ಮನೆಯಲ್ಲಿ ಪೂಜಾ ಕೋಣೆಯನ್ನು ನಿರ್ಮಿಸುವಾಗ ಈ ತಪ್ಪುಗಳು ಆಗದಿರಲಿ!

ಭಾರತೀಯ ಸಂಪ್ರದಾಯದ ಪ್ರಕಾರ ಮನೆಯಲ್ಲಿ ಪೂಜಾ ಕೋಣೆ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಮನೆಯ ಸುಖ, ಸಮೃದ್ಧಿಗಾಗಿ ಪೂಜಾ ಕೋಣೆ ಇರಲೇಬೇಕು. ಒಂದು ವೇಳೆ ಮನೆಯಲ್ಲಿ ಪೂಜಾ ಕೋಣೆಯ ವಾಸ್ತು ಸರಿ ಇರದೇ ಹೋದರೆ ಆ ಮನೆಯಲ್ಲಿ ನಾನಾ ರೀತಿಯ ಸಮಸ್ಯೆಗಳು ಉದ್ಭವವಾಗುತ್ತಂತೆ.

ವಾಸ್ತು ಪ್ರಕಾರ ಮನೆಯಲ್ಲಿ ಪೂಜಾ ಕೋಣೆ ಯಾವ ದಿಕ್ಕಿನಲ್ಲಿ ಇರಬೇಕು ಅನ್ನೋದನ್ನು ಗಮನದಲ್ಲಿಟ್ಟುಕೊಂಡು ಮನೆ ಕಟ್ಟಬೇಕು. ಯಾವುದೋ ಮೂಲೆಯಲ್ಲಿ ಪೂಜಾ ಕೋಣೆ ಇದ್ದರೆ ಶ್ರೇಯಸ್ಸು ತರೋದಿಲ್ವಂತೆ. ಅಷ್ಟಕ್ಕು ಮನೆಯ ಯಾವ ಮೂಲೆಯಲ್ಲಿ ಪೂಜಾ ಕೋಣೆ ಇರಬೇಕು? ವಾಸ್ತು ಶಾಸ್ತ್ರ ಈ ಬಗ್ಗೆ ಏನು ಹೇಳುತ್ತೆ ಅನ್ನೋದನ್ನು ತಿಳಿಯೋಣ.

Pooja Room Vastu Tips: Do These Arrangement in Your Pooja Room for Healthy and Wealthy Home in Kannada

ಹೊಸ ಮನೆಯಲ್ಲಿ ಪೂಜಾ ಕೋಣೆ ಯಾವ ದಿಕ್ಕಿನಲ್ಲಿ ಇರಬೇಕು?

ಪೂಜಾ ಕೋಣೆಯು ನಿಮ್ಮ ಮನೆಯ ಉತ್ತರ ಮತ್ತು ಪೂರ್ವ ದಿಕ್ಕಿನಲ್ಲಿ ಇರಬಹುದು. ಅದನ್ನು ಬಿಟ್ಟರೆ ಪೂಜಾ ಕೋಣೆಯನ್ನು ನಿರ್ಮಿಸಲು ಈಶಾನ್ಯ ದಿಕ್ಕನ್ನು ಶುಭಕರ ಎಂದು ಪರಿಗಣಿಸಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಪಶ್ಚಿಮ ದಿಕ್ಕಿನಲ್ಲಿ ಪೂಜಾ ಕೋಣೆಯಿದ್ದರೆ ಪರವಾಗಿಲ್ಲ. ಆದರೆ ಯಾವುದೇ ಕಾರಣಕ್ಕೂ ದಕ್ಷಿಣ ದಿಕ್ಕಿನಲ್ಲಿ ಪೂಜಾ ಕೋಣೆಯನ್ನು ಸ್ಥಾಪಿಸಲೇಬೇಡಿ.

ಇನ್ನೂ ಪೂಜಾ ಕೋಣೆಯ ಕಿಟಕಿಗಳು ಮತ್ತು ಬಾಗಿಲುಗಳು ಉತ್ತರ ಅಥವಾ ಪೂರ್ವ ದಿಕ್ಕಿಗೆ ತೆರೆದಿರಬೇಕು. ಪ್ರಾರ್ಥನೆ ಮಾಡುವಾಗಲೂ ಅದೇ ದಿಕ್ಕನ್ನು ಖಾತ್ರಿಪಡಿಸಿಕೊಳ್ಳಬೇಕು.ಪೂಜಾ ಕೊಠಡಿಯ ವಾಸ್ತು ಪ್ರಕಾರ ಮಂದಿರವನ್ನು ಮೆಟ್ಟಿಲುಗಳ ಕೆಳಗೆ ಅಥವಾ ಸ್ನಾನದ ಗೋಡೆಗೆ ವಿರುದ್ಧವಾಗಿ ಇರಿಸುವುದು ಅಶುಭವೆಂದು ಪರಿಗಣಿಸಲಾಗಿದೆ. ನೆಲಮಾಳಿಗೆಯಲ್ಲಿ ಅಥವಾ ಮೇಲಿನ ಮಹಡಿಗಳಲ್ಲಿ ಮಂದಿರವನ್ನು ನಿರ್ಮಿಸಲೇಬಾರದು.

ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸುವಾಗ ಈ ಅಂಶಗಳನ್ನು ಮರೀಬೇಡಿ!

ವಾಸ್ತು ಶಾಸ್ತ್ರದ ಪ್ರಕಾರ ದೇವರ ವಿಗ್ರಹವನ್ನು ಗೋಡೆಗೆ ತಾಗುವ ರೀತಿಯಲ್ಲಿ ಇಡಬಾರದು. ಕನಿಷ್ಠ ಆರು ಇಂಚುಗಳಷ್ಟು ದೂರದಲ್ಲಿ ಇರಬೇಕು. ವಿಗ್ರಹದ ಸುತ್ತಲೂ ನಿರಂತರವಾಗಿ ಗಾಳಿ ಆಡುವಂತಿರಬೇಕು. ಇದವರಿಂದ ಧೂಪದ್ರವ್ಯದ ಸುಗಂಧವು ಅವುಗಳನ್ನು ಆವರಿಸಲು ಸಹಾಯ ಮಾಡುತ್ತದೆ.

ವಿಗ್ರಹಗಳನ್ನು ಬಾಗಿಲಿಗೆ ಮುಖ ಮಾಡುವಂತೆ ಇಟ್ಟಿರಬಾರದು. ಯಾಕಂದ್ರೆ ಅದು ನಕಾರಾತ್ಮಕ ಶಕ್ತಿಯ ಹರಿವಿಗೆ ಕಾರಣವಾಗಬಹುದು. ಇನ್ನೂ ದೇವರ ಮನೆಯಲ್ಲಿ ಒಡೆದ ಅಥವಾ ಬಿರುಕು ಬಿಟ್ಟ ದೇವರ ವಿಗ್ರಹಗಳನ್ನು ಇಡೋದಕ್ಕೆ ಹೋಗಬೇಡಿ. ಇದನ್ನು ಅಶುಭ ಎಂದು ಪರಿಗಣಿಸಲಾಗಿದೆ.

ದೇವರ ಕೋಣೆಯ ಒಳಗಡೆ ಕಣ್ಣಿಗೆ ಕುಕ್ಕುವ ಪೈಟಿಂಗ್ ಮಾಡಿಸಬೇಡಿ. ನೋಡೋದಕ್ಕೆ ಚಂದವಾಗಿರಬೇಕು. ಹಾಗೂ ದೇವರ ಕೋಣೆಗೆ ಕೊಟ್ಟ ಬಣ್ಣವು ಸೌಮ್ಯವಾಗಿರಲಿ. ಇನ್ನೂ ದೇವರ ಕೋಣೆಯಲ್ಲಿ ಸತ್ತವರ ಫೋಟೋವನ್ನು ಇಡೋದನ್ನು ನಿಷೇಧಿಸಲಾಗಿದೆ.

ಇನ್ನೂ ಪೂಜಾ ಕೋಣೆಯಲ್ಲಿ ಪೂಜಾ ಸಾಮಾಗ್ರಿಯಾಗಿ ತಾಮ್ರದ ಪಾತ್ರೆಗಳನ್ನು ಬಳಸಿದರೆ ಉತ್ತಮ. ಇನ್ನೂ ಪೂಜಾ ಕೋಣೆಯ ವಾಸ್ತುವಿನ ಪ್ರಕಾರ ಅಗ್ನಿ ಕುಂಡ, ದೀಪಗಳನ್ನು ಆಗ್ನೇಯ ದಿಕ್ಕಿನಲ್ಲಿಟ್ಟರೆ ಉತ್ತಮ.

ಮನೆ ಚಿಕ್ಕದಿದ್ದಾಗ ಏನು ಮಾಡಬೇಕು?

ಅನೇಕರ ಮನೆ ಚಿಕ್ಕದಿರುತ್ತದೆ. ಕೋಣೆಗಳು ಹೆಚ್ಚು ಇಲ್ಲದೇ ಇರೋದ್ರಿಂದ ಪ್ರತ್ಯೇಕವಾಗಿ ಪೂಜಾ ಕೋಣೆಯನ್ನು ನಿರ್ಮಿಸುವುದು ಕಷ್ಟ. ಇನ್ನೂ ಫ್ಲಾಟ್ ನಲ್ಲಿ ಇರುವವರಿಗೂ ಕೂಡ ಪ್ರತ್ಯೇಕ ಪೂಜಾ ಕೋಣೆಯನ್ನು ಹೊಂದುವುದು ಕಷ್ಟವೇ ಸರಿ. ಇಂತಹ ಸಂದರ್ಭದಲ್ಲಿ ಏನು ಮಾಡೋದು ಎನ್ನುವ ಪ್ರಶ್ನೆ ಅನೇಕರಲ್ಲಿ ಇರುತ್ತದೆ.

