For Quick Alerts
ALLOW NOTIFICATIONS  
For Daily Alerts

ಸೋಲನ್ನೇ ಮೆಟ್ಟಿಲಾಗಿಸಿಕೊಳ್ಳಿ, ನಿಜಕ್ಕೂ ನೀವೇ ವಿಜೇತರು!

|

ನನ್ನಿಂದ ಇದು ಸಾಧ್ಯವಿಲ್ಲ, ನಾನು ಇದಕ್ಕೆ ಅರ್ಹನಲ್ಲ, ನನಗೆ ಯಶಸ್ಸು ಸಿಗುವುದಿಲ್ಲ, ನನಗೆ ಹತಾಶೆಯೇ ಜೀವನವಾಗಿದೆ, ನನಗೆ ಕಣ್ಣೀರೇ ಬಂಧುವಾಗಿದೆ, ನಾನು ಇಷ್ಟೇ, ನನ್ನ ಹಣೆಬರಹವೇ ಇಷ್ಟು, ಇದುವೇ ನನ್ನ ಜೀವನ- ಹೀಗೆ ಅನೇಕ ತಪ್ಪು ಗ್ರಹಿಕೆಯ ನಕಾರಾತ್ಮಕ ಚಿಂತನೆಗಳು ನಮ್ಮನ್ನು ಚಿತೆಗೆ ಹತ್ತಿರವಾಗಿಸುತ್ತಿವೆ. ಇದು ಈಗಿನ ಜನಮಾನಸದ ದಿನಂಪ್ರತಿ ಚಿಂತನೆಗಳಾಗುತ್ತಿವೆ. ಸಾಧಿಸುವ ಮನೋಭಾವ ಬೆಳೆಸಿಕೊಳ್ಳದೇ ಜೀವನದಲ್ಲಿ ಸಂಭವಿಸಿರುವ ಆಕಸ್ಮಿಕ ವೈಫಲ್ಯಗಳನ್ನೇ ಸದಾ ಚಿಂತಿಸಿಕೊಂಡು ಆನಂದವನ್ನು ವಂಚಿಸಿಕೊಳ್ಳುತ್ತಿದ್ದೇವೆ. ಆದರೆ ನಮ್ಮ ಯೋಚನೆಗಳೇ ಭವಿಷ್ಯದ ದಾರಿ ತೋರಿಸುತ್ತವೆ, ಎಂಬುದನ್ನು ಮರೆಯಬಾರದು...

"ನಾವು ಯೋಚಿಸುವ ರೀತಿಯಂತೆ ನಮ್ಮ ವ್ಯಕ್ತಿತ್ವ ಬೆಳೆಯುತ್ತದೆ"- ಇದೊಂದು ಪ್ರಖ್ಯಾತವಾದ ಹೇಳಿಕೆ. ಹೌದು, ಈ ಹೇಳಿಕೆಯು ಪ್ರತಿಯೊಬ್ಬರಿಗೂ ಅನ್ವಯಿಸುತ್ತದೆ. ಈ ಹೇಳಿಕೆಯನ್ನು ಒಮ್ಮೆ ಸೂಕ್ಷ್ಮವಾಗಿ ಗಮನಿಸಿ. ಸಕಾರಾತ್ಮಕ ಚಿಂತನೆಗಳಿಂದ ಅನೇಕ ಸಾಧಕರು ಯಶಸ್ಸು ಗಳಿಸಿರುವುದು ನಮ್ಮ ಕಣ್ಮುಂದೆ ಕಾಣಿಸುತ್ತದೆ. ಆದರೆ ಖಿನ್ನತೆಯಿಂದ ಬಳಲುತ್ತಿರುವವರು ಪ್ರತಿನಿತ್ಯ ಅವರಿವರನ್ನು ದೂರಿಕೊಂಡು ಹತಾಶೆಯಿಂದ ಜೀವಿಸುತ್ತಿರುತ್ತಾರೆ. ಇದಕ್ಕೆ ಕಾರಣ ನಾವು ಯೋಚಿಸುವ ರೀತಿ ಹಾಗೂ ನಮ್ಮ ಜೀವನದ ಮೌಢ್ಯಗಳು. ನಾವು ಹೇಗೆ ಚಿಂತಿಸುತ್ತೇವೆ ಹಾಗೆಯೇ ನಮ್ಮ ಜೀವನ ನಡೆಯುತ್ತಾ ಸಾಗುತ್ತದೆ ಎಂದು ಹೆಚ್ಚಿನವರಿಗೆ ಅರಿವಿಲ್ಲ. ಜೀವನದಲ್ಲಿ ಗುರಿ ಸಾಧಿಸಲು ಈ 4 ಅಸ್ತ್ರಗಳು ಸಾಕು!

