Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಸೆಪ್ಟೆಂಬರ್ 29ರಿಂದ ಅಕ್ಟೋಬರ್ 14ರವರೆಗೆ ಪಿತೃಪಕ್ಷ: ಶ್ರಾದ್ಧಕಾರ್ಯಕ್ಕೆ ಈ 3 ದಿನಗಳಂತೂ ತುಂಬಾನೇ ವಿಶೇಷ
ಹಿಂದೂ ಧರ್ಮದಲ್ಲಿ ಪಿತೃ ತರ್ಪಣಕ್ಕೆ ತುಂಬಾನೇ ಮಹತ್ವವಿದೆ. ಪಿತೃ ದೋಷದಿಂದ ಪಾರಾಗಲು ಪಿತೃ ತರ್ಪಣ ಅತ್ಯುತ್ತಮವಾದ ಪರಿಹಾರವಾಗಿದೆ. ಪಿತೃದೋಷವಿದ್ದರೆ ಅನೇಕ ಸಮಸ್ಯೆಗಳು ಎದುರಾಗುವುದು. ವೃತ್ತಿ ಜೀವನದಲ್ಲಿ ಬೆಳವಣಿಗೆಗೆ ತುಂಬಾನೇ ಕಷ್ಟವಾಗುವುದು. ಸಂತಾನಹೀನತೆ, ಆರೋಗ್ಯ ಸಮಸ್ಯೆ ಹೀಗೆ ಹಲವು ಬಗೆಯ ಸಮಸ್ಯೆಗಳು ಕಂಡು ಬರುವುದು.
ಶ್ರಾದ್ಧ ಮಾಡಲು ಪಿತೃ ಪಕ್ಷ ಎಂದು ಪಿತೃತರ್ಪಣಕ್ಕಾಗಿ ಕೆಲವು ದಿನಗಳಿವೆ. ಈ ದಿನಗಳಲ್ಲಿ ಪಿತೃ ತರ್ಪಣ ಮಾಡಿದರೆ ಪಿತೃ ದೋಷದಿಂದ ಮುಕ್ತರಾಗಬಹುದು ಎಂದು ಹೇಳಲಾಗುವುದು. ಈ ವರ್ಷ ಪಿತೃಪಕ್ಷ ಸೆಪ್ಟೆಂಬರ್ 29ರಿಂದ ಶುರು, ಅದರಲ್ಲೂ ಪಿತೃ ತರ್ಪಣಕ್ಕೆ ಈ ಮೂರು ದಿನ ಅಂತೂ ತುಂಬಾನೇ ಒಳ್ಳೆಯದು ನೋಡಿ:

ಪಿತೃಪಕ್ಷ ಎಲ್ಲಿಯವರೆಗೆ ಇದೆ
ಪ್ರತಿ ವರ್ಷ ಪಿತೃ ಪಕ್ಷವು ಭಾದ್ರಪದ ಮಾಸದ ಹುಣ್ಣಿಮೆಯಿಂದ ಪ್ರಾರಂಭವಾಗಿ ಅಶ್ವಿನ್ ಕೃಷ್ಣ ಪಕ್ಷದ ಅಮಾವಾಸ್ಯೆಯಂದು ಕೊನೆಗೊಳ್ಳುತ್ತದೆ. ಶ್ರಾದ್ಧ ಅಥವಾ ಪಿತೃಪಕ್ಷ 16 ದಿನಗಳು ಇರಲಿದೆ. ಈ ದಿನಗಳಲ್ಲಿ ತಮ್ಮ ಪೂರ್ವಜರನ್ನು ನೆನಪಿಸಿಕೊಂಡರೆ ತುಂಬಾನೇ ಪುಣ್ಯ ಸಿಗುವುದು ಎಂದು ಹೇಳಲಾಗುವುದು. ಈ ಸಮಯದಲ್ಲಿ ಪಿತೃತರ್ಪಣ ನೀಡುವುದರಿಂದ ಮೃತರ ಆತ್ಮಕ್ಕೆ ಶಾಂತಿ, ಮೋಕ್ಷ ಸಿಗುವುದು.
