Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ನಿಮಗೆ ಗೊತ್ತಿರದ ಬಾಹ್ಯಾಕಾಶ ಜೀವನ
ಆಕಾಶದಲ್ಲಿ ಜೀವನ ಸಾಮಾನ್ಯವಲ್ಲ. ಭೂಮಿಯ ಮೇಲಿನಂತೆ ಅಲ್ಲವೇ ಅಲ್ಲ. ನಮಗೆ ಭೂಮಿಯ ಮೇಲೆ ಇದ್ದು ಮಾತ್ರ ಗೊತ್ತು ಹಾಗಾಗಿ ಬಾಹ್ಯಾಕಾಶದಲ್ಲಿನ ಜೀವನವನ್ನು ಅನುಭವಕ್ಕೆ ತರುವುದು ಬಹಳ ಕಷ್ಟ ಸಾಧ್ಯ. ವಿಜ್ಞಾನಿಗಳು ಮತ್ತು ಗಗನ ಯಾತ್ರಿಗಳು ಮಾತ್ರ ತಮ್ಮ ಸಂಶೋಧನೆಯ ಅವಧಿಯಲ್ಲಿ ಈ ಅನುಭವವನ್ನು ಪಡೆಯುತ್ತಾರೆ.
ನಮಗೆ ಬಾಹ್ಯಾಕಾಶ ಜೀವನ ತಿಳಿಯದೇ ಹೋದರೂ ಅದೆಷ್ಟೋ ಮಂದಿಗೆ ಓ ಅನುಭವವನ್ನು ಪಡೆಯುವ ಆಸೆ ಇರುತ್ತದೆ. ಹಲವರಿಗೆ ಈ ವಿಶೇಷ ಅನುಭವವನ್ನು ಪಡೆಯುವ ಆಸೆ ಇಲ್ಲದೇ ಹೋದರೂ ಅಲ್ಲಿ ಜೀವನ ಹೇಗಿರುತ್ತದೆ ಎಂಬ ಬಗ್ಗೆ ತಿಳಿಯುವ ಕುತೂಹಲ ಇದ್ದೇ ಇರುತ್ತದೆ. ಅಂತಹ ಆಸಕ್ತರಿಗಾಗಿ ಇಲ್ಲಿ ಕೆಲವು ವಿಷಯಗಳನ್ನು ನೀಡಲಾಗಿದೆ ಓದಿ ರೋಮಾಂಚನ ಆಗಬಹುದಾದ ಸಂಗತಿಗಳಿವು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ದೇವಸ್ಥಾನದ ಗಂಟೆಯ ನಿನಾದದ ಮಹತ್ವ ಅರಿಯಿರಿ

ಸೂರ್ಯೋದಯ:
ಇಲ್ಲಿ ದಿನಕ್ಕೊಮ್ಮೆ ಸೂರ್ಯೋದಯವಾಗುತ್ತದೆ ಆ ಸಮಯದಲ್ಲಿನ ಸೊಬಗೇ ಬೇರೆ. ಅಲ್ಲಿ ಆ ಸೊಬಗನ್ನು ನೀವು ಪ್ರತಿ ತೊಂಬತ್ತು ನಿಮಿಷಗಳಿಗೊಮ್ಮೆ ಅನುಭವಿಸಬಹುದು. ಇದರಿಂದಾಗಿ ನಿದ್ರೆಯಲ್ಲಿ ಬಹಳಷ್ಟು ಸಮಸ್ಯೆಗಳಾಗಬಹುದು. ಇದಕ್ಕೆ ಮುಖ್ಯ ಕಾರಣ ಅಲ್ಲಿ ಇಲ್ಲಿನಂತೆ ಹಗಲು ಮತ್ತು ರಾತ್ರೆಗಳೆಂಬುದಿಲ್ಲ. ಐ.ಎಸ್.ಎಸ್. ತಜ್ಞರು ಇದಕ್ಕಾಗಿ ಹೊಸ ದಾರಿಯೊಂದನ್ನು ಕಂಡುಹಿಡಿದಿದ್ದಾರೆ. ಅವರು ಗಗನ ಯಾತ್ರಿಗಳ ಚಟುವಟಿಕೆಯನ್ನು ಭೂಮಿಯ ಮೇಲಿರುವ 24 ಗಂಟೆಗಳಂತೆಯೇ ಇಟ್ಟಿದ್ದಾರೆ. ಇದರಿಂದಾಗಿ ಅಲ್ಲಿನ ಚಟುವಟಿಕೆಗಳು ಬಹಳ ಸುಗಮವಾಗುತ್ತವೆ.
