For Quick Alerts
ALLOW NOTIFICATIONS  
For Daily Alerts

  ಜನ್ಮರಾಶಿಯನ್ನನುಸರಿಸಿ 2018ರಲ್ಲಿ ನಿಮ್ಮ ಉದ್ಯೋಗ ಹೇಗಿರುತ್ತದೆ?

  By Manu
  |

  ಪ್ರತಿ ವ್ಯಕ್ತಿಗೂ ಜೀವನದಲ್ಲಿ ತನ್ನದೇ ಆದ ಮುಖ್ಯವಾದ ವಿಷಯವೆಂದರೆ ಆತನ ವೃತ್ತಿ ಅಥವಾ ಜೀವನೋಪಾಯದ ಕ್ರಮ. ಒಂದು ವೇಳೆ ನಿಮ್ಮ ವೃತ್ತಿಜೀವನ ಒಂದೇ ಹಂತದಲ್ಲಿ ಸಾಗುತ್ತಿದ್ದು ಇದರಿಂದ ಸಾಕಷ್ಟು ಆದಾಯವೂ ಬರುತ್ತಿದ್ದರೆ ಇದರಿಂದ ಸುಖಕರ ಹಾಗೂ ನೆಮ್ಮದಿಯ ಜೀವನವನ್ನು ಸಾಗಿಸಬಹುದು. ನಮಗೆಲ್ಲ ನೆಮ್ಮದಿಯೇ ಜೀವನದಲ್ಲಿ ಬಲುಮುಖ್ಯವಾಗಿ ಬೇಕಾಗಿರುವುದು ಅಲ್ಲವೇ?

  ಎಲ್ಲಾ ದಿನಗಳು ಎಲ್ಲರಿಗೂ ಒಂದೇ ರೀತಿಯದ್ದಾಗಿರುವುದಿಲ್ಲ. ಕೆಲವರಿಗೆ ಸುಖಕರವಾದರೆ ಇದೇ ದಿನಗಳು ಇನ್ನೊಬ್ಬರಿಗೆ ಕಷ್ಟದ ದಿನಗಳಾಗಿರಬಹುದು. 2018ರಲ್ಲಿ ಬಹಳಷ್ಟು ಪ್ರಮುಖ ವಿದ್ಯಮಾನಗಳು ನಡೆಯಲಿವೆ. ಮುಖ್ಯವಾಗಿ ಖಗೋಳದಲ್ಲಿಯೂ ಪ್ರಮುಖವಾದ ಎರಡು ಘಟನೆಗಳು ಸಂಭವಿಸಲಿದ್ದು ಇದರ ಪರಿಣಾಮಗಳು ಒಳ್ಳೆಯದೂ ಹಾಗೂ ಕೆಟ್ಟದ್ದೂ ಇರುತ್ತವೆ. ಪ್ರತಿ ರಾಶಿಗನುಗುಣವಾಗಿ ಈ ಬದಲಾವಣೆಗಳು ಬದಲಾಗುತ್ತವೆ. ಬನ್ನಿ, 2018ರಲ್ಲಿ ಪ್ರತಿ ರಾಶಿಯವರ ಫಲ ಹೇಗಿರುತ್ತದೆ ನೋಡೋಣ...

  ಮೇಷ

  ಮೇಷ

  ಈ ರಾಶಿಯವರಿಗೆ 2018ರಲ್ಲಿ ವೃತ್ತಿನಿಮಿತ್ತ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ವರ್ಷವಾಗಿದೆ. ಕೆಲವರಿಗೆ ವರ್ಷಾರಂಭದಲ್ಲಿ ಸಂಪೂರ್ಣವಾಗಿ ಹೊಸದೇ ಆಗಿರುವ ಉದ್ಯೋಗದಲ್ಲಿ ಮುಂದುವರೆಯುವ ಅವಕಾಶ ಲಭಿಸಿ ಹಲವು ಹೊಸ ಹೊಸ ಅವಕಾಶಗಳನ್ನು ನೀಡುತ್ತದೆ. ಈ ಅವಕಾಶಗಳನ್ನು ಸದುಪಯೋಗಿಸಿಕೊಂಡರೆ ಎಲ್ಲವೂ ನಿಮ್ಮ ಪರವಾಗಿಯೇ ಆಗುತ್ತದೆ. ಇನ್ನು ಸೋಮವಾರ, ಶುಕ್ರವಾರ ಮತ್ತು ಶನಿವಾರ ಈ ರಾಶಿಚಕ್ರಕ್ಕೆ ಅದೃಷ್ಟದ ದಿನಗಳು. ಈ ದಿನಗಳಲ್ಲಿ ಹೂಡಿಕೆ ಮಾಡುವ ದೃಷ್ಟಿಯಿಂದ ಉತ್ತಮವೆಂದು ಪರಿಗಣಿಸಲಾಗುತ್ತದೆ. ಮೇಷ ರಾಶಿಯವರು ಸದಾ ಗೆಲುವನ್ನು ಸಾಧಿಸುವ ಹವಣಿಕೆಯಲ್ಲಿರುತ್ತಾರೆ. ಇವರು ತಮ್ಮ ಮೊದಲನೇ ಸ್ಥಾನವನ್ನು ಬಿಟ್ಟು ಎರಡನೇ ಸ್ಥಾನದಲ್ಲಿ ನಿಲ್ಲಲು ಬಯಸುವುದಿಲ್ಲ. ಇವರು ಸದಾ ಸ್ಪರ್ಧಾತ್ಮಕ ಮನೋಭಾವದಲ್ಲಿಯೇ ಇರುತ್ತಾರೆ ಎನ್ನಬಹುದು. ಇವರಿಗೆ ಈ ವರ್ಷ ಸ್ವಲ್ಪ ದುರ್ಬಲ ವಾಗಿದ್ದುದರಿಂದ ಹೆಚ್ಚಿನದಾಗಿ ಏನನ್ನು ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ ಎಂದೇ ಹೇಳಬಹುದು. ಇವರು ಮುಂಬರುವ ಅಂದರೆ 2018ರಲ್ಲಿ ಆರೋಗ್ಯಕರ ಪೈಪೋಟಿ ನಡೆಸಬೇಕಾಗಿದೆ. ಅದಕ್ಕಾಗಿ ಈಗಿನಿಂದಲೇ ಸೂಕ್ತ ರೀತಿಯ ತಯಾರಿ ಮಾಡಿಕೊಳ್ಳಬೇಕು.