ನಿಮ್ಮ ಫ್ಲಾಟ್ ಉತ್ತರ ಅಥವಾ ಪೂರ್ವಾಭಿಮುಖವಾಗಿದ್ದರೆ ಪೂಜಾ ಕೋಣೆಯನ್ನು ಉತ್ತರ, ಈಶಾನ್ಯ ಅಥವಾ ಪೂರ್ವ ದಿಕ್ಕಿನಲ್ಲಿ ಇರಲಿ. ಅಲ್ಲಿಯೇ ಒಂದು ಚಿಕ್ಕ ಗೋಪುರ ರೀತಿಯಲ್ಲಿ ರಚಿಸಿ ಅದರಲ್ಲಿ ದೇವರ ಮೂರ್ತಿಯನ್ನು ಇಟ್ಟು ಪೂಜಿಸಬಹುದು. ಇನ್ನೂ ಗೋಪುರವನ್ನು ಪೂಜಾ ಕೋಣೆಯ ರೀತಿಯಲ್ಲಿ ರಚಿಸಿ ಅದಕ್ಕೆ ಪುಟ್ಟ ಬಾಗಿಲುಗಳನ್ನು ಮಾಡಬಹುದು. ಯಾಕಂದ್ರೆ ಇದ್ರಿಂದ ಕ್ರಿಮಿ ಕೀಟಗಳನ್ನು ದೂರ ಇಡೋದಕ್ಕೆ ಸಾಧ್ಯವಾಗುತ್ತದೆ.

ಪೂಜಾ ಕೋಣೆಯಲ್ಲಿ ಸಿಕ್ಕ ಸಿಕ್ಕ ವಸ್ತುಗಳನ್ನು ಇಡಬೇಡಿ!

ಋಣಾತ್ಮಕ ಶಕ್ತಿಯನ್ನು ಪೂಜಾ ಕೋಣೆಯ ಹತ್ತಿರ ಸೆಳೆಯಬಾರದೆಂದರೆ ಪೂಜಾ ಕೋಣೆಯಲ್ಲಿ ಅನಗತ್ಯ ವಸ್ತುಗಳನ್ನು ಸಂಗ್ರಹಣೆ ಮಾಡಬಾರದು. ಆದರೆ ಧಾರ್ಮಿಕ ಪುಸ್ತಕಗಳು, ದೀಪಗಳು, ಮಾಲೆಗಳು ಮತ್ತು ಇತರ ಪ್ರಾರ್ಥನೆ ಸಂಬಂಧಿತ ವಸ್ತುಗಳಂತಹ ಪೂಜಾ ಕೊಠಡಿಯ ಅಗತ್ಯ ವಸ್ತುಗಳನ್ನು ಪೂಜಾ ಕೋಣೆಯ ಒಂದು ಮೂಲೆಯಲ್ಲಿ ಇಡಬಹುದು.

ಶೇಖರಣಾ ಸ್ಥಳವು ಪೂಜಾ ಕೋಣೆಯ ಆಗ್ನೇಯ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇರಬೇಕು. ಇನ್ನೂ ಯಾವುದೇ ಕಾರಣಕ್ಕೂ ಮಂದಿರದ ಮೇಲೆ ಜಾಗವಿದೆ ಎಂದು ಅದನ್ನು ಶೇಕರಣಾ ಜಾಗ ಮಾಡಿಕೊಳ್ಳೋದಕ್ಕೆ ಹೋಗಬೇಡಿ.

ಮನೆಯಲ್ಲಿ ಪೂಜಾ ಸ್ಥಳವನ್ನು ನಿರ್ಮಿಸುವಾಗ ಈ ವಿಚಾರದ ಬಗ್ಗೆ ಗಮನ ಕೊಡಿ. ತಪ್ಪುಗಳಾದರೆ ಇದರಿಂದ ಮುಂದೆ ಬಹುದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ.

English summary

Pooja Room Vastu Tips: Do These Arrangement in Your Pooja Room for Healthy and Wealthy Home in Kannada

Pooja Room Vastu Tips : Do These Arrangement in Your Pooja Room for Healthy and Wealthy Home. Read more.
Story first published: Wednesday, July 5, 2023, 14:00 [IST]
X
Desktop Bottom Promotion