Latest Updates
-
ಮಧ್ಯಪ್ರದೇಶ UCC: ಲಿವ್-ಇನ್ ಜೋಡಿಗಳಿಗೆ ಕಡ್ಡಾಯ ನೋಂದಣಿ, ನಿಯಮ ಮೀರಿದರೆ ಕಾದಿದೆ ಸಂಕಷ್ಟ! -
ಹಾಲಿನಲ್ಲಿ ವಿಷಕಾರಿ ಕಲಬೆರಕೆ ಪತ್ತೆ: ನಿಮ್ಮ ಮನೆಯ ಹಾಲಿನ ಸುರಕ್ಷತೆ ಪರೀಕ್ಷಿಸುವುದು ಹೇಗೆ? -
ಬೆಂಗಳೂರಿನಲ್ಲಿ 12 ಗಂಟೆಗಳ ಕಾಲ ನೀರಿನ ಕಡಿತ: ನಾಳೆ ನೀರು ಉಳಿಸಲು ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ!
ಬೈಡನ್ ದಂಪತಿಗೆ ದಶದಾನ ಮಾಡಿದ ಮೋದಿ: ವೈದಿಕ ಶಾಸ್ತ್ರದಲ್ಲಿ ದಶದಾನದ ಮಹತ್ವವೇನು ?
ಪ್ರಧಾನಿ ಮೋದಿ ಅಮೆರಿಕಾ ಪ್ರವಾಸದಲ್ಲಿದ್ದು ಅಮೆರಿಕ ಅಧ್ಯಕ್ಷ ಬೈಡನ್ ಹಾಗೂ ಜಿಲ್ ಬೈಡೆನ್‌ಗೆ ದಶದಾನ ಮಾಡಿದ್ದಾರೆ. ಈ ಮೂಲಕ ಭಾರತದ ಸಂಪ್ರದಾಯವನ್ನು ಅಮೆರಿಕದವರಿಗೆ ಪರಿಚಯಿಸಿದ್ದಾರೆ. ವೈದಿಕ ಶಾಸ್ತ್ರದಲ್ಲಿ ದಶದಾನಕ್ಕೆ ತುಂಬಾನೇ ಮಹತ್ವವಿದೆ. ದಶದಾನ ಎಂದರೇನು? ದಶದಾನದ ಮಹತ್ವವೇನು ಎಂದು ನೋಡೋಣ ಬನ್ನಿ:
ದಶದಾನದಲ್ಲಿ ಯಾವೆಲ್ಲಾ ವಸ್ತುಗಳನ್ನು ದಾನ ಮಾಡಲಾಗುವುದು?
- ಆಸ್ತಿ ಅಥವಾ ಶ್ರೀಗಂಧ
- ಎಳ್ಳು
- ಚಿನ್ನ
- ತುಪ್ಪ
- ಧಾನ್ಯ
- ಬೆಲ್ಲ
- ಬೆಳ್ಳಿ
- ಉಪ್ಪು
- ಗೋದಾನ

ದಶದಾನದ ಮಹತ್ವ
ವೈದಿಕ ಶಾಸ್ತ್ರದಲ್ಲಿ ದಶದಾನಕ್ಕೆ ತುಂಬಾನೇ ಮಹತ್ವವಿದೆ. ಪಿತೃದೋಷ ನಿವಾರಣೆ ದಶದಾನ ಮಾಡಲಾಗುವುದು. ದಶದಾನ ಮಾಡುವುದರಿಂದ ಪಿತೃದೋಷದಿಂದ ಮುಕ್ತಿ ಸಿಗುವುದು ಅಷ್ಟು ಮಾತ್ರವಲ್ಲ ಮರಣದ ನಂತರ ಮೋಕ್ಷ ಪ್ರಾಪ್ತಿಯಾಗಲಿದೆ. ವ್ಯಕ್ತಿಯ ಮರಣದ ನಂತರ ದಶದಾನನ್ನು ಮಾಡಲಾಗುವುದು. ಯಾವುದೇ ಪಿತೃದೋಷ ಹೊಂದಿದ್ದರೆ ಆ ಎಲ್ಲಾ ಪಾಪಗಳಿಂದ ಮುಕ್ತಿ ಪಡೆದು ವ್ಯಕ್ತಿಗೆ ಮೋಕ್ಷ ಸಿಗುವುದು ಎಂಬ ನಂಬಿಕೆಯಾಗಿದೆ. ಹೀಗಾಗಿ ಪಿತೃದೊಷ ನಿವಾರಣೆಗೆ ಹಾಗೂ ಆಯುಸ್ಸು ತೀರಿದವರಿಗೆ ಸ್ವರ್ಗ ಪ್ರಾಪ್ತಿಯಾಗಲು ಈ ದಾನವನ್ನು ಮಾಡಲಾಗುವುದು.
ದಶದಾನದಲ್ಲಿ ನೀಡಲಾಗುವ ವಸ್ತುಗಳ ಮಹತ್ವವೇನು?
1.ಭೂಮಿ ಅಥವಾ ಶ್ರೀಗಂಧ: ವೈದಿಕ ಶಾಸ್ತ್ರವು ಇದನ್ನು ನೀಡುವುದರಿಂದ ವ್ಯಕ್ತಿ ಬ್ರಹ್ಮಹತ್ಯೆ ಪಾಪದಿಂದಲೂ ಮುಕ್ತನಾಗುತ್ತಾನೆ. ಯಾರಿಗೆ ಭೂಮಿ ನೀಡಲು ಶಕ್ತಿ ಇರುವುದಿಲ್ಲವೋ ಅವರು ಶ್ರೀಗಂಧದ ತುಂಡನ್ನು ದಾನವನ್ನಾಗಿ ನೀಡಬಹುದು.
2. ಕಪ್ಪು ಎಳ್ಳು: ಕಪ್ಪು ಎಳ್ಳು ಕೆಟ್ಟ ಆಲೋಚನೆ, ಮಾತು, ಕೆಟ್ಟ ಕ್ರಿಯೆಗಳ ಪಾಪದಿಂದ ಮುಕ್ತವಾಗಿಸುತ್ತದೆ.
3. ತುಪ್ಪ: ತುಪ್ಪ ದಾನ ಮಾಡುವುದರಿಂದ ದೇವತೆಗಳ ಆಶೀರ್ವಾದ ಸಿಗಲಿದೆ
4. ಚಿನ್ನ: ಚಿನ್ನವನ್ನು ದಾನ ಮಾಡಿದರೆ ಎಲ್ಲಾ ದೇವರು ತೃಪ್ತರಾಗುತ್ತಾರೆ. ಯಮ ಲೋಕದಲ್ಲಿ ಸ್ವರ್ಗ, ನರಕ ಎಂಬ ಪರಿಕಲ್ಪನೆ ಇದೆ. ಚಿನ್ನವನ್ನು ದಾನ ಮಾಡುವುದರಿಂದ ವ್ಯಕ್ತಿ ಸ್ವರ್ಗಕ್ಕೆ ಹೋಗುತ್ತಾನೆ ಎಂಬ ನಂಬಿಕೆ ಇದೆ.
5. ವಸ್ತ್ರ ದಾನ: ವಸ್ತ್ರ ದಾನ ಮಾಡುವುದರಿಂದ ಕೂಡ ವ್ಯಕ್ತಿ ಪಾಪ ಕರ್ಮಗಳನ್ನು ಕಳೆದು ಮೋಕ್ಷವನ್ನು ಪಡೆಯುತ್ತಾರೆ.
6. ಧಾನ್ಯ: ಧಾನ್ಯಗಳನ್ನು ಧಾನ ಮಾಡುವುದರಿಂದ ಮರಣದ ನಂತರ ವ್ಯಕ್ತಿ ಸ್ವರ್ಗಕ್ಕೆ ಹೋಗುವಾಗ ದ್ವಾರಪಾಲಕರ ತೊಂದರೆ ಇರಲ್ಲ ಎಂಬ ನಂಬಿಕೆ ಇದೆ.
7. ಬೆಲ್ಲ: ಬೆಲ್ಲವನ್ನು ದಾನ ಮಾಡುವುದರಿಂದ ಆತ್ಮಕ್ಕೆ ಮೋಕ್ಷ ಸಿಗುವುದು
8. ಬೆಳ್ಳಿ: ಭೂಮಿಯಲ್ಲಿ ಮಾಡಲಾದ ಎಲ್ಲಾ ಬಗೆಯ ಪಾಪಗಳಿಂದ ಮುಕ್ತರಾಗುತ್ತಾರೆ.
9. ಉಪ್ಪು: ಉಪ್ಪನ್ನು ದಾನ ಮಾಡುವುದರಿಂದ ಯಮನ ಭಯ ನಿವಾರಣೆಯಾಗುತ್ತದೆ.
10. ಗೋದಾನ: ಗೋದಾನ ಮಾಡುವುದರಿಂದ ಎಲ್ಲಾ ಬಗೆಯ ನರಕಗಳಿಂದ ಮುಕ್ತರಾಗುತ್ತಾರೆ.



Click it and Unblock the Notifications