  ವೃಷಭ

  ವೃಷಭ

  ಈ ವರ್ಷದಲ್ಲಿ ಶನಿ ವಿಶೇಷವಾಗಿ ನಿಮ್ಮ ಪರವಾಗಿರುತ್ತಾನೆ ಹಾಗೂ ಉದ್ಯೋಗದಲ್ಲಿ ಅಗತ್ಯವಿರುವ ಏಳ್ಗೆಯನ್ನು ಪಡೆಯಲು ನೆರವಾಗುತ್ತಾನೆ. ಉದ್ಯೋಗದಲ್ಲಿ ಭಡ್ತಿ ಹಾಗೂ ಉತ್ತಮ ಸ್ಥಾನಾಲಂಕಾರವೂ ಈ ವರ್ಷ ಸಾಧ್ಯವಾಗಬಹುದು. ನಿಮ್ಮ ಉದ್ಯೋಗದಲ್ಲಿ ಪಡುವ ಕಷ್ಟ ಈ ವರ್ಷ ಫಲ ನೀಡುತ್ತವೆ. ಇದೇ ಸಮಯದಲ್ಲಿ ನಿಮ್ಮ ಜೀವನದ ಹೆಚ್ಚಿನ ಸಮಯ ವ್ಯಸ್ತರಾಗಿಯೇ ಕಳೆಯಬೇಕಾಗುತ್ತದೆ. ಈ ರಾಶಿಚಕ್ರ ಚಿಹ್ನೆಗೆ ಅದೃಷ್ಟದ ದಿನಗಳು ಬುಧವಾರ ಮತ್ತು ಗುರುವಾರ. ಇದು ಅವರಿಗೆ ಅಸಾಧಾರಣವಾಗಿ ಅದೃಷ್ಟಶಾಲಿಯಾಗಿದೆ. ವಾರದ ಈ ಎರಡು ದಿನಗಳಲ್ಲಿ ಮಾಡಿದ ಯಾವುದನ್ನಾದರೂ ಅವುಗಳು ಪ್ರತಿಫಲವನ್ನು ಪೂರೈಸುವಲ್ಲಿ ಪಡೆಯಬಹುದು. ಈ ರಾಶಿ ಚಕ್ರದವರು ಸರಿಪಡಿಸುವ ಅಭ್ಯಾಸವನ್ನು ಪಡೆದುಕೊಳ್ಳಬೇಕು. ಇವರು ಮಾಡುವ ತಪ್ಪಿನ ಬಗ್ಗೆಯೂ ಸೂಕ್ತ ರೀತಿಯ ಚಿಂತನೆ ನಡೆಸಬೇಕು. ಇವರು ಎಲ್ಲಾ ವಿಚಾರದಲ್ಲೂ, ಎಲ್ಲವೂ ಸರಿಯಾಗಿದೆ ಎಂದೇ ಚಿಂತಿಸುತ್ತಿರುತ್ತಾರೆ. 2018ಕ್ಕೆ ಸೂಕ್ತ ರೀತಿಯ ಗುರಿಯನ್ನು ಹೊಂದುವುದರ ಜೊತೆಗೆ ಅದು ಸುಲಭವಾಗಿ ನೆರವೇರುವಂತೆ ನೋಡಿಕೊಳ್ಳಬೇಕು.