ಕೆಲವು ಸನ್ನಿವೇಶಗಳಲ್ಲಿ ನಾವು ಚಿಂತಿಸಬೇಕಾದ ರೀತಿಯ ಮೇಲೆ ಅದರ ಪರಿಣಾಮ ಅವಲಂಬಿಸಿರುತ್ತದೆ. ಅದಕ್ಕಾಗಿ ನಾವೇಕೆ ಒಳ್ಳೆಯ ರೀತಿಯಲ್ಲಿ ಸಕಾರಾತ್ಮಕವಾಗಿ ಚಿಂತಿಸಬಾರದು. ಇದರಿಂದ ನಾವು ಕಳೆದುಕೊಳ್ಳುವುದೇನೂ ಇಲ್ಲವಲ್ಲ. ನಿಮಗೆ ಸಾಕಾರಾತ್ಮಕ ಚಿಂತನೆಗಳ ಶಕ್ತಿ ತಿಳಿದರೆ ನೀವೆಂದಿಗೂ ನಕಾರಾತ್ಮಕವಾಗಿ ಚಿಂತಿಸುವುದೇ ಇಲ್ಲ. ಆದರೂ, ಕೆಲವೊಂದು ಬಾರಿ ಕೆಲವು ನಕಾರಾತ್ಮಕ ಚಿಂತನೆಗಳನ್ನು ಸಹ ಮೈಗೂಡಿಸಿಕೊಳ್ಳಬೇಕು ಏಕೆಂದರೆ ಇದರಿಂದ ಅನೇಕ ರೀತಿಯ ಪ್ರಶ್ನೆಗಳು ಉದ್ಭವಿಸಿ ವಿಚಾರಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವಲ್ಲಿ ಸಹಕಾರಿಯಾಗಲಿದೆ. ಜೀವನದಲ್ಲಿ ಸತತ ಸೋಲು; 12 ಕಾರಣಗಳೇನು ಬಲ್ಲೀರಾ?

ಆದರೆ ಇದನ್ನು ಚಟವಾಗಿ ಮಾಡಿಕೊಳ್ಳಬಾರದು. ಕೆಲವೊಂದು ಬಾರಿ ನಾವು ಸತ್ಯವಲ್ಲದ ವಿಚಾರಗಳನ್ನು ನಂಬುತ್ತೇವೆ. ನಮ್ಮ ಚಿಂತನೆಗಳು ಬಲಿಷ್ಠವಾಗಿದ್ದು, ನಾವು ಚಿಂತಿಸುವ ರೀತಿಯಲ್ಲಿ ನಮ್ಮ ಜೀವನವು ನಡೆಕೊಳ್ಳಲು ಆಗ್ರಹಿಸುತ್ತೇವೆ. ಸಕಾರಾತ್ಮಕ ಜನರು ಸದಾಕಾಲ ಆನಂದದಿಂದಿರುತ್ತಾರೆ ಎಂಬುದು ನಿಮಗೆ ತಿಳಿದಿದೆಯೇ? ಹೌದು, ಈ ಜನರು ತಮ್ಮ ಸಕಾರಾತ್ಮಕ ಚಿಂತನೆಗಳಿಂದ ಒಳ್ಳೆಯ ವಿಚಾರಗಳನ್ನೇ ತಮ್ಮ ಜೀವನಕ್ಕೆ ಆಹ್ವಾನಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ನಮ್ಮನ್ನು ನಾವೇ ತಪ್ಪು ಗ್ರಹಿಕೆಯಿಂದ ದೂಷಿಸಿಕೊಳ್ಳುವುದನ್ನು ಬಿಟ್ಟು ಸುಂದರ ಜೀವನವನ್ನು ನಮ್ಮದಾಗಿಸಿಕೊಳ್ಳೋಣ. ನೀವು ಸಾಮಾನ್ಯವಾಗಿ ನಕಾರಾತ್ಮಕ ಚಿಂತನೆಗಳನ್ನು ಅಭ್ಯಸಿಸುವ ಕ್ರಮಗಳು ಇಲ್ಲಿವೆ. ಮುಂದೆ ಓದಿ...

