Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಪಿತೃಪಕ್ಷ: ಅಕ್ಟೋಬರ್ 2ಕ್ಕೆ ಭರಣಿ ಶ್ರಾದ್ಧ, ಈ ಶ್ರಾದ್ಧದ ಮಹತ್ವವೇನು?
ಪಿತೃ ಪಕ್ಷದಲ್ಲಿ ಭರಣಿ ಶ್ರಾದ್ಧಕ್ಕೆ ತುಂಬಾನೇ ಮಹತ್ವವಿದೆ. ಪಿತೃಪಕ್ಷ ಎಂಬುವುದು 16 ದಿನಗಳ ಆಚರಣೆ. ಈ 16 ದಿನವೂ ಪಿತೃತರ್ಪಣಕ್ಕೆ ಸೂಕ್ತ ದಿನಗಳಾಗಿವೆ. ಅದರಲ್ಲಿ 3 ದಿನಗಳಂತೂ ತುಂಬಾನೇ ವಿಶೇಷವಾಗಿರುತ್ತದೆ. ಭರಣಿ ಶ್ರಾದ್ಧ, ನವಮಿ ಶ್ರಾದ್ಧ, ಸರ್ವ ಪಿತೃ ಅಮವಾಸ್ಯೆ. ಇಂದು ಭರಣಿ ಶ್ರಾದ್ದ, ಈ ದಿನದ ವಿಶೇಷವೇನು ಎಂದು ನೋಡೋಣ:

ದಿನಾಂಕ ಮತ್ತು ತಿಥಿ
ಭರಣಿ ಶ್ರಾದ್ಧ ದಿನಾಂಕ: ಅಕ್ಟೋಬರ್ 2
ಈ ವರ್ಷ ಅಶ್ವಿನಿ ಕೃಷ್ಣ ಪಕ್ಷ ಚತುರ್ಥಿಯಂದು ಭರಣಿ ಶ್ರಾದ್ಧ ಬಂದಿದೆ. ಭರಣಿ ಶ್ರಾದ್ಧವನ್ನು ಛೌತ್ ಭರಣಿ ಎಂದು ಕೂಡ ಕರೆಯಲಾಗುವುದು.
ಭರಣಿ ಶ್ರಾದ್ಧ ಏಕೆ ಮಾಡಲಾಗುವುದು?
ಪಿತೃ ಪಕ್ಷದಲ್ಲಿ ಬರುವ ಭರಣಿ ನಕ್ಷತ್ರದಂದು ಭರಣಿ ಶ್ರಾದ್ಧವನ್ನು ಮಾಡಲಾಗುವುದು. ವ್ಯಕ್ತಿ ಸತ್ತ ಒಂದು ವರ್ಷದೊಳಗೆ ಈ ಶ್ರಾದ್ಧ ಮಾಡಲಾಗುವುದು. ತೀರಿ ಹೋದ ಮೊದಲ ವರ್ಷದ ಮಹಾಲಯ ಅಮಾವಾಸ್ಯೆಯಲ್ಲಿ ಶ್ರಾದ್ಧ ಮಾಡುವುದಿಲ್ಲ, ಎರಡನೇ ವರ್ಷದಿಂದ ಮಹಾಲಯ ಅಮವಾಸ್ಯೆಯಂದು ಶ್ರಾದ್ಧ ಮಾಡಲಾಗುವುದು. ಆದ್ದರಿಂದ ಭರಣಿ ನಕ್ಷತ್ರದಂದು ಶ್ರಾದ್ಧ ಕಾರ್ಯವನ್ನು ಮಾಡಲಾಗುವುದು.
ಭರಣಿ ನಕ್ಷತ್ರದ ಮಹತ್ವ
ಭರಣಿ ನಕ್ಷತ್ರದ ಅಧಿಪತಿ ಯಮ ಎಂದು ಹೇಳಲಾಗುವುದು. ಆದ್ದರಿಂದ ಈ ದಿನ ಶ್ರಾದ್ದ ಕಾರ್ಯವನ್ನು ಮಾಡಲಾಗುವುದು. ಈ ದಿನ ಶ್ರಾದ್ಧ ಕಾರ್ಯ ಮಾಡಿದರೆ ತೀರಿ ಹೋದವರಿಗೆ ಮೋಕ್ಷ ಸಿಗುವುದು ಎಂದು ಹೇಳಲಾಗುವುದು.
ಪೂರ್ವಜರ ಆಶೀರ್ವಾದ ಸಿಗುವುದು
ಭರಣಿ ನಕ್ಷತ್ರದಂದು ಶ್ರಾದ್ಧ ಮಾಡುವುದರಿಂದ ಅವರಿಗೆ ಮೋಕ್ಷ ಸಿಗುವುದು, ಇದರಿಂದ ಪೂರ್ವಜರ ಆಶೀರ್ವಾದ ಸಿಗುವುದು. ಇದರಿಂದ ಜೀವನದಲ್ಲಿ ಒಳಿತಾಗುವುದು. ನಿಮ್ಮ ಜೀವನದಲ್ಲಿರುವ ಅಡೆತಡೆಗಳು ದೂರಾಗುವುದು. ಇದರಿಂದ ನಿಮ್ಮ ಹಾಗೂ ನಿಮ್ಮ ಮುಂದಿನ ಪೀಳಿಗೆಗೆ ಒಳಿತಾಗುವುದು.
ಸಾಲದಿಂದ ಮುಕ್ತರಾಗುವುದು
ಪಿತೃತರ್ಪಣ ಮಾಡುವುದರಿಂದ ಆರ್ಥಿಕ ಸಂಕಷ್ಟ ದೂರಾಗುವುದು. ಪಿತೃಗಳ ಆಶೀರ್ವಾದವಿದ್ದರೆ ಎಲ್ಲಾ ಆರ್ಥಿಕ ತೊಂದರೆಗಳು ದೂರಾಗುವುದು, ಅವರ ಆಶೀರ್ವಾದದಿಂದ ಎಲ್ಲಾ ಒಳಿತಾಗುವುದು ಎಂಬ ನಂಬಿಕೆಯಲ್ಲಿ ಪಿತೃ ತರ್ಪಣ ಮಾಡಲಾಗುವುದು.



Click it and Unblock the Notifications