Latest Updates
-
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು!
ಈ 5 ರಾಶಿಯವರ ಮೇಲೆ ಲಕ್ಷ್ಮೀಯ ಆಶೀರ್ವಾದ ಸದಾ ಇರುತ್ತದೆ!
ಮಾತೆ ಲಕ್ಷ್ಮೀಯು ಅಷ್ಟೈಶ್ಚರ್ಯವನ್ನು ಕರುಣಿಸುವವಳು. ಯಾರ ಮೇಲೆ ಲಕ್ಷ್ಮೀಯ ಆಶೀರ್ವಾದ ಸದಾ ಇರುತ್ತದೆಯೋ ಅವರು ಧನವಂತರಾಗುತ್ತಾರೆ. ಹಾಗೂ ಅವರ ಮನೆಯಲ್ಲಿ ಲಕ್ಷ್ಮೀ ಯಾವಾಗಲೂ ನೆಲೆಯಾಗಿರುತ್ತಾಳೆ ಅನ್ನೋ ನಂಬಿಕೆ ಇದೆ. ಅದ್ರಲ್ಲೂ ಈ 5 ರಾಶಿಯವರು ಲಕ್ಷ್ಮೀಗೆ ಬಹಳ ಪ್ರಿಯವಾದ ರಾಶಿಗಳು. ಈ 5 ರಾಶಿಯವರ ಮೇಲೆ ಲಕ್ಷ್ಮೀಯ ಆಶೀರ್ವಾದ ಸದಾ ಇರುತ್ತಂತೆ. ಅಷ್ಟಕ್ಕು ಆ 5 ರಾಶಿಯವರು ಯಾರು ಅನ್ನೋದನ್ನು ತಿಳಿಯೋಣ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ತುಂಬಾನೇ ಹಠ ಮಾರಿಗಳು. ಒಂದು ಸಾರಿ ಯಾವುದಾದರೂ ಕೆಲಸ ಮಾಡಬೇಕು ಅಂದುಕೊಂಡ್ರೆ ಅದು ಮುಗಿಯುವವರೆಗೂ ಬಿಡುವವರಲ್ಲ. ಇವರಲ್ಲಿರುವ ಈ ಸ್ವಭಾವವೇ ಇವರ ಗೆಲುವಿಗೆ ಅಥವಾ ಯಶಸ್ಸಿಗೆ ಕಾರಣವಾಗುತ್ತಂತೆ. ಕೆಲವೊಂದು ಸಲ ಇವರ ಹಠಮಾರಿತನದಿಂದ ನಷ್ಟ ಉಂಟಾಗುವ ಸಾಧ್ಯತೆಯೂ ಕೂಡ ಹೆಚ್ಚಿದೆ.

ಈ ರಾಶಿಯವರು ತಮ್ಮ ಕೋಪ ಮತ್ತು ಮೊಂಡುತನವನ್ನು ಸಕಾರಾತ್ಮಕವಾಗಿ ತಿರುಗಿಸಿಕೊಂಡರೆ ಇವರ ಬಾಳಲ್ಲಿ ಎಲ್ಲವೂ ಒಳ್ಳೆಯದಾಗಲಿದ್ಯಂತೆ. ಅಷ್ಟೇ ಅಲ್ಲ, ಲಕ್ಷ್ಮೀಯ ಕೃಪಾ ಕಟಾಕ್ಷ ಕೂಡ ಇವರ ಮೇಲೆ ಇರೋದ್ರಿಂದ ಇವರು ಅಂದುಕೊಂಡಿದ್ದೆಲ್ಲಾ ನೆರವೇರುತ್ತಂತೆ.
ಸಿಂಹ ರಾಶಿ
ಸಿಂಹ ರಾಶಿಯವರು ಸೂರ್ಯನಿಂದ ಆಳಲ್ಪಡುವುದರಿಂದ ಈ ರಾಶಿಯವರು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಆಕರ್ಷಿಸುವುದಲ್ಲದೇ ಸೂರ್ಯ ದೇವರ ಅನುಗ್ರಹವನ್ನು ಸಹ ಪಡೆಯುತ್ತಾರಂತೆ. ಸಿಂಹ ರಾಶಿಯಲ್ಲಿ ಯಾರು ಜನಿಸಿರುತ್ತಾರೆಯೋ ಅವರು ಹುಟ್ಟಿನಿಂದಲೇ ಸಕಲ ಸೌಕರ್ಯಗಳನ್ನು ಅನುಭವಿಸಿರುತ್ತಾರಂತೆ. ಜೊತೆಗೆ ಇವರು ಕಷ್ಟ ಪಟ್ಟು ಕೆಲಸ ಮಾಡುತ್ತಾರೆ.
ಇವರು ಕಠಿಣ ಪರಿಶ್ರಮದಿಂದಲೇ ತಮ್ಮಲ್ಲಿರುವ ಸಂಪತ್ತನ್ನು ಉಳಿಸಿಕೊಳ್ಳುವುದು ಮಾತ್ರವಲ್ಲದೇ ಅದನ್ನು ವೃದ್ಧಿ ಮಾಡೋದಕ್ಕೆ ಸಾಧ್ಯವಾಗುತ್ತದೆ. ಕೆಲವೊಂದು ಸಲ ಇವರಲ್ಲಿರುವ ಅತಿಯಾದ ಕೋಪವೂ ಇವರ ಪ್ರಯತ್ನಗಳನ್ನು ಹಾಳು ಮಾಡುತ್ತದೆ.
ತುಲಾ ರಾಶಿ
ತುಲಾ ರಾಶಿಯವರ ಮೇಲೆ ಮಾತೆ ಲಕ್ಷ್ಮೀ ಆಶಿರ್ವಾದ ಸದಾ ಇರುತ್ತಂತೆ. ತುಲಾ ರಾಶಿಯನ್ನು ಆಳುವ ಗ್ರಹ ಬುಧ ಗ್ರಹ. ಬುಧ ಗ್ರಹವನ್ನು ಪ್ರೀತಿ ಮತ್ತು ಸಮೃದ್ಧಿಯ ದೇವರು ಎಂದು ಕರೆಯಲಾಗುತ್ತದೆ. ಹೀಗಾಗಿ ತುಲಾ ರಾಶಿಯವರಿಗೆ ಹೆಚ್ಚಾಗಿ ಆರ್ಥಿಕ ಸಮಸ್ಯೆ ಎದುರಾಗೋದಿಲ್ಲ. ಈ ರಾಶಿಯವರು ತಮ್ಮ ಆಸೆಗಳನ್ನು ನಿಯಂತ್ರಿಸಲು ಕಲಿತಾಗ ಇವರು ತಮ್ಮ ಹೃದಯದ ಬಯಕೆಯನ್ನು ವ್ಯಕ್ತಪಡಿಸಬಹುದು. ಇನ್ನೂ ಇವರ ಜನ್ಮ ಕುಂಡಲಿಯಲ್ಲಿ ಶುಕ್ರನು ಬಲವಾಗಿದ್ದರೆ ಇವರು ಚಿನ್ನದ ಮೂಲಕ ಸಮೃದ್ಧಿಯನ್ನು ಕಾಣುವ ಸಾಧ್ಯತೆ ಇದ್ಯಂತೆ.
ವೃಷಭ ರಾಶಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ವ್ಯಕ್ತಿಗಳು ವೃಷಭ ರಾಶಿಯಲ್ಲಿ ಜನಿಸಿರುತ್ತಾರೆಯೋ ಅವರ ಮೇಲೆ ಲಕ್ಷ್ಮೀಯ ಆಶೀರ್ವಾದ ಸದಾ ಇರುತ್ತಂತೆ. ಇನ್ನೂ ಇವರು ಹೆಚ್ಚು ಕಷ್ಟ ಪಡಬೇಕಾಗಿಲ್ಲ. ಸ್ವಲ್ಪ ಕಷ್ಟ ಪಟ್ಟರೂ ಕೂಡ ಇವರಿಗೆ ಸಮೃದ್ಧಿ ಪ್ರಾಪ್ತಿಯಾಗುತ್ತಂತೆ. ಇವರು ಬಡತನವನ್ನು ಅಷ್ಟಾಗಿ ನೋಡಿರೋದಿಲ್ಲ. ಯಾವಾಗಲೂ ಅನುಕೂಲಕರವಾಗಿಯೇ ಇರುತ್ತಾರೆ. ಎಂತಹ ಸಂಕಷ್ಟದಲ್ಲೂ ಲಕ್ಷ್ಮೀ ಇವರ ಕೈ ಹಿಡಯುತ್ತಾಳೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯಲ್ಲಿ ಜನಿಸಿದ ಹೆಚ್ಚಿನವರು ಜೀವನದಲ್ಲಿ ಆರಾಮಾಗಿ ಇರುತ್ತಾರೆ. ಇವರ ಜೀವನವು ಸೌಕರ್ಯ ಹಾಗೂ ಸಮೃದ್ಧಿಯಿಂದ ತುಂಬಿರುತ್ತದೆ. ಈ ರಾಶಿಯವರಿಗೆ ಇತರರ ಸಂತೋಷವೇ ಮುಖ್ಯವಾಗಿರುತ್ತದೆ. ಲಕ್ಷ್ಮೀ ದೇವಿಯು ಈ ರಾಶಿಯವರ ಮೇಲೆ ಯಾವಾಗಲೂ ಕೃಪೆ ತೋರುತ್ತಾಳೆ. ಇವರ ಮೇಲೆ ಲಕ್ಷ್ಮೀ ದೇವಿಯ ಆಶಿರ್ವಾದ ಸದಾ ಇರುತ್ತಂತೆ. ಇವರು ಬದುಕಿದ್ದಷ್ಟು ದಿನ ಜೀವನದಲ್ಲಿ ಸಾಕಷ್ಟು ಸಂಪತ್ತನ್ನು ಗಳಿಸುತ್ತಾರಂತೆ.
ಕೇವಲ ಲಕ್ಷ್ಮೀಯ ಆಶೀರ್ವಾದ ಇದ್ದರೆ ಮಾತ್ರ ನಾವು ಹೆಚ್ಚಿ ಯಶಸ್ಸು, ಸಮೃದ್ಧಿ ಗಳಿಸೋದಕ್ಕೆ ಸಾಧ್ಯವಾಗೋದಿಲ್ಲ. ಲಕ್ಷ್ಮೀ ಆಶೀರ್ವಾದ ಇದ್ದರೆ ನಮಗೆ ಅಷ್ಟೊಂದು ಕಷ್ಟಗಳು ಇರೋದಿಲ್ಲ. ಆದರೆ ನಮ್ಮ ಪ್ರಯತ್ನ ನಾವು ಮಾಡಲೇಬೇಕಾಗುತ್ತದೆ. ಶ್ರಮ ಪಟ್ಟರೆ ತಕ್ಕ ಪ್ರತಿಫಲ ಇದ್ದೇ ಇರುತ್ತದೆ.



Click it and Unblock the Notifications

