Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ 5 ರಾಶಿಯವರು ಸ್ಟಾರ್ ಆಗಿ ಮಿಂಚುತ್ತಾರೆ!
ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ಏನಾದ್ರು ಸಾಧನೆ ಮಾಡ್ಬೇಕು. ಹೆಸರು ಗಳಿಸ್ಬೇಕು, ಸ್ಟಾರ್ ಆಗಿ ಮಿಂಚ್ಬೇಕು ಅನ್ನೋ ಆಸೆ ಇದ್ದೇ ಇರುತ್ತೆ. ಅದಕ್ಕೆ ಇಂತಹದ್ದೇ ಕ್ಷೇತ್ರ ಆಗ್ಬೇಕು ಅಂತೇನಿಲ್ಲ. ಸಿನಿಮಾ, ರಾಜಕೀಯ, ಕ್ರೀಡೆ ಹೀಗೆ ಒಂದಲ್ಲಾ ಒಂದು ಕ್ಷೇತ್ರದಲ್ಲಿ ಮಿಂಚ್ಬೇಕು ಅಂತ ಎಲ್ಲರೂ ಅಂದುಕೊಂಡಿರುತ್ತಾರೆ.

ಕೆಲವರು ಕಷ್ಟ ಪಟ್ಟಾದ್ರು ಈ ಸ್ಥಾನಕ್ಕೇರುತ್ತಾರೆ. ಇನ್ನೂ ಕೆಲವರಿಗೆ ನೈಸರ್ಗಿಕವಾಗಿ ಈ ಪಟ್ಟ ಒಲಿದು ಬಂದಿರುತ್ತೆ. ಬಯಸದಿದ್ದರೂ ಕೂಡ ಒಂದಲ್ಲಾ ಒಂದು ಕ್ಷೇತ್ರದಲ್ಲಿ ಅವರು ಸ್ಟಾರ್ ಆಗಿ ಮೆರೆಯುತ್ತಾರೆ. ಅಷ್ಟಕ್ಕೂ ಯಾವೆಲ್ಲಾ ರಾಶಿಯವರು ನೈಸರ್ಗಿಕವಾಗಿ ಸ್ಟಾರ್ ಆಗಿ ಮೆರೆಯುತ್ತಾರೆ ಅನ್ನೋದನ್ನು ತಿಳಿಯೋಣ.
ಕುಂಭ ರಾಶಿ
ಕುಂಭ ರಾಶಿಯವರು ತಾವು ಮಾಡೋ ಪ್ರತಿಯೊಂದು ಕೆಲಸದಲ್ಲೂ ನಾವಿನ್ಯತೆಯನ್ನು ಪ್ರದರ್ಶಿಸುತ್ತಾರೆ. ಸ್ವಂತಿಕೆಯ ಗ್ರಹವಾದ ಯುರೇನಸ್‌ನಿಂದ ಆಳಲ್ಪಡೋದ್ರಿಂದ ಇವರು ಜೀವನದಲ್ಲಿ ದೊಡ್ಡದು ಏನನ್ನಾದರೂ ಸಾಧಿಸುತ್ತಾರೆ. ಇವರ ಮುಂದಾಲೋಚನೆಯ ಮನಸ್ಸು ಮತ್ತು ಪ್ರಗತಿಪರ ದೃಷ್ಟಿಕೋನವು ಅವರ ಮಾರ್ಗವನ್ನು ಬೆಳಗಿಸುತ್ತದೆ.
ಸಿಂಹ ರಾಶಿ
ಸೂರ್ಯನು ಸಿಂಹ ರಾಶಿಯನ್ನು ಆಳುತ್ತಿದ್ದಾನೆ. ಯಾವುದೇ ಕೆಲಸಕ್ಕಾದರೂ ಸಲೀಸಾಗಿ ಗಮನ ವಹಿಸುತ್ತಾರೆ. ಹಾಗೂ ಅದ್ರಲ್ಲಿ ಯಶಸ್ವಿಯೂ ಆಗುತ್ತಾರೆ. ಇವರಲ್ಲಿರುವ ಕಾಂತೀಯ ಉಪಸ್ಥಿತಿ ಮತ್ತು ವರ್ಚಸ್ವಿ ಮೋಡಿ ಇವರನ್ನು ನೈಸರ್ಗಿಕವಾಗಿ ಹುಟ್ಟು ನಾಯಕರನ್ನಾಗಿ ಮಾಡುತ್ತದೆ. ಯಾವುದೇ ವಿಚಾರದ ಬಗ್ಗೆಯೂ ಇವರು ನಕಾರಾತ್ಮಕವಾಗಿ ಆಲೋಚನೆ ಮಾಡುವವರಲ್ಲ. ಸಕಾರಾತ್ಮಕ ಚಿಂತನೆಗೆ ಇವರು ಹೆಸರುವಾಸಿಯಾಗಿರ್ತಾರೆ.
ತುಲಾ ರಾಶಿ
ತುಲಾ ರಾಶಿಯವರು ಸಮತೋಲನ ಮತ್ತು ಸಾಮರಸ್ಯವನ್ನು ಹೊಂದಿರುತ್ತಾರೆ. ಪ್ರೀತಿ ಮತ್ತು ಸೌಂದರ್ಯದ ಗ್ರಹವಾದ ಶುಕ್ರನಿಂದ ಆಳಲ್ಪಡುವ ಇವರು ಸೌಂದರ್ಯ ಮತ್ತು ರಾಜತಾಂತ್ರಿಕತೆಯ ಸಹಜ ಪ್ರಜ್ಞೆಯನ್ನು ಹೊಂದಿದ್ದಾರೆ. ಕೆಲವೊಂದು ಸಲ ಇವರಿಗಿರೋ ಸೌಂದರ್ಯವೇ ಇವರಿಗೆ ಪ್ಲಸ್ ಪಾಯಿಂಟ್ ಆಗುತ್ತೆ ಅಂದ್ರು ತಪ್ಪಾಗೋದಿಲ್ಲ. ಹೆಚ್ಚು ಕಷ್ಟ ಪಡದಿದ್ದರೂ ಸುಲಭವಾಗಿ ಗೆಲುವು ಸಾಧಿಸುತ್ತಾರೆ.
ಧನು ರಾಶಿ
ಧನು ರಾಶಿಯನ್ನು ಗುರು ಗ್ರಹವು ಆಳುತ್ತಿದೆ. ಈ ರಾಶಿಯವರಿಗೆ ಎಲ್ಲಾ ವಿಚಾರದಲ್ಲೂ ಕುತೂಹಲ ಹೆಚ್ಚಾಗಿರುತ್ತದೆ. ಹೊsssಸ ಕೆಲಸ ಮಾಡೋದಕ್ಕೆ ಇವರಲ್ಲಿ ಹುರುಪು ಹೆಚ್ಚಾಗಿರುತ್ತದೆ. ಜೀವನದಲ್ಲಿ ಇವರು ಯಾವುದೇ ಕೆಲಸ ಮಾಡಬೇಕಾದರೂ ಕೂಡ ರಿಸ್ಕ್ ತೆಗೆದುಕೊಳ್ಳೋದಕ್ಕೆ ಹಿಂಜರಿಯೋದಿಲ್ಲ. ಒಂದು ಸಾರಿ ಇಟ್ಟ ಹೆಜ್ಜೆಯನ್ನು ಹಿಂದೆ ಇಡುವವರಲ್ಲ. ಇದು ಕೂಡ ಇವರ ಯಶಸ್ಸಿಗೆ ಕಾರಣವಾಗುತ್ತದೆ.
ಮೀನ ರಾಶಿ
ಮೀನ ರಾಶಿಯವರು ಕನಸುಗಳು ಮತ್ತು ಅಂತಃಪ್ರಜ್ಞೆಯ ಗ್ರಹವಾದ ನೆಪ್ಚೂನ್‌ನಿಂದ ಆಳಲ್ಪಡುತ್ತಾರೆ. ಮೀನ ರಾಶಿಯವರು ಪಾರಮಾರ್ಥಿಕ ಬುದ್ಧಿವಂತಿಕೆಯನ್ನು ಹೊಂದಿದ್ದಾರೆ. ಹಾಗೂ ಯಾವುದೇ ಕೆಲಸ ಮಾಡಬೇಕಾದರೂ ಅಕ್ಕ-ಪಕ್ಕದವರ ಸಹಾಯವನ್ನೂ ಪಡೆಯುತ್ತಾರೆ. ಹೀಗಾಗಿ ಯಶಸ್ಸು ಅನ್ನೋದನ್ನು ಇವರು ಸುಲಭವಾಗಿ ಪಡೆಯುತ್ತಾರೆ.



Click it and Unblock the Notifications


