Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಬೆತ್ತಲೆ ದೃಶ್ಯಕ್ಕಾಗಿ 3 ದಿನ ಉಪವಾಸ ಮಾಡಿ ವೋಡ್ಕಾ ಕುಡಿದಿದ್ದ ಪೃಥ್ವಿರಾಜ್..! 31 ಕೆ.ಜಿ ಇಳಿಸಿದ್ದರು.!
ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಪರಿಚಿತ ವ್ಯಕ್ತಿ, ಮಲಯಾಳಂ ಸಿನಿಮಾರಂಗದಲ್ಲಿ ತಮ್ಮದೆ ಅಭಿಮಾನಿಗಳ ಹೊಂದಿರುವ ಅವರು ಇತ್ತೀಚಿಗೆ ಹೊಸ ಸಿನಿಮಾ ಆಡು ಜೀವಿತಂ/ಗೋಟ್ ಲೈಫ್‌ನಲ್ಲಿ ಭರ್ಜರಿ ನಟನೆ ಮಾಡಿ ಈಗ ದೇಶವ್ಯಾಪಿ ಹೆಸರಾಗಿದ್ದಾರೆ. ಸಿನಿಮಾ ಸಹ ಬಾಕ್ಸ್ ಆಫಿಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಇದರ ಜೊತೆಗೆ ಪೃಥ್ವಿರಾಜ್ ಅವರ ನಟನೆಯನ್ನು ಜನ ಕೊಂಡಾಡಿದ್ದಾರೆ.
ಆಡು ಜೀವಿತಂ ಒಂದು ರಿಯಲ್ ಲೈಫ್ ಕಹಾನಿಯಾಗಿದೆ. ಕೇರಳದ ವ್ಯಕ್ತಿಯೊಬ್ಬ ದುಬೈಗೆ ತೆರಳಿ ಅಲ್ಲಿ ಅನುಭವಿಸಿದ ಕಷ್ಟಗಳನ್ನು ತೆರೆ ಮೇಲೆ ತರಲಾಗಿದೆ. ಆತ ಕಂಪನಿ ಕೆಲಸಕ್ಕೆಂದು ತೆರಳಿ ಕುರಿ ಕಾಯಲು ಮರಳುಗಾಡಿನಲ್ಲಿ ನೇಮಕಗೊಂಡು ಅನುಭವಿಸಿದ ಕಷ್ಟದ ದಿನಗಳನ್ನು ಕಟ್ಟಿಕೊಡಲಾಗಿದೆ.

ಇದೊಂದು ಸತ್ಯ ಘಟನೆ ಆಧಾರಿತ ಚಿತ್ರವಾಗಿದ್ದರಿಂದ ನಿರ್ದೇಶಕರು ನಟ ಪೃಥ್ವಿರಾಜ್ ಸುಕುಮಾರನ್ ನೈಜವಾಗಿ ಕಾಣಬೇಕು ಎಂದು ವಿವಿಧ ಶೇಡ್‌ನಲ್ಲಿ ಅವರನ್ನು ತೋರಿಸಿದ್ದಾರೆ. ಒಮ್ಮೆ 80 ರಿಂದ 90 ಕೆ.ಜಿ ತೂಕದ ವ್ಯಕ್ತಿಯಂತೆ ಕಾಣುನ ನಟ ಮಗದೊಮ್ಮೆ ಸಣಕಲು ದೇಹದ 50 ಕೆ.ಜಿ ತೂಕದ ವ್ಯಕ್ತಿಯಂತೆ ಕಾಣುತ್ತಾರೆ.
ಈ ರೀತಿ ತೂಕ ಇಳಿಸಿಕೊಳ್ಳಲು ಪೃಥ್ವಿರಾಜ್ ಹಗಲು ಇರುಳು ಶ್ರಮಿಸಿದ್ದಾರಂತೆ. ಕಠಿಣ ಡಯಟ್ ಪ್ಲಾನ್ ಮೂಲಕ ಈ ರೀತಿ ತೂಕ ಇಳಿಸಿ ತಮ್ಮ ದೇಹದ ಪ್ರದರ್ಶನ ಮಾಡಿದ್ದಾರೆ. ಒಬ್ಬ ಮರಳುಗಾಡಿನಲ್ಲಿ ಆಹಾರ, ನೀರು ಇಲ್ಲದೆ ಹೇಗೆ ಕಾಣುತ್ತಾನೆ ಎನ್ನುವುದನ್ನು ಅಕ್ಷರಶಃ ಅವರು ಕಟ್ಟಿಕೊಟ್ಟಿದ್ದಾರೆ.
ಈ ಕುರಿತಂತೆ ಮಾತನಾಡಿದ ಛಾಯಾಗ್ರಾಹಕ ಸುನಿಲ್ ನಾಯಕ ಪೃಥ್ವಿರಾಜ್ ಅವರ ತೂಕ ಇಳಿಕೆ, ಅವರ ಶೂಟಿಂಗ್ ಸಮಯದ ಕೆಲವು ಅಚ್ಚರಿಯ ವಿಚಾರಗಳನ್ನು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇದನ್ನು ಕೇಳಿದ ಜನ ಶಾಕ್ ಆಗುವ ಜೊತೆ ಪೃಥ್ವಿರಾಜ್ ಅವರ ಬದ್ಧತೆ ಕಂಡು ನಿಜಕ್ಕೂ ತಲೆದೂಗಿದ್ದಾರೆ.
