲ್ಲಿ ಯಾವೆಲ್ಲಾ ಬದಲಾವಣೆ ತರಬಹುದು ಎನ್ನುವುದನ್ನು ತಿಳಿದುಕೊಳ್ಳಲು ಬೋಲ್ಡ್ ಸ್ಕೈನ ದಿನ ಭವಿಷ್ಯವನ್ನು ಪರಿಶೀಲಿಸಬೇಕು. ನಿಮ್ಮ ಭವಿಷ್ಯ ಹಾಗೂ ಪರಿಹಾರ ಕ್ರಮಗಳ ಸಂಕ್ಷಿಪ್ತ ವಿವರಣೆ ಇಲ್ಲಿದೆ.... 

ಮೇಷ

ಮೇಷ

ಯಶಸ್ಸು ನಿಮ್ಮನ್ನು ಅರಸಿ ಬರುವುದು. ಶಿಕ್ಷಕ ವೃತ್ತಿಯಲ್ಲಿರುವವರಿಗೆ ಪ್ರಗತಿ ಉಂಟಾಗುವುದು. ಶಿಶ್ಯವರ್ಗದವರಿಗೆ ಗುರುಗಳಿಗೆ ಸನ್ಮಾನ ಕಾರ್ಯಕ್ರಮ ಗೋಚರವಾಗುವುದು. ವಿದೇಶಕ್ಕೆ ಹೋಗುವ ನಿಮ್ಮ ಕನಸು ನನಸಾಗುವುದು. ವೈಜ್ಞಾನಿಕ ಕ್ಷೇತ್ರದವರಲ್ಲಿ ತೊಡಗಿಕೊಂಡವರಿಗೆ ಅನುಕೂಲ ಉಂಟಾಗುವುದು. ಬಂಧು ಮಿತ್ರರ ಸಹಕಾರ ದೊರೆಯುವುದು. ನಿಮ್ಮ ತೀರ್ಮಾನಕ್ಕೆ ಅನುಸಾರವಾಗಿಯೇ ಎಲ್ಲಾ ಕೆಲಸಗಳು ಸುಗಮವಾಗಿ ನೆರವೇರುವುದು. ಉತ್ತಮ ಭವಿಷ್ಯಕ್ಕಾಗಿ ಶಿವನ ಆರಾಧನೆ ಮಾಡಿ.

ವೃಷಭ

ವೃಷಭ

ನೀವು ಮಾಡುತ್ತಿರುವ ಉದ್ಯೋಗದಲ್ಲಿ ಅಡೆತಡೆಗಳು ಉಂಟಾಗುವ ಸಾಧ್ಯತೆಗಳಿವೆ. ಬಂಧು ಮಿತ್ರರಿಂದಲೂ ಸಹ ಕಿರಿಕಿರಿ ಉಂಟಾಗುವ ಸಾಧ್ಯತೆಗಳಿವೆ. ತಂದೆ ಮಕ್ಕಳ ನಡುವೆ ಇರುವ ಅಸಮಧಾನ ಉಲ್ಭಣಗೊಳ್ಳಬಹುದು. ನಿಮ್ಮ ತೀರ್ಮಾನದ ಕಾರ್ಯ ಕೈಗೊಳ್ಳುವುದರ ಬಗ್ಗೆ ಎಚ್ಚರಿಕೆ ವಹಿಸಿ. ಮಾಡುತ್ತಿರುವ ಕೆಲಸದ ಜೊತೆ ಇನ್ನೊಂದು ಹೊಸ ಉದ್ಯೋಗಕ್ಕೆ ಕೈಹಾಕದಿರಿ. ಸ್ನೇಹಿತರಿಂದ ಮೋಸ ಉಂಟಾಗುವ ಸಾಧ್ಯತೆ ಇದೆ. ಸಮಸ್ಯೆಗಳ ನಿವಾರಣೆಗೆ ಗಣೇಶ ಮತ್ತು ಶಿವನ ಆರಾಧನೆ ಮಾಡಿ.

