2018 ರಾಶಿಚಕ್ರ- ಹೊಸ ವರ್ಷದಲ್ಲಿ ಈ ಐದು ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ

Posted By: Deepu
Subscribe to Boldsky

ಬದುಕಲ್ಲಿ ಬದಲಾವಣೆ ಹಾಗೂ ಸ್ವಲ್ಪ ಹೊಸತನವನ್ನು ಅನುಭವಿಸಬೇಕು ಎನ್ನುವ ಆಸೆ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ಆದರೆ ಅದೃಷ್ಟ ಹಾಗೂ ಗ್ರಹಗತಿಗಳ ಕಾರಣದಿಂದಾಗಿ ನಮ್ಮ ಬಯಕೆಗಳಿಗೆ ನೀರೆರೆಚುವ ಸಾಧ್ಯತೆಗಳಿರುತ್ತವೆ. ಕೆಲವೊಮ್ಮೆ ಅದೇ ಕನಸುಗಳು ಚಿಗುರೊಡೆಯುವ ಅವಕಾಶಗಳು ಇರುತ್ತವೆ. 2018ರ ಹೊಸ ವರ್ಷ ಯಾವೆಲ್ಲಾ ಹೊಸತನವನ್ನು ತರುತ್ತದೆ ಎನ್ನುವ ಕಾತುರ ಎಲ್ಲರಿಗೂ ಇರುತ್ತದೆ.

ಜ್ಯೋತಿಷ್ಯ ಹೇಳುವ ಪ್ರಕಾರ 2018 ಕೆಲವು ಸೀಮಿತ ರಾಶಿಯವರಿಗೆ ಅತ್ಯಂತ ಅದೃಷ್ಟದಾಯಕ ವರ್ಷಗಳಾಗಿ ಪರಿಣಮಿಸಲಿದೆ. ಹಾಗಾದರೆ ಆ ರಾಶಿಗಳು ಯಾವವು? ಅವರ ಅದೃಷ್ಟ ಹೇಗಿದೆ? ನಿಮ್ಮ ರಾಶಿಯೂ ಅದೃಷ್ಟದ ರಾಶಿಚಕ್ರಗಳಲ್ಲಿ ಒಂದಾಗಿದೆಯೇ? ಎನ್ನುವುದನ್ನು ಪರಿಶೀಲಿಸಬೇಕು ಎಂದುಕೊಂಡಿದ್ದರೆ ಈ ಮುಂದೆ ನೀಡಿರುವ ವಿವರಣೆಯನ್ನು ಪರಿಶೀಲಿಸಿ....