ಇನ್ನು ಚಿತ್ರದಲ್ಲಿ ಪೃಥ್ವಿರಾಜ್ ಬೆತ್ತಲೆ ದೃಶ್ಯವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಕೊನೆಯದಾಗಿ ಮರಳುಗಾಡಿನಿಂದ ತಪ್ಪಿಸಿಕೊಂಡು ಬರುವ ಮುನ್ನ ಹಳೆಯ ಬಟ್ಟಗಳನ್ನೆಲ್ಲ ತೆಗೆದು ಬೆತ್ತಲಾಗುತ್ತಾರೆ. ಈ ವೇಳೆ ಅವರ ದೇಹ ನೀಳವಾಗಿ ಅತ್ಯಂತ ಸೊರಗಿದ ರೀತಿ ಕಾಣುತ್ತದೆ. ಈ ದೃಶ್ಯವನ್ನು ಯಾವುದೇ ಸಿಜಿಐ ಬಳಸಿ ಮಾಡಿಲ್ಲವಂತೆ, ಇದು ನೈಜವಾಗಿ ಶೂಟ್ ಮಾಡಲಾದ ದೃಶ್ಯವಾಗಿದ್ದು, ಇದೊಂದೇ ದೃಶ್ಯಕ್ಕಾಗಿ ಪೃಥ್ವಿರಾಜ್ ಪಟ್ಟ ಕಷ್ಟ ಅಷ್ಟಿಷ್ಟಲ್ಲವಂತೆ.
ಎಕ್ಸ್ ನಲ್ಲಿ ವೀಡಿಯೊವನ್ನು ಹಂಚಿಕೊಂಡ ಕ್ರಿಸ್ಟೋಫರ್, ಸುನಿಲ್ ಅವರ ಹೇಳಿಕೆಯನ್ನು ಉಲ್ಲೇಖಿಸಿ, "ಬೆತ್ತಲೆ ದೃಶ್ಯಕ್ಕಾಗಿ, ಪೃಥ್ವಿರಾಜ್ ಮೂರು ದಿನಗಳ ಕಾಲ ಉಪವಾಸ ಮಾಡಿದ್ದರು, ಕೊನೆಯ ದಿನ ನೀರು ಕೂಡ ಕುಡಿದಿರಲಿಲ್ಲ; ಈ ದೃಶ್ಯ ಚಿತ್ರೀಕರಣಕ್ಕೆ ಮೊದಲು ಅವರು ದೇಹದಲ್ಲಿರುವ ನೀರು ಒಣಗುವಂತೆ ಮಾಡಲು 30 ಎಂಎಲ್ ವೋಡ್ಕಾವನ್ನು ಕುಡಿದಿದ್ದರಂತೆ. ಬಳಿಕ ಅವರನ್ನು ವೀಲ್ ಚೇರ್ ಮೇಲೆ ತಳ್ಳಿಕೊಂಡು ಬಂದು ಶೂಟಿಂಗ್ ಸ್ಪಾಟ್ ತಲುಪಿದರಂತೆ. ಜೊತೆಗೆ ಅವರಿಗೆ ಮೇಲೆ ಏಳಲು ಸಹ ಆಗುತ್ತಿರಲಿಲ್ಲವಂತೆ. ಮೂರ್ನಾಲ್ಕು ಜನ ಅವರನ್ನು ಎತ್ತಿಕೊಂಡು ಬಂದು ಶೂಟಿಂಗ್ ಸ್ಪಾಟ್‌ಗೆ ಬಿಡಬೇಕಿತ್ತಂತೆ. ಅಷ್ಟು ತೆಳುವಾಗ ಶಕ್ತಿ ಇಲ್ಲದಂತಾಗಿದ್ದರಂತೆ. ಹೀಗಾಗಿ ಆ ದೃಶ್ಯ ಸಹ ಅಷ್ಟೇ ನೈಜವಾಗಿ ಶೂಟ್ ಮಾಡಲು ಸಾಧ್ಯವಾಗಿತ್ತಂತೆ.
ಇನ್ನು ಪೃಥ್ವಿರಾಜ್ ಅವರ ಸುತ್ತ ವೈದ್ಯರು ಯಾವಾಗಲು ಇರುತ್ತಿದ್ದರಂತೆ. ಅವರ ಸಲಹೆ ಮೇರೆಗೆ ಅವರ ಡಯಟ್ ರೂಪಿಸಲಾಗಿತ್ತಂತೆ. ನಿತ್ಯ ನೀರು ಮಾತ್ರ ಕುಡಿದು ಮಲಗುತ್ತಿದ್ದರಂತೆ. ರಾತ್ರಿ ವೇಳೆ ಮಲಗುವಾಗ ನೀರು ಕುಡಿಯುತ್ತಿದ್ದರಂತೆ. ಹಣ್ಣುಗಳು ಅವರ ಊಟವಾಗಿತ್ತಂತೆ. ಹೀಗಾಗಿ ಅವರು ಒಟ್ಟು 31 ಕೆ.ಜಿ ತೂಕ ಇಳಿಸಿದ್ದರಂತೆ.



Click it and Unblock the Notifications