  ಮಿಥುನ

  ಮಿಥುನ

  ಈ ವರ್ಷದಲ್ಲಿ ನಿಮ್ಮ ಉದ್ಯೋಗದಲ್ಲಿ ಗಮನಾರ್ಹ ಬದಲಾವಣೆಗಳನ್ನು ಕಾಣಬಹುದು. ಆದರೆ ಈ ಬದಲಾವಣೆಗಳನ್ನು ಸದುಪಯೋಗಿಸಿಕೊಳ್ಳುವುದರಲ್ಲಿಯೇ ನಿಮ್ಮ ಏಳ್ಗೆ ಅಡಗಿದ್ದು ಈ ಬಗ್ಗೆ ಎಚ್ಚರಿಕೆಯಿಂದ ಮುಂದುವರೆಯಬೇಕು. ನಿಮ್ಮ ಮೇಲಧಿಕಾರಿ ನಿಮ್ಮ ಕೆಲಸವನ್ನು ಅರ್ಥ ಮಾಡಿಕೊಳ್ಳುವವರೂ ಆಗಿರುತ್ತಾರೆ. ಈ ರಾಶಿಚಕ್ರ ಚಿಹ್ನೆ ಪ್ರೀತಿಯು ಪರವಾಗಿ ಇರುತ್ತದೆ. ಸೋಮವಾರ, ಬುಧವಾರ, ಶನಿವಾರ ಅಥವಾ ಭಾನುವಾರದಂದು ತಮ್ಮ ಪ್ರೀತಿಯನ್ನು ಕೇಳಬಹುದು. ಇನ್ನು ಇಲ್ಲಿ ಗಮನಿಸಬೇಕಾದ ಸಂಗತಿಗಳೇನೆಂದರೆ ಇವರು ಸದಾ ಏನನ್ನಾದರೂ ಕಳೆದುಕೊಳ್ಳುತ್ತೇನೆ ಎನ್ನುವ ಭಯದಲ್ಲಿಯೇ ಇರುತ್ತಾರೆ. ಇವರು ಈ ಭಯದಿಂದ ಹೊರಬರುವ ಪ್ರಯತ್ನ ಮಾಡಬೇಕು. ಇಲ್ಲವಾದರೆ ಮುಂಬರುವ ವರ್ಷದಲ್ಲಿ ಕಾರ್ಯವನ್ನು ಕೈಗೊಳ್ಳಲು ಅಡಚಣೆ ಉಂಟಾಗಬಹುದು. ಮುಂದಿನ ವರ್ಷ ಅಂದರೆ 2018ರಲ್ಲಿ ಪರಿಪೂರ್ಣತೆ ಪಡೆದುಕೊಳ್ಳಬೇಕೆಂದರೆ ಮೊದಲು ಭಯದಿಂದ ಹೊರ ಬರಬೇಕು.

  ಕರ್ಕಾಟಕ

  ಕರ್ಕಾಟಕ

  ವೃತ್ತಿಪರರಿಗೆ ಈ ವರ್ಷ ಇನ್ನಷ್ಟು ತೊಡಕಿನದ್ದಾಗಿರಲಿದೆ. 2018 ರಲ್ಲಿ ಉದ್ಯೋಗದಲ್ಲಿ ಕೆಲವಾರು ಅಡ್ಡಿ ಆತಂಕಗಳು ಎದುರಾಗುತ್ತಿದ್ದು ನಿಮ್ಮ ಕೆಲಸವನ್ನು ಮುಗಿಸಬೇಕಾದ ಗಡುವಿನೊಳಗೇ ಪೂರೈಸಲು ಹೆಣಗಾಡಬೇಕಾಗುತ್ತದೆ. ಇದೇ ಕಾರಣಕ್ಕೆ ನಿಮ್ಮ ಸಹೋದ್ಯೋಗಿ ಹಾಗೂ ಮೇಲಧಿಕಾರಿಗಳೊಂದಿಗೆ ತಾಳ್ಮೆಯಿಂದ ಹಾಗೂ ಉತ್ತಮವಾಗಿ ವ್ಯವಹರಿಸಿ. ಇನ್ನು ಈ ರಾಶಿಚಕ್ರ ಚಿಹ್ನೆಗೆ ಈ ವರ್ಷ ಒಂದು ಸವಾಲು ಇದ್ದಂತೆ. ಅವರು ವೃತ್ತಿಪರ ಮತ್ತು ವೈಯುಕ್ತಿಕ ಜೀವನದಲ್ಲಿ ಯಶಸ್ವಿಯಾಗಲು ಸಾಕಷ್ಟು ಶಕ್ತಿ ಮತ್ತು ಶ್ರಮವನ್ನು ಹಾಕಬೇಕಾಗುತ್ತದೆ. ಮಂಗಳವಾರ, ಶನಿವಾರ ಮತ್ತು ಭಾನುವಾರ ಈ ರಾಶಿಚಕ್ರ ಚಿಹ್ನೆಗೆ ಅದೃಷ್ಟ ದಿನಗಳು. ಈ ರಾಶಿಚಕ್ರದ ಜನರು ತಮ್ಮ ಭಾವನೆಗಳಿಗೆ ಹೆಸರುವಾಸಿಯಾಗಿದ್ದಾರೆ ಮತ್ತು ಕೆಲವೊಮ್ಮೆ ತಮ್ಮ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. 2018 ರಲ್ಲಿ ಪ್ರತಿಯೊಬ್ಬರಿಗೂ ತಮ್ಮನ್ನು ತಾವು ಭಾವನಾತ್ಮಕವಾಗಿ ಲಭ್ಯವಾಗುವಂತೆ ಮಾಡಲು ಅವಕಾಶ ಮಾಡಿಕೊಡಬೇಕು ಮತ್ತು ಸ್ವಲ್ಪ ಸಮಯದವರೆಗೆ ತಮ್ಮ ಅಸ್ತಿತ್ವವನ್ನು ಗಮನಹರಿಸಬೇಕು. ಅವರು ತಮ್ಮ ಜೀವನದಲ್ಲಿ ಕಳೆದುಹೋದ ಎಲ್ಲಾ ಸಂಬಂಧಗಳನ್ನೂ ಹೊರಬಿಟ್ಟು ಮುಂದೆ ಸಾಗಬೇಕಾಗುತ್ತದೆ.