ಸಿಂಹ: ಜುಲೈ 23 ಆಗಸ್ಟ್ 23

ಸಿಂಹ: ಜುಲೈ 23 ಆಗಸ್ಟ್ 23

ಈ ರಾಶಿಯು ಸದಾ ನಕ್ಷತ್ರದಂತೆ ಮಿನುಗುತ್ತದೆ. ಅವರು ಅದೃಷ್ಟ ಹೊಂದಿರಲಿ ಅಥವಾ ಹೊಂದಿರದೆ ಇರಲಿ ಸದಾ ಒಳಿತನ್ನೇ ಅನುಭವಿಸುತ್ತಾರೆ. ಈ ರಾಶಿಯ ವ್ಯಕ್ತಿಗಳು ಎಲ್ಲೇ ಇರಲಿ ಒಂದು ವಿಶೇಷ ಬಗೆಯ ಕಾಂತೀಯ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಈ ರಾಶಿಚಕ್ರವು 2018ರಲ್ಲಿ ಅತ್ಯಂತ ಅದೃಷ್ಟವನ್ನು ಹೊಂದಿರುವ ರಾಶಿಗಳಲ್ಲಿ ಒಂದಾಗಿದೆ. ಉತ್ತಮ ಆರೋಗ್ಯ, ವೃತ್ತಿ ಜೀವನದಲ್ಲಿ ಲಾಭ ಹಾಗೂ ಮಾನ್ಯತೆ, ಪ್ರೇಮ ಅಥವಾ ವೈವಾಹಿಕ ಜೀವನದಲ್ಲಿ ವರ್ಷ ಪೂರ್ತಿ ಸಂತೋಷವನ್ನು ಅನುಭವಿಸುತ್ತಾರೆ. ಈ ರಾಶಿಯವರಿಗೆ ಅದೃಷ್ಟ ಇರಲಿ ಅಥವಾ ಇಲ್ಲದಿರಲಿ ಸದಾ ಮಿನುಗುತ್ತಿರುತ್ತಾರೆ. ಇವರು ಎಲ್ಲಿ ಯಾವ ಕೆಲಸವನ್ನು ಮಾಡಿದರೂ ಹೆಚ್ಚಿನ ಶ್ರಮವಿಲ್ಲದೆಯೇ ಎಲ್ಲರ ಗಮನಸೆಳೆದುಕೊಳ್ಳುತ್ತಾರೆ. ಹಾಗಾಗಿ ಇವರದ್ದು ಕಾಂತೀಯ ಮತ್ತು ಪ್ರಬಲವಾದ ವ್ಯಕ್ತಿತ್ವ ಎಂದು ಹೇಳಲಾಗುತ್ತದೆ. ಆದ್ದರಿಂದಲೇ ಇವರು ಎಲ್ಲರ ಇಷ್ಟಕ್ಕೆ ಪಾತ್ರರಾಗುತ್ತಾರೆ. ಇವರಿಗೆ 2018 ಅತ್ಯಂತ ಅದೃಷ್ಟವನ್ನು ಪಡೆದುಕೊಳ್ಳುವ ವರ್ಷ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಈ ವರ್ಷ ಇವರ ಹಾದಿಯಲ್ಲಿ ಗೆಲುವು ಸುಲಭವಾಗಿ ದೊರೆಯುವುದು. ಎಲ್ಲರೂ ತಪ್ಪನ್ನು ಮಾಡುತ್ತಾರೆ. ಹಾಗೆಯೇ ಈ ರಾಶಿಯವರೂ ಪ್ರತಿಬಾರಿಯೂ ತಪ್ಪನ್ನು ಮಾಡುತ್ತಾರೆ. ಇದರೊಟ್ಟಿಗೆ ತಪ್ಪನ್ನು ಸರಿಪಡಿಸಿಕೊಳ್ಳುವ ಪ್ರಯತ್ನವನ್ನೂ ಮಾಡುತ್ತಾರೆ. ವೃತ್ತಿ ಕ್ಷೇತ್ರದಲ್ಲಿ ಅನೇಕ ಅವಕಾಶಗಳು ಕೈಗೂಡಿ ಬರುವುದು. ವೈಯಕ್ತಿಕ ಮತ್ತು ದಾಂಪತ್ಯದ ಜೀವನವೂ ಪ್ರೀತಿ ವಿಶ್ವಾಸದಿಂದ ಕೂಡಿರುತ್ತದೆ.

