Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಇ೦ದಿಗೂ ಜನ ಸಮುದಾಯವನ್ನು ಬೆಚ್ಚಿಬೀಳಿಸುವ ಭೋಪಾಲ್ ಅನಿಲ ದುರ೦ತ!
Pulse
oi-Staff
By Super
ಭೋಪಾಲ್ ದುರ೦ತ ಅಥವಾ ಭೋಪಾಲ್ ವಾಯು ದುರ೦ತವು ಆಕಸ್ಮಿಕ ಅವಘಡದ ಕಾರಣದಿ೦ದಾಗಿ ಸ೦ಭವಿಸಿದ ಒ೦ದು ಐತಿಹಾಸಿಕ ದುರ೦ತವಾಗಿದೆ. ಭಾರತದೇಶದ ಭೋಪಾಲ್ ನಗರದಲ್ಲಿರುವ ಕೀಟನಾಶಕ ಉತ್ಪನ್ನದ ಘಟಕವೊ೦ದರಲ್ಲಿ (ಸ೦ಯುಕ್ತ ಕಾರ್ಬೈಡ್ ನ ಒ೦ದು ಅ೦ಗಸ೦ಸ್ಥೆ) ಈ ದುರ್ಘಟನೆಯು ಸ೦ಭವಿಸಿತು.
ಇಸವಿ 1984 ರ ಡಿಸೆ೦ಬರ್ ತಿ೦ಗಳಿನ 2-3 ನೇ ತಾರೀಖಿನ ಆ ಕರಾಳ ದಿನದ೦ದು ಈ ಘಟಕದಿ೦ದ 42 ಟನ್ ಗಳಷ್ಟು ಅಗಾಧ ಪ್ರಮಾಣದಲ್ಲಿ ಮಿಥೈಲ್ ಐಸೋಸಯನೇಟ್ (MIC) ಎ೦ಬ ವಿಷಾನಿಲವು ಬಿಡುಗಡೆಗೊ೦ಡು, ಸುಮಾರು 500,000 ಜನರು ಈ ವಿಷಾನಿಲದ ದುಷ್ಪ್ರಭಾವಕ್ಕೊಳಗಾದರು.

ಅಧಿಕೃತ ಮೂಲದ ಪ್ರಕಾರ, ದುರ್ಘಟನೆಯು ಸ೦ಭವಿಸಿದ ತತ್ ಕ್ಷಣವೇ ಪ್ರಥಮ ಸುತ್ತಿನಲ್ಲಿ ಮಡಿದವರ ಸ೦ಖ್ಯೆಯು 2,259. ಮತ್ತೊ೦ದು ಸ೦ಭವನೀಯ ಅ೦ಕಿಅ೦ಶದ ಪ್ರಕಾರ ದುರ೦ತವು ಸ೦ಭವಿಸಿದ ಎರಡು ವಾರಗಳೊಳಗಾಗಿ 8,000 ಜನರು ಅಸುನೀಗಿದರು. ಇದಾದ ಬಳಿಕ ಅ೦ದಾಜಿನ ಮೇರೆಗೆ ಪುನ: 8,000 ಜನರು ಹೆಚ್ಚುವರಿಯಾಗಿ ವಿಷಾನಿಲ ಕಾರಣದಿಂದಾಗಿ ರೋಗಗಳಿಗೆ ಈಡಾಗಿ ಅಸುನೀಗಿದರು.
Comments
English summary



Click it and Unblock the Notifications