  ಸಿಂಹ

  ಸಿಂಹ

  ಈ ವರ್ಷ ಸ್ವಂತ ಉದ್ದಿಮೆ ಹೊಂದಿರುವ ವ್ಯಕ್ತಿಗಳಿಗೆ ಹೆಚ್ಚು ಅನುಕೂಲಕರವಾಗಿದ್ದು ಹೊಸ ಅವಕಾಶಗಳು ಕೂಡಿ ಬರಲಿವೆ. ಗ್ರಹಗಳ ಚಲನೆ ಈ ರಾಶಿಯವರಿಗೆ ನೆರವು ನೀಡಲಿವೆ. ಆದರೆ ನಿಮ್ಮ ಕೆಲಸಕ್ಕೆ ಕೆಲವಾರು ಅಡ್ಡಿಗಳು ಎದುರಾಗಬಹುದು. ಈ ಅಡ್ಡಿಗಳನ್ನು ನಿವಾರಿಸಲು ಸಾಮಾನ್ಯ ಸಮಯಕ್ಕಿಂತಲೂ ಕೊಂಚ ಹೆಚ್ಚೇ ಸಮಯವನ್ನು ಕೆಲಸಕ್ಕಾಗಿ ವಿನಿಯೋಗಿಸಬೇಕಾಗಿ ಬರಬಹುದು. ಈ ಹೆಚ್ಚುವರಿ ಸಮಯ ಬಳಸಿಯೂ ಗಡುವಿನೊಳಗೇ ಕೆಲಸವನ್ನು ಪೂರೈಸುವುದು ಅನಿವಾರ್ಯವಾಗುತ್ತದೆ. ಮುಂಬರುವ ವರ್ಷವು ಈ ರಾಶಿಚಕ್ರ ಚಿಹ್ನೆಗೆ ಬಹುಮಾನ ನೀಡುವಂತಿದೆ. ಸೋಮವಾರ, ಬುಧವಾರ, ಗುರುವಾರ ಮತ್ತು ಭಾನುವಾರದ ಅದೃಷ್ಟದ ದಿನಗಳಲ್ಲಿ ಹೂಡಿಕೆಗಳನ್ನು ಅಥವಾ ಯಾವುದೇ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಬಗ್ಗೆ ನಿರ್ಧರಿಸ ಬಹುದು. ಈ ರಾಶಿಯವರನ್ನು ಸದಾ ತಪ್ಪು ರೀತಿಯಲ್ಲಿಯೇ ಅರ್ಥೈಸಿಕೊಳ್ಳಲಾಗುತ್ತದೆ. ಅಲ್ಲದೆ ಇವರನ್ನು ಸಾಮಾನ್ಯವಾಗಿ ತಿರಸ್ಕರಿಸುವ ಸಂದರ್ಭವೂ ಉಂಟು. ಎಲ್ಲರಿಗೂ ಸರಿಮಾಡಿ ನಡೆದುಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಸರಿ. ನಿರಾಕರಣೆಯನ್ನು ಸ್ವೀಕರಿಸುವುದು ಮತ್ತು ತಿರಸ್ಕರಿಸುವುದೆಲ್ಲವೂ ನಿಮ್ಮ ಮೇಲೆ ಬಿಟ್ಟಿದೆ. 2018ರಲ್ಲಿ ನೀವು ನಿಮ್ಮ ಅಹಂ ತೊರೆದು, ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಲು ಸಿದ್ಧರಾಗಬೇಕು.

  ಕನ್ಯಾ

  ಕನ್ಯಾ

  ಈ ರಾಶಿಯವರು ತಮ್ಮ ವೃತ್ತಿಯಲ್ಲಿ ಏಳ್ಗೆಯನ್ನು ಬಯಸಿದರೆ ಈ ವರ್ಷ ಇವರಿಗೆ ಅನುಕೂಲಕರವಾಗಿರುತ್ತದೆ ಹಾಗೂ ಏಳ್ಗೆಯನ್ನೂ ಕಾಣಬಹುದು. ಆದರೆ ವೃತ್ತಿಯಲ್ಲಿ ಬದಲಾವಣೆಯನ್ನು ಬಯಸುವವರಿಗೆ ಕಾಲ ಕೂಡಿ ಬರಲು ಕೊಂಚ ಕಾಯಬೇಕಾಗುತ್ತದೆ. ಹಾಗಾಗಿ ಹೊಸ ಉದ್ಯೋಗಕ್ಕೆ ಬದಲಾವಣೆ ಹೊಂದಲು ಈ ವರ್ಷ ಸೂಕ್ತವಲ್ಲ! ಈಗಿರುವ ವೃತ್ತಿಯನ್ನೇ ಹೆಚ್ಚು ತನ್ಮಯತೆಯಿಂದ ನಿರ್ವಹಿಸಲು ಯತ್ನಿಸಿ. ಈ ಜನರು ಅಂತಿಮವಾಗಿ ತಮ್ಮ ಫಲಪ್ರದ ಫಲಿತಾಂಶಗಳನ್ನು ಪಡೆಯುತ್ತಾರೆ. ಏಕೆಂದರೆ ಅವರು ದೀರ್ಘಕಾಲದ ವರೆಗೆ ಯೋಜನೆ ಮಾಡುತ್ತಿರುವ ಕೆಲವು ಸಕಾರಾತ್ಮಕ ಫಲಿತಾಂಶಗಳನ್ನು ನೋಡುತ್ತಿದ್ದಾರೆ. ಮುಂಬರುವ ವರ್ಷದಲ್ಲಿ ಅದೃಷ್ಟದ ದಿನಗಳು ಗುರುವಾರ, ಶುಕ್ರವಾರ ಮತ್ತು ಶನಿವಾರ. ಈ ರಾಶಿಚಕ್ರದವರ ಆಸೆಗೆ ಅಂತ್ಯ ಎನ್ನುವುದೇ ಇರುವುದಿಲ್ಲ. ಇವರು ತಮ್ಮ ಅಗತ್ಯತೆ ಮತ್ತು ಪ್ರಯತ್ನಗಳ ಬಗ್ಗೆ ಹೆಚ್ಚು ಗಮನ ನೀಡಬೇಕು. ಮುಂಬರುವ ವರ್ಷ 2018ರಲ್ಲಿ ಕಲಿಯಬೇಕಾದದ್ದು ಹಾಗೂ ಸಾಧಿಸಬೇಕಾದ ಅನೇಕ ವಿಚಾರಗಳಿವೆ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು.