ಧಾರ್ಮಿಕ ನಂಬಿಕೆಯ ಪ್ರಕಾರ ಈ ಆಚರಣೆಯನ್ನು ಕುಟುಂಬದ ಹಿರಿಯ ಮಗ ನಿರ್ವಹಿಸುತ್ತಾನೆ. 2023 ರಲ್ಲಿ, ಪಿತೃ ಪಕ್ಷವು ಸೆಪ್ಟೆಂಬರ್ 29 ರಿಂದ ಪ್ರಾರಂಭವಾಗಿ ಅಕ್ಟೋಬರ್ 14 ರಂದು ಕೊನೆಗೊಳ್ಳಲಿದೆ. ಶ್ರಾದ್ಧ ಪಕ್ಷದ ಎಲ್ಲಾ ದಿನಾಂಕಗಳು ವಿಶೇಷವಾಗಿದ್ದರೂ, ಶ್ರಾದ್ಧ ಪಕ್ಷದಲ್ಲಿ 3 ದಿನಗಳು ಅಂತೂ ತುಂಬಾನೇ ವಿಶೇಷವಾಗಿದೆ. ಆ ದಿನಾಂಕಗಳೆಂದರೆ
ಭರಣಿ ಶ್ರಾದ್ಧ ದಿನಾಂಕ
ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ಬಾರಿ ಭರಣಿ ಶ್ರಾದ್ಧವನ್ನು ಚತುರ್ಥಿ ಶ್ರಾದ್ಧದೊಂದಿಗೆ 2 ಅಕ್ಟೋಬರ್ 2023 ರಂದು ನಡೆಸಲಾಗುವುದು. ಈ ದಿನ ಭರಣಿ ನಕ್ಷತ್ರವು ಸಂಜೆ 06:24 ರವರೆಗೆ ಇರುತ್ತದೆ. ಭರಣಿ ಶ್ರಾದ್ಧವನ್ನು ಮರಣದ ಒಂದು ವರ್ಷದ ನಂತರ ಮಾಡಬೇಕು ಎಂದು ಹೇಳಲಾಗುವುದು. ಮದುವೆಗೆ ಮುಂಚೆ ಮರಣ ಹೊಂದಿದವರ ಶ್ರಾದ್ಧವನ್ನು ಪಂಚಮಿ ತಿಥಿಯಂದು ಮಾಡಲಾಗುತ್ತದೆ, ಭರಣಿ ಶ್ರಾದ್ಧವು ಪಂಚಮಿ ತಿಥಿಯಂದು ಸಂಭವಿಸಿದರೆ ಅದು ತುಂಬಾ ವಿಶೇಷವಾಗಿದೆ.
ನವಮಿ ಶ್ರಾದ್ಧ ತಿಥಿ
ಹಿಂದೂ ಕ್ಯಾಲೆಂಡರ್ ಪ್ರಕಾರ ಈ ಬಾರಿ ನವಮಿ ಶ್ರಾದ್ಧವನ್ನು ಅಕ್ಟೋಬರ್ 7 ರಂದು ಮಾಡಲಾಗುವುದು. ನವಮಿ ಶ್ರಾದ್ಧವನ್ನು ಮಾತೃ ಶ್ರಾದ್ಧ ಅಥವಾ ಮಾತೃ ನವಮಿ ಎಂದೂ ಕರೆಯಲಾಗುವುದು. ಮಾತೃ ನವಮಿಯಂದು ಮನೆಯ ಹಿರಿಯರಿಗೆ ಪಿತೃ ತರ್ಪಣ ನೀಡಲಾಗುವುದು. ಈ ದಿನ ತಾಯಿ, ಅಜ್ಜಿ, ಅಜ್ಜಿಯರ ಶ್ರಾದ್ಧ ನೀಡಲಾಗುವುದು. ಮಾತೃ ನವಮಿಯ ದಿನದಂದು ತಮ್ಮ ತಂದೆ ತಾಯಿಗಳಿಗೆ ತರ್ಪಣ, ಶ್ರಾದ್ಧ ಅಥವಾ ಪಿಂಡ ದಾನ ನೀಡಿ ಸಂತುಷ್ಟರಾಗುತ್ತಾರೆ.
