For Quick Alerts
ALLOW NOTIFICATIONS  
For Daily Alerts

ತಲೆಗೂದಲಿನ ಹಿಂದಿನ ಸತ್ಯಾಸತ್ಯತೆಯ ಗುಟ್ಟು ರಟ್ಟಾದಾಗ!

ಒಂದು ಕೂದಲೆಳೆಯಲ್ಲಿ ಇಷ್ಟೆಲ್ಲಾ ಶಕ್ತಿ ಅಡಗಿದೆಯೇ ಎಂಬ ಮಾಹಿತಿಯನ್ನು ಕೇಳಿದರೆ ನಿಮಗೂ ಆಶ್ಚರ್ಯವಾಗಬಹುದು..!ಹೌದು, ಅದರ ಆಯಸ್ಸು ಸುಮಾರು 5 ರಿಂದ 7 ವರ್ಷಗಳ ಅವಧಿಗಿಂತ ಹೆಚ್ಚಿದ್ದು, ಅದು ಅಷ್ಟು ಸುಲಭವಾಗಿ ತುಂಡಾಗುವುದಿಲ್ಲ.. ಮುಂಧೆ ಓದಿ...

By Jaya Subramanya
|

ಹೆಣ್ಣು ಮಕ್ಕಳಿಗೆ ಕೂದಲೆಂದರೆ ಪಂಚಪ್ರಾಣ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ... ಆದರೆ ಸೂಕ್ತವಾದ ಕಾಳಜಿಯನ್ನು ಕೂದಲಿಗೆ ಮಾಡಿಲ್ಲ ಎಂದಾದಲ್ಲಿ ಕೂದಲಿನಲ್ಲಿ ಒಂದಿಲ್ಲೊಂದು ಸಮಸ್ಯೆಗಳು ಕಂಡುಬರುತ್ತದೆ. ಕೂದಲಿನ ಕಾಳಜಿಗಾಗಿ ನಾವು ಸಾಕಷ್ಟು ಸಮಯವನ್ನು ಹಣವನ್ನು ವ್ಯರ್ಥಮಾಡುತ್ತೇವೆ. ಆದರೆ ಪ್ರಯೋಜನಕಾರಿಯಾದುದನ್ನು ಕೂದಲಿನ ಅಭಿವೃದ್ಧಿಗೆ ಮಾಡುವುದಿಲ್ಲ. ಏನೇ ಹೇಳಿ, ಕೂದಲಿನ ಆರೋಗ್ಯ ನಿಮ್ಮ ಕೈಯಲ್ಲೇ ಇದೆ!

ಹಾಗಿದ್ದರೆ ಕೂದಲಿಗೆ ನೀವು ಮಾಡುವ ಕಾಳಜಿಯಲ್ಲಿ ಏನು ತಪ್ಪುಗಳಾಗುತ್ತಿವೆ ಅಂತೆಯೇ ಕೂದಲಿನ ಬಗೆಗಿನ ಮಹತ್ವದ ಅಂಶಗಳನ್ನು ನಾವು ಇಂದಿನ ಲೇಖನದಲ್ಲಿ ತಿಳಿದುಕೊಳ್ಳಲಿದ್ದೇವೆ. ಇದರಿಂದ ಕೂದಲಿನ ಪೋಷಣೆಯನ್ನು ಹೇಗೆ ಮಾಡುವುದು ಎಂಬುದನ್ನು ನಿಮಗೆ ತಿಳಿದುಕೊಳ್ಳಬಹುದಾಗಿದೆ....

ನಿಮ್ಮ ಕೂದಲು ಎಷ್ಟು ಉದ್ದವಾಗಿ ಬೆಳೆಯುತ್ತದೆ

ನಿಮ್ಮ ಕೂದಲು ಎಷ್ಟು ಉದ್ದವಾಗಿ ಬೆಳೆಯುತ್ತದೆ

ವರ್ಷಕ್ಕೆ ನಿಮ್ಮ ಕೂದಲು 6 ಇಂಚುಗಳಷ್ಟು ಬೆಳವಣಿಗೆಯನ್ನು ಕಾಣುತ್ತದೆ. ಅಂದರೆ ದಿನದಲ್ಲಿ ಕೂದಲಿನ ಬೆಳವಣಿಗೆ 0.33 ಎಮ್ಎಮ್ ಆಗಿದೆ. ಅದಾಗ್ಯೂ, ರಾಸಾಯನಿಕಗಳ ಬಳಕೆ ಮತ್ತು ಹೀಟಿಂಗ್ ಉಪಕರಣಗಳಿಂದ ಈ ಬೆಳವಣಿಗೆ ಕುಂಠಿತಗೊಳ್ಳಬಹುದಾಗಿದೆ.

ದಿನಕ್ಕೆ 100 ಕೂದಲುಗಳು ನಷ್ಟಹೊಂದುವುದು ಸಾಮಾನ್ಯ ಸಂಗತಿಯೇ?