  ತುಲಾ

  ತುಲಾ

  ತುಲಾ ರಾಶಿಯವರು ಒಂದು ವೇಳೆ ಸ್ವಂತ ಉದ್ಯಮ ಹೊಂದಿದ್ದರೆ ಇವರಿಗೆ ಈ ವರ್ಷ ಕಷ್ಟಕರವಾಗಿರಲಿದೆ. ಈ ವರ್ಷ ಕೆಲವು ಪ್ರಮುಖ ಕಾರ್ಯಗಳನ್ನು ಪೂರೈಸಬೇಕಾಗಿ ಬರಬಹುದು. ಮಾರ್ಚ್ ಮಧ್ಯದ ಸಮಯದಿಂದ ನಿಮ್ಮ ಉದ್ಯೋಗದಲ್ಲಿ ಪ್ರಮುಖವಾದ ಬೆಳವಣಿಗೆಯಾಗುವ ಸಂಭವವಿದೆ. ಮುಂಬರುವ ವರ್ಷದಲ್ಲಿ ಈ ರಾಶಿಚಕ್ರವು ಸಾಕಷ್ಟು ಒತ್ತಡ ಮತ್ತು ಸವಾಲುಗಳನ್ನು ಎದುರಿಸಲಿದೆ. ಆದರೆ ಅವರು ಚಿಂತೆ ಮಾಡಬೇಕಾಗಿಲ್ಲ, ಏಕೆಂದರೆ ಅವರು 100% ರಷ್ಟು ಲಾಭದಾಯಕ ಮತ್ತು ಪೂರೈಸುವ ದಿನಗಳನ್ನೂ ಹೊಂದಿರುತ್ತಾರೆ. ಮುಂಬರುವ ವರ್ಷದಲ್ಲಿ ಈ ರಾಶಿಚಕ್ರದ ಚಿಹ್ನೆಗಳಿಗೆ ಶನಿವಾರ ಮತ್ತು ಭಾನುವಾರಗಳು ಅದೃಷ್ಟದ ದಿನಗಳು. ಇವರು ತಮ್ಮ ಸುತ್ತಲಿನ ಎಲ್ಲಾ ಜನರನ್ನು ಸಂಪೂರ್ಣವಾಗಿ ಸಂತೋಷದಿಂದ ಇರಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಇವರು ಬೇರೆಯವರನ್ನು ಸಂತೋಷಪಡಿಸುವ ಕಾರ್ಯವನ್ನು ಮೊದಲು ನಿಲ್ಲಿಸಬೇಕು. ಜೊತೆಗೆ ತಮ್ಮ ಕಾರ್ಯದ ಬಗ್ಗೆ ಹೆಚ್ಚು ಗಮನ ನೀಡಬೇಕು. 2018ರಲ್ಲಿ ಇವರು ಬೇರೆಯವರ ಸಂತೋಷಕ್ಕಾಗಿ ಮಾಡುವ ಆಲೋಚನೆಗಳನ್ನು ನಿಲ್ಲಿನಿ, ತಮ್ಮ ಅಭಿವೃದ್ಧಿಯ ಕಡೆಗೆ ಗಮನ ನೀಡ ಬೇಕಾಗುವುದು.