ಮಿಥುನ

ಮಿಥುನ

ಇಂದು ನಿಮಗೆ ಸಾಮಾನ್ಯವಾದ ದಿನ. ಉತ್ತಮ ಪ್ರಗತಿಯನ್ನು ಕಾಣಲಾಗದ ದಿನ ಎನ್ನಬಹುದು. ಕಂಡ ಕನಸುಗಳನ್ನು ನೆರವೇರಿಸಿಕೊಳ್ಳಲು ಹೆಚ್ಚಿನ ಶ್ರಮ ವಹಿಸಿ. ಇದರಿಂದ ಉತ್ತಮ ಫಲ ನಿಮಗೆ ದೊರೆಯುವುದು. ಸ್ಥಿರಾಸ್ತಿಯಿಂದ ಲಾಭ ಗಳಿಸಲು ಕೊಂಚ ಕಷ್ಟವಾಗುವುದು. ಕೃಷಿಕರಿಗೆ ಅನುಕೂಲಕರವಾದ ದಿನ. ಪತ್ರಕರ್ತರಿಗೆ ಸಮಾಧಾನ ದೊರೆಯುವುದು. ಉತ್ತಮ ಭವಿಷ್ಯಕ್ಕಾಗಿ ಗಣೇಶ ಮತ್ತು ಶೀವನ ಆರಾಧನೆ ಮಾಡಿ.

ಕರ್ಕ

ಕರ್ಕ

ಅನೇಕ ದಿನಗಳಿಂದ ಅನುಭವಿಸಿದ ಕಷ್ಟಗಳು ಮಾಯವಾಗುವ ದಿನ. ನೀವು ಇಂದು ಕಪ್ಪು ಬಟ್ಟೆಯನ್ನು ತೊಡದಿರಿ. ಮಾನಸಿಕವಾಗಿ ನೆಮ್ಮದಿ ದೊರೆಯುವುದು. ಆರೋಗ್ಯದ ಬಗ್ಗೆ ಕೊಂಚ ಕಾಳಜಿ ವಹಿಸಬೇಕಾಗುವುದು. ಮಕ್ಕಳಿಂದ ಶುಭ ವಾರ್ತೆ ಕೇಳುವಿರಿ. ಪತ್ರಕರ್ತರಿಗೆ ಅನುಕೂಲಕರವಾದ ದಿನ. ಸಮಾಜ ಸೇವಕರಿಗೆ ಸನ್ಮಾನಗಳು ಉಂಟಾಗುವ ಸಾಧ್ಯತೆಗಳಿವೆ. ಇನ್ನಷ್ಟು ಉತ್ತಮ ಭವಿಷ್ಯಕ್ಕಾಗಿ ಗಣೇಶ ಮತ್ತು ಶೀವನ ಆರಾಧನೆ ಮಾಡಿ.

ಸಿಂಹ

ಸಿಂಹ

ಮಾನಸಿಕ ಕಿರಿಕಿರಿ ಮುಂದುವರಿಯುವುದು. ನಿರೀಕ್ಷಿತ ಮಟ್ಟದ ಗೆಲುವನ್ನು ಸಾಧಿಸುವಲ್ಲಿ ವಿಫಲರಾಗುವಿರಿ. ಪಂಚಮ ಶನಿಯಿಂದಾಗಿ ವ್ಯಾಪಾರ ವಹಿವಾಟಿನಲ್ಲಿ ನಷ್ಟ ಉಂಟಾಗುವುದು. ಇದು ನಿಮ್ಮ ಜೀವನವನ್ನು ಹೈರಾಣ ಮಾಡುವ ಸಾಧ್ಯತೆಗಳಿವೆ. ಸಹೋದರಿಯ ಮಾತನ್ನು ಧಿಕ್ಕರಿಸದಿರಿ. ಆಸ್ತಿಗಾಗಿ ಕಿತ್ತಾಟ ಒಳಿತಲ್ಲ. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಕುಲದೇವರ ಆರಾಧನೆ ಮಾಡಿ.