ಭೌತಿಕ ಬದಲಾವಣೆಗಳು:
ಅಲ್ಲಿ ಭೂಮಿಯಲ್ಲಿರುವಂತೆ ಗುರುತ್ವ ಶಕ್ತಿ ಇಲ್ಲ. ಇದರಿಂದಾಗಿ ಅವರು ಎಲ್ಲೆಂದರಲ್ಲಿ ಸುಲಭವಾಗಿ ಸುತ್ತುಹಾಕಲು ಆರಂಭಿಸುತ್ತಾರೆ. ಹಾಗೂ ಇದರಿಂದಾಗಿ ಸಾಮಾನ್ಯ ಎತ್ತರದ ವ್ಯಕ್ತಿ ಬಾಹ್ಯಾಕಾಶದಲ್ಲಿ 2.25 ಇಂಚುಗಳು ಎತ್ತರವಾಗುತ್ತಾನೆ.
ಬಾಹ್ಯಾಕಾಶ ಅನಾರೋಗ್ಯ:
ಭೂಮಿಗೆ ಇಳಿದ ನಂತರ ಎರಡು ಅಥವಾ ಮೂರು ದಿನಗಳ ತನಕ ಬಾಹ್ಯಾಕಾಶ ಅನಾರೋಗ್ಯದಿಂದ ಗಗನಯಾತ್ರಿಗಳು ನರಳುತ್ತಾರೆ. ಇದಕ್ಕೆ ಮುಖ್ಯ ಕಾರಣ ಬಾಹ್ಯಾಕಾಶದಲ್ಲಿ ಗುರುತ್ವ ಶಕ್ತಿ ಇಲ್ಲದೇ ಇರುವುದು.
ನಿದ್ರೆಯ ಸಮಸ್ಯೆಗಳು:
ಬಾಹ್ಯಾಕಾಶದಲ್ಲಿ ಮಲಗುವುದು ಸುಲಭದ ಮಾತಲ್ಲ. ಸ್ವಲ್ಪವೇ ನಿದ್ದೆ ಬೇಕೆಂದರೂ ಗಗನಯಾತ್ರಿಗಳು ಬಹಳಷ್ಟು ಕಷ್ಟ ಪಡಬೇಕಾಗುತ್ತದೆ. ಬಹಳ ತೇಲಾಡದಂತಹ ಒಂದು ವ್ಯವಸ್ಥೆಯೊಳಗೆ ಇದ್ದರೆ ಮಾತ್ರ ನಿದ್ದೆ ಸಾಧ್ಯ.
ವೈಯಕ್ತಿಕ ಅಲಂಕಾರ:
ಬೇರೆಲ್ಲದರಂತೆ ಬಾಹ್ಯಾಕಾಶದಲ್ಲಿ ಅಲಂಕಾರವೂ ಕಷ್ಟ ಸಾಧ್ಯ. ಇದಕ್ಕಾಗಿ ಎಲ್ಲರೂ ತಮ್ಮದೇ ಆದ ಅಲಂಕಾರ ಸಾಮಗ್ರಿಗಳನ್ನು ಒಯ್ಯಬೇಕಾಗುತ್ತದೆ. ಕೂದಲು ಸ್ವಚ್ಛಗೊಳಿಸಲು ನೊರೆ ಬಾರದ ಶಾಂಪೂ ವನ್ನು ಅವರು ತಮ್ಮ ಜೊತೆ ತೆಗೆದುಕೊಂಡು ಹೋಗಿರುತ್ತಾರೆ.
ಆಹಾರ ಕ್ರಮ:
ಮೊದಲೇ ಹೇಳಿದಂತೆ ಅಲ್ಲಿ ಗುರುತ್ವಾಕರ್ಷಣ ಬಲ ಇಲ್ಲ. ಹಾಗಾಗಿ ಭೂಮಿಯ ಮೇಲೆ ಮಾಡಿದಂತೆ ಅಲ್ಲಿ ಉಪ್ಪು ಹಾಗೂ ಕಾಣುಮೆಣಸಿನ ಹುಡಿಯನ್ನು ನಮ್ಮ ಆಹಾರದ ಮೇಲೆ ಸಿಂಪಡಿಸಲು ಸಾಧ್ಯವಿಲ್ಲ. ಹಾಗಾಗಿ ಅಲ್ಲಿ ಆದಷ್ಟು ದ್ರವ ರೂಪದ ಆಹಾರವನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ. ಗಟ್ಟಿ ಆಹಾರ ತೇಲಾಡುತ್ತಾ ಹೋಗಿ ಯಾವುದಾದರೂ ವ್ಯವಸ್ಥೆಯ ಒಳಗೆ ಸೇರಿ ಬಿಡುವ ಸಾಧ್ಯತೆ ಹೆಚ್ಚಾಗಿದೆ.
