Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಪತ್ನಿಯನ್ನು ಋತುಸ್ರಾವದ ಸೋಂಕಿನಿಂದ ಕಾಪಾಡಲು ಹೀರೋ ಆದ ಪತಿ..! ಭಾರತದ ಪ್ಯಾಡ್ ಮ್ಯಾನ್ ಕಥೆ ಇದು!
ಭಾರತದಲ್ಲಿ ಋತುಸ್ರಾವ ಸಂಬಂಧಿಸಿದಂತೆ ಇಂದಿಗೂ ಕೂಡ ಎಲ್ಲರು ಮುಕ್ತವಾಗಿ ಮಾಡುವುದು ಬಹಳ ಕಡಿಮೆ. ಇದೊಂದು ಮುಜುಗರದ ವಿಚಾರ, ಹಾಗೆ ಬಹಳ ಗೌಪ್ಯವಾಗಿಡಬೇಕಾದ ವಿಚಾರ ಎಂದೇ ಭಾವಿಸಿದ್ದಾರೆ. ಹೀಗಾಗಿಯೇ ಋತುಸ್ರಾವ ಸಂಬಂಧಿ ಸಮಸ್ಯೆಗಳು ಕೂಡ ಇಂದು ಹೆಚ್ಚಾಗಿಯೇ ಇದೆ. ಇನ್ನು ಪುರುಷರು ಹೊರತುಪಡಿಸಿ ಮಹಿಳೆಯರೇ ಈ ವಿಚಾರ ಕುರಿತು ಚರ್ಚೆ, ಮಾತುಕತೆಗೆ ಹಿಂದೇಟು ಹಾಕುವುದು ನೋಡಬಹುದು.
ಇನ್ನು ಗ್ರಾಮೀಣ ಭಾಗದಲ್ಲನ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ ಎನ್ನಬಹುದು. ಜನರಲ್ಲಿ ಅರಿವು ಮೂಡಿಸುವುದು ದೂರದ ಮಾತಾಗಿದೆ. ಅಲ್ಲಿ ಋತುಸ್ರಾವ ಒಂದು ಶಾಪ ಎಂನ್ನುವಂತೆ ನೋಡಲಾಗುತ್ತದೆ. ಆದ್ರೆ ಇಂತಹ ಕಠಿಣ ಪರಿಸ್ಥಿತಿಯಲ್ಲಿ ಋತುಸ್ರಾವದ ಅನಾರೋಗ್ಯರ ಆಚರಣೆಗೆ ಸೆಡ್ಡು ಹೊಡೆದು ತನ್ನ ಪತ್ನಿಯನ್ನು ಈ ಹಾಳು ಆಚರಣೆಗಳಿಂದ ಮುಕ್ತವಾಗಿಸಲು ವ್ಯಕ್ತಿಯೊಬ್ಬ ಹಗಲು ರಾತ್ರಿ ಶ್ರಮಿಸಿದ್ದು ನಿಮಗೆ ಗೊತ್ತಾ?

ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಸೋಂಕಿನಿಂದ ರಕ್ಷಿಸಲು ಉದ್ದೇಶದಿಂದ ಇಡೀ ಸಮಾಜವನ್ನೇ ಎದುರು ಹಾಕಿಕೊಂಡು ಬಳಿಕ ಭಾರತದ ಪ್ಯಾಡ್ ಮ್ಯಾನ್ ಎಂಬ ಹೆಸರು ಪಡೆದುಕೊಂಡ. ಅರುಣಾಚಲಂ ಮುರುಗನಾಥಂ ತನ್ನ ಪತ್ನಿಗಾಗಿ ತಾನೇ ಸ್ಯಾನಿಟರಿ ನ್ಯಾಪ್ಕಿನ್‌ಗಳ ತಯರಿಸಲು ಮುಂದಾದ ಕಥೆ ಇದು.
