Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಹಾವಿನ ಬಾಯಿಗೆ ಬಾಯಿಟ್ಟು ಗಾಳಿಯೂದಿ ಹಾವಿನ ಪ್ರಾಣಯುಳಿಸಿದ ಪೊಲೀಸ್: ವೀಡಿಯೋ ವೈರಲ್
ವ್ಯಕ್ತಿ ಪ್ರಜ್ಞೆ ತಪ್ಪಿದಾಗ ಅವರ ಜೀವ ಉಳಿಸಲು ಪ್ರಥಮ ಚಿಕಿತ್ಸೆಯಾಗಿ CPR ನೀಡುವುದು ನೋಡಿದ್ದೇವೆ, ಆದರೆ ಹಾವಿನ ಪ್ರಾಣ ಉಳಿಸಲು ಮಧ್ಯಪ್ರದೇಶದ ಪೊಲೀಸ್ CPR ಚಿಕಿತ್ಸೆ ನೀಡಿರುವ ವೀಡಿಯೋ ವೈರಲ್ ಆಗಿದೆ. ಪ್ರಜ್ಞೆ ತಪ್ಪಿ ಬಿದ್ದ ಹಾವಿನ ಬಾಯಿಗೆ ಬಾಯಿಟ್ಟು ಗಾಳಿ ಊದಿದ್ದಾರೆ.
ಈ ವೀಡಿಯೋದಲ್ಲಿ ಇರುವವರು ಅಥುಲ್ ಶರ್ಮ, ಈ ವೀಡಿಯೋದಲ್ಲಿ ಪೊಲೀಸ್ CPR ಚಿಕಿತ್ಸೆ ನೀಡಿದಾಗ ಅದಕ್ಕೆ ಹಾವು ಸ್ಪಂದಿಸುತ್ತಿರುವುದು ಕಂಡು ಬಂದಿದೆ. ನಂತರ ಹಾಲಿಗೆ ಪ್ರಜ್ಞೆ ಬಂದಿದೆ, ಆ ಹಾವನ್ನು ನೆಲದ ಮೇಲೆ ಬಿಟ್ಟಾಗ ಹರಿದಾಡಿದೆ.

ಹಾವು ವಿಷ ಹಾಕಿರುವ ನೀರಿಗೆ ಬಿದ್ದು ಪ್ರಜ್ಞೆ ಕಳೆದುಕೊಂಡಿತು. ಅದನ್ನು ನೋಡಿದ ಅಥುಲ್ ಶರ್ಮ ಹಾವನ್ನು ಉಳಿಸಲು ಮುಂದಾಗಿದ್ದಾರೆ.
ಅಥುಲ್ ಶರ್ಮ ಈ ರೀತಿಯ ಟೆಕ್ನಿಕ್ ಅನ್ನು ಡಿಸ್ಕವರ್ ಚಾನಲ್ ನೋಡಿ ಕಲಿತುಕೊಂಡಿರುವುದಂತೆ. ಮಾಧ್ಯಮ ಜೊತೆ ಮಾತನಾಡಿರುವ ಅಥುಲ್ ಶರ್ಮ ಹಾವು ಪ್ರಜ್ಞೆ ತಪ್ಪಿತ್ತು, ನಾವು ಹಾವನ್ನು ನೀರಿನಲ್ಲಿ ತೊಳೆದು ನಂತರ ಅದರ ಪ್ರಾಣ ಉಳಿಸಲು ತಮ್ಮ ಬಾಯಿಯನ್ನು ಹಾವು ಬಾಯಿ ಬಳಿ ತಂದು ಗಾಳಿ ಊದಿದ್ದಾರೆ.
ಅವರು ಮಾಡಿರುವ ಕಾರ್ಯ ಒಳ್ಳೆಯದೇ ಆದರೂ ಅದನ್ನು ಯಾರೂ ಪ್ರಯತ್ನಿಸದಿರುವುದು ಒಳ್ಳೆಯದು, ಏಕೆಂದರೆ ಸರಿಯಾಗಿ ಜ್ಞಾನವಿಲ್ಲದೆ ಮಾಡಲು ಹೋಗಿ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು. ಅಲ್ಲದೆ ಈ ರೀತಿ ಮಾಡುವುದು ಹಾವಿಗೂ ಒಳ್ಳೆಯದಲ್ಲ ಎಂದು ಪ್ರಾಣಿ ತಜ್ಞರು ಹೇಳಿದ್ದಾರೆ.
1. ಹಾವಿಗೆ ಸಿಂಗಲ್ ಓಪಿನಿಂಗ್ ಇರುತ್ತೆ, ಇದು ಯೂರಿನರಿ ಟ್ರ್ಯಾಕ್ಟ್, ಸಂತಾನೋತ್ಪತ್ತಿ ಟ್ರ್ಯಾಕ್ಟ್, ಜೀರ್ಣಕ್ರಿಯೆ ಟ್ರ್ಯಾಕ್ಟ್ ಜೊತೆ ಸಂಬಂಧ ಹೊಂದಿರುತ್ತದೆ, ಗಾಳಿಯನ್ನು ಬಲವಂತದಿಂದ ಊದಿದಾಗ ಅದರ ಒಳ ಅಂಗಾಂಗಳಿಗೆ ಹಾನಿಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
2. ಹಾವಿಗೆ CPR ನೀಡುವಾಗ ಆ ಹಾವಿಗೆ ಪ್ರಜ್ಞೆ ಬಂದು ಅಕಾಸ್ಮಾತ್ ಕಚ್ಚಿದರೆ ಪ್ರಾಣಕ್ಕೆ ಅಪಾಯ.
ಆದ್ದರಿಂದ ಈ ಬಗ್ಗೆಯ ಚಿಕಿತ್ಸೆ ಒಳ್ಳೆಯದಲ್ಲ.
pic.twitter.com/BYbmgmDR9m
— SAFFRON (@saffronbharat25) October 26, 2023
A video from Narmadapuram has gone viral where a police constable is giving CPR to a snake that had fallen unconscious after being drenched in pesticide laced toxic water
Opinions 🤔🤔



Click it and Unblock the Notifications