ಸರ್ವ ಪಿತೃ ಅಮವಾಸ್ಯೆ
ಅಕ್ಟೋಬರ್ 14 ರಂದು ಸರ್ವ ಪಿತೃ ಅಮಾವಾಸ್ಯೆ ಬರುತ್ತದೆ. ಇದೇ ದಿನ ಸೂರ್ಯಗ್ರಹಣವೂ ಸಂಭವಿಸಲಿದೆ. ಈ ದಿನಾಂಕದಂದು, ಮರಣದ ದಿನಾಂಕ ತಿಳಿದಿಲ್ಲದ ಪೂರ್ವಜರಿಗೆ ಶ್ರಾದ್ಧವನ್ನು ನಡೆಸಲಾಗುತ್ತದೆ, ಅಂದರೆ, ಸರ್ವ ಪಿತೃ ಅಮಾವಾಸ್ಯೆಯ ದಿನದಂದು, ತಿಳಿದಿರುವ ಮತ್ತು ತಿಳಿದಿಲ್ಲದ ಎಲ್ಲಾ ಪೂರ್ವಜರಿಗೆ ಶ್ರಾದ್ಧ, ತರ್ಪಣ ಮತ್ತು ಪಿಂಡದಾನವನ್ನು ಮಾಡಲಾಗುವುದು.
2023ರ ಪಿತೃಪಕ್ಷದ ದಿನಾಂಕಗಳು
ಪೂರ್ಣಿಮಾ ಶ್ರಾದ್ಧ- 29 ಸೆಪ್ಟೆಂಬರ್ 2023, ಶುಕ್ರವಾರ
ದ್ವಿತೀಯ ಶ್ರಾದ್ಧ- 30 ಸೆಪ್ಟೆಂಬರ್ 2023, ಶನಿವಾರ
ತೃತೀಯಾ ಶ್ರಾದ್ಧ- 01 ಅಕ್ಟೋಬರ್ 2023, ಭಾನುವಾರ
ಚತುರ್ಥಿ ಶ್ರಾದ್ಧ- 02 ಅಕ್ಟೋಬರ್ 2023, ಸೋಮವಾರ
ಪಂಚಮಿ ಶ್ರಾದ್ಧ- 03 ಅಕ್ಟೋಬರ್ 2023, ಮಂಗಳವಾರ
ಷಷ್ಠಿ ಶ್ರಾದ್ಧ- 04 ಅಕ್ಟೋಬರ್ 2023, ಬುಧವಾರ
ಸಪ್ತಮಿ ಶ್ರಾದ್ಧ- 05 ಅಕ್ಟೋಬರ್ 2023, ಗುರುವಾರ
ಅಷ್ಟಮಿ ಶ್ರಾದ್ಧ- 06 ಅಕ್ಟೋಬರ್ 2023, ಶುಕ್ರವಾರ
ನವಮಿ ಶ್ರಾದ್ಧ- 07 ಅಕ್ಟೋಬರ್ 2023, ಶನಿವಾರ
ದಶಮಿ ಶ್ರಾದ್ಧ- 08 ಅಕ್ಟೋಬರ್ 2023, ಭಾನುವಾರ
ಏಕಾದಶಿ ಶ್ರಾದ್ಧ- 09 ಅಕ್ಟೋಬರ್ 2023, ಸೋಮವಾರ
ದ್ವಾದಶಿ ಶ್ರಾದ್ಧ- 11 ಅಕ್ಟೋಬರ್ 2023, ಬುಧವಾರ
ತ್ರಯೋದಶಿ ಶ್ರಾದ್ಧ- 12 ಅಕ್ಟೋಬರ್ 2023, ಗುರುವಾರ
ಚತುರ್ದಶಿ ಶ್ರಾದ್ಧ- 13 ಅಕ್ಟೋಬರ್ 2023, ಶುಕ್ರವಾರ
ಸರ್ವ ಪಿತೃ ಅಮವಾಸ್ಯೆ- 14 ಅಕ್ಟೋಬರ್ 2023, ಶನಿವಾರ



Click it and Unblock the Notifications