  ವೃಶ್ಚಿಕ

  ವೃಶ್ಚಿಕ

  ಈ ರಾಶಿಯವರು ಉತ್ತಮ ಉದ್ಯೋಗಗಳಿಗೆ ತಮ್ಮ ವೃತ್ತಿಯನ್ನು ಬದಲಿಸಿಕೊಳ್ಳಲು ಸೂಕ್ತ ಸಮಯವಾಗಿದ್ದು ಉತ್ತಮ ಉದ್ಯೋಗ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಈ ವರ್ಷ ಹೊಸ ಬಗೆಯ ಸವಾಲುಗಳನ್ನೂ ಎದುರಿಸಬೇಕಾಗಿ ಬರಬಹುದು. ಆದರೆ ಈ ಸವಾಲುಗಳನ್ನು ಸ್ವೀಕರಿಸಲು ಹಿಂಜರಿಯದಿರಿ. ನಿಮ್ಮ ವೃತ್ತಿಯಲ್ಲಿ ಎಲ್ಲರೊಡನೆ ತಾಳ್ಮೆಯಿಂದ ಹಾಗೂ ಉತ್ತಮ ಬಾಂಧವ್ಯವನ್ನು ತೋರ್ಪಡಿಸಿ. ವೃತ್ತಿಯಲ್ಲಿ ಎಷ್ಟೇ ಒತ್ತಡ ಬಂದರೂ ಧೃತಿಗೆಡದಿರಿ.ಇನ್ನು ಇವರು ಯಾವುದೇ ವೃತ್ತಿಪರ ಅಥವಾ ಯಾವುದೇ ಜೀವನ-ಬದಲಾಗುವ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ಅವರು ಯೋಜಿಸುತ್ತಿದ್ದರೆ ಸೋಮವಾರ, ಶುಕ್ರವಾರ ಮತ್ತು ಭಾನುವಾರಗಳು ತಮ್ಮ ಅದೃಷ್ಟದ ದಿನಗಳಲ್ಲಿ ಅದನ್ನು ಮಾಡಬಹುದು. ಇನ್ನು ಇವರು ಸೂಕ್ತ ವ್ಯಕ್ತಿಯನ್ನು ಆರಿಸಿಕೊಳ್ಳುವಲ್ಲಿ ವಿಫಲರಾಗುತ್ತಾರೆ. ಇದರಿಂದ ತಮ್ಮ ವಿಶ್ವಾಸ ಹಾಗೂ ನಂಬಿಕೆಯನ್ನು ಕಳೆದುಕೊಂಡು ತಮ್ಮ ತನವನ್ನು ಕಳೆದುಕೊಳ್ಳುತ್ತಾರೆ ಎನ್ನಬಹುದು. 2018ರಲ್ಲಿ ಇವರು ಸೂಕ್ತ ವ್ಯಕ್ತಿಯ ಆಯ್ಕೆ ಮಾಡುವ ಪರಿಯನ್ನು ತಿಳಿಯಬೇಕಿದೆ. ಅದೊಂದು ಅವರ ಜೀವನವನ್ನು ಸರಿಯಾದ ಹಾದಿಯಲ್ಲಿ ನಡೆಸಿಕೊಂಡು ಹೋಗಲು ಸೂಕ್ತವಾದ ವರ್ಷವಾಗಿದೆ ಎಂದು ಹೇಳಬಹುದು.

  ಧನು

  ಧನು

  ಈ ವರ್ಷ ಧನು ರಾಶಿಯವರಿಗೆ ಶುಭ ತರಲಿದೆ. ಕೆಲಸದ ಸ್ಥಳದಲ್ಲಿಯೂ ಸಂತೋಷದ ವಾತಾವರಣ ಉಂಟಾಗಲಿದೆ. ಹೊಸ ಅವಕಾಶಗಳು ಒದಗಿ ಬರಲಿವೆ ಹಾಗೂ ನಿಮ್ಮ ವೇತನವೂ ವೃದ್ದಿಗೊಳ್ಳಲಿದೆ. ಇದಕ್ಕಾಗಿ ನಿಮ್ಮ ಸಹೋದ್ಯೋಗಿ ಗಳೊಂದಿಗೆ, ಉನ್ನತ ಅಧಿಕಾರಿಗಳೊಂದಿಗೆ ಉತ್ತಮವಾಗಿ ವ್ಯವಹರಿಸಿ. ಮುಂಬರುವ ವರ್ಷ ಈ ರಾಶಿಚಕ್ರದ ಚಿಹ್ನೆಗಾಗಿ ಬಹಳಷ್ಟು ಬೆಳವಣಿಗೆ ಮತ್ತು ಯಶಸ್ಸನ್ನು ತರಲಿದೆ. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಶುಕ್ರವಾರ, ಸೋಮವಾರ ಮತ್ತು ಮಂಗಳವಾರ ಅವುಗಳು ತಮ್ಮ ಅದೃಷ್ಟದ ದಿನಗಳ ಬಗ್ಗೆ ನೆನಪಿನಲ್ಲಿಟ್ಟುಕೊಳ್ಳಬೇಕು. ಈ ರಾಶಿಯವರು ಈಗಾಗಲೇ ಕೆಲವು ವಿಚಾರ ಹಾಗೂ ವ್ಯಕ್ತಿಗಳಿಂದ ದೂರವಾಗಿದ್ದಾರೆ. ಇವರು 2018ರಲ್ಲಿ ತಮ್ಮ ಕೈಯಲ್ಲಿರುವ ಅವಕಾಶ ಹಾಗೂ ವಿಚಾರಗಳ ಬಗ್ಗೆ ಸೂಕ್ತವಾಗಿ ಅರಿತು, ಸಂತೋಷವನ್ನು ಕಾಣಬೇಕಿದೆ. ಅದರ ಬಗ್ಗೆ ಹೆಚ್ಚು ಗಮನ ಹಾಗೂ ಕಾರ್ಯ ವಿಧಾನಗಳನ್ನು ತಿಳಿದುಕೊಳ್ಳಬೇಕಿದೆ.