ದಿನಕ್ಕೆ 100 ಕೂದಲುಗಳು ನಷ್ಟಹೊಂದುವುದು ಸಾಮಾನ್ಯ ಸಂಗತಿಯೇ?

ನಿಮ್ಮ ಬಾಚಣಿಗೆಯಲ್ಲಿ ನೀವು ಕೂದಲುಗಳನ್ನು ಕಂಡಲ್ಲಿ, ಹೆದರದಿರಿ, ಭಯಗೊಳ್ಳದಿರಿ. ಇದು ಸಾಮಾನ್ಯ ಸಂಗತಿಯಾಗಿದೆ. ಈ ಕೂದಲುಗಳು ನಷ್ಟಗೊಂಡು ಇದರ ಜಾಗದಲ್ಲಿ ಹೊಸ ಕೂದಲುಗಳು ಬೆಳವಣಿಗೆಯನ್ನು ಕಂಡುಕೊಳ್ಳುತ್ತದೆ.

ಹೆಚ್ಚಿನ ಭಾರವನ್ನು ಕೂದಲು ತಾಳಿಕೊಳ್ಳಬಹುದೇ?

ಹೆಚ್ಚಿನ ಭಾರವನ್ನು ಕೂದಲು ತಾಳಿಕೊಳ್ಳಬಹುದೇ?

ನಮ್ಮ ಒಂದು ಕೂದಲಿನ ಬೇರು 100 ಗ್ರಾಮ್‎ಗಳಷ್ಟು ಭಾರವನ್ನು ತಾಳಿಕೊಳ್ಳಬಹುದಾಗಿದೆ. ನಮ್ಮ ಸಂಪೂರ್ಣ ಕೂದಲು ಎರಡು ಆನೆಗಳ ಭಾರವನ್ನು ಹೊರುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಆದ್ದರಿಂದ ನಿಮ್ಮ ಕೂದಲಿನ ಬುಡ ಭಾರದೊಂದಿಗೆ ಹೊಂದಾಣಿಕೆಯನ್ನು ಮಾಡಿಕೊಳ್ಳುತ್ತದೆ

ಕೂದಲಿನ ಬೇರಿನ ಆಯಸ್ಸು ಎಷ್ಟು?

ಕೂದಲಿನ ಬೇರಿನ ಆಯಸ್ಸು ಎಷ್ಟು?

ನಿಮ್ಮ ಕೂದಲನ್ನು ನೀವು ಸೂಕ್ತವಾಗಿ ಆರೈಕೆ ಮಾಡಿಕೊಂಡಲ್ಲಿ, ಕೂದಲಿನ ಬೇರಿನ ಆಯಸ್ಸು 4 ರಿಂದ 7 ವರ್ಷಗಳಾಗಿರುತ್ತದೆ. ತನ್ನ ಆಯಸ್ಸನ್ನು ಕೂದಲಿನ ಬುಡ ಪೂರ್ಣಗೊಳಿಸಿದಲ್ಲಿ, ಅದು ಯಾವಾಗ ಉದುರುತ್ತದೆ ಎಂಬುದು ನಿಮಗೆ ಅರಿವಿರುವುದಿಲ್ಲ.

ಬೇಸಿಗೆಯಲ್ಲಿ ಕೂದಲು ವೇಗವಾಗಿ ಬೆಳೆಯುತ್ತದೆ

ಬೇಸಿಗೆಯಲ್ಲಿ ಕೂದಲು ವೇಗವಾಗಿ ಬೆಳೆಯುತ್ತದೆ

ಬೇಸಿಗೆಯಲ್ಲಿ ಕೂದಲು ವೇಗವಾಗಿ ಬೆಳೆಯುತ್ತದೆ, ಬೇಸಿಗೆಯಲ್ಲಿ ಕೂದಲಿನ ಬೆಳವಣಿಗೆ ಸಮತೋಲನದಲ್ಲಿರುತ್ತದೆ. ನಿಮ್ಮ ಕೂದಲನ್ನು ಉದ್ದಕ್ಕೆ ಬೆಳೆಸಿಕೊಳ್ಳಬೇಕು ಎಂದಾದಲ್ಲಿ, ಬಿಸಿಲಿಗೆ ಹೋಗಿ ಮತ್ತು ಚಳಿಗಾಲದಲ್ಲಿ ಹೀಟರ್ ಶಾಖವನ್ನು ಪಡೆದುಕೊಳ್ಳಿ.

ಕೂದಲು ಒಂದು ಇಲಾಸ್ಟಿಕ್‎ನಂತೆ!

ಕೂದಲು ಒಂದು ಇಲಾಸ್ಟಿಕ್‎ನಂತೆ!

