Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ವಾಸ್ತು ಪ್ರಕಾರ, ಕಪ್ಪು ಎಳ್ಳನ್ನು ಈ ರೀತಿ ಬಳಸಿದರೆ, ಹಣವು ವೃದ್ಧಿಯಾಗುವುದು
ಕೆಲವರು ಕೈತುಂಬಾ ಹಣ ಗಳಿಸಿದರೂ, ಕೈಯಲ್ಲಿ ಹಣ ಉಳಿಯುವುದಿಲ್ಲ. ಇದರಿಂದ ಭವಿಷ್ಯದಲ್ಲಿ ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗುತ್ತದೆ. ಜ್ಯೋತಿಷ್ಯ ಮತ್ತು ವಾಸ್ತು ಪ್ರಕಾರ, ಇದು ರಾಹು ಮತ್ತು ಶನಿಯ ಕೆಟ್ಟ ದೆಸೆಯಿಂದ ಸಂಭವಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ಗ್ರಹಗಳನ್ನು ಬಲಪಡಿಸುವ ಅವಶ್ಯಕತೆಯಿದೆ. ಹಣಕಾಸಿನ ಅಡೆತಡೆಗಳನ್ನು ತೊಡೆದುಹಾಕಲು ಮತ್ತು ಹಣವನ್ನು ಉಳಿಸಲು ವಾಸ್ತು ಶಾಸ್ತ್ರದಲ್ಲಿ ಬಹಳ ಸುಲಭವಾದ ಮಾರ್ಗವನ್ನು ಹೇಳಲಾಗಿದೆ. ಈ ಪರಿಹಾರವು ಕಪ್ಪು ಎಳ್ಳು ಬೀಜಗಳೊಂದಿಗೆ ಸಂಬಂಧಿಸಿದೆ. ಹಾಗಾದರೆ, ಹಣವು ಹೆಚ್ಚಾಗಲು ಕಪ್ಪು ಎಳ್ಳನ್ನು ಹೇಗೆ ಬಳಸಬೇಕೆಂದು ತಿಳಿದುಕೊಳ್ಳೋಣ.
ವಾಸ್ತು ಪ್ರಕಾರ ಕಪ್ಪು ಎಳ್ಳನ್ನು ಈ ರೀತಿ ಬಳಸಿದರೆ ಹಣದ ಹರಿವು ಹೆಚ್ಚಾಗುತ್ತದೆ. ಅದು ಹೇಗೆ ಎಂಬುದನ್ನ ಇಲ್ಲಿ ನೋಡೋಣ:
.

ಆರ್ಥಿಕ ಸ್ಥಿತಿ ಸುಧಾರಣೆಗೆ:
ಆರ್ಥಿಕ ಸ್ಥಿತಿ ಉತ್ತಮವಾಗಿರದಿದ್ದರೆ, ಬೆಳಿಗ್ಗೆ ಸ್ನಾನ ಮಾಡಿದ ನಂತರ, ತಾಮ್ರದ ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಗಂಗಾಜಲವನ್ನು ಸೇರಿಸಿ. ನಂತರ ಅದಕ್ಕೆ ಸ್ವಲ್ಪ ಕಪ್ಪು ಎಳ್ಳನ್ನು ಸೇರಿಸಿ ಮತ್ತು ಈ ನೀರನ್ನು ಶಿವಲಿಂಗಕ್ಕೆ ಅರ್ಪಿಸಿ. ನೀರನ್ನು ಅರ್ಪಿಸುವಾಗ, ನಿಮ್ಮ ಮನಸ್ಸಿನಲ್ಲಿ ಓಂ ಸಾಂಬ ಸದಾಶಿವಾಯ ನಮಃ ಎಂದು ಜಪಿಸುತ್ತಿರಿ. ಪ್ರತಿದಿನ ಹೀಗೆ ಮಾಡುವುದರಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.

ಶುಭಕಾರ್ಯಕ್ಕೆ:
ಮನೆಯಲ್ಲಿ ಶುಭಕಾರ್ಯ ನಡೆಸಲಾಗುತ್ತಿದ್ದರೆ, ಬೆಳಗ್ಗೆ ಎದ್ದು ಸ್ನಾನ ಮುಗಿಸಿ ಒಂದು ಹಿಡಿ ಕರಿ ಎಳ್ಳನ್ನು ತೆಗೆದುಕೊಂಡು ತಾರಸಿಗೆ ಹಾಕಬೇಕು. ಪಕ್ಷಿಗಳು ಎಳ್ಳನ್ನು ತಿಂದರೆ ಮನೆಯಲ್ಲಿ ಐಶ್ವರ್ಯ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಸೂರ್ಯೋದಯಕ್ಕೆ ಮುನ್ನ ಈ ಪರಿಹಾರವನ್ನು ಮಾಡಿ.

ಕೆಲಸದಲ್ಲಿ ಯಶಸ್ವಯಾಗಲು:
ನೀವು ಯಾವುದೇ ಕೆಲಸದಲ್ಲಿ ಯಶಸ್ವಿಯಾಗದಿದ್ದರೆ, ಕುಟುಂಬದ ಹಿರಿಯ ಸದಸ್ಯರ ಕೈಯಿಂದ ಕಪ್ಪು ಎಳ್ಳನ್ನು ತೆಗೆದುಕೊಂಡು ಮನೆಯ ಉತ್ತರ ದಿಕ್ಕಿಗೆ ಎಸೆಯಿರಿ. ಹೀಗೆ ಮಾಡುವುದರಿಂದ ನಿಮ್ಮ ಕೆಲಸ ಯಶಸ್ವಿಯಾಗುವುದು.

ಹಣದ ಹರಿವು ಹೆಚ್ಚಾಗಲು:
ಹರಿಯುವ ನೀರಿನಲ್ಲಿ ಎಳ್ಳನ್ನು ಹಾಕುವುದರಿಂದ ಹಣಕಾಸಿನ ತೊಂದರೆಯೂ ದೂರವಾಗುತ್ತದೆ. ಮನೆಯ ಹೊರಗೆ ನಾಯಿಗೆ ಎಳ್ಳು ಹಾಕಿ. ನಾಯಿ ಎಳ್ಳು ತಿಂದರೆ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಎಂದು ಅರ್ಥಮಾಡಿಕೊಳ್ಳಿ. ಸತತ ಪ್ರಯತ್ನ ಮಾಡಿದರೂ ಹಣ ಹೆಚ್ಚಾಗದಿದ್ದರೆ ಕಪ್ಪು ಎಳ್ಳು ಮತ್ತು ಕಪ್ಪು ಉಂಡೆಯನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ ಪ್ರತಿ ಶನಿವಾರದಂದು ಯಾರಿಗಾದರೂ ದಾನ ಮಾಡಿ. ಇದನ್ನು ಮಾಡುವುದರಿಂದ ನೀವು ಹಣವನ್ನು ಉಳಿಸಲು ಪ್ರಾರಂಭಿಸುತ್ತೀರಿ.



Click it and Unblock the Notifications