ಕಾಸ್ಮಿಕ್ ರೇಡಿಯೇಷನ್ಸ್:
ಬಾಹ್ಯಾಕಾಶದಿಂದ ನೀಲಿ ಹಿನ್ನೆಲೆಯಲ್ಲಿ ಕಾಣುವ ಭೂಮಿಯ ಸುಂದರ ದೃಶ್ಯ ರಮಣೀಯವಾಗಿರುತ್ತದೆ. ಹೀಗೆಯೇ ನಾವು ಕಾಣದ ಚಂದ್ರನ ಇನ್ನೊಂದು ಮುಖವನ್ನೂ ಕಾಣಬಹುದು ಅಲ್ಲಿ ಹೊಳೆಯುವ ದೀಪಗಳಂತೂ ಮತ್ತಷ್ಟೂ ಸುಂದರ.
ಮೆದುಳಿನ ಮೇಲೆ ಪ್ರಭಾವ:
ಬಾಹ್ಯಾಕಾಶಕ್ಕೆ ಕಳುಹಿಸುವ ಮುನ್ನ ಗಗನಯಾತ್ರಿಗಳ ಒತ್ತಡವನ್ನು ಸಹಿಸುವ ಸಾಮರ್ಥ್ಯವನ್ನು ಅಂದಾಜಿಸಿ ಅದರ ಪ್ರಕಾರವೇ ಜನರ ಆಯ್ಕೆ ಮಾಡಲಾಗುತ್ತಿದ್ದರೂ ಮೆದುಳಿನ ಮೇಲೆ ಒತ್ತಡ ಸಾಮಾನ್ಯ. ಇದಕ್ಕೆ ಮುಖ್ಯ ಕಾರಣ ಅಲ್ಲಿನ ಕಾಸ್ಮಿಕ್ ಕಿರಣಗಳು.
ಶೌಚಾಲಯ:
ಗುರುತ್ವವೇ ಇಲ್ಲದಲ್ಲಿ ಶೌಚಾಲಯ ಮತ್ತೊಂದು ದೊಡ್ಡ ಸಮಸ್ಯೆ. ಇದಕ್ಕೆ ಪರಿಹಾರ ಕಂಡು ಹಿಡಿಯಲಿ ಅದೆಷ್ಟೋ ಗಂಟೆಗಳ ಕೆಲಸಗಳು ನಡೆದಿವೆ. ಮೊದಲು ಇದು ಸರಳವಾದ ಒಂದು ತಂತ್ರಜ್ಞಾನದಿಂದ ನಡೆಯುತ್ತಿತ್ತು. ಈಗ ಏರ್ ಫಿಲ್ಟರ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.
ಭೂಮಿಗೆ ಮರು ಹೊಂದಿಕೊಳ್ಳುವುದು:
ಬಾಹ್ಯಾಕಾಶ ಯಾನದಿಂದ ಭೂಮಿಗೆ ಮರಳಿದ ಮೇಲೆ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದು ಪುನಃ ಒಂದು ಸಮಸ್ಯೆ. ಇಲ್ಲಿನ ಗುರುತ್ವಾಕರ್ಷನ ಶಕ್ತಿ ಇರುವ ಸನ್ನಿವೇಶಗಳಿಗೆ ಹೊಂದಿಕೊಳ್ಳಲು ಬಹು ಕಷ್ಟ. ಅಲ್ಲಿ ಮಾಡಿದಂತೆ ಅಭ್ಯಾಸ ಬಲದ ಮೇಲೆ ಇಲ್ಲು ವಸ್ತುವನ್ನು ಹಾಗೆಯೇ ಬಿಟ್ಟುಬಿಡುವ ಸಾಧ್ಯತೆ ಇದೆ. ಆದರೆ ಇಲ್ಲಿ ಆ ವಸ್ತು ಗಾಳಿಯಲ್ಲಿ ನಿಲ್ಲದೆ ಕೆಳಗೆ ಬೀಳುತ್ತದೆ.



Click it and Unblock the Notifications