ಮುರುಗನಾಥಂನ ಪತ್ನಿ ಋತುಸ್ರಾವದ ಸಮಯದಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಸ್ಯಾನಿಟರಿ ಪ್ಯಾಡ್ ಖರೀದಿಸಲಾಗದೆ ಮನೆಯಲ್ಲೇ ಕಚ್ಚಾ ವಸ್ತ್ರವನ್ನು ಬಳಸುವುದು ಆತನ ಗಮನಕ್ಕೆ ಬಂದಾಗ ಈ ಎಲ್ಲಾ ಕೆಲಸಗಳು ಆರಂಭಗೊಂಡವು. ಇದು ಮುರುಗನಾಥಂಗೆ ಬಹಳ ಮುಜುಗರ ಉಂಟು ಮಾಡಿತ್ತು ಏಕೆಂದರೆ ಆತ ಕೈ ಮಗ್ಗ ನೇಕಾರನಾಗಿದ್ದರು, ಇಂತಹ ವಸ್ತುವನ್ನು ತಾನೇ ಏಕೆ ತಯಾರಿಸಿ ಪತ್ನಿಗೆ ನೀಡಲಿಲ್ಲ ಎಂಬ ಹತಾಷೆಗೂ ಒಳಗಾದರು.
ಹಾಗೆ ಮಾರುಕಟ್ಟೆಯಿಂದ ದುಬಾರಿ ಪ್ಯಾಡ್‌ಗಳನ್ನು ಧರಿಸಲು ಕೂಡ ಆತನ ಪತ್ನಿ ನಿರಾಕರಿಸಿದ್ದರು, ಹೀಗಾಗಿ ತಾನೇ ಮನೆಯಲ್ಲಿ ನ್ಯಾಪ್‌ಕಿನ್ ಯಾರಿಸಬೇಕೆಂದು ಸವಾಲಿನ ದಾರಿ ಹಿಡಿಯಲು ಆತ ಮುಂದಾಗಿದ್ದರು. ಆರಂಭದಲ್ಲಿ ಹತ್ತಿಯನ್ನು ಬಳಸಿ ಅದನ್ನು ನೇಯ್ದು ತನ್ನ ಪತ್ನಿಗೆ ನೀಡಿದನು ಅದನ್ನು ಧರಿಸಲು ಹೇಳಿದಾಗ ಪತ್ನಿ ಕೂಡ ಸಹಕರಿಸಿದ್ದಳು, ಆದ್ರೆ ಅದು ನಿಷ್ಪ್ರಯೋಜಕ ಎಂದು ತಿಳಿದಾಗ ಪತ್ನಿ ಪುನಃ ಕಚ್ಚಾ ಬಟ್ಟೆಯನ್ನೇ ಧರಿಸುವುದು ಸೂಕ್ತ ಎಂದುಕೊಂಡಳು.
ಮೊದಲ ಪ್ರಯತ್ನದಲ್ಲಿ ಸೋಲು ಕಂಡ ಆತನ ವಿಚಾರ ಇಡೀ ಊರಿಗೆ ತಿಳಿದಿತ್ತು. ಹೀಗಾಗಿ ಆತ ಇದನ್ನು ಸವಾಲಾಗಿ ಸ್ವೀಕರಿಸಿದ್ದ. ಅಂಗಡಿಯಲ್ಲಿ ಸಿಗುವ ಪ್ಯಾಡ್‌ಗೂ ಆತ ತಯಾರಿಸಿದ್ದ ಪ್ಯಾಡ್‌ಗೂ ಇರುವ ವ್ಯತ್ಯಾಸವೇನು ಎಂಬುದನ್ನು ಪತ್ತೆ ಮಾಡಲು ಆತ ಮುಂದಾಗಿದ್ದ. ಹೊಸ ಹೊಸ ರೀತಿಯ ಪ್ಯಾಡ್‌ಗಳನ್ನು ತಯಾರಿಸಿದನು ಆದ್ರೆ ಇದನ್ನು ಪರೀಕ್ಷಿಸಲು ಪತ್ನಿಯ ಮನವೊಲಿಸಬೇಕಿತ್ತು. ಹಾಗೆ ಪ್ರತಿ ತಿಂಗಳು ಆತ ಕಾಯಬೇಕಿತ್ತು. ಹೀಗಾಗಿ ಇದೊಂದು ಸವಾಲಿನ ಕೆಲಸ ಆಗಿತ್ತು.