ತನ್ನ ಇಲಾಸ್ಟಿಕ್ ಗುಣದಿಂದ ಕೂದಲನ್ನು ನೀವು ಎಷ್ಟು ಉದ್ದಕ್ಕೆ ಬೇಕಾದರೂ ಎಳೆಯಬಹುದಾಗಿದೆ. ಒಣಕೂದಲಿಗಿಂತ ಒದ್ದೆ ಕೂದಲನ್ನು 30% ದಷ್ಟು ಉದ್ದಕ್ಕೆ ಎಳೆಯಬಹುದಾಗಿದೆ. ಇದರಿಂದ ಕೂದಲಿಗೆ ಯಾವುದೇ ನಷ್ಟವಾಗುವುದಿಲ್ಲ. ಇದೇ ಸಮಯದಲ್ಲಿ, ಒಣಕೂದಲಿಗಿಂತ ಒದ್ದೆಕೂದಲು ದುರ್ಬಲವಾಗಿರುತ್ತದೆ ಮತ್ತು ಸುಲಭವಾಗಿ ಹಾನಿಗೊಳಗಾಗುತ್ತದೆ.

ತಲೆಯ ಮೇಲೆ ಕೂದಲು ಇರುವುದು ಉತ್ತಮವಾಗಿದೆ

ತಲೆಯ ಮೇಲೆ ಕೂದಲು ಇರುವುದು ಉತ್ತಮವಾಗಿದೆ

ನಿಮ್ಮ ತಲೆಯ ಮೇಲೆ ಕೊಬ್ಬಿನ ಪದರ ಇರುವುದಿಲ್ಲ. ಸಾಕಷ್ಟು ಬಿಸಿಯನ್ನು ನಮ್ಮ ತಲೆ ತಾಳಿಕೊಳ್ಳುತ್ತದೆ. ಆದ್ದರಿಂದ ನಮ್ಮ ತಲೆಯ ಮೇಲಿರುವ ಕೂದಲು ಒಂದಷ್ಟು ಶಾಖವನ್ನು ಸಂಗ್ರಹಿಸಿಕೊಂಡು ನಮ್ಮ ಆರೋಗ್ಯ ವೃದ್ಧಿಯನ್ನು ಮಾಡುತ್ತದೆ.

ನಿಮ್ಮ ಕೂದಲು ನಿಮ್ಮ ಆರೋಗ್ಯದ ಸಂಕೇತ

ನಿಮ್ಮ ಕೂದಲು ನಿಮ್ಮ ಆರೋಗ್ಯದ ಸಂಕೇತ

ನಿಮ್ಮ ಕೂದಲನ್ನು ನೋಡಿಯೇ ನಿಮ್ಮ ಜೀವನ ಶೈಲಿ ಮತ್ತು ಆರೋಗ್ಯವನ್ನು ಅರಿತುಕೊಳ್ಳಬಹುದಾಗಿದೆ ಎಂಬುದಾಗಿ ನ್ಯಾಯ ವಿಜ್ಞಾನಿ ತಿಳಿಸಬಲ್ಲವರಾಗಿದ್ದಾರೆ. ಕಾನೂನು ಬಾಹಿರ ಮಾದಕ ದ್ರವ್ಯಗಳನ್ನು ಸೇವನೆ ಮಾಡುತ್ತಿದ್ದಾರೋ ಇಲ್ಲವೋ ಎಂಬುದನ್ನು ಕೂಡ ಅರಿತುಕೊಳ್ಳಬಹುದಾಗಿದೆ. ಒಂದು ಕೂದಲನ್ನು ಬಳಸಿಕೊಂಡು ಡಿಎನ್ಎ ಪರೀಕ್ಷೆಗಳನ್ನು ನಡೆಸಬಹುದಾಗಿದೆ.

ನೇರ ಕೂದಲು ಗುಂಗುರಾಗುತ್ತದೆ

ನೇರ ಕೂದಲು ಗುಂಗುರಾಗುತ್ತದೆ

ನೇರವಾಗಿರುವ ಕೂದಲು ಬೆಳವಣಿಗೆಯನ್ನು ಪಡೆದುಕೊಳ್ಳುತ್ತಿದ್ದಂತೆ ಗುಂಗುರಾಗುತ್ತದೆ. ಗುಂಗುರು ಕೂದಲು ಮತ್ತು ನೇರ ಕೂದಲಿಗಿರುವ ವ್ಯತ್ಯಾಸವೆಂದರೆ ನೇರ ಕೂದಲು ಉದ್ದವಾಗುತ್ತಿದ್ದಂತೆ ಟ್ವಿಸ್ಟ್‎ಗಳನ್ನು ಹೊಂದುತ್ತದೆ ಮತ್ತು ಗುಂಗುರು ಕೂದಲು ಈಗಾಗಲೇ ಟ್ವಿಸ್ಟ್‎ಗಳನ್ನು ಪಡೆದುಕೊಂಡಿರುತ್ತದೆ.

English summary

Weird Things You Didn't Know About Your Hair

In this article, we have shared with you some interesting facts about hair that you must know. Scroll down to find more facts about on hair.
X
Desktop Bottom Promotion