ನಾನು ಎಲ್ಲವನ್ನೂ ಕಳೆಕೊಂಡಿರುವವನು

ನಾನು ಎಲ್ಲವನ್ನೂ ಕಳೆಕೊಂಡಿರುವವನು

ಸಾಕಷ್ಟು ಜನರು ತಮ್ಮ ಅಲ್ಪಾಭಿಮಾನದಿಂದ ತಮ್ಮನ್ನು ತಾವೇ ಕಡೆಗಣಿಸಿಕೊಳ್ಳುತ್ತಿದ್ದಾರೆ. ಈ ಅಭ್ಯಾಸವು ತಮ್ಮ ಭವಿಷ್ಯವನ್ನೇ ಹಾಳು ಮಾಡುತ್ತದೆ. ಈ ರೀತಿಯ ಜನರು ಹೀಗೆಯೇ ನಾಕಾರಾತ್ಮಕವಾಗಿ ಯೋಚಿಸಿಕೊಂಡು ಹಾಗೆಯೇ ನಡೆದುಕೊಳ್ಳುತ್ತಿರುತ್ತಾರೆ.

ನಾನು ಎಲ್ಲವನ್ನೂ ಕಳೆಕೊಂಡಿರುವವನು

ನಾನು ಎಲ್ಲವನ್ನೂ ಕಳೆಕೊಂಡಿರುವವನು

ನೀವು ಯಾವುದೇ ಕಾರಣಕ್ಕೂ ಜೀವನದಲ್ಲಿ ಹತಾಶರಾಗದಿರಿ. ಏಕೆಂದರೆ ನಿಮಗೆ ನಿಜಕ್ಕೂ ಎಲ್ಲ ರೀತಿಯ ಸಾಮರ್ಥ್ಯವಿದೆ. ಸದಾಕಾಲ ಸಕಾರಾತ್ಮಕವಾಗಿ ಚಿಂತಿಸಿ ನಿಮ್ಮ ಜೀವನದಲ್ಲಿ ಯಶಸ್ಸು ಸಾಧಿಸಿ.

ನಾನು ಈ ಕೆಲಸವನ್ನು ನಾಳೆ ಮಾಡುತ್ತೇನೆ

ನಾನು ಈ ಕೆಲಸವನ್ನು ನಾಳೆ ಮಾಡುತ್ತೇನೆ

ಇದು ನಮ್ಮ ಜೀವನದಲ್ಲಿ ನಾವು ಹೇಳಿಕೊಳ್ಳುವ ಬಹುದೊಡ್ಡ ಸುಳ್ಳು. ನಮಗೆಲ್ಲರೂ ತಿಳಿದಿದೆ ಏಕೆಂದರೆ ನಾಳೆಯೂ ಸಹ ನಾವು ಅದನ್ನು ಮಾಡುವುದಿಲ್ಲ ಎಂದು. ನಾವು ಮಾಡುವ ಕೆಲಸವನ್ನು ಸಕಾಲದಲ್ಲಿಯೇ ಮಾಡಬೇಕು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ನಾನು ಈ ಕೆಲಸವನ್ನು ನಾಳೆ ಮಾಡುತ್ತೇನೆ

ನಾನು ಈ ಕೆಲಸವನ್ನು ನಾಳೆ ಮಾಡುತ್ತೇನೆ

ಇಲ್ಲವಾದಲ್ಲಿ ಸದರಿ ಕೆಲಸಗಳು ಹಾಗೆಯೇ ಉಳಿದುಕೊಂಡು ಒತ್ತಡ ಹೆಚ್ಚಾಗಲು ಕಾರಣವಾಗುತ್ತದೆ ಹಾಗೂ ನಂತರದ ಅವಧಿಯಲ್ಲಿ ಕೆಲಸ ಪೂರ್ತಿಯಾಗದೇ ಹತಾಶೆಗೆ ಒಳಗಾಗಿ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ.