  ಮಕರ

  ಮಕರ

  2018ರಲ್ಲಿ ಈ ರಾಶಿಯ ವ್ಯಕ್ತಿಗಳು ಹೆಚ್ಚೇ ವ್ಯಸ್ತರಾಗಿರುವರು. ಇವರಿಗೆ ಕಷ್ಟಸಾಧ್ಯವಾದ ಗಡುವನ್ನು ನೀಡಲಾಗುವುದು. ಆದರೆ ಇದನ್ನುಎದುರಿಸಲು ಕಠಿಣ ಪರಿಶ್ರಮ ಹಾಗೂ ತಾಳ್ಮೆಯ ಅಗತ್ಯವಿದ್ದು ನಿಮ್ಮ ಶ್ರಮ ಈ ವರ್ಷದಲ್ಲಿ ಫಲ ನೀಡಲಿದೆ. ಪರಿಣಾಮವಾಗಿ ಮೆಚ್ಚುಗೆ, ಏಳ್ಗೆ ಹಾಗೂ ಗುರುತಿಸುವಿಕೆಯೂ ಒದಗಿಬರಬಹುದು. ನಿಮ್ಮ ನೈಪುಣ್ಯಗಳನ್ನು ತೋರ್ಪಡಿಸಲು ಹಾಗೂ ಇವುಗಳು ಸಂಬಂಧಪಟ್ಟವರ ಗಮನ ಪಡೆಯಲು ಇನ್ನೂ ಕೊಂಚ ಹೆಚ್ಚೇ ಶ್ರಮಿಸಬೇಕಗಿ ಬರಬಹುದು. ಈ ವ್ಯಕ್ತಿಗಳು ಮುಂಬರುವ ವರ್ಷದಲ್ಲಿ ಅವರ ಬಹುನಿರೀಕ್ಷಿತ ಯಶಸ್ಸು ಮತ್ತು ಅಂಗೀಕಾರವನ್ನು ಪಡೆಯುತ್ತಾರೆ. ಈ ರಾಶಿಚಕ್ರ ಚಿಹ್ನೆಗೆ ಅದೃಷ್ಟದ ದಿನಗಳು ಸೋಮವಾರ ಮತ್ತು ಭಾನುವಾರಗಳು. ಈ ರಾಶಿಯವರು ಬೇರೆಯವರು ಮಾಡಿರುವ ತಪ್ಪು ಹಾಗೂ ಅವರ ಸ್ಥಿತಿಯ ಬಗ್ಗೆ ಅತಿಯಾಗಿ ಚಿಂತಿಸುತ್ತಾರೆ. ತಮ್ಮ ಜೀವನದಲ್ಲಾದ ತೊಂದರೆ ಹಾಗೂ ಕಷ್ಟಗಳ ಬಗ್ಗೆ ಹೆಚ್ಚಿನ ಚಿಂತನೆಯನ್ನೇ ನಡೆಸುವುದಿಲ್ಲ. 2018ರಲ್ಲಿ ಇವರು ತಮ್ಮ ಸ್ಥಿತಿಗತಿಯ ಬಗ್ಗೆ ಚಿಂತನೆ ಹಾಗೂ ಅವುಗಳ ಹಿಡಿತಗಳ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕಾದ ಅನಿವಾರ್ಯತೆ ಇದೆ. ಅದಕ್ಕಾಗಿ ಮಾನಸಿಕವಾಗಿ ಸಿದ್ಧತೆಯನ್ನು ನಡೆಸಿಕೊಳ್ಳಬೇಕು.

  ಕುಂಭ

  ಕುಂಭ

  ಈ ರಾಶಿಯವರಿಗೆ ಈ ವರ್ಷದಲ್ಲಿ ಕೆಲಸದ ಸ್ಥಳದಲ್ಲಿ ವಾತಾವರಣ ಆಹ್ಲಾದಕರವಾಗಿರುವುದು. ಹೊಸ ಅವಕಾಶಗಳು ನಿಮ್ಮನ್ನು ಹುಡುಕೊಂಡು ಬರುತ್ತವೆ. ಈ ಅವಕಾಶಗಳನ್ನು ಹೋಗಗೊಡದೇ ತಕ್ಷಣವೇ ಬಳಸಿಕೊಂಡರೆ ವೃತ್ತಿರಂಗದಲ್ಲಿ ಏಳ್ಗೆ ಪಡೆಯಬಹುದು. ವಿಶೇಷವಾಗಿ ಜೂನ್ ನಿಮ್ಮ ಪಾಲಿಗೆ ಅದೃಷ್ಟಕರವಾದ ತಿಂಗಳಾಗಿದ್ದು ನಿಮ್ಮ ಕನಸಿನ ಉದ್ಯೋಗ ಅಥವಾ ಕೆಲಸದ ಸ್ಥಳದಲ್ಲಿ ಬಯಸಿದ ಸ್ಥಾನಮಾನ ದೊರಕುವ ಸಾಧ್ಯತೆ ಹೆಚ್ಚು. ಈ ವ್ಯಕ್ತಿಗಳು ತಮ್ಮ ಏರಿಳಿತದ ಪಾಲನ್ನು ಹೊಂದಿರುತ್ತಾರೆ. ಆದರೆ ಅದೃಷ್ಟದ ದಿನಗಳಲ್ಲಿ ಮಂಗಳವಾರ ಮತ್ತು ಶನಿವಾರಗಳು. ನಿಮ್ಮ ವಿಶೇಷ ಕೆಲಸ ಕಾರ್ಯಗಳನ್ನು ಈ ದಿನಗಳಲ್ಲಿ ಕೈಗೊಳ್ಳಬಹುದು. ಇವರಿಗೆ ಇತರರು ನೀಡಿದ ಭರವಸೆ ಹಾಗೂ ಮಾತುಗಳಿಂದ ಹೊರ ಬರಬೇಕಾದ ಅನಿವಾರ್ಯತೆಗಳಿವೆ. ಯಾರು ತಮ್ಮ ಮಾತಿಗೆ ಹಾಗೆಯೇ ಅಂಟಿಕೊಂಡು ಕುಳಿತುಕೊಳ್ಳುವುದಿಲ್ಲ ಎನ್ನುವುದನ್ನು ಅರಿಯಬೇಕು. 2018ರಲ್ಲಿ ಯಾವುದೇ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ನಿರೀಕ್ಷೆಯನ್ನು ಹೊಂದಿರಬಾರದು ಎನ್ನುವುದನ್ನು ಅರಿಯಬೇಕಿದೆ.