ಕನ್ಯಾ

ಕನ್ಯಾ

ನಿಮಗೆ ಇಂದು ವಿಶೇಷವಾದ ಲಾಭಾಂಶ ದೊರೆಯುವುದು. ಮನೆಯಲ್ಲಿ ನೆಮ್ಮದಿಯ ವಾತಾವರಣ ಉಂಟಾಗುವುದು. ಹೆಂಡತಿಯ ಸಹಕಾರದಿಂದ ಮಾಡುತ್ತಿರುವ ಕೆಲಸದಲ್ಲಿ ಪ್ರಗತಿ ಉಂಟಾಗುವುದು. ತಂದೆ ಮಕ್ಕಳ ನಡುವೆ ಇರುವ ಭಿನ್ನಾಭಿಪ್ರಾಯಗಳು ಉಪಶಮನವಾಗುವುದು. ವಿದ್ಯಾರ್ಥಿಗಳಿಗೆ ಜಯ ಉಂಟಾಗುವುದು. ಉತ್ತಮ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ತುಲಾ

ತುಲಾ

ಬಂಧು ಮಿತ್ರರಿಂದ ಸಹಕಾರವನ್ನು ನಿರೀಕ್ಷೆ ಮಾಡಬಹುದು. ಉತ್ತಮವಾದ ದಿನವಾಗಲಿದೆ. ಹೊಸ ವ್ಯವಹಾರಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಸುವಿರಿ. ವಿದೇಶಕ್ಕೆ ಹೋಗುವ ಕನಸು ನನಸಾಗುವುದು. ಕೆಲಸದಲ್ಲಿ ಉತ್ತಮ ಲಭ ದೊರೆಯುವುದು. ಇನ್ನಷ್ಟು ಯಶಸ್ವಿ ಬದುಕಿಗಾಗಿ ಗಣೇಶನ ಆರಾಧನೆ ಹಾಗೂ ಶಿವನ ಸ್ಮರಣೆ ಮಾಡಿ.

ವೃಶ್ಚಿಕ

ವೃಶ್ಚಿಕ

ಇಂದು ನಿಮಗೆ ಸಾಮಾನ್ಯವಾದಂತಹ ದಿನ. ಯಾವುದೇ ಕಾರಣಕ್ಕೂ ಆತುರದ ನಿರ್ಧಾರವನ್ನು ಕೈಗೊಳ್ಳದಿರಿ. ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಮೇಲಾಧಿಕಾರಿಗಳಿಂದ ಕಿರಿಕಿರಿ ಉಂಟಾಗಬಹುದು. ಅರಣ್ಯ ಇಲಾಖೆಯಲ್ಲಿ ಕೆಲಸಮಾಡುವವರು ಎಚ್ಚರಿಕೆಯಿಂದ ಇರಬೇಕು. ವನ್ಯ ಮೃಗಗಳ ಕಾಟಕ್ಕೆ ತುತ್ತಾಗುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಯಶಸ್ವಿ ಬದುಕಿಗಾಗಿ ಗಣೇಶ ಮತ್ತು ಶಿವನ ಆರಾಧನೆ ಮಾಡಿ.

ಧನು

ಧನು

ವಿಪರೀತವಾದ ಆಯಾಸ, ಆರೋಗ್ಯದ ಸಮಸ್ಯೆ, ಹಣಕಾಸಿಗೆ ಸಂಬಂಧಿಸಿದಂತೆ ದುರ್ಬಳಕೆ ಉಂಟಾಗುವ ಸಾಧ್ಯತೆಗಳಿವೆ. ಅನೇಕ ಪ್ರಯತ್ನದಲ್ಲಿ ವಿಫಲರಾಗುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೂ ವಿದ್ಯಾಭ್ಯಾಸದಲ್ಲಿ ಸೋಲು ಉಂಟಾಗಬಹುದು. ಸಮಸ್ಯೆಗಳ ನಿವಾರಣೆಗೆ ಶಿವನಿಗೆ ಬಿಲ್ವಾರ್ಚನೆ ಹಾಗೂ ಆಂಜನೇಯನ ಸ್ತುತಿಯನ್ನು ಮಾಡಿ.

