Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಪರಮ ಏಕಾದಶಿ ದಿನ ಅಪ್ಪಿ ತಪ್ಪಿಯೂ ಈ ತಪ್ಪು ಆಗದಿರಲಿ!
ಮಾಸಿಕ ಏಕಾದಶಿ ಉಪವಾಸವನ್ನು ಪ್ರತಿ ತಿಂಗಳ ಏಕಾದಶಿಯಂದು ಆಚರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಈ ಉಪವಾಸಕ್ಕೆ ವಿಶೇಷ ಮಹತ್ವವಿದೆ. ಮತ್ತೊಂದೆಡೆ ಶ್ರಾವಣ ಮಾಸದಲ್ಲಿ ಬರುವ ಏಕಾದಶಿಯ ದಿನದಂದು ಪರಮ ಏಕಾದಶಿ ಉಪವಾಸವನ್ನು ಆಚರಿಸಲಾಗುತ್ತದೆ. ಈ ದಿನದಂದು ಭಗವಾನ್ ವಿಷ್ಣುವನ್ನು ಪೂಜಿಸುವುದರಿಂದ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತೆ ಅನ್ನೋ ನಂಬಿಕೆಯಿದೆ. ಇದರ ಜೊತೆಗೆ ಪುಣ್ಯ ಫಲ ಕೂಡ ಪ್ರಾಪ್ತಿಯಾಗುತ್ತಂತೆ.

ಹಿಂದೂ ಕ್ಯಾಲೆಂಡರ್ ಪ್ರಕಾರ ಶ್ರಾವಣ ಅಧಿಕಮಾಸದ ಕೃಷ್ಣ ಪಕ್ಷದ ಏಕಾದಶಿ ದಿನದಂದು ಪರಮ ಏಕಾದಶಿ ಉಪವಾಸವನ್ನು ಆಚರಿಸಲಾಗುತ್ತದೆ. ಈ ಉಪವಾಸವನ್ನು ಮೂರು ವರ್ಷಕ್ಕೊಮ್ಮೆ ಆಚರಿಸಲಾಗುತ್ತದೆ. ಈ ವರ್ಷ ಪರಮ ಏಕಾದಶಿ ಉಪವಾಸವನ್ನು ಆಗಸ್ಟ್ 12, ರಂದು ಶನಿವಾರ ಆಚರಿಸಲಾಗುತ್ತದೆ. ಈ ದಿನದಂದು ಭಕ್ತರು ಕೆಲವು ವಿಶೇಷ ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು. ಮತ್ತು ಉಪವಾಸದ ಸಮಯದಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ
ಮನುಷ್ಯರು ಅಂದು ಮೇಲೆ ನಮ್ಮಿಂದ ಕೆಲವು ತಪ್ಪುಗಳು ಖಂಡಿತ ಆಗುತ್ತದೆ. ಆದರೆ ಈ ಪರಮ ಏಕಾದಶಿಯ ಪೂಜೆ ಮತ್ತು ಉಪವಾಸ ಸಂದರ್ಭದಲ್ಲಿ ತಪ್ಪುಗಳಾದ್ರೆ ಅದು ನಮ್ಮ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿದೆ. ಅಷ್ಟಕ್ಕು ಪರಮ ಏಕಾದಶಿಯ ಉಪವಾಸದ ಸಂದರ್ಭದಲ್ಲಿ ಏನು ಮಾಡಬೇಕು? ಏನು ಮಾಡಬಾರದು ಅನ್ನೋದನ್ನು ತಿಳಿಯೋಣ.
ಪರಮ ಏಕಾದಶಿಯ ದಿನದಂದು ಈ ತಪ್ಪುಗಳನ್ನು ಮಾಡಬೇಡಿ!
* ಪರಮ ಏಕಾದಶಿಯ ದಿನ ಸಾಧಕರು ಪೂಜೆ ಮಾಡಿ ದಾನ ಮಾಡದೇ ಇರಬಾರದು.
* ಈ ದಿನ ಬೆಳಗ್ಗೆ ಬೇಗ ಎದ್ದು ಪೂಜೆ ಮಾಡಿ ಮಧ್ಯಾಹ್ನ ಮಲಗಬೇಡಿ
* ಏಕಾದಶಿಯಂದು ಮಧ್ಯಾಹ್ನ ಮಲಗುವುದನ್ನು ನಿಷೇಧಿಸಲಾಗಿದೆ
* ಏಕಾದಶಿ ತಿಥಿಯಂದು ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಬೇಡಿ
* ಈ ಬಣ್ಣವು ನಕಾರಾತ್ಮಕತೆಯ ಸಂಕೇತವಾಗಿದೆ.
* ಇದರಿಂದ ದೇವಾನುದೇವತೆಗಳು ಕೋಪಗೊಂಡು ವ್ರತದ ಫಲ ಪ್ರಾಪ್ತಿಯಾಗುವುದಿಲ್ಲ
* ಏಕಾದಶಿ ವ್ರತ ಆಚರಿಸುವವರು ಬೇರೆಯವರ ಮನೆಯಿಂದ ನೀರು, ಹಣ್ಣು ಅಥವಾ ಆಹಾರವನ್ನು ಸೇವಿಸಬಾರದು.
* ಇದರಿಂದ ನೀವು ಮಾಡಿದ ಉಪವಾಸ ನಾಶವಾಗುತ್ತದೆ
* ಒಂದು ವೇಳೆ ನೀವು ಬೇರೆಯವರ ಮನೆಯಿಂದ ಏನನ್ನಾದರೂ ತೆಗೆದುಕೊಂಡರೆ ಅದಕ್ಕೆ ಪ್ರತಿಯಾಗಿ ಅವರಿಗೆ ಏನಾದರೂ ನೀಡಬೇಕು
* ಉಪವಾಸವನ್ನು ಆಚರಿಸಲು ಸಾಧ್ಯವಾಗದವರು ಈ ದಿನದಂದು ಆಹಾರ ಮತ್ತು ಪಾನೀಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು
* ಈ ದಿನ ಮಾಂಸಾಹಾರ ಮತ್ತು ಮದ್ಯ ಸೇವಿಸಬೇಡಿ
* ಈ ದಿನ ಕಾಮ, ಕ್ರೋಧ ಮತ್ತು ಅಸೂಯೆಗಳನ್ನು ತ್ಯಜಿಸಬೇಕು
ಪರಮ ಏಕಾದಶಿಯಂದುಈ ಕೆಲಸವನ್ನು ಮಾಡಿ!
ಪರಮ ಏಕಾದಶಿಯ ದಿನದಂದು ನಿರ್ಗತಿಕರಿಗೆ ಆಹಾರ, ಹಣ ಅಥವಾ ಬಟ್ಟೆಯನ್ನು ದಾನ ಮಾಡಿ. ಹೀಗೆ ಮಾಡುವುದರಿಂದ ಪುಣ್ಯದ ಫಲ ಪ್ರಾಫ್ತಿಯಾಗುತ್ತದೆ. ಅಲ್ಲದೆ ಈ ದಿನ ವಿಶೇಷವಾದ ಗೀತೆಯನ್ನು ಪಠಿಸಿ ಮತ್ತು ಸಂಜೆಯ ಸಮಯದಲ್ಲಿ ಅಶ್ವಥ ಮರ ಕೆಳಗೆ ದೀಪವನ್ನು ಬೆಳಗಿಸಿ. ಈ ರೀತಿ ಮಾಡೋದ್ರಿಂದ ನಿಮಗೆ ಪುಣ್ಯ ಫಲ ಪ್ರಾಪ್ತಿಯಾಗುತ್ತೆ.
ನೀವೇನಾದರೂ ಪರಮ ಏಕಾದಶಿಯ ದಿನ ಪೂಜೆ ಮತ್ತು ಉಪವಾಸ ವ್ರತವನ್ನು ಪಾಲಿಸೋದಾದ್ರೆ ಈ ವಿಚಾರಗಳ ಬಗ್ಗೆ ಎಚ್ಚರಿಕೆಯಿಂದಿರಿ. ಯಾವುದೇ ರೀತಿ ತಪ್ಪಾಗದಿರುವಂತೆ ನೋಡಿಕೊಳ್ಳಿ.



Click it and Unblock the Notifications