  ಮೀನ

  ಮೀನ

  2018ರಲ್ಲಿ ಮೀನ ರಾಶಿಯ ವ್ಯಕ್ತಿಗಳು ತಮ್ಮ ಉದ್ಯೋಗಗಳಲ್ಲಿ ಯಥಾಪ್ರಕಾರ ಮುಂದುವರೆಯಲಿದ್ದಾರೆ. ಆದರೆ ಮಾರ್ಚ ಮಧ್ಯಭಾಗದ ಬಳಿಕ ಪರಿಸ್ಥಿತಿ ನಿಮಗೆ ಕಷ್ಟಕರವಾಗಿರುತ್ತದೆ. ನಿಮ್ಮ ವೃತ್ತಿಜೀವನ ಹೆಚ್ಚು ಕಷ್ಟಕರವಾಗಿರುತ್ತದೆ ಹಾಗೂ ನಿಮ್ಮ ವೈಯಕ್ತಿಕ ಜೀವನವನ್ನೂ ಕದಡಬಹುದು. ಆದರೆ ಇವೆರಡರ ನಡುವೆ ಸೂಕ್ತ ಸಮತೋಲನವನ್ನು ಕಾಯ್ದಿರಿಸುವ ಮೂಲಕ ಈ ಕಷ್ಟಗಳನ್ನು ಸುಲಭವಾಗಿ ಎದುರಿಸಬಹುದು. ಈ ರಾಶಿಚಕ್ರದ ಚಿಹ್ನೆಯವರು ಹೊಸ ಸಾಹಸ ಕೆಲಸವನ್ನು ಪ್ರಾರಂಭಿಸುತ್ತಾರೆ ಇವರ ಈ ಸಾಹಸ ಕರ ಕೆಲಸ ಹಾಗೂ ಇತರ ಶುಭ ಕಾರ್ಯಗಳನ್ನು ಸೋಮವಾರ ಪ್ರಾರಂಭಿಸಬೇಕು. ಈ ರಾಶಿಚಕ್ರದವರಿಗೆ ಸೋಮವಾರ ಅದೃಷ್ಟದ ವಾರ. ಈ ರಾಶಿಯವರು ಎಲ್ಲಾ ವಿಚಾರಕ್ಕೂ ಅಧಿಕವಾಗಿ ಚಿಂತಿಸುತ್ತಾರೆ. ಕೆಲವು ವಿಷಯಗಳಿಗೆ ಮಾನಸಿಕವಾಗಿ ಚಿಂತಿಸುವ ಬದಲು ಹೃದಯದ ಮೂಲಕ ಚಿಂತಿಸಬೇಕಾದ ಅನಿವಾರ್ಯತೆಗಳಿರುತ್ತದೆ ಎನ್ನುವುದನ್ನು ಅರಿಯಬೇಕು. ಸಂದರ್ಭವನ್ನು ಸೂಕ್ತ ರೀತಿಯಲ್ಲಿ ನಿಭಾಯಿಸುವಂತಹ ಗುಣವನ್ನು ಹೊಂದಿರಬೇಕು. 2018ರಲ್ಲಿ ಅತಿಯಾದ ಚಿಂತನೆಗೆ ಒಳಗಾಗುವುದನ್ನು ನಿಲ್ಲಿಸಿ, ಸಂಭವಿಸಬೇಕಾದ ವಿಚಾರಗಳನ್ನು ಹಾಗೇಯೇ ನೆರವೇರಲು ಬಿಡಿ.

  English summary

  Career Predictions in 2018 based on zodiac sign

  One of the most important aspects of the life of an individual is the career. If you have a stable career, the chances of a good inflow of finances are more. Isn’t this what we need for a relaxed and trouble-free life? For all the zodiac signs, 2018 is going to be a very eventful year. There are a couple of astrological events that are taking place this year which will bring about both positive and negative changes in your career. Here is a list of career predictions 2018 based on Zodiac sign.
  Story first published: Sunday, January 14, 2018, 10:04 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more