ಮಕರ

ಮಕರ

ಶನಿಯ ಪ್ರಭಾವ ಇರುವುದರಿಂದ ಇಂದು ನಿಮಗೆ ಸಾಮಾನ್ಯವಾದಂತಹ ದಿನ ಎಂದು ಹೇಳಬಹುದು. ಯುವಕರು ವಾಹನಗಳನ್ನು ಓಡಿಸುವಾಗ ಎಚ್ಚರಿಕೆಯಿಂದ ಓಡಿಸಬೇಕು. ರಾಹು ಕಾಲದ ಸಮಯದಲ್ಲಿ ಮನೆಯಿಂದ ಹೊರಗೆ ಹೋಗದಿರಿ. ಉದ್ಯೋಗದಲ್ಲಿ ಕೆಲವರಿಗೆ ಸಾಮಾನ್ಯ ಫಲ ಹಾಗೂ ಇನ್ನೂ ಕೆಲವರಿಗೆ ನಷ್ಟ ಆಗುವ ಸಾಧ್ಯತೆಗಳಿವೆ. ಸಣ್ಣ ವ್ಯಾಪಾರಿಗಳಿಗೆ ಮಾತ್ರ ಲಾಭ ತಂದುಕೊಡುವುದು. ಉತ್ತಮ ಭವಿಷ್ಯಕ್ಕಾಗಿ ಶಿವನ ಆರಾಧನೆ ಮಾಡಿ.

ಕುಂಬ

ಕುಂಬ

ಹೆಂಡತಿಯಿಂದ ಸಕಾರಾತ್ಮಕ ಒಲವು ದೊರೆಯುವುದು. ಮನೆಯಲ್ಲಿ ನೆಮ್ಮದಿ ಹಾಗೂ ಮಾನಸಿಕವಾಗಿ ಸಂತೋಷ ಉಂಟಾಗುವುದು. ವಿಹಾರಕ್ಕಾಗಿ ದೂರದ ಪ್ರಯಾಣ ಕೈಗೊಳ್ಳುವಿರಿ. ವಿದೇಶಯಾನದ ಕನಸು ನನಸಾಗುವುದು. ಸುಂದರವಾದ ಬದುಕಿನ ಕನಸಿಗೆ ಮಕ್ಕಳು ಸಾಕ್ಷಿಯಾಗುತ್ತಾರೆ. ಇನ್ನಷ್ಟು ಸಮಾಧಾನ ಹಾಗೂ ಸುಂದರ ಬದುಕಿಗಾಗಿ ಗಣೇಶನ ಆರಾಧನೆ ಹಾಗೂ ಶೀವನ ಉಪಾಸನೆ ಮಾಡಿ.

ಮೀನ

ಮೀನ

ನೀವು ಅಂದುಕೊಂಡ ಕಾರ್ಯ ಸುಗಮವಾಗಿ ನೆರವೇರುವುದು. ಮನೆಯಲ್ಲಿ ನೆಮ್ಮದಿ ಹಾಗೂ ಬಂಧು ಮಿತ್ರರ ಸಹಕಾರ ದೊರೆಯುವುದು. ನಿರೀಕ್ಷಿತ ಮಟ್ಟದ ಯಶಸ್ಸು ಉಂಟಾಗುವುದು. ಹತ್ತಾರು ವಿಧದ ಅನುಕೂಲವನ್ನು ನೀವು ಪಡೆದುಕೊಳ್ಳುವಿರಿ. ಸ್ತ್ರೀಯರಿಗೆ ತವರು ಮನೆಯಿಂದ ಉಡುಗೊರೆ ಹಾಗೂ ಚಿನ್ನಾಭರಣಗಳು ದೊರೆಯುವ ಸಾಧ್ಯತೆಗಳಿವೆ. ಉತ್ತಮ ಭವಿಷ್ಯಕ್ಕಾಗಿ ಗಣೇಶ ಮತ್ತು ಶೀವನ ಆರಾಧನೆ ಮಾಡಿ.

English summary

rashi bhavishya november-27th

Know what astrology and the planets have in store for you today. Choose your zodiac sign and read the details...