ಜನನ ನಿಯಂತ್ರಣ: ಹಿಂದಿನ ದಿನಗಳಲ್ಲಿ ಹೀಗೆಲ್ಲಾ ನಡೆಯುತ್ತಿತ್ತೇ?

By: Arshad
Subscribe to Boldsky

ದಂಪತಿಯರ ನಡುವಿನ ಸೆಕ್ಸ್ ನಿಸರ್ಗ ನೀಡಿದ ಅತ್ಯಂತ ಆಹ್ಲಾದಕರ ಅನುಭವವಾಗಿದೆ. ಈ ಮೂಲಕ ಸಂತಾನವನ್ನು ನೀಡಿ ವಂಶವನ್ನು ಮುಂದುವರೆಸಲು ನಿಸರ್ಗ ನೀಡಿರುವ ವರವೂ ಆಗಿದೆ. ಇಂದು ಅನಗತ್ಯವಾಗಿ ಗರ್ಭಧಾರಣೆಯಾಗುವುದನ್ನು ತಡೆಯಲು ವಿವಿಧ ವಿಧಾನಗಳೂ ಸಾಧನಗಳೂ ಇವೆ. ಆದರೆ ಇವೆಲ್ಲಾ ಇಲ್ಲದಿದ್ದ ಹಿಂದಿನ ದಿನಗಳಲ್ಲಿ ಜನರು ಏನು ಮಾಡುತ್ತಿದ್ದರು? ಜನನ ನಿಯಂತ್ರಣ ಮಾತ್ರೆಗಳ ಕುರಿತಾದ 5 ತಪ್ಪು ಕಲ್ಪನೆಗಳು!

ನಮ್ಮ ಹಿರಿಯರಿಗೂ ಈ ಬಗ್ಗೆ ಜ್ಞಾನವಿತ್ತು ಹಾಗೂ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಅರಿವೂ ಇತ್ತು. ಇದರಲ್ಲಿ ಹೆಚ್ಚಾಗಿ ಅನುಸರಿಸುತ್ತಿದ್ದ ವಿಧಾನವೆಂದರೆ ಸುರಕ್ಷಿತ ದಿನಗಳನ್ನು ಆರಿಸಿಕೊಳ್ಳುವುದು. ಇದರ ಹೊರತಾಗಿ ಹಲವರು ಅನುಸರಿಸುತ್ತಿದ್ದ ಕ್ರಮಗಳು ವಿಚಿತ್ರವೂ ಕೆಲವು ಅಪಾಯಕರವೂ ಆಗಿವೆ. ಬನ್ನಿ, ಬೇಡದ ಗರ್ಭಧಾರಣೆಯನ್ನು ತಡೆಯಲು ಇವರು ಯಾವ ವಿಚಿತ್ರ ಕ್ರಮಗಳನ್ನು ಅನುಸರಿಸುತ್ತಿದ್ದರು ಎಂಬುದನ್ನು ನೋಡೋಣ..... 

ಬೇಡದ ಗರ್ಭಧಾರಣೆಗೆ ಲಿಂಬೆಯ ಬಳಕೆ

ಬೇಡದ ಗರ್ಭಧಾರಣೆಗೆ ಲಿಂಬೆಯ ಬಳಕೆ

1700ರ ಸಮಯದಲ್ಲಿ ಅನುಸರಿಸಲಾಗುತ್ತಿದ್ದ ಒಂದು ಅಪಾಯಕರ ವಿಧಾನವಿದು. ಇದರಲ್ಲಿ ಲಿಂಬೆಯನ್ನು ಅಡ್ಡಲಾಗಿ ಕತ್ತರಿಸಿ ತೆಗೆದ ಬಿಲ್ಲೆಯೊಂದನ್ನು ಮಹಿಳೆಯ ಜನನಾಂಗದಲ್ಲಿ ಮೊದಲಾಗಿ ಇರಿಸಲಾಗುತ್ತಿತ್ತು. ಇದರಲ್ಲಿರುವ ಸಿಟ್ರಿಕ್ ಆಮ್ಲ ವೀರ್ಯಾಣುಗಳನ್ನು ಕೊಲ್ಲುತ್ತದೆ ಎಂದು ಭಾವಿಸಲಾಗುತ್ತಿತ್ತು. ಆದರೆ ಸಿಟ್ರಿಕ್ ಆಮ್ಲ ಮಹಿಳೆಯ ಗರ್ಭಾಶಯ ಸಹಿತ ಇತರ ಸೂಕ್ಷ್ಮ ಭಾಗಗಳಿಗೆ ಘಾಸಿ ಮಾಡಿ ಆಕೆಯ ಫಲವತ್ತತೆಯನ್ನೇ ಕಸಿದುಬಿಡುವ ಅಪಾಯವಿದ್ದುದನ್ನು ಈ ಜನರು ಅರಿತೇ ಇರಲಿಲ್ಲ.

ಆಲೂಗಡ್ಡೆ

ಆಲೂಗಡ್ಡೆ

ಇತಿಹಾಸ ಕಂಡ ಒಂದು ವಿಚಿತ್ರ ವಿಧಾನವೆಂದರೆ ಆಲೂಗಡ್ಡೆಯ ಬಳಕೆ. ಈ ವಿಧಾನದಲ್ಲಿ ಆಲುಗಡ್ಡೆಯ ತುಂಡೊಂದನ್ನು ಮಹಿಳೆಯ ಜನನಾಂಗದೊಳಗೇ ಇರಿಸಲಾಗುತ್ತಿತ್ತು. ಇದರಿಂದ ಗರ್ಭಾಂಕುರವಾಗುವುದಿಲ್ಲ ಎಂದು ನಂಬಲಾಗಿತ್ತು. ಆದರೆ ಈ ವಿಧಾನದಿಂದ ಮಹಿಳೆಯರಿಗೆ ಅತೀವ ತೊಂದರೆಯಾಗುತ್ತಿತ್ತು. ಆಲೂಗಡ್ಡೆಯನ್ನು ಹೊರತೆಗೆಯುವುದು ಭಾರೀ ಕಷ್ಟವಾಗುತ್ತಿತ್ತು. ಕೆಲವರಲ್ಲಂತೂ ಆಲೂಗಡ್ಡೆ ಬೇರುಬಿಡುವ ಕಾರಣ ಆಸ್ಪತ್ರೆ ಸೇರಬೇಕಾಗಿಯೂ ಬಂದಿತ್ತು.

ಬುರುಗು ಬರುವ ಪೇಯದ ಬಳಕೆ

ಬುರುಗು ಬರುವ ಪೇಯದ ಬಳಕೆ

ಕಳೆದ ಶತಮಾನದ ಐವತ್ತರ ಮತ್ತು ಅರವತ್ತರ ದಶಕದಲ್ಲಿ ಬಳಕೆಯಲ್ಲಿದ್ದ ಈ ವಿಧಾನವೂ ವಿಚಿತ್ರವಾಗಿದೆ. ಈ ವಿಧಾನದಲ್ಲಿ ಕಾಮದಾಟದ ಬಳಿಕ ಮಹಿಳೆ ತನ್ನ ಜನನಾಂಗವನ್ನು ಈ ಪೇಯದಿಂದ ತೊಳೆದುಕೊಂಡರೆ ಸಾಕು ಎಂದು ನಂಬಲಾಗಿತ್ತು. ಈ ಪೇಯಕ್ಕೆ ವೀರ್ಯಾಣುಗಳನ್ನು ಕೊಲ್ಲುವ ಶಕ್ತಿ ಇದೆಯೆಂದು ನಂಬಲಾಗಿತ್ತು. ಆದರೆ ಈ ಸಮಯದಲ್ಲಿ ವೈದ್ಯವಿಜ್ಞಾನ ಬಹಳಷ್ಟು ಮುಂದುವರೆದಿದ್ದ ಕಾರಣ ಈ ನಂಬಿಕೆ ಹುಸಿ ಎಂಬು ಸಾಬೀತಾದ ಕಾರಣ ಈ ವಿಧಾನ