ನಾನು ಅವಶ್ಯಕತೆಗಿಂತ ಹೆಚ್ಚಿಗೆ ಮಾಡುತ್ತಿದ್ದೇನೆ

ನಾನು ಅವಶ್ಯಕತೆಗಿಂತ ಹೆಚ್ಚಿಗೆ ಮಾಡುತ್ತಿದ್ದೇನೆ

ಕೆಲವೊಂದು ಬಾರಿ ನಾವು ನಮ್ಮ ಕೆಲಸವನ್ನು ಮತ್ತು ಕೌಟುಂಬಿಕವಾಗಿ ಶೇಖಡಾ ನೂರರಷ್ಟು ಕರ್ತವ್ಯ ಪೂರೈಸಿದ್ದೇವೆಂದು ಆನಂದಪಡುತ್ತೀವಿ. ಈ ಭ್ರಮೆಯಿಂದ ಜೀವಿಸುವುದನ್ನು ಮೊದಲು ನಿಲ್ಲಿಸಿ. ಇತರರ ಅಭಿಪ್ರಾಯಗಳನ್ನೂ ತಿಳಿದುಕೊಳ್ಳಲು ಪ್ರಯತ್ನಿಸಿ. ನಿಮ್ಮ ಸಾಮರ್ಥ್ಯವನ್ನು ಸದಾಕಾಲ ಚಟುವಿಟಿಕೆಗಳಿಂದ ಸಮರ್ಪಕವಾಗಿ ಕಾಪಾಡಿಕೊಳ್ಳಿ. ಇದು ಮುಂದೊಂದು ದಿನ ನಿಮ್ಮ ಜೀವನಕ್ಕೆ ದಾರಿದೀಪವಾಗಲಿದೆ.

ನಾನು ಸದಾಕಾಲ ಗೆಲ್ಲಲೇಬೇಕು

ನಾನು ಸದಾಕಾಲ ಗೆಲ್ಲಲೇಬೇಕು

ವೈಫಲ್ಯಗಳು ನಿಮ್ಮ ಜೀವನದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ. ಇವುಗಳಿಂದ ನಿಮ್ಮ ಮುಂದಿನ ಜೀವನದ ದಾರಿಯ ಸ್ಥಿತಿ ಅರಿಯುವಂತಾಗಿ ನಿಮ್ಮ ಆತ್ವವಿಶ್ವಾಸ ಹೆಚ್ಚಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ನಾನು ಸದಾಕಾಲ ಗೆಲ್ಲಲೇಬೇಕು

ನಾನು ಸದಾಕಾಲ ಗೆಲ್ಲಲೇಬೇಕು

ಮೊದಲು ನಿಮ್ಮ ವೈಫಲ್ಯಗಳನ್ನು ಆನಂದದಿಂದ ಸ್ವೀಕರಿಸುವುದನ್ನು ಅರಿಯಿರಿ ಹಾಗೂ ನಿಮ್ಮ ಗುರಿಗಳ ಬಗ್ಗೆ ಹೆಚ್ಚು ಒತ್ತಡಕ್ಕೆ ಒಳಗಾಗದಿರಿ. ಏಳುಬೀಳುಗಳ ದಾರಿಯಲ್ಲಿ ಆನಂದದಿಂದ ಸಾಗಿ. ನಿಮ್ಮ ಜೀವನದ ಯಶಸ್ಸನ್ನು ನೀವೇ ನೋಡಿ ಆನಂದಿಸುವಿರಿ.

Read more about: ಜೀವನ ಕೆಲಸ life work
English summary

Damaging Lies We Tell Ourselves

Sometimes, we start believing in certain things that are not true. Our thoughts are very powerful, as we will behave according to the way we think and believe. Have you ever wondered why positive people are always happy? They are happy because they invite good things in their life through their thoughts. Therefore, we must stop lying to ourselves and kill all the negative thoughts. Here are some common lies that damage us and must be avoided.
Story first published: Wednesday, January 6, 2016, 11:39 [IST]
X
Desktop Bottom Promotion