ಕನ್ಯಾರಾಶಿ: ಆಗಸ್ಟ್ 23-ಸೆಪ್ಟೆಂಬರ್ 23

ಕನ್ಯಾರಾಶಿ: ಆಗಸ್ಟ್ 23-ಸೆಪ್ಟೆಂಬರ್ 23

ಈ ಮುಂಬರುವ ವರ್ಷವು ಈ ರಾಶಿಚಕ್ರ ಚಿಹ್ನೆಗೆ ಅಸಾಮಾನ್ಯವಾದುದು. ಈ ರಾಶಿಯ ವ್ಯಕ್ತಿಗಳಿಗೆ ಅತ್ಯುತ್ತಮ ವರ್ಷಗಳಲ್ಲಿ ಒಂದಾಗಲಿದೆ. ಏಕೆಂದರೆ ಇದು ವಸ್ತು ಮತ್ತು ಭಾವನಾತ್ಮಕ ಯೋಗಕ್ಷೇಮದಿಂದ ತುಂಬಿರುತ್ತದೆ. ಮುಂಬರುವ ವರ್ಷದಲ್ಲಿ ಈ ವ್ಯಕ್ತಿಗಳು ಈಗಾಗಲೇ ಹೊಂದಿರುವ ಸಂಬಂಧಗಳನ್ನು ಬಲಪಡಿಸಿಕೊಳ್ಳುತ್ತಾರೆ. ಇದಲ್ಲದೆ ಅವರು ಮೆಚ್ಚುವ ವ್ಯಕ್ತಿಗಳೊಂದಿಗೆ ಹೊಸ ಸಂಬಂಧಗಳನ್ನು ರಚಿಸುತ್ತಾರೆ. ಯಾರೊಂದಿಗೆ ಅವರು ಆಳವಾದ ಮಟ್ಟದಲ್ಲಿ ಸಂಪರ್ಕ ಹೊಂದಿರುತ್ತಾರೋ ಅವರೊಂದಿಗೆ ಖುಷಿಯಿಂದ ಇರುತ್ತಾರೆ. ಒಂಟಿಯಾಗಿರುವ ವ್ಯಕ್ತಿಗಳು ಈ ವರ್ಷ ಆತ್ಮೀಯ ವ್ಯಕ್ತಿಗಳೊಂದಿಗೆ ಜೀವನ ನಡೆಸುವ ಸಾಧ್ಯತೆಗಳಿವೆ. ಈ ರಾಶಿಚಕ್ರದ ಎಲ್ಲಾ ಸಂಭವನೀಯ ದಿಕ್ಕುಗಳಲ್ಲಿ ಪ್ರಯೋಜನಕಾರಿಯಾಗಿದೆ. ಮುಂಬರುವ ವರ್ಷವು ಹೆಚ್ಚು ತೀವ್ರವಾಗಿರುತ್ತದೆ. ಈ ವ್ಯಕ್ತಿಗಳು ದೀರ್ಘಕಾಲೀನ ಮತ್ತು ಸ್ಥಿರವಾದ ಸಂಬಂಧದಲ್ಲಿ ಭಾಗಿಯಾಗುತ್ತಾರೆ. ತಮ್ಮ ಪ್ರೀತಿಪಾತ್ರರ ಜೊತೆ ಸಂವಹನ ಮಾಡುವ ಹೊಸ ವಿಧಾನಗಳನ್ನು ಅವರು ಕಂಡುಕೊಳ್ಳುತ್ತಾರೆ ಮತ್ತು ಇದು ಅವರ ಬಂಧದ ಬಲವನ್ನು ಉಂಟುಮಾಡುತ್ತದೆ.

ಧನು ರಾಶಿ: ನವೆಂಬರ್ 22-ಡಿಸೆಂಬರ್ 22

ಧನು ರಾಶಿ: ನವೆಂಬರ್ 22-ಡಿಸೆಂಬರ್ 22

ಈ ರಾಶಿಯ ವ್ಯಕ್ತಿಗಳು ಮುಕ್ತ, ಆಳವಾದ ಮತ್ತು ಚಿಂತನೆಯ ರೀತಿಯಲ್ಲಿ ಆಶೀರ್ವದಿಸಲ್ಪಡುತ್ತಾರೆ. ಇವರು ಬಯಸುವ ವಿಚಾರಗಳು ಅಥವಾ ಕೆಲಸಗಳು ಕೈಗೂಡಿ ಬರುತ್ತದೆ. ಯಾವುದೇ ಸಮಸ್ಯೆಗಳಿಲ್ಲದೆ ಪರಿಪೂರ್ಣತೆಯನ್ನು ಹೊಂದುತ್ತದೆ. ಅವರು ಹೆಚ್ಚಿನ ಗುರಿಯನ್ನು ಹೊಂದಿರುತ್ತಾರೆ ಮತ್ತು ತಮ್ಮ ಗುರಿಗಳನ್ನು ಸಾಧಿಸುವುದನ್ನು ತಡೆಯುವ ಯಾವುದೇ ಅಡಚಣೆಗಳಿರುವುದಿಲ್ಲ. ಇದಲ್ಲದೆ ಈ ವ್ಯಕ್ತಿಗಳು ತಮ್ಮ ಜೀವನದಲ್ಲಿ ಉತ್ತಮ ಸಮತೋಲನವನ್ನು ಕಾಣುತ್ತಾರೆ. ಅಸಂಖ್ಯಾತ ಪ್ರಯೋಜನಕಾರಿ ಅವಕಾಶಗಳು ಬುದ್ಧಿವಂತ ಮತ್ತು ಪ್ರಯಾಣದ ಬುದ್ಧಿವಂತಿಕೆಯನ್ನೂ ಸಹ ಅವರು ಎದುರಿಸುತ್ತಾರೆ. ಮತ್ತೊಂದೆಡೆ ಈ ಅದೃಷ್ಟದ ರಾಶಿಚಕ್ರದ ವ್ಯಕ್ತಿಗಳು ಪ್ರೀತಿಯಲ್ಲಿ ಅದೃಷ್ಟ ಪಡೆಯುತ್ತಾರೆ.

