ಮೂಲ ನಕ್ಷತ್ರದವರಿಗೆ ಮದುವೆಗೆ ಯಾವ ನಕ್ಷತ್ರದವರು ಸೂಕ್ತ ಜೋಡಿ?

27 ನಕ್ಷತ್ರಗಳಲ್ಲಿ 19ನೇ ನಕ್ಷತ್ರವಾದ ಮೂಲ ನಕ್ಷತ್ರವನ್ನು ಇದು ತೊಂದರೆಯನ್ನು ನೀಡುವ ನಕ್ಷತ್ರವೆಂಬ ಭಾವನೆ ಹಲವರಲ್ಲಿದೆ. ಅದರಲ್ಲೂ ಮೂಲ ನಕ್ಷತ್ರದವರು ಮದುವೆಯ ಸಮಯದಲ್ಲಿ ತುಂಬಾನೇ ತೊಂದರೆ ಅನುಭವಿಸುತ್ತಾರೆ. ಮೂಲ ನಕ್ಷತ್ರದವರ ಜೊತೆ ಮದುವೆಯಾಗಲು ಹಿಂದೇಟು ಹಾಕುತ್ತಾರೆ. ಆದರೆ ಈ ಕಲ್ಪನೆ ಸಂಪೂರ್ಣ ಸತ್ಯವಲ್ಲ. ಸಂಖ್ಯಾಶಾಸ್ತ್ರ ಪ್ರಕಾರ 19ನೇ ಮೂಲ ನಕ್ಷತ್ರ ಎಲ್ಲಾ ರೀತಿಯ ಸೌಕರ್ಯವನ್ನು ನೀಡುವ ನಕ್ಷತ್ರವಾಗಿದೆ ಎಂದು ಹೇಳಲಾಗುವುದು.

ಮೂಲ ನಕ್ಷತ್ರದವರ ಪ್ರಮುಖ ಪ್ಲಸ್‌ ಪಾಯಿಂಟ್‌ ಎಂದರೆ ಒಂದು ಕೆಲಸ ಹಿಡಿದರೆ ಅದು ಪೂರ್ಣವಾಗುವವರೆಗೆ ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ. ಅವರು ಆತ್ಮಾಭಿಮಾನಕ್ಕೆ ಧಕ್ಕೆಯಾದರೆ ಸಹಿಸಿಕೊಳ್ಳುವುದಿಲ್ಲ. ಅವರು ತಮ್ಮದೇ ಆದ ಮೌಲ್ಯ, ನಿಯಮಗಳನ್ನು ಅನುಸರಿಸುವವರು. ಮೂಲ ನಕ್ಷತ್ರದವರಿಗೆ ದೇವರೆಂದರೆ ತುಂಬಾನೇ ನಂಬಿಕೆ, ಅವರ ಬಲಶಾಲಿಗಳು ಹಾಗೂ ತಮ್ಮ ನಿರ್ಧಾರಕ್ಕೆ ತುಂಬಾನೇ ಬದ್ಧರಾಗಿರುವವರು.

Moola Nakshatra Marriage Compatibility: Best and Worst Matches In Kannada

ಅವರ ವೈವಾಹಿಕ ಜೀವನದ ಬಗ್ಗೆ ಹೇಳುವುದಾದರೆ ಮೂಲ ನಕ್ಷತ್ರದವರು ಅತ್ಯುತ್ತಮವಾದ ವೈವಾಹಿಕ ಜೀವನ ನಡೆಸಬಹುದು. ಈ ನಕ್ಷತ್ರದವರಿಗೆ ಮ್ಯಾಚ್‌ ಆಗುವ ನಕ್ಷತ್ರದ ವ್ಯಕ್ತಿ ಜೊತೆ ಮದುವೆ ಮಾಡಿದರೆ ವೈವಾಹಿಕ ಜೀವನ ತುಂಬಾನೇ ಚೆನ್ನಾಗಿರಲಿದೆ. ಮೂಲ ನಕ್ಷತ್ರದವರಿಗೆ ಯಾವ ನಕ್ಷತ್ರದವರು ಎಷ್ಟು ಹೊಂದಿಕೊಳ್ಳುತ್ತಾರೆ ಎಂದು ನೋಡುವುದಾದರೆ:

ಮೂಲ ನಕ್ಷತ್ರದವರು ಈ ನಕ್ಷತ್ರದವರ ಜೊತೆ ಮದುವೆಯಾದರೆ ಅವರ ವೈವಾಹಿಕ ಜೀವನ ತುಂಬಾ ಚೆನ್ನಾಗಿರಲಿದೆ:
ಮೂಲ ನಕ್ಷತ್ರ-ಮೂಲ ನಕ್ಷತ್ರ
ಮೂಲ ನಕ್ಷತ್ರದವರು ಮದುವೆಯಾದರೆ ಹೊಂದಾಣಿಕೆ ಶೇ.77ರಷ್ಟು ಇರುವುದರಿಂದ ಸಂಸಾರ ತುಂಬಾನೇ ಚೆನ್ನಾಗಿರಲಿದೆ. ಆದರೆ ಮೂಲ ನಕ್ಷತ್ರದವರು ಮದುವೆಯಾದರೆ ತೊಂದರೆಯೆಂದರೆ ಏನಾದರೂ ಸಮಸ್ಯೆ ಉಂಟಾದಾಗ ಇಬ್ಬರು ಒಂದೇ ರೀತಿ ಯೋಚಿಸುವುದರಿಂದ ಕೆಲವೊಮ್ಮೆ ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗಲ್ಲ. ಈ ಕಾರಣಕ್ಕೆ ಮೂಲ ನಕ್ಷತ್ರದವರು ಮದುವೆಯಾಗುವುದು ಒಳ್ಳೆಯದಲ್ಲ ಎಂದು ವೈದಿಕ ಶಾಸ್ತ್ರದಲ್ಲಿ ಹೇಳಲಾಗಿದೆ.

ಮೂಲ ನಕ್ಷತ್ರ-ಪೂರ್ವ ಆಷಾಢ ನಕ್ಷತ್ರ
ಮೂಲ ನಕ್ಷತ್ರ ಹಾಗೂ ಪೂರ್ವ ಆಷಾಢ ನಕ್ಷತ್ರದ ಹೊಂದಾಣಿಕೆ ಶೇ, 77ರಷ್ಟು ಇರುವುದರಿಂದ ಈ ಎರಡು ನಕ್ಷತ್ರದವರು ಕೂಡ ಒಳ್ಳೆಯ ಜೋಡಿಯಾಗಬಹುದು. ಇವರಿಬ್ಬರ ನಡುವೆ ಬಾಂಧವ್ಯ ತುಂಬಾನೇ ಗಟ್ಟಿಯಾಗಿರುತ್ತದೆ. ಇಬ್ಬರು ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಾರೆ. ಪೂರ್ವ ಆಷಾಢದವರು ಮೂಲ ನಕ್ಷತ್ರದವರಿಗೆ ಎಲ್ಲಾ ವಿಷಯದಲ್ಲಿ ಬೆಂಬಲ ನೀಡುತ್ತಾರೆ. ಕಷ್ಟ-ಸುಖಗಳಲ್ಲಿ ಜೊತೆಯಲ್ಲಿರುತ್ತಾರೆ. ಆದ್ದರಿಂದ ಈ ಎರಡು ನಕ್ಷತ್ರದವರು ಜೊತೆಯಾದರೆ ಒಳ್ಳೆಯ ಜೋಡಿಯಾಗಬಹುದು.

ಮೂಲ ನಕ್ಷತ್ರ-ಚೈತ್ರ ನಕ್ಷತ್ರ
ಇನ್ನು ಮೂಲ ನಕ್ಷತ್ರ ಹಾಗೂ ಚೈತ್ರ ನಕ್ಷತ್ರ ನಡುವೆ ಹೊಂದಾಣಿಕೆ ಶೇ. 75ರಷ್ಟು ಇರುವುದರಿಂದ ಈ ಎರಡು ನಕ್ಷತ್ರದವರು ಕೂಡ ಒಳ್ಳೆಯ ಜೋಡಿಯಾಗಬಹುದು. ಚೈತ್ರದವರು ಮೂಲ ನಕ್ಷತ್ರದವರ ಆಸೆಗಳಿಗೆ ಬೆಂಬಲ ನೀಡುತ್ತಾರೆ. ಅವರಿಬ್ಬರು ತುಂಬಾ ಧೈರ್ಯದಿಂದ ಎಲ್ಲಾ ಪರಿಸ್ಥಿತಿ ನಿಭಾಯಿಸುತ್ತಾರೆ. ಇಬ್ಬರ ನಡುವೆ ಬಾಂಧವ್ಯ ತುಂಬಾನೇ ಗಟ್ಟಿಯಾಗಿರುತ್ತದೆ.