ನಿಂತುಹೋಯಿತು.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಹಿಂದೆಂದೋ ಅರಿಸ್ಟಾಟಲ್ ಸಹಾ ಗರ್ಭಾಂಕುರ ತಡೆಯಲು ಆಲಿವ್ ಎಣ್ಣೆ ಬಳಸಬಹುದು ಎಂದು ಹೇಳಿದ್ದನಂತೆ. ಅರಿಸ್ಟಾಟಲ್ ಹೇಳಿರುವ ಪ್ರಕಾರ ಗರ್ಭಾಶಯದ ಭಾಗದ ಬಳಿ ಆಲಿವ್ ಎಣ್ಣೆ ಯೊಂದಿಗೆ ಫ್ರಾಂಕಿನ್ಸೆನ್ ಎಂಬ ಸುವಾಸಿತ ಎಣ್ಣೆ ಅಥವಾ ಸೆಡಾರ್ ಎಣ್ಣೆಯನ್ನು ಬೆರೆಸಿ ಸವರಿದರೆ ಅನಗತ್ಯ ಗರ್ಭಾಂಕುರವನ್ನು ತಡೆಯಬಹುದು. ಆದರೆ ಈ ವಿಧಾನವೂ ಅಸುರಕ್ಷಿತ ಹಾಗೂ ಅಪಾಯಕರ ಎಂದು ಬಳಿಕ ಸಾಬೀತಾಯಿತು.

ಹತ್ತಿ

ಹತ್ತಿ

ತುಂಬಾ ಹಿಂದಿನ ದಿನಗಳಲ್ಲಿ ಮಹಿಳೆಯರಿಗೆ ಖರ್ಜೂರ, ಅಕೇಶಿಯಾ ಮರದ ತೊಗಟೆ, ಜೇನು ಬೆರೆಸಿ ಅರೆದ ಲೇಪನವನ್ನು ಹತ್ತಿಯ ಬೀಜದಿಂದ ನಿವಾರಿಸಿದ ಉಣ್ಣೆಯೊಂದಿಗೆ ಬೆರೆಸಿ ತಮ್ಮ ಜನನಾಂಗಗಳಲ್ಲಿ ಅಳವಡಿಸಲು ಸೂಚಿಸಲಾಗುತ್ತಿತ್ತು. ಇದರಲ್ಲಿರುವ ಅಂಶಗಳು ಹುದುಗುಬಂದ ಬಳಿಕ ಲ್ಯಾಕ್ಟಿಕ್ ಆಮ್ಲವಾಗಿ ಪರಿವರ್ತಿತಗೊಂಡು ವೀರ್ಯಾಣುಗಳನ್ನು ನಾಶಪಡಿಸುತ್ತದೆ ಎಂದು ನಂಬಲಾಗಿತ್ತು.

ಸೀನುವುದು

ಸೀನುವುದು

ಹೌದು, ಬಲವಂತವಾಗಿ ಸೀನುವ ಮೂಲಕವೂ ಗರ್ಭಧಾರಣೆಗೆ ಅಡ್ಡಿಪಡಿಸಬಹುದೆಂದು ನಂಬಲಾಗಿತ್ತು. ಸಮಾಗಮದ ಬಳಿಕ ಮಹಿಳೆಯರಿಗೆ ಬಲವಂತವಾಗಿ ಸೀನುವಂತೆ ಸೂಚಿಸಲಾಗುತ್ತಿತ್ತು. ಅಷ್ಟೇ ಅಲ್ಲ, ನಿಂತಲ್ಲೇ ಕುಣಿಯುವಂತೆ, ಹಿಂದೆ ಹಿಂದೆ ಕುಣಿಯುತ್ತಾ ಸಾಗುವಂತೆ, ನೆಗೆಯುವಂತೆ, ಚಕ್ಕಳ ಬಕ್ಕಳ ಹಾಕಿ ಕುಳಿತುಕೊಳ್ಳುವಂತೆ ಮೊದಲಾದ ವಿಚಿತ್ರ ಪದ್ಧತಿಗಳನ್ನೂ ಅನುಸರಿಸಲಾಗುತ್ತಿತ್ತು.

 

English summary

Bizarre “Birth Control” Methods People Followed Back Then

Though there have been a few methods of avoiding pregnancy, there are those methods as well that were practiced in the past even before condoms were invented. Check out some of the bizarre birth control methods that people used in the past to avoid being pregnant.
Subscribe Newsletter