ಆದ್ರೆ ಪತ್ನಿಯ ಪರೀಕ್ಷೆಗಾಗಿ ತಿಂಗಳ ಕಾಲ ಕಾಯುವುದು ಆತನಿಗೆ ಬಹಳ ಸಮಯ ಹಿಡಿದಂತೆ ಆಗಿತ್ತು. ಹೀಗಾಗಿ ತಾನೇ ಸ್ವಂತ ನಕಲಿ ಮೂತ್ರಕೋಶವನ್ನು ಸೊಂಟಕ್ಕೆ ಕಟ್ಟಿಕೊಂಡು ಇದರ ಪರೀಕ್ಷೆ ಮಾಡಬೇಕು ಎಂದು ಭಾವಿಸಿದನು. ಹೀಗಾಗಿ ಕೃತಕ ಮೂತ್ರಕೋಶದಂತೆ ಪ್ಲಾಸ್ಟಿಕ್ ಕಟ್ಟಿಕೊಂಡು ಅದರ ಒಳಗೆ ಕೋಳಿ ರಕ್ತ ಸೇರಿಸಿ ಪರೀಕ್ಷೆಗೆ ಮುಂದಾಗಿದ್ದನು. ಆದರೆ ಈ ಪ್ರಯೋಗ ಮಾಡುವುದು ಊರಿನಲ್ಲಿ ಹರಡಿ ಆತ ಹುಚ್ಚನಾಗಿದ್ದನೆ ಎಂದು ಮಾತನಾಡುತ್ತಿದ್ದರು, ಹಾಗೆ ಆತನಿಗೆ ಗಂಭೀರ ಕಾಯಿಲೆ ಇದೆ ಎಂದು ಮಾತುಗಳು ಹರಡಿದವು.
ಇದೆಲ್ಲಾ ಮಾತುಗಳು ಹೆಂಡತಿ ಕಿವಿಗೆ ಬಿದ್ದು ಆಕೆ ಗಂಡನ ಬಿಟ್ಟು ತವರು ಮನೆ ಸೇರಿದಳು, ಮುರುಗನಾಥಂ ತನ್ನ ಪ್ರಯತ್ನ ಮಾತ್ರ ಬಿಡಲಿಲ್ಲ. ತನ್ನ ಪತ್ನಿಗೆ ಮಾತ್ರ ಸ್ಯಾನಿಟರಿ ನ್ಯಾಪ್‌ಕಿನ್ ತಯಾರಿಸುವ ಆತನ ಉದ್ದೇಶ ಈಗ ಇಡೀ ಭಾರತದ ಹೆಣ್ಣು ಮಕ್ಕಳಿಗೆ ಕಡಿಮೆ ದರದಲ್ಲಿ ಇದನ್ನು ನೀಡಬೇಕು ಎಂಬ ಉದ್ದೇಶವಾಗಿ ಬದಲಾಗಿತ್ತು.
ಬರೋಬ್ಬರಿ 2 ವರ್ಷಗಳ ಬಳಿಕ ಆತ ಮಹಿಳೆಯರು ಉಪಯೋಗಿಸಲು ಯೋಗ್ಯವಾದ ನ್ಯಾಪ್‌ಕಿನ್ ತಯಾರಿಯಲ್ಲಿ ಯಶಸ್ವಿಯಾದರು. ಆದರೆ ಅದನ್ನು ಸಂಸ್ಕರಿಸಿ ಇಡುವ ಮಾರ್ಗ ಕಂಡುಕೊಳ್ಳಲು ಮತ್ತೂ 4 ವರ್ಷ ಹಿಡಿಯಿತು. ಸದ್ಯ ಈಗ ಅವರು ಕಡಿಮೆ ಬೆಲೆಯಲ್ಲಿ ಸ್ಯಾನಿಟರಿ ಪ್ಯಾಡ್ ಮಾರಾಟ ಮಾಡುತ್ತಿದ್ದಾರೆ. ಬಾಲಿವುಡ್‌ನಲ್ಲಿ ನಟ ಅಕ್ಷಯ್ ಕುಮಾರ್ ನಟನೆಯ ಪ್ಯಾಡ್ ಮ್ಯಾನ್ ಸಿನಿಮಾ ಕೂಡ ಇವರ ಕಾರ್ಯವನ್ನೇ ಸ್ಪೂರ್ತಿಯಾಗಿ ಪಡೆದುಕೊಂಡಿದೆ.



Click it and Unblock the Notifications
