Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
700 ವರ್ಷಗಳ ಬಳಿಕ ಮಹಾಷ್ಟಮಿ ಶುಭ ಯೋಗ: ಈ ರಾಶಿಗಳಿಗೆ ಅದೃಷ್ಟ ಕೈ ಹಿಡಿಯಲಿದೆ
ಚೈತ್ರ ನವರಾತ್ರಿಯಲ್ಲಿ ದೇವಿ ದುರ್ಗೆಯ ಆರಾಧನೆ ಮಾಡಲಾಗುವುದು. ಶಾರದೀಯ ನವರಾತ್ರಿಯಂತೆಯೇ ಈ ನವರಾತ್ರಿಯಲ್ಲಿ ದೇವಿಯ 9 ಸ್ವರೂಪಗಳನ್ನು ಆರಾಧಿಸಲಾಗುವುದು. ಈ ಬಾರಿ ಚೈತ್ರ ನವರಾತ್ರಿಯ ಅಷ್ಟಮಿ ದಿನಾಂಕವು ತುಂಬಾ ವಿಶೇಷವಾಗಿದೆ, ಏಕೆಂದರೆ ಮಹಾ ಅಷ್ಟಮಿಯಂದು ಗ್ರಹಗಳ ಅದ್ಭುತ ಸಂಯೋಜನೆ ರೂಪಗೊಳ್ಳಲಿದೆ.
ಈ ರೀತಿ ಗ್ರಹಗಳ ಸಂಯೋಜನೆ ಬರೋಬರಿ 700 ವರ್ಷಗಳ ನಂತರ ಸಂಭವಿಸಲಿದೆ. ಗುರು ಮೀನ ರಾಶಿಯಲ್ಲಿದೆ, ಬುಧವು ಮೇಷ ರಾಶಿಯಲ್ಲಿ ಸಾಗಲಿದ್ದಾನೆ. ಮತ್ತೊಂದೆಡೆ, ಸೂರ್ಯನು ಮೀನರಾಶಿಯಲ್ಲಿದ್ದಾನೆ ಮತ್ತು ಶನಿ ತನ್ನದೇ ಆದ ರಾಶಿಯಾದ ಕುಂಭ ರಾಶಿಯಲ್ಲಿದೆ. ಅದಲ್ಲದೆ ಶುಕ್ರ ಮತ್ತು ರಾಹು ಮೇಷ ರಾಶಿಯಲ್ಲಿದೆ.ಇದರಿಂದಾಗಿ ಮಹಾ ಸಂಯೋಗವು ಸೃಷ್ಟಿಯಾಗುತ್ತಿದೆ.

ಈ ಸಮಯದಲ್ಲಿ, ಮಾಲವ್ಯ, ಕೇದಾರ, ಹಂಸ ಮತ್ತು ಮಹಾಭಾಗ್ಯ ಯೋಗ ರಚನೆಯಾಗಲಿದೆ. ಜ್ಯೋತಿಷ್ಯ ಶಾಸ್ತ್ರವು ಈ ಯೋಗ ಕೆಲ ರಾಶಿಗಳಿಗೆ ಅದೃಷ್ಟದ ಯೋಗ ತಂದಿದೆ ಎಂದು ಹೇಳುತ್ತದೆ. ಆ ಅದೃಷ್ಟದ ರಾಶಿಗಳಾವುವು ಎಂದು ನೋಡೋಣ ಬನ್ನಿ:
ಮಿಥುನ ರಾಶಿ
ಅದೃಷ್ಟ ಮಿಥುನ ರಾಶಿಯವರ ಕೈ ಹಿಡಿಯಲಿದೆ. ಈ ಅವಧಿಯಲ್ಲಿ ನಿಮ್ಮ ಪ್ರತಿಯೊಂದು ಕೆಲಸವು ಯಶಸ್ಸು ಆಗಲಿದೆ. ಅವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ. ವಿವಾಹಿತರ ವೈವಾಹಿಕ ಜೀವನ ತುಂಬಾ ಚೆನ್ನಾಗಿರಲಿದೆ. ಏನಾದರೂ ಇಬ್ಬರ ನಡುವೆ ಭಿನ್ನಾಭಿಪ್ರಾಯ ಇದ್ದರೆ ಎಲ್ಲವೂ ಸರಿಯಾಗಲಿದೆ. ಈ ಸಮಯ ವ್ಯಾಪಾರಸ್ಥರಿಗೆ ಒಳ್ಳೆಯ ಲಾಭ ತಂದು ಕೊಡಲಿದೆ.
ಕರ್ಕ ರಾಶಿ
ಮಹಾ ಅಷ್ಟಮಿಯ ದಿನದಂದು ಹಂಸ ಮತ್ತು ಮಾಲವ್ಯ ರಾಜಯೋಗವು ಕರ್ಕ ರಾಶಿಯವರಿಗೆ ಮಂಗಳಕರವಾಗಿರುತ್ತದೆ. ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಸ್ಥಾನ ಪ್ರತಿಷ್ಠೆ ಸಾಧಿಸಬಹುದು. ನಿರುದ್ಯೋಗಿಗಳು ಉತ್ತಮ ಉದ್ಯೋಗವನ್ನು ಪಡೆಯಬಹುದು. ಕೆಲಸ ಬದಲಾಯಿಸಲು ಯೋಚಿಸುತ್ತಿದ್ದರೆ ಒಳ್ಳೆಯ ಆಫರ್‌ಗಳು ಸಿಗಲಿವೆ. ವ್ಯಾಪಾರಸ್ಥರು ಲಾಭ ಗಳಿಸುವುರಿ, ಆರ್ಥಿಕವಾಗಿ ತುಂಬಾ ಸುಧಾರಣೆಯಾಗಲಿದೆ.
ಕನ್ಯಾರಾಶಿ
ಕನ್ಯಾ ರಾಶಿಯವರಿಗೆ ಈ ಸಮಯ ಶುಭಕರವಾಗಿರುತ್ತದೆ. ಈ ಸಮಯವು ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲಕರವಾಗಿದೆ. ಈ ಸಮಯವು ಉದ್ಯಮಿಗಳಿಗೂ ಉತ್ತಮವಾಗಿರುತ್ತದೆ. ಇದರೊಂದಿಗೆ, ನಿರುದ್ಯೋಗಿಗಳು ಹೊಸ ಉದ್ಯೋಗವನ್ನು ಪಡೆಯಬಹುದು. ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ.
ಮೀನ ರಾಶಿ
ಈ ಅವಧಿಯಲ್ಲಿ ಮೀನ ರಾಶಿಯವರ ಸಾಮಾಜಿಕ ಸ್ಥಾನಮಾನ ಹೆಚ್ಚಾಗಲಿದೆ. ವ್ಯಾಪಾರಸ್ಥರೂ ಒಳ್ಳೆಯ ಲಾಭ ಗಳಿಸುವಿರಿ. ಉದ್ಯೋಗಸ್ಥರು ಪ್ರಗತಿಯನ್ನು ಕಾಣುವಿರಿ. ನಿಮ್ಮ ಸ್ಥಗಿತಗೊಂಡ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ. ಒಟ್ಟಿನಲ್ಲಿ ಈ ಯೋಗ ನಿಮಗೆ ತುಂಬಾನೇ ಮಂಗಳಕರವಾಗಿದೆ.
ಅಷ್ಟಮಿಯಂದು ಈ ಪರಿಹಾರ ಮಾಡಿದರೆ ಇನ್ನೂ ಒಳ್ಳೆಯದು
* ಈ ದಿನ ಉಪವಾಸವಿದ್ದು ದೇವಿಯ ಆರಾಧನೆ ಮಾಡಿದರೆ ಒಳ್ಳೆಯದು. ಹೋಮ- ಹವನ ಮಾಡಲು ಈ ದಿನ ಶುಭವಾಗಿದೆ.
* ಅಷ್ಟಮಿ ದಿನ 9 ಚಿಕ್ಕ ಹುಡುಗಿಯರಿಗೆ ಉಡುಗೊರೆ ನೀಡಿ
* ಈ ದಿನ ತಾಯಿಗೆ ಉಡುಗೊರೆ ನೀಡಿ



Click it and Unblock the Notifications