ಇತರ ಯಾವ ನಕ್ಷತ್ರಗಳ ಜೊತೆ ಹೊಂದಾಣಿಕೆ ಇರಲಿದೆ?
* ಮೂಲ ನಕ್ಷತ್ರ ಹಾಗೂ ರೇವತಿ ನಕ್ಷತ್ರ ಶೇ. 72ರಷ್ಟು ಹೊಂದಾಣಿಕೆ ಇರಲಿದೆ
* ಮೂಲ ನಕ್ಷತ್ರದವರಿಗೆ ಉತ್ತರ ಭಾದ್ರ ನಕ್ಷತ್ರದೊಂದಿಗೆ ಶೇ.66ರಷ್ಟು ಹೊಂದಾಣಿಕೆ ಇರಲಿದೆ.
* ಮೂಲ ನಕ್ಷತ್ರ ಹಾಗೂ ಧನಿಷ್ಠಾ ನಕ್ಷತ್ರದೊಂದಿಗೆ ಶೇ. 65ರಷ್ಟು ಹೊಂದಾಣಿಕೆ ಇರಲಿದೆ.
* ಮೂಲ ನಕ್ಷತ್ರ ಹಾಗೂ ವೈಶಾಕ ನಕ್ಷತ್ರದವರ ನಡುವೆ ಶೇ. 66ರಷ್ಟು ಹೊಂದಾಣಿಕೆ ಇರಲಿದೆ.

ಮೂಲ ನಕ್ಷತ್ರದವರಿಗೆ ಯಾವ ನಕ್ಷತ್ರದವರು ಒಳ್ಳೆಯ ಜೋಡಿಯಾಗಲ್ಲ
ವೈದಿಕ ಶಾಸ್ತ್ರದ ಪ್ರಕಾರ ಮೂಲ ನಕ್ಷತ್ರದವರಿಗೆ ಕೆಲವೊಂದು ನಕ್ಷತ್ರವರು ಹೊಂದಾಣಿಕೆಯಾಗುವುದಿಲ್ಲವೆಂದು ಹೇಳುವುದಿಲ್ಲ. ಆ ನಕ್ಷತ್ರಗಳೆಂದರೆ
* ಮೂಲ ನಕ್ಷತ್ರ ಹಾಗೂ ಪುನರ್ವಸು ನಕ್ಷತ್ರ (ಶೇ. 29ರಷ್ಟು ಮಾತ್ರ ಹೊಂದಾಣಿಕೆ ಇರಲಿದೆ)
ಮೂಲ ನಕ್ಷತ್ರದವರಿಗೆ ಪುನರ್ವಸು ನಕ್ಷತ್ರದವರು ಒಳ್ಳೆಯ ಜೋಡಿಯಲ್ಲ ಎಂದು ಹೇಳಲಾಗುವುದು. ಈ ನಕ್ಷತ್ರದವರು ಮದುವೆಯಾಗಬಾರದು.
* ಮೂಲ ನಕ್ಷತ್ರ- ಉತ್ತರ ಫಲ್ಗುಣಿ ನಕ್ಷತ್ರ ( ಈ ರಾಶಿಯವರಲ್ಲಿ ಶೇ. 32ರಷ್ಟು ಮಾತ್ರ ಹೊಂದಾಣಿಕೆ ಇರಲಿದೆ). ಈ ನಕ್ಷತ್ರದವರು ಒಂದಾದರೆ ಬೇಗನೆ ಇಬ್ಬರಿಗೆ ಬೋರ್‌ ಆಗುವುದು, ಇಬ್ಬರ ನಡುವೆ ಬಾಂಧವ್ಯ ಕಡಿಮೆಯಾಗುವುದು.
* ಮೂಲ ನಕ್ಷತ್ರ -ಅಶ್ವಿನಿ ನಕ್ಷತ್ರ ( ಈ ನಕ್ಷತ್ರದವರ ನಡುವೆ ಕೂಡ ಹೊಂದಾಣಿಕೆ ಇರಲ್ಲ)
ಇವರಿಬ್ಬರ ನಡುವೆ ಕೂಡ ಉತ್ತಮ ಹೊಂದಾಣಿಕೆ ಇರಲ್ಲ. ಅಶ್ವಿನಿ ನಕ್ಷತ್ರದವರು ಮೂಲ ನಕ್ಷತ್ರದವರನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ, ಆದರೂ ಇಬ್ಬರ ನಡುವೆ ಮನಸ್ತಾಪಗಳು ಕಡಿಮೆಯಾಗಲ್ಲ.
ಆದ್ದರಿಂದ ಮೂಲ ನಕ್ಷತ್ರದವರಿಗೆ ಈ ನಕ್ಷತ್ರದವರು ಸೂಕ್ತವಲ್ಲ ಎಂದು ಹೇಳಲಾಗುವುದು.

English summary

Moola Nakshatra Marriage Compatibility: Best and Worst Matches In Kannada

Moola Nakshatra Marriage Compatibility: Who are the best and worst matches fo moola nakshatra people read on.
Story first published: Monday, April 10, 2023, 18:30 [IST]
X
Desktop Bottom Promotion