ವೃಶ್ಚಿಕ: ಅಕ್ಟೋಬರ್ 23-ನವೆಂಬರ್ 22

ವೃಶ್ಚಿಕ: ಅಕ್ಟೋಬರ್ 23-ನವೆಂಬರ್ 22

ಮುಂಬರುವ ವರ್ಷದಲ್ಲಿ ಸ್ಥಿರ ಪಾಲುದಾರರನ್ನು ಹುಡುಕುವ ಈ ವ್ಯಕ್ತಿಗಳಿಗೆ ಉತ್ತಮ ಅವಕಾಶವಿದೆ. ಅವರು ತಮ್ಮ ಪಾಲುದಾರರೊಂದಿಗೆ ಸಾಮರಸ್ಯ ಮತ್ತು ದೀರ್ಘಕಾಲದ ಸಂಬಂಧವನ್ನು ನಿರ್ಮಿಸಬಲ್ಲರು. ಪ್ರೀತಿಯು ಗಾಳಿಯಲ್ಲಿ ಕಂಡು ಬರುತ್ತದೆ. ಏಕೆಂದರೆ ಮುಂಬರುವ ವರ್ಷದ ಆರಂಭದಿಂದಲೂ ಸಂಪೂರ್ಣವಾಗಿ ಹೊಸ ವ್ಯಕ್ತಿಯನ್ನು ಭೇಟಿ ಮಾಡುವ ಸಾಧ್ಯತೆಯಿದೆ.

ಮೀನ: ಫೆಬ್ರವರಿ 18-ಮಾರ್ಚ್ 20

ಮೀನ: ಫೆಬ್ರವರಿ 18-ಮಾರ್ಚ್ 20

2018ರಲ್ಲಿ ಅತ್ಯಂತ ಅದೃಷ್ಟವನ್ನು ಅನುಭವಿಸಲಿರುವ ಇನ್ನೊಂದು ರಾಶಿಯೆಂದರೆ ಮೀನ. ವರ್ಷದ ಆರಂಭದಲ್ಲಿ ಆಭರಣಗಳ ಖರೀದಿ, ಸಂಬಂಧಗಳ ಆರಂಭದ ಸಂಗತಿಗಳೊಂದಿಗೆ ಆರಂಭಿಸುತ್ತೀರಿ. ವರ್ಷದ ಮಧ್ಯದ ಅವಧಿಯಿಂದ ಸಂಬಂಧಗಳು ಬಲಪಡುತ್ತವೆ. ಕೈಗೊಂಡ ಕೆಲಸಗಳಿಗೆ ಉತ್ತಮ ಫಲಿತಾಂಶ ದೊರೆಯುತ್ತಲಿರುತ್ತದೆ. ಹಾಗೆಯೇ ಮುಂದಿನ ದಿನಗಳನ್ನು ಕಳೆಯಲು ಉತ್ತಮವಾದ ಅವಕಾಶಗಳು ಮುಂದುವರಿಯುತ್ತವೆ. ಜೊತೆಗೆ ಪಾಲುದಾರರೊಂದಿಗೆ ಸಂಬಂಧವೂ ಸುಗಮವಾಗಿ ಸಾಗುವುದು.

English summary

2018: The Most Luckiest Zodiac Signs

The year 2018 brings luck on all aspects for three signs that are thought to be the spoiled signs of the zodiac this year. So, find out if your sign is one of them. Here are the lucky signs of the year 2018.
Story first published: Saturday, January 13, 2018, 